ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ಯಾಂಡಲ್‌ವುಡ್‌ಗೆ ಮರಳಿದ ʻಕೆಜಿಎಫ್‌ʼ ಚೆಲುವೆ ಶ್ರೀನಿಧಿ ಶೆಟ್ಟಿ; ಸದ್ದಿಲ್ಲದೇ ಹೊಸ ಸಿನಿಮಾ ಆರಂಭಿಸಿದ ಅನೂಪ್‌ ಭಂಡಾರಿ!

ಪರಭಾಷಾ ಪ್ರಾಜೆಕ್ಟ್‌ಗಳಲ್ಲಿ ಸಕ್ರಿಯವಾಗಿದ್ದ ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ, ಇದೀಗ ಭಂಡಾರಿ ಸಹೋದರರ ನೂತನ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಮರುಪ್ರವೇಶ ಮಾಡಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ‌ ನಿರೂಪ್ ಭಂಡಾರಿ ನಾಯಕನಾಗಿ ನಟಿಸುತ್ತಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಮರಳಿದ ಶ್ರೀನಿಧಿ ಶೆಟ್ಟಿ; ಯಾವುದು ಆ ಸಿನಿಮಾ?

-

Avinash GR
Avinash GR Aug 15, 2026 4:09 PM

'ಕೆಜಿಎಫ್' ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ ಪರಭಾಷೆಗಳಲ್ಲಿ ಭರ್ಜರಿ ಬೇಡಿಕೆ ಗಿಟ್ಟಿಸಿಕೊಂಡು ಸದಾ ಬ್ಯುಸಿಯಾಗಿದ್ದರು. ಈಗಾಗಲೇ ಅವರು ತಮಿಳಿನಲ್ಲಿ ವಿಕ್ರಮ್, ತೆಲುಗಿನಲ್ಲಿ ನಾನಿ ಮತ್ತು ಸಿದ್ದು ಜೊನ್ನಲಗಡ್ಡ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುವುದಿಲ್ಲವೇನೋ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಇದೀಗ ಎಲ್ಲ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಶ್ರೀನಿಧಿ ಶೆಟ್ಟಿ ಮತ್ತೆ ಸ್ಯಾಂಡಲ್‌ವುಡ್‌ಗೆ ಭರ್ಜರಿಯಾಗಿ ಮರಳಿದ್ದಾರೆ ಎನ್ನಲಾಗಿದೆ.

ನಿರೂಪ್ ಭಂಡಾರಿಗೆ ಶ್ರೀನಿಧಿ ಶೆಟ್ಟಿ ನಾಯಕಿ

ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಟ ನಿರೂಪ್ ಭಂಡಾರಿ ಕಾಂಬಿನೇಷನ್‌ನ ಹೊಸ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಕಿಚ್ಚ ಸುದೀಪ್ ಅವರ 'ಬಿಲ್ಲ ರಂಗ ಭಾಷಾ' ಚಿತ್ರದಲ್ಲಿ ನಿರತರಾಗಿರುವ ಅನೂಪ್ ಭಂಡಾರಿ, ಇದರ ನಡುವೆಯೇ ತಮ್ಮ ಸಹೋದರನ ಜೊತೆಗಿನ ಹೊಸ ಪ್ರಾಜೆಕ್ಟ್‌ನ ಕೆಲಸಗಳನ್ನು ಸದ್ದಿಲ್ಲದೆ ಆರಂಭಿಸಿದ್ದಾರೆ. ಅಧಿಖೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ʻಅತಿಕಾಯʼ ಚಿತ್ರಕ್ಕಾಗಿ ನಿರೂಪ್‌ ಭಂಡಾರಿಗೆ ಜೋಡಿಯಾದ ಸ್ವಾದಿಷ್ಟ ಕೃಷ್ಣನ್; ರಗಡ್‌ ಲುಕ್‌ನಲ್ಲಿ ʻರಂಗಿತರಂಗʼ ಹೀರೋ

ಕುಮಟಾದಲ್ಲಿ ಶೂಟಿಂಗ್

ಮೂಲಗಳ ಪ್ರಕಾರ, ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಸದ್ಯ ಕುಮಟಾದಲ್ಲಿ ಶೂಟಿಂಗ್ ನಡೆಯುತ್ತಿದೆ. ಚಿತ್ರದ ಕಥೆ, ಜಾನರ್ ಮತ್ತು ಪಾತ್ರಗಳ ವಿವರಗಳನ್ನು ಗೌಪ್ಯವಾಗಿಡಲಾಗಿದೆ. ಈ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದ ಕಾರಣದಿಂದಲೇ ಇತ್ತೀಚೆಗೆ ನಡೆದ 'ಅಮೆರಿಕಾ ಅಮೆರಿಕಾ 2' ಸಿನಿಮಾದ ಹಾಡು ಬಿಡುಗಡೆ ಸಮಾರಂಭಕ್ಕೆ ನಿರೂಪ್ ಭಂಡಾರಿ ಬಂದಿರಲಿಲ್ಲ ಎನ್ನಲಾಗಿದೆ.

ನಾಲ್ಕನೇ ಒಟ್ಟಿಗೆ ಕೆಲಸ ಮಾಡುತ್ತಿರುವ ಭಂಡಾರಿ ಬ್ರದರ್ಸ್

ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ 'ರಂಗಿತರಂಗ' ಚಿತ್ರದ ಮೂಲಕ ಅನೂಪ್ ನಿರ್ದೇಶಕರಾಗಿ ಹಾಗೂ ನಿರೂಪ್ ನಾಯಕರಾಗಿ ಪರಿಚಯಗೊಂಡಿದ್ದರು. ನಂತರ 'ರಾಜರಥ' ಹಾಗೂ 'ವಿಕ್ರಾಂತ್ ರೋಣ' ಸಿನಿಮಾಗಳಲ್ಲೂ ಈ ಸಹೋದರರ ಕಾಂಬಿನೇಷನ್ ಮುಂದುವರಿದಿತ್ತು. ಇದೀಗ ಶ್ರೀನಿಧಿ ಶೆಟ್ಟಿ ನಾಯಕಿಯಾಗಿರುವ ಈ ಹೊಸ ಸಿನಿಮಾ ಭಂಡಾರಿ ಬ್ರದರ್ಸ್ ಒಟ್ಟಿಗೆ ಕೆಲಸ ಮಾಡುತ್ತಿರುವ ನಾಲ್ಕನೇ ಚಿತ್ರವಾಗಿದೆ.

ವಿಕ್ಟರಿ ವೆಂಕಟೇಶ್

ನಿರೂಪ್ ಭಂಡಾರಿ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ; ಬಿಡುಗಡೆಗೆ ಸಿದ್ಧವಾಗಿರುವ 'ಅಮೆರಿಕಾ ಅಮೆರಿಕಾ 2' ನಂತರ 'ಅತಿಕಾಯ' ಮತ್