ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಮ್‌ ಚರಣ್‌ ಜೊತೆ ಮಸ್ತಾಗಿ ಹೆಜ್ಜೆ ಹಾಕಿದ ನಟಿ ಶ್ರುತಿ ಹಾಸನ್;‌ 10 ವರ್ಷಗಳ ನಂತರ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ ಕಮಲ್‌ ಪುತ್ರಿ!

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ನಿರ್ದೇಶಕ ಬುಚ್ಚಿಬಾಬು ಸನಾ ಕಾಂಬಿನೇಷನ್‌ನ 'ಪೆದ್ದಿ' ಚಿತ್ರದ 'ಹೆಲ್ಲಲ್ಲಲೋ' ಸ್ಪೆಷಲ್‌ ಸಾಂಗ್‌ನ ಪ್ರೋಮೋ ಬಿಡುಗಡೆಯಾಗಿದೆ. ನಟಿ ಶ್ರುತಿ ಹಾಸನ್ ಹತ್ತು ವರ್ಷಗಳ ನಂತರ ಈ ಐಟಂ ಸಾಂಗ್‌ನಲ್ಲಿ ಹಾಕಿದ್ದಾರೆ. ಎ.ಆರ್. ರೆಹಮಾನ್ ಸಂಗೀತದ ಈ ಹಾಡಿನಲ್ಲಿ ಮತ್ತೋರ್ವ ನಟಿ ಕೂಡ ಹೆಜ್ಜೆ ಹಾಕಿದ್ದಾರಂತೆ.

Ram Charan: ʻಪೆದ್ದಿʼ ಚಿತ್ರದ ಐಟಂ ಸಾಂಗ್‌ಗೆ ಶ್ರುತಿ ಹಾಸನ್ ಡ್ಯಾನ್ಸ್

-

Avinash GR
Avinash GR May 22, 2026 3:57 PM

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ‘ಉಪ್ಪೆನ’ ಖ್ಯಾತಿಯ ನಿರ್ದೇಶಕ ಬುಚ್ಚಿಬಾಬು ಸಾನಾ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ಪೆದ್ದಿ’ ಸಿನಿಮಾವು ಜೂನ್‌ 4ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಕ್ರೀಡಾ ಪ್ರಧಾನ ಚಿತ್ರದ ಮೇಲಿನ ನಿರೀಕ್ಷೆಗಳು ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿವೆ. ಈ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಲು ಹೊಸ ಪ್ರೋಮೋವೊಂದನ್ನ ರಿಲೀಸ್‌ ಮಾಡಿದೆ. ಅದು ಕೂಡ ರಾಮ್‌ ಚರಣ್‌ ಮತ್ತು ಶ್ರುತಿ ಹಾಸನ್‌ ಕಾಂಬಿನೇಷನ್‌ ಮೂಡಿಬಂದಿರುವ ಐಟಂ ಸಾಂಗ್‌ನ ಪ್ರೋಮೋ!

ರಾಮ್‌ ಚರಣ್‌ ಜೊತೆ ಶ್ರುತಿ ಹಾಸನ್‌ ಡ್ಯಾನ್ಸ್

‘ಪೆದ್ದಿ’ ಚಿತ್ರದ ‌ʻಹೆಲ್ಲಲ್ಲಲೋ..ʼ ಎಂಬ ಮಾಸ್ ಹಾಗೂ ಎನರ್ಜಿಟಿಕ್ ವಿಶೇಷ ಗೀತೆಯ ಪ್ರೋಮೊವನ್ನು ರಿಲೀಸ್‌ ಮಾಡಲಾಗಿದೆ. ಈ ಪ್ರೋಮೊದಲ್ಲಿ ರಾಮ್ ಚರಣ್ ಮತ್ತು ಶ್ರುತಿ ಹಾಸನ್ ಸಖತ್‌ ಎನರ್ಜಿಯಿಂದ ಹಾಕಿರುವ ಭರ್ಜರಿ ಸ್ಟೆಪ್ಸ್‌ ಮೆಗಾ ಅಭಿಮಾನಿಗಳಿಗೆ ಥ್ರಿಲ್ ನೀಡಿವೆ. ಈ ಭಾರಿ ಐಟಂ ಸಾಂಗ್‌ಗೆ ಆಸ್ಕರ್ ವಿಜೇತ ಎ. ಆರ್. ರೆಹಮಾನ್ ಅದ್ಭುತವಾದ ಮಾಸ್ ಟ್ಯೂನ್ ಸಂಯೋಜಿಸಿದ್ದು, ಅನಂತ ಶ್ರೀರಾಮ್ ಸಾಹಿತ್ಯ ಬರೆದಿದ್ದಾರೆ. ಸಾಮಾನ್ಯವಾಗಿ ರೆಹಮಾನ್ ಮಾರ್ಕ್ ಮೆಲೋಡಿಗಳು ಒಂದು ತೂಕವಾದರೆ, ಅವರು ನೀಡುವ ಮಾಸ್ ಸಾಂಗ್ಸ್‌ಗಳ ರೇಂಜ್ ಬೇರೆಯದೇ ಇರುತ್ತದೆ. ಈ ಪ್ರೋಮೋ ನೋಡುತ್ತಿದ್ದರೆ ಥಿಯೇಟರ್‌ನಲ್ಲಿ ಈ ಹಾಡು ಧೂಳೆಬ್ಬಿಸುವುದು ಖಚಿತ ಎಂಬುದು ಅಭಿಮಾನಿಗಳ ಮಾತು.

