ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lahari Mahesh: ಸರಿಗಮಪ ಸೆಮಿ ಫೈನಲ್​ನಲ್ಲಿ ಹೊರಬಿದ್ದ ಲಹರಿಗೆ ಬಂಪರ್ ಚಾನ್ಸ್ ಕೊಟ್ಟ ಅರ್ಜುನ್ ಜನ್ಯ

14 ವರ್ಷದ ಲಹರಿ ಮಹೇಶ್ ಮೈಸೂರಿನ ಪ್ರತಿಭೆ. ನಾಗಾರಾಜ್ ಟೀಮ್ಗೆ ಆಯ್ಕೆ ಆಗಿದ್ರು. ಸರಿಗಮಪ ಸೀಸನ್ಗೆ ಗೆಸ್ಟ್ ಆಗಿ ಬಂದಿರೋ ಇಂಡಸ್ಟ್ರಿಯ ದಿಗ್ಗಜರು ಲಹರಿಯನ್ನ ಹಾಡಿ ಹೊಗಳಿದ್ದರು. ಅಷ್ಟೇ ಅಲ್ಲದೇ ಸೆಮಿ ಫಿನಾಲೆಯಲ್ಲಿ ಅರ್ಜುನ್ ಜನ್ಯ ಸಿನಿಮಾಗೆ ಹಾಡಲು ಲಹರಿಗೆ ಆಫರ್ ಕೊಟ್ಟಿದ್ದರು.

ಲಹರಿಗೆ ಬಂಪರ್ ಚಾನ್ಸ್ ಕೊಟ್ಟ ಅರ್ಜುನ್ ಜನ್ಯ

Arjun Janya and Lahari

Profile Vinay Bhat Jul 14, 2025 7:54 AM

ಸರಿಗಮಪ ಕನ್ನಡ ಸೀಸನ್ 21ರ ಶೋನ ಸ್ಪರ್ಧಿಯಾಗಿದ್ದ ಗಾಯಕಿ ಲಹರಿ ಮಹೇಶ್ (Lahari Mahesh) ಸೆಮಿ ಫೈನಲ್​ನಲ್ಲಿ ಹೊರಬಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು, ಇದು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಲಹರಿ ತಮ್ಮ ಗಾಯನದಿಂದಲೇ ಎಲ್ಲರ ಮನೆಮಾತಾಗಿದ್ದರು. ಇವರ ಕಂಠಸಿರಿಯನ್ನು ಕೇಳಿದವರು, ಈ ಹುಡುಗಿ ಜೂನಿಯರ್ ಶ್ರೇಯಾ ಘೋಷಲ್ ಅಂತ ಕರೆದಿದ್ದರು. ಇವರು ಫೈನಲ್ ಪ್ರವೇಶಿಸಿಲು ಇವರು ಅರ್ಹರು ಎಂಬ ಮಾತು ಕೇಳಿಬಂದಿತ್ತು. ಆದರೆ ಲಹರಿ ಫಿನಾಲೆಗೆ ಸ್ಥಾನ ಪಡೆಯಲಿಲ್ಲ. ಆದದೀಗ ಲಹರಿ ಮಹೇಶ್ ಕಡೆಯಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ.

14 ವರ್ಷದ ಲಹರಿ ಮಹೇಶ್​ ಮೈಸೂರಿನ ಪ್ರತಿಭೆ. ನಾಗಾರಾಜ್​ ಟೀಮ್​ಗೆ ಆಯ್ಕೆ ಆಗಿದ್ರು. ಸರಿಗಮಪ ಸೀಸನ್​ಗೆ ಗೆಸ್ಟ್​ ಆಗಿ ಬಂದಿರೋ ಇಂಡಸ್ಟ್ರಿಯ ದಿಗ್ಗಜರು ಲಹರಿಯನ್ನ ಹಾಡಿ ಹೊಗಳಿದ್ದರು. ಅಷ್ಟೇ ಅಲ್ಲದೇ ಸೆಮಿ ಫಿನಾಲೆಯಲ್ಲಿ ಅರ್ಜುನ್​ ಜನ್ಯ ಸಿನಿಮಾಗೆ ಹಾಡಲು ಲಹರಿಗೆ ಆಫರ್ ಕೊಟ್ಟಿದ್ದರು. ಇದೀಗ ಕೊಟ್ಟ ಮಾತಿನಂತೆ ಲಹರಿಗೆ ಕನ್ನಡದ ಸಿನಿಮಾದಲ್ಲಿ ಹಾಡುವ ಅವಕಾಶ ಕೊಟ್ಟಿದ್ದಾರೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ.

ಈ ಬಗ್ಗೆ ಲಹರಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಿಮ್ಮ ಜೊತೆ ಕೆಲಸ ಮಾಡಿದ್ದಕ್ಕೆ ತುಂಬಾ ಕೃತಜ್ಞಳಾಗಿದ್ದೇನೆ. ಅ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಸರ್ ಎಂದು ಲಹರಿ ಬರೆದುಕೊಂಡು ಅರ್ಜುನ್ ಜನ್ಯ ಜೊತೆಗಿನ ಮತ್ತು ರೆಕಾರ್ಡ್ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಲಹರಿ ಹಂಚಿಕೊಂಡಿರುವ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. "ಸೋತು ಗೆದ್ದವಳು ನಮ್ಮ ಲಹರಿ..", "ಸಾರ್ಥಕ ಆಯ್ತು ಸರ್.. ದೇವ್ರು ಒಳ್ಳೇದು ಮಾಡಲಿ ಸರ್ ನಿಮಗೆ.. ಒಳ್ಳೆಯ ಪ್ರತಿಭೆಯನ್ನ ಅಯ್ಕೆ ಮಾಡ್ಕೊಂಡಿರಿ" ಎಂದೆಲ್ಲಾ ಕಾಮೆಂಟ್ ಮೂಲಕ ಹಾರೈಸಿದ್ದಾರೆ. ಸರಿಗಮಪ ಶೋನಲ್ಲಿ ಅರ್ಜುನ್ ಜನ್ಯ ಕೂಡ ಓರ್ವ ಜಡ್ಜ್. ಆ ಶೋನಲ್ಲಿ ಹಾಡಿದ ಅನೇಕರಿಗೆ ಅರ್ಜುನ್ ಜನ್ಯ ಅವಕಾಶ ನೀಡಿದ್ದಾರೆ. ಇದೇ ಸೀಸನ್‌ನಲ್ಲಿ ಗಾಯಕ ಬಾಳು ಬೆಳಗುಂದಿ ಅವರಿಗೂ ಕೂಡ ಅರ್ಜುನ್ ಚಾನ್ಸ್ ಕೊಟ್ಟಿದ್ದಾರೆ.

Aishwarya-Shishir: ನಿಮ್ಮ ಪ್ರೇಮಿನ ಟ್ಯಾಗ್ ಮಾಡಿ ಎಂದು ಬರೆದು ಶಿಶಿರ್ ಜೊತೆ ವಿಡಿಯೋ ಹಂಚಿಕೊಂಡ ಐಶ್ವರ್ಯಾ