ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Actress Roopika: ಹಸೆಮಣೆ ಏರಲು ಸಜ್ಜಾದ 'ಲಕ್ಷ್ಮೀ ನಿವಾಸ' ಸೀರಿಯಲ್‌ ನಟಿ; ಹುಡುಗ ಯಾರು?

Actress Roopika: ಬೆಳ್ಳಿಚುಕ್ಕಿ', 'ಬದುಕು', 'ಅವಳ ಮನೆ', 'ತ್ರಿವೇಣಿ ಸಂಗಮ' ರೀತಿಯ ಕಿರುತೆರೆ ಧಾರಾವಾಹಿಗಳಲ್ಲಿ ಬಾಲನಟಿಯಾಗಿ ರೂಪಿಕಾ ಬಣ್ಣ ಹಚ್ಚಿದ್ದರು. 'ಚೆಲುವಿನ ಚಿಲಿಪಿಲಿ' ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು.ತರ ‘ತೀರ್ಥರೂಪ’, ‘ಮಾಯದಂಥ ಮಳೆ’, ‘ಬೀರ’, ‘ಥರ್ಡ್‌ಕ್ಲಾಸ್’, ‘ರುದ್ರಾಕ್ಷಿಪುರ’, ‘ಮಂಜರಿ’, ‘ನವರಂಗಿ’, ‘ಡೈಮಂಡ್ ಕ್ರಾಸ್’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು.

ಹಸೆಮಣೆ ಏರಲು ಸಜ್ಜಾದ  'ಲಕ್ಷ್ಮೀ ನಿವಾಸ' ಸೀರಿಯಲ್‌ ನಟಿ

ನಟಿ ರೂಪಿಕಾ -

Yashaswi Devadiga
Yashaswi Devadiga Jun 18, 2026 9:53 AM

ಕಿರುತೆರೆ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ರೂಪಿಕಾ (Roopika) ಈಗ ಎಂಗೇಜ್‌ ಆಗಿದ್ದಾರೆ. 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಸದ್ಯ ಸಕ್ರಿಯರಾಗಿದ್ದಾರೆ. ನಟಿ ರೂಪಿಕಾ ತಮ್ಮ ಬಹುಕಾಲದ ಗೆಳೆಯ ಅಂಕಿತ್ (Ankit) ಅವರೊಂದಿಗೆ ವೈವಾಹಿಕ (Marriage) ಜೀವನಕ್ಕೆ ಕಾಲಿಡುತ್ತಿದ್ದಾರೆ. ಬೆಂಗಳೂರಿನಲ್ಲೇ ಅದ್ಧೂರಿಯಾಗಿ ಕಲ್ಯಾಣೋತ್ಸವ ನಡೆಯಲಿದೆ ಎಂದು ವರದಿಯಾಗಿದೆ.

ಕೆನಡಾದ ಇನ್ವೆಸ್ಕೋ ಸಂಸ್ಥೆಯಲ್ಲಿ ಟ್ಯಾಕ್ಸ್ ಸ್ಪೆಷಲಿಸ್ಟ್ ಅಂಕಿತ್ ಎಂಬುವವರ ಜೊತೆ ನಟಿ ರೂಪಿಕಾ ಮದುವೆ ನಡೆಯಲಿದೆ. ಮೂಲತಃ ಬೆಂಗಳೂರಿನವರಾದ ಅಂಕಿತ್ ಕಳೆದ 5 ವರ್ಷಗಳಿಂದ ಕೆನಡಾದಲ್ಲಿ ಸೆಟ್ಲ್ ಆಗಿದ್ದಾರೆ.

ಅಂಕಿತ್ ಯಾರು?

ಮ್ಯೂಸಿಕಲ್ ಕಂಪೋಸರ್ ಕೂಡ ಆಗಿದ್ದು ಇಂಡಸ್ಟ್ರಿ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಹಿರಿಯರು, ಆಪ್ತರ ಸಮ್ಮುಖದಲ್ಲಿ ಈಗಾಗಲೇ ರೂಪಿಕಾ ಹಾಗೂ ಅಂಕಿತ್ ನಿಶ್ಚಿತಾರ್ಥ ನೆರವೇರಿದೆ.

ಮುಂಬರುವ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲೇ ಇವರ ವಿವಾಹ ನಡೆಯಲಿದೆ. ಈ ಮದುವೆ ಸಮಾರಂಭಕ್ಕೆ ರೂಪಿಕಾ ಅವರ ಆಪ್ತರು, ಚಿತ್ರರಂಗದ ಸ್ನೇಹಿತರು ಹಾಗೂ ರಾಜಕೀಯ ರಂಗದ ಪ್ರಮುಖ ಗಣ್ಯರು ಸಾಕ್ಷಿಯಾಗಲಿದ್ದಾರೆ.

