Humane Sagar: ಜನಪ್ರಿಯ ಗಾಯಕ ಕೇವಲ 34ನೇ ವಯಸ್ಸಿಗೆ ನಿಧನ; ಸಿಎಂ ಸೇರಿ ಗಣ್ಯರ ಸಂತಾಪ
Odia singer : 100 ಕ್ಕೂ ಹೆಚ್ಚು ಒಡಿಯಾ ಹಾಡುಗಳಿಗೆ ಧ್ವನಿ ನೀಡಿದ್ದರು ಸಾಗರ್. ಕಳೆದ ಮೂರು ದಿನಗಳಿಂದ ಭುವನೇಶ್ವರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾಜ್ಯಪಾಲ ಬಾಬು ಕಂಬಂಪತಿ ಕೂಡ ಸಾಗರ್ ಅವರಿಗೆ ಗೌರವ ಸಲ್ಲಿಸಿ, ಒಡಿಯಾ ಸಂಗೀತ ಮತ್ತು ಚಲನಚಿತ್ರ ಜಗತ್ತಿಗೆ ಅವರ ಕೊಡುಗೆಗಳು ಶಾಶ್ವತವಾಗಿ ಸ್ಮರಣೀಯವಾಗಿರುತ್ತವೆ ಎಂದು ಹೇಳಿದ್ದಾರೆ.
ಗಾಯಕ ಹ್ಯೂಮ್ಯಾನ್ ಸಾಗರ್ -
ಖ್ಯಾತ ಒಡಿಯಾ ಗಾಯಕ ಹ್ಯೂಮ್ಯಾನ್ ಸಾಗರ್ (Popular Odia singer Humane Sagar) 34 ವಯಸ್ಸಿಗೆ ನಿಧನರಾಗಿದ್ದಾರೆ (Passes Away). ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಹ್ಯೂಮನ್ ಸಿಂಗರ್ ಅವರ ನಿಧನದ ನಂತರ ಒಡಿಶಾ ಮುಖ್ಯಮಂತ್ರಿ (Odisha Chief Minister) ಮೋಹನ್ ಚರಣ್ ಮಾಝಿ ಅವರು ಸಂತಾಪ ಸೂಚಿಸಿದ್ದಾರೆ.
ಮೋಹನ್ ಚರಣ್ ಮಾಝಿ ಪೋಸ್ಟ್
"ಖ್ಯಾತ ಹಿನ್ನೆಲೆ ಗಾಯಕ ಹ್ಯೂಮನ್ ಸಾಗರ್ ಅವರ ನಿಧನದ ಸುದ್ದಿ ತಿಳಿದು ನನಗೆ ತುಂಬಾ ದುಃಖವಾಯಿತು. ಅವರ ನಿಧನ ನಮ್ಮ ಸಂಗೀತ ಮತ್ತು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪ ಸೂಚಿಸುತ್ತೇನೆ ಮತ್ತು ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ. ಎಂದು ಬರೆದುಕೊಂಡಿದ್ದಾರೆ.
ನವೀನ್ ಪಟ್ನಾಯಕ್ ಟ್ವೀಟ್
"2000 ರಿಂದ 2024 ರವರೆಗೆ 24 ವರ್ಷಗಳ ಕಾಲ ಒಡಿಶಾದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹಿರಿಯ ನಾಯಕ ನವೀನ್ ಪಟ್ನಾಯಕ್, ಸಾಗರ್ ಅವರನ್ನು ಸ್ಮರಿಸಿಕೊಂಡು ತಮ್ಮ ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ,
"ಸಾಗರ್ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಅವರ ಭಾವಪೂರ್ಣ ಸಂಗೀತ ಅಸಂಖ್ಯಾತ ಕೇಳುಗರ ಹೃದಯಗಳನ್ನು ಮುಟ್ಟಿದೆ ಮತ್ತು ಒಡಿಯಾ ಸಂಗೀತಕ್ಕೆ ಅವರ ಕೊಡುಗೆಗಳು ಯಾವಾಗಲೂ ಸ್ಮರಣೀಯವಾಗಿರುತ್ತವೆ. ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದರ ಜೊತೆಗೆ, ಈ ದುಃಖದ ಸಮಯದಲ್ಲಿ ದುಃಖಿತ ಕುಟುಂಬ ಸದಸ್ಯರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ."ಎಂದು ಬರೆದುಕೊಂಡಿದ್ದಾರೆ.