Ram Charan: ಮಗಳನ್ನು ಎತ್ತಿಕೊಳ್ಳುವುದಕ್ಕೂ ಆಗುತ್ತಿರಲಿಲ್ಲ; ‘ಪೆದ್ದಿ’ಗಾಗಿ ರಾಮ್ ಚರಣ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ

ಶ್ರುತಿ ಜೊತೆ ಮತ್ತೋರ್ವ ನಟಿ!

ಇನ್ನು, ಈ ಸ್ಪೆಷಲ್‌ ಸಾಂಗ್‌ನಲ್ಲಿ ಶ್ರುತಿ ಹಾಸನ್ ಜೊತೆಗೆ ಮತ್ತೊಬ್ಬ ಸ್ಟಾರ್ ನಟಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಆ ನಟಿ ಯಾರು ಎಂಬ ವಿಷಯವನ್ನು ಚಿತ್ರತಂಡವು ಈವರೆಗೂ ಸಸ್ಪೆನ್ಸ್ ಆಗಿಯೇ ಇಟ್ಟಿದೆ. ಭೋಪಾಲ್‌ನಲ್ಲಿ ನಡೆಯಲಿರುವ ಭಾರಿ ಮ್ಯೂಸಿಕಲ್ ಇವೆಂಟ್‌ನಲ್ಲಿ ಈ ಪೂರ್ಣ ಹಾಡನ್ನು ಬಿಡುಗಡೆ ಮಾಡುವುದರ ಜೊತೆಗೆ, ಆ ಮತ್ತೋರ್ವ ನಟಿ ಯಾರು ಎಂಬ ಸಸ್ಪೆನ್ಸ್‌ಗೂ ತೆರೆ ಬೀಳಲಿದೆ. ಮೇ 23ರಂದು ‌ʻಹೆಲ್ಲಲ್ಲಲೋ..ʼ ಫುಲ್‌ ಸಾಂಗ್‌ ಡಿಜಿಟಲ್ ವೇದಿಕೆಗಳಲ್ಲಿ ಬಿಡುಗಡೆಯಾಗಲಿದೆ.

ಅಂದಹಾಗೆ, ನಟಿ ಶ್ರುತಿ ಹಾಸನ್‌ ಅವರು 2015ರಲ್ಲಿ ಹಿಂದಿಯ ʻತೇವರ್‌ʼ ಸಿನಿಮಾದಲ್ಲಿ ಕಡೆಯದಾಗಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದರು. ಅದಾದ ಮೇಲೆ ಈಗ ಮತ್ತೊಮ್ಮೆ ಐಟಂ ಸಾಂಗ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.

Peddi Movie: 'ಪೆದ್ದಿ' ಸಿನಿಮಾದಲ್ಲಿನ ಶಿವಣ್ಣನ ಖದರ್ ನೋಡಿ ಫ್ಯಾನ್ಸ್‌ ಫಿದಾ!

ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ ಪೆದ್ದಿ

ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಈ ಚಿತ್ರವನ್ನು ಅತ್ಯಂತ ಅದ್ದೂರಿಯಾಗಿ ನಿರ್ಮಿಸಿದ್ದು, ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಸಂಸ್ಥೆಗಳು ಜಂಟಿಯಾಗಿ ಅರ್ಪಿಸುತ್ತಿವೆ. ಈ ಚಿತ್ರದಲ್ಲಿ ಕನ್ನಡದ ಸೂಪರ್ ಸ್ಟಾರ್ ಶಿವರಾಜ್ ಕುಮಾರ್, ಜಗಪತಿ ಬಾಬು, ಬಾಲಿವುಡ್ ನಟ ಬೋಮನ್ ಇರಾನಿ, ದಿವ್ಯೇಂದು ಶರ್ಮಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಜೂನ್ 4 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಐದು ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.