ಇದನ್ನೂ ಓದಿ: Drishyam Movie: 'ದೃಶ್ಯಂ 3' ತೆಲುಗು ಆವೃತ್ತಿಯ OTT ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ

ಬೆಳ್ಳಿಚುಕ್ಕಿ', 'ಬದುಕು', 'ಅವಳ ಮನೆ', 'ತ್ರಿವೇಣಿ ಸಂಗಮ' ರೀತಿಯ ಕಿರುತೆರೆ ಧಾರಾವಾಹಿಗಳಲ್ಲಿ ಬಾಲನಟಿಯಾಗಿ ರೂಪಿಕಾ ಬಣ್ಣ ಹಚ್ಚಿದ್ದರು. 'ಚೆಲುವಿನ ಚಿಲಿಪಿಲಿ' ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು.ತರ ‘ತೀರ್ಥರೂಪ’, ‘ಮಾಯದಂಥ ಮಳೆ’, ‘ಬೀರ’, ‘ಥರ್ಡ್‌ಕ್ಲಾಸ್’, ‘ರುದ್ರಾಕ್ಷಿಪುರ’, ‘ಮಂಜರಿ’, ‘ನವರಂಗಿ’, ‘ಡೈಮಂಡ್ ಕ್ರಾಸ್’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ತೆಲುಗು ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ರೂಪಿಕಾ ನಟಿಸಿದ್ದಾರೆ.

ಇದಕ್ಕೂ ಮುಂಚೆ ನಟಿ ಬ್ರೇಕಪ್‌ ಕುರಿತಾಗಿ ಮಾತನಾಡಿದ್ದರು. “ನನಗೆ ಲವ್‌ ಆಗಿ ಬ್ರೇಕಪ್‌ ಆಗಿದೆ. ಅದು ಟಾಕ್ಸಿಕ್‌ ರಿಲೇಶನ್‌ಶಿಪ್‌ ಆಗಿತ್ತು. ಅದು ಜಾಸ್ತಿ ದಿನ ಉಳಿದಿರಲಿಲ್ಲ. ಅದೀಗ ಮುಗಿದು ಹೋಗಿದೆ. ಹೇಳಿಕೊಳ್ಳುವಂತಹ ರಿಲೇಶನ್‌ಶಿಪ್‌ ಅದಾಗಿರಲಿಲ್ಲ. ನನಗೆ ರಿಲೇಶನ್‌ಶಿಪ್‌ ಇರಲಿಲ್ಲ ಅಂತ ಸುಳ್ಳು ಹೇಳೋದಿಲ್ಲ, ಇಂದು ಎಲ್ಲರಿಗೂ ಪ್ರೀತಿ ವಿಷಯದಲ್ಲಿ ಒಂದು ಅನುಭವ ಆಗಿರುತ್ತದೆ.

ನಾನು ನಟನೆಯಿಂದ ಒಂದು ವರ್ಷ ದೂರ ಆದಾಗ ವಿದೇಶದಲ್ಲಿ ಸೆಟಲ್‌ ಆಗ್ತೀನಿ ಅಂತ ಸುದ್ದಿ ಹಬ್ಬಿಸಿದ್ದರು. ನಮ್ಮ ಮನೆಯಲ್ಲಿ ನನಗೆ ಹುಡುಗನನ್ನು ನೋಡ್ತಿದ್ದಾರೆ, ಪಕ್ಕಾ ಅರೇಂಜ್‌ ಮ್ಯಾರೇಜ್‌ ಆಗಿರತ್ತೆ. ಎಲ್ಲರಿಗೂ ಹೇಳಿ ಮದುವೆ ಆಗ್ತೀನಿ. ತಾತ-ಅಜ್ಜಿ, ಅತ್ತೆ-ಮಾವ ಎಲ್ಲರೂ ಇರುವ ಹುಡುಗ ಸಿಕ್ಕರೆ ತುಂಬ ಖುಷಿ. ಜನರಿಲ್ಲ ಅಂದ್ರೆ ತುಂಬ ಭಯ ಆಗುತ್ತದೆ, ಇನ್ನು ನನ್ನ ವೃತ್ತಿಯನ್ನು ಗೌರವಿಸುವ ಹುಡುಗ ಬೇಕು.

ಇದನ್ನೂ ಓದಿ: Samantha Ruth Prabhu: ಸಿಎಂ ದಳಪತಿ ವಿಜಯ್ ಭೇಟಿಯಾದ ನಟಿ ಸಮಂತಾ; ಹೇಳಿದ್ದೇನು?

ಇಬ್ಬರೂ ಪರಸ್ಪರ ಅರ್ಥಮಾಡಿಕೊಂಡು ಹೋದರೆ ಎಲ್ಲವೂ ಚೆನ್ನಾಗಿರುತ್ತದೆ” ಎಂದು ನಟಿ ರೂಪಿಕಾ ಹೇಳಿದ್ದರು.