ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dhruva Sarja Film: ಅಬ್ಬರ ಬಿಟ್ಟು ಭಾವನೆಗಳ ಲೋಕಕ್ಕೆ ಕಾಲಿಟ್ಟ ʻಆ್ಯಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾ

Dhruva Sarja Film: ಮುಂದಿನ ಚಿತ್ರಕ್ಕೆ ‘ಕೆಮಿಸ್ಟ್ರಿ’ ಎಂಬ ಆಕರ್ಷಕ ಶೀರ್ಷಿಕೆ ಇಡಲಾಗಿದ್ದು, ನಟಿ ನಭಾ ನಟೇಶ್ ನಾಯಕಿಯಾಗಿ ಸಾಥ್ ನೀಡುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಈ ಅದ್ಧೂರಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಯುವ ನಿರ್ದೇಶಕ ವಿಶಾಲ್ ಆತ್ರೇಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಅಬ್ಬರ ಬಿಟ್ಟು ಭಾವನೆಗಳ ಲೋಕಕ್ಕೆ ಕಾಲಿಟ್ಟ ಧ್ರುವ ಸರ್ಜಾ

ಧ್ರುವ ಸರ್ಜಾ -

Yashaswi Devadiga
Yashaswi Devadiga Oct 6, 2026 11:04 AM

‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರಿಗೆ ಇಂದು ಜನುಮದಿನದ ಸಂಭ್ರಮ. ತಮ್ಮ ಮಾಸ್ ಇಮೇಜ್‌ನಿಂದ ಹೊರಬಂದು ಹೊಚ್ಚ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅವರ ಮುಂದಿನ ಚಿತ್ರಕ್ಕೆ ‘ಕೆಮಿಸ್ಟ್ರಿ’ ಎಂಬ ಆಕರ್ಷಕ ಶೀರ್ಷಿಕೆ ಇಡಲಾಗಿದ್ದು, ನಟಿ ನಭಾ ನಟೇಶ್ ನಾಯಕಿಯಾಗಿ ಸಾಥ್ ನೀಡುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ (PMF) ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಈ ಅದ್ಧೂರಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಯುವ ನಿರ್ದೇಶಕ ವಿಶಾಲ್ ಆತ್ರೇಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಮಾಸ್ ಅಬ್ಬರ ಬಿಟ್ಟು ಭಾವನೆಗಳ ಲೋಕಕ್ಕೆ ಕಾಲಿಟ್ಟ ಧ್ರುವ

ಈವರೆಗೂ ಭರ್ಜರಿ ಸಾಹಸ, ಮಾಸ್ ಡೈಲಾಗ್‌ಗಳ ಮೂಲಕವೇ ಚಿತ್ರಮಂದಿರಗಳಲ್ಲಿ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ ಧ್ರುವ ಸರ್ಜಾ, ಈ ಬಾರಿ ಮನಮಿಡಿಯುವ ಪ್ರೇಮಕಥೆ ಮತ್ತು ಅಪ್ಪಟ ಕೌಟುಂಬಿಕ ಕಥಾಹಂದರವನ್ನು ಆಯ್ಕೆ ಮಾಡಿಕೊಂಡಿರುವುದು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಮೂಡಿಸಿದೆ.

ಇದನ್ನೂ ಓದಿ: Bigg Boss Kannada 13: ಗಾನವಿಗೆ ಹುಚ್ಚಿ ಹುಚ್ಚಿ ಎಂದು ಕೂಗಾಡಿ ರಂಪಾಟ ಮಾಡಿದ ಜಗ್ಗ!

ಚಿತ್ರದಲ್ಲಿ ಧ್ರುವ ಅವರ ರೊಮ್ಯಾನ್ಸ್, ಮಮತೆ ಹಾಗೂ ಭಾವನಾತ್ಮಕ ಅಭಿನಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳಲ್ಲಿ ಈಗಾಗಲೇ ದೊಡ್ಡ ಮಟ್ಟದ ಕುತೂಹಲ ಮನೆಮಾಡಿದೆ. ಮಾಸ್‌ ಆಕ್ಷನ್‌ ಸಿನಿಮಾಗಳ ಮೂಲಕ ಅಭಿಮಾನಿಗಳ ನೆಚ್ಚಿನ ಹೀರೋ ಆಗಿರುವ ಧ್ರುವ, ಈಗ ಕೌಟುಂಬಿಕ ಪ್ರೇಕ್ಷಕರು, ಮಹಿಳೆಯರು ಹಾಗೂ ಯುವ ಜೋಡಿಗಳ ಹೃದಯ ಗೆಲ್ಲಲು ಹೊರಟಿದ್ದಾರೆ.



ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಬದುಕಿಗೆ ಕನೆಕ್ಟ್ ಮಾಡಿಕೊಳ್ಳುವಂತಹ ಕೌಟುಂಬಿಕ ಬಾಂಧವ್ಯ ಮತ್ತು ಲವ್‌ ಸ್ಟೋರಿ ಈ ಚಿತ್ರದ ಪ್ರಮುಖ ಆಕರ್ಷಣೆ. ಅಭಿಮಾನಿಗಳು ತಮ್ಮ ಇಡೀ ಕುಟುಂಬದೊಂದಿಗೆ ಚಿತ್ರಮಂದಿರಕ್ಕೆ ಬಂದು ಆನಂದಿಸುವಂತಹ ಸಂಪೂರ್ಣ ಮನರಂಜನೆಯನ್ನು ಚಿತ್ರತಂಡ ಕಟ್ಟಿಕೊಡಲಿದೆ. ಧ್ರುವ ಸರ್ಜಾ ಅವರ ಭರ್ಜರಿ ಸ್ಟಾರ್‌ಡಮ್ ಜೊತೆಗೆ ಭಾವನೆಗಳು ಮೇಳೈಸಿದ ಈ ಸಿನಿಮಾ, ಅದ್ಧೂರಿ ಮೇಕಿಂಗ್ ಮೂಲಕ ತೆರೆಯ ಮೇಲೆ ಅರಳಲಿದೆ.

ಅನಿರೀಕ್ಷಿತ ಕಾಂಬಿನೇಷನ್; ಹೊಚ್ಚ ಹೊಸ ದೃಷ್ಟಿಕೋನ

ಸ್ಟಾರ್ ನಟ ಧ್ರುವ ಸರ್ಜಾ ಹಾಗೂ ಯುವ ಪ್ರತಿಭೆ ವಿಶಾಲ್ ಆತ್ರೇಯ ಅವರ ಜೋಡಿ ಈ ಪ್ರಾಜೆಕ್ಟ್‌ನ ಮತ್ತೊಂದು ವಿಶೇಷತೆ. ಒಬ್ಬ ಖ್ಯಾತ ಮಾಸ್ ಹೀರೋ ಯುವ ನಿರ್ದೇಶಕನ ಕ್ರಿಯೇಟಿವ್ ವಿಷನ್‌ಗೆ ಕೈಜೋಡಿಸಿರುವುದು ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯು ಈಗಾಗಲೇ ಕನ್ನಡದ ಸ್ಟಾರ್ ನಟರಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಗಣೇಶ್, ಉಪೇಂದ್ರ ಅವರೊಂದಿಗೆ ಕೈಜೋಡಿಸಿದೆ. ಈಗ ಧ್ರುವ ಸರ್ಜಾ ಜೊತೆ ದೊಡ್ಡ ಪ್ರಾಜೆಕ್ಟ್‌ಗೆ ಕೈಹಾಕಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ಬೇರೂರುವ ಹಾಗೂ ವಿಭಿನ್ನ ಕಥೆಗಳನ್ನು ಕನ್ನಡಿಗರಿಗೆ ನೀಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.

ಇದನ್ನೂ ಓದಿ: Bigg Boss Kannada 13: ಅವಳು ಬೇಡ ಅಂದ್ರೂ ಬಿಡಲ್ಲ; ‘ಪ್ರೀತ್ಸೇ’ ಅಂತ ಸೋನಿಕಾ ಹಿಂದೆ ಬಿದ್ದ ಜಗ್ಗ ಮಮ್ಮಿ!

ಧ್ರುವ ಸರ್ಜಾ ಅವರ ವೃತ್ತಿಜೀವನದಲ್ಲೇ ಒಂದು ಮಹತ್ವದ ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳು ಈ ಸಿನಿಮಾದ ಮೂಲಕ ಗೋಚರಿಸುತ್ತಿದೆ.