#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Gathavaibhava Movie: ತೆರೆಮೇಲೆ ಮತ್ತೊಮ್ಮೆ ಸಿಂಪಲ್‌ ಸುನಿ 'ಗತವೈಭವ'

ʼಸಿಂಪಲ್ಲಾಗೊಂದು ಲವ್‌ಸ್ಟೋರಿʼ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿದ ಸಿಂಪಲ್‌ ಸಿನಿ ನಿರ್ದೇಶನದ ಮುಂದಿನ ಚಿತ್ರ ʼಗತವೈಭವʼ. ನವ ಪ್ರತಿಭೆ ದುಷ್ಯಂತ್‌ ಮತ್ತು ಆಶಿಕಾ ರಂಗನಾಥ್‌ ನಿರ್ದೇಶನದ ಈ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದ್ದು, ವರ್ಷಾಂತ್ಯದೊಳಗೆ ತೆರೆಗೆ ಬರುವ ಸಾಧ್ಯತೆ ಇದೆ. ʼಗತವೈಭವʼ ಚಿತ್ರದಲ್ಲಿ ವಾಸ್ಕೋಡಿಗಾಮನ ಕಥೆ ಇದೆ ಎನ್ನುವುದು ವಿಶೇಷ.

'ಗತವೈಭವ' ಚಿತ್ರದ ಮೂಲಕ ಮತ್ತೊಮ್ಮೆ ಸಿಂಪಲ್‌ ಸುನಿ ಮ್ಯಾಜಿಕ್‌

ʼಗತವೈಭವʼ ಚಿತ್ರ.

Profile Ramesh B Jan 29, 2025 3:49 PM

ಬೆಂಗಳೂರು: ಸ್ಯಾಂಡಲ್‌ವುಡ್ ಬೆಳ್ಳಿಪರದೆಯಲ್ಲಿ ಗತವೈಭವದ ಕಥೆಯನ್ನು ಹರವಿಡೋದಿಕ್ಕೆ ಟ್ಯಾಲೆಂಟ್‌ ಡೈರೆಕ್ಟರ್ ಸಿಂಪಲ್ ಸುನಿ (Simple Suni) ರೆಡಿಯಾಗಿದ್ದಾರೆ. ಸುನಿ ಬತ್ತಳಿಕೆಯಿಂದ ಬರುತ್ತಿರುವ ಬಹುನಿರೀಕ್ಷಿತ ʼಗತವೈಭವʼ ಸಿನಿಮಾದ (Gathavaibhava Movie) ಚಿತ್ರೀಕರಣ ಮುಕ್ತಾಯಗೊಂಡಿದೆ. ಪೋರ್ಚುಗಲ್‌ ಮತ್ತಿತರ ಕಡೆಗಳಲ್ಲಿ ಯಶಸ್ವಿಯಾಗಿ 100 ಕಾಲ್‌ಶೀಟ್‌ಗಳಲ್ಲಿ ಶೂಟಿಂಗ್ ಮುಗಿಸಲಾಗಿದೆ. ನಾಯಕ ದುಷ್ಯಂತ್ (Dushyanth) ಹಾಗೂ ಆಶಿಕಾ ರಂಗನಾಥ್ (Ashika Ranganath) ಚಿತ್ರೀಕರಣ ಅನುಭವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದೇ ವರ್ಷ ʼಗತವೈಭವʼ ಸಿನಿಮಾ ತೆರೆಗೆ ಬರಲಿದೆ.

ಸಿಂಪಲ್ ಸುನಿ ಎಲ್ಲ ಪ್ರಕಾರದ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದಾರೆ. ಕಾಮಿಡಿ, ಗಂಭೀರ, ಫ್ಯಾಂಟಸಿ, ಹಾರರ್ ಹೀಗೆ ಭಿನ್ನ-ವಿಭಿನ್ನ ಕಥೆಯನ್ನು ಹೊತ್ತು ತರುತ್ತಿದ್ದಾರೆ. ʼಗತವೈಭವʼ ಚಿತ್ರದಲ್ಲಿ ಲವ್‌ಸ್ಟೋರಿಯನ್ನು ಸೈಂಟಿಫಿಕ್ ಥ್ರಿಲ್ಲರ್ ಮಾದರಿಯಲ್ಲಿ ತೆರೆಗೆ ತರಲಾಗುತ್ತಿದೆ. ಈ ಮೂಲಕ ಯುವ ಪ್ರತಿಭೆ ದುಷ್ಯಂತ್ ನಾಯಕನಾಗಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಸಿಂಪಲ್ ಸುನಿ ಈ ಸಿನಿಮಾಗೆ ಕೇವಲ ನಿರ್ದೇಶಕ ಅಷ್ಟೇ ಅಲ್ಲ. ಅವರು ನಿರ್ಮಾಪಕ ಕೂಡ ಹೌದು. 'ಗತವೈಭವ' ಸಿನಿಮಾಕ್ಕೆ ಸಿಂಪಲ್‌ ಸುನಿ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಿಕ್ ಅವರ ಮಾತಾ ಮೂವಿ ಮೇಕರ್ಸ್ ಹಾಗೂ ಸುನಿ ಚಿತ್ರ ನಿರ್ಮಾಣ ಮಾಡ್ತಿದ್ದು, ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.