100 ಕ್ಕೂ ಹೆಚ್ಚು ಒಡಿಯಾ ಹಾಡುಗಳಿಗೆ ಧ್ವನಿ
100 ಕ್ಕೂ ಹೆಚ್ಚು ಒಡಿಯಾ ಹಾಡುಗಳಿಗೆ ಧ್ವನಿ ನೀಡಿದ್ದರು ಸಾಗರ್. ಕಳೆದ ಮೂರು ದಿನಗಳಿಂದ ಭುವನೇಶ್ವರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾಜ್ಯಪಾಲ ಬಾಬು ಕಂಬಂಪತಿ ಕೂಡ ಸಾಗರ್ ಅವರಿಗೆ ಗೌರವ ಸಲ್ಲಿಸಿ, ಒಡಿಯಾ ಸಂಗೀತ ಮತ್ತು ಚಲನಚಿತ್ರ ಜಗತ್ತಿಗೆ ಅವರ ಕೊಡುಗೆಗಳು ಶಾಶ್ವತವಾಗಿ ಸ್ಮರಣೀಯವಾಗಿರುತ್ತವೆ ಎಂದು ಹೇಳಿದ್ದಾರೆ.
ବିଶିଷ୍ଟ କଣ୍ଠଶିଳ୍ପୀ ହ୍ୟୁମାନ ସାଗରଙ୍କ ବିୟୋଗ ବିଷୟରେ ଜାଣି ମୁଁ ଅତ୍ୟନ୍ତ ଦୁଃଖିତ । ତାଙ୍କର ବିୟୋଗ ଆମ ସଙ୍ଗୀତ ଓ ସିନେମା ପାଇଁ ଏକ ଅପୂରଣୀୟ କ୍ଷତି। ଶୋକସନ୍ତପ୍ତ ପରିବାର ପ୍ରତି ମୋର ସମବେଦନା ଜଣାଇବା ସହ ଦିବଙ୍ଗତ ଆତ୍ମାଙ୍କ ଶାନ୍ତି ପାଇଁ ଭଗବାନଙ୍କ ନିକଟରେ ପ୍ରାର୍ଥନା କରୁଛି। ଓଁ ଶାନ୍ତି। 🙏
— Mohan Charan Majhi (@MohanMOdisha) November 17, 2025
ಏತನ್ಮಧ್ಯೆ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಜನಪ್ರಿಯ ಒಡಿಯಾ ಗಾಯಕನ ನಿಧನದಿಂದ ತಮಗೆ ತೀವ್ರ ದುಃಖವಾಗಿದೆ ಎಂದು ಹೇಳಿದ್ದಾರೆ.
ನವೆಂಬರ್ 25, 1990 ರಂದು ಒಡಿಶಾದ ತಿಟ್ಲಗಢದಲ್ಲಿ ಜನಿಸಿದ ಅವರು 2012 ರಲ್ಲಿ "ವಾಯ್ಸ್ ಆಫ್ ಒಡಿಶಾ ಸೀಸನ್ 2" ರಿಯಾಲಿಟಿ ಟಿವಿ ಶೋ ಗೆದ್ದ ನಂತರ ಪ್ರಾಮುಖ್ಯತೆ ಪಡೆದರು. ಅವರ ದಶಕದ ವೃತ್ತಿಜೀವನದಲ್ಲಿ, ಅವರು ಒಡಿಯಾ ಚಲನಚಿತ್ರಗಳು ಮತ್ತು ಆಲ್ಬಮ್‌ಗಳಲ್ಲಿ ಹಲವಾರು ಹಿಟ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.
ಇದನ್ನೂ ಓದಿ: Saalumarada Thimmakka Death: ಸಾಲುಮರದ ತಿಮ್ಮಕ್ಕ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ
"ಇಷ್ಕ್ ತು ಹಿ ತು," "ತು ಮೋ ಲವ್ ಸ್ಟೋರಿ," "ಗೋಪಾ ಹೆಲೆ ಭಿ ಸಾಟೊ," "ಬೇಬಿ," ಮತ್ತು "ಅಗಸ್ತ್ಯ" ಕೆಲವು ಪ್ರಮುಖ ಹಾಡುಗಳು. ಭಾವನಾತ್ಮಕ ಗಾಯನ ಶೈಲಿಗೆ ಹೆಸರುವಾಸಿಯಾದ ಅವರು "ಒಡಿಶಾದ ಅರಿಜಿತ್ ಸಿಂಗ್" ಎಂಬ ಬಿರುದನ್ನು ಪಡೆದರು.