ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನವರಾತ್ರಿ ಉತ್ಸವಕ್ಕೆ ಮೂಡಲಗಿ ಸಜ್ಜು: ರಂಗೋಲಿ ಸ್ಪರ್ಧೆಯೊಂದಿಗೆ ಜಾನುವಾರು ಜಾತ್ರೆ

ಪಟ್ಟಣದಲ್ಲಿ 18ನೇ ವರ್ಷದ ನವರಾತ್ರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ನಡೆಯುತ್ತಿದ್ದು, ನವರಾತ್ರಿ ಉತ್ಸವ ಸಮಿತಿ ಹಾಗೂ ನಿಸರ್ಗ ಫೌಂಡೇಶನ್ ಸಂಯೋಗ ದಲ್ಲಿ ಡಾ. ಜಗದೀಶ ಸೂರಣ್ಣವರ ಪ್ರಾಯೋಜಕತ್ವದಲ್ಲಿ ಅ.18ರಂದು ರಾಜ್ಯಮಟ್ಟದ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ ಹಾಗೂ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ನವರಾತ್ರಿ ಉತ್ಸವಕ್ಕೆ ಮೂಡಲಗಿ ಸಜ್ಜು

-

Profile
Ashok Nayak Oct 6, 2026 11:09 AM

ಮೂಡಲಗಿ: ಪಟ್ಟಣದಲ್ಲಿ 18ನೇ ವರ್ಷದ ನವರಾತ್ರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ನಡೆಯುತ್ತಿದ್ದು, ನವರಾತ್ರಿ ಉತ್ಸವ ಸಮಿತಿ ಹಾಗೂ ನಿಸರ್ಗ ಫೌಂಡೇಶನ್ ಸಂಯೋಗ ದಲ್ಲಿ ಡಾ. ಜಗದೀಶ ಸೂರಣ್ಣವರ ಪ್ರಾಯೋಜಕತ್ವದಲ್ಲಿ ಅ.18ರಂದು ರಾಜ್ಯಮಟ್ಟದ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ ಹಾಗೂ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ನವರಾತ್ರಿ ಉತ್ಸವದ ಅಂಗವಾಗಿ ಅದೇ ದಿನ ಜಾನುವಾರು ಜಾತ್ರೆ ಆಯೋಜಿಸಲಾಗಿದ್ದು, ರಾಸುಗಳ ಪ್ರದರ್ಶನ, ಟಗರಿನ ಕಾದಾಟ ಹಾಗೂ ಕಣ್ಣು ಕಟ್ಟಿ ಮಡಿಕೆ ಹೊಡೆಯುವ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ನಿಸರ್ಗ ಫೌಂಡೇಶನ್ ಅಧ್ಯಕ್ಷ ಈರಪ್ಪ ಢವಳೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Mudalgi News: ನಮ್ಮ ಪರಿಸರ ರಕ್ಷಿಸುವ, ಸಂರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದ್ದು

ರಾಜ್ಯಮಟ್ಟದ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ – ₹10,000, ದ್ವಿತೀಯ ಬಹುಮಾನ – ₹6,000, ತೃತೀಯ ಬಹುಮಾನ – ₹4,000, 4ರಿಂದ 8ನೇ ಸ್ಥಾನ – ತಲಾ ₹1,000 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು ರಂಗೋಲಿ ಹಾಗೂ ರಾಸುಗಳ ಪ್ರದರ್ಶನ, ಟಗರಿನ ಕಾದಾಟ, ಕಣ್ಣು ಮುಚ್ಚಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಮೊಬೈಲ್ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು:9590718444 | 9008846822 | 9611577331, ನವರಾತ್ರಿ ಉತ್ಸವದ ಜೊತೆಗೆ ಜಾನುವಾರು ಜಾತ್ರೆ ಹಾಗೂ ವಿವಿಧ ಸಾಂಪ್ರದಾಯಿಕ ಸ್ಪರ್ಧೆಗಳು ನಡೆಯಲಿರುವುದರಿಂದ ಮೂಡಲಗಿಯಲ್ಲಿ ಹಬ್ಬದ ಸಂಭ್ರಮ ಮತ್ತಷ್ಟು ಕಳೆಗಟ್ಟಲಿದೆ