ಕಥೆ ಏನು?

ʼಗತವೈಭವʼ ಚಿತ್ರದಲ್ಲಿ ವಾಸ್ಕೋಡಿಗಾಮನ ಕಥೆ ಸೇರಿದಂತೆ ಹಲವು ಐತಿಹಾಸಿಕ ಸನ್ನಿವೇಶಗಳಿವೆಯಂತೆ. ಜತೆಗೆ ಇದು ಫನ್‌, ಸೆಂಟಿಮೆಂಟ್‌ ಮತ್ತು ಮೈಂಡ್‌ ಗೇಮ್‌ನ ಮಿಶ್ರಣ.

ಶೂಟಿಂಗ್ ಎಲ್ಲೆಲ್ಲಿ ನಡೆದಿದೆ?

ʼಗತವೈಭವʼ ಚಿತ್ರದ ಸಂಪೂರ್ಣ ಚಿತ್ರೀಕರಣ ಪೂರ್ಣಗೊಂಡಿದೆ. ಕೊಡಗು, ಮಂಗಳೂರು, ಪೋರ್ಚುಗಲ್‌ನಲ್ಲಿ ಸಿನಿಮಾದ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಬರೋಬ್ಬರಿ 100 ಕಾಲ್ ಶೀಟ್ ಗಳಲ್ಲಿ ಶೂಟಿಂಗ್ ಮುಕ್ತಾಯಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ತುಮಕೂರು ಮೂಲದ ದುಷ್ಯಂತ್‌ ವಿದೇಶದಲ್ಲಿ ಎಲ್‌ಎಲ್‌ಬಿ ಓದಿದ್ದಾರೆ. ಅಭಿನಯದಲ್ಲಿ ಆಸಕ್ತಿ ಹೊಂದಿದ್ದ ಕಾರಣಕ್ಕೆ ಚಿತ್ರರಂಗ ಪ್ರವೇಶಿಸಿದ್ದಾರೆ.

ಆಶಿಕಾ ರಂಗನಾಥ್‌ ಸದ್ಯ ಕನ್ನಡದ ಜತೆಗೆ ಬೇರೆ ಬೇರೆ ಭಾಷೆಗಳ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ತೆರೆಕಂಡ ಸಿದ್ಧಾರ್ಥ್‌ ಜತೆಗಿನ ತಮಿಳು ಚಿತ್ರ ಮಿಸ್‌ ಯೂ ಗಮನ ಸೆಳೆದಿದೆ. ಥಿಯೇಟ್‌ರನಲ್ಲಿ ಸಾಮಾನ್ಯ ಪ್ರತಿಕ್ರಿಯೆ ಪಡೆದುಕೊಂಡಿದ್ದರೂ ಒಟಿಟಿಯಲ್ಲಿ ಸೂಪರ್‌ ಹಿಟ್‌ ಆಗಿದೆ. ಸರಳವಾಗಿ ಪಾತ್ರದಲ್ಲಿ ಅವರು ಮೋಡಿ ಮಾಡಿದ್ದಾರೆ.

ಸದ್ಯ ಆಶಿಕಾ ತಮಿಳಿನ 'ಸರ್ದಾರ್‌ 2' ಮತ್ತು ತೆಲುಗಿನ 'ವಿಶ್ವಂಭರ' ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಸರ್ದಾರ್‌ 2 ಚಿತ್ರದಲ್ಲಿ ಕಾರ್ತಿ ನಾಯಕನಾಗಿ ಕಾಣಿಸಿಕೊಂಡಿದ್ದು, ಪಿ.ಎಸ್‌.ಮಿತ್ರನ್‌ ನಿರ್ದೇಶಿಸುತ್ತಿದ್ದಾರೆ. 'ವಿಶ್ವಂಭರ' ಸಿನಿಮಾದಲ್ಲಿ ತೆಲುಗು ಸೂಪರ್‌ ಸ್ಟಾರ್‌ ಚಿರಂಜೀವಿ ನಾಯಕ. ತ್ರಿಶಾ ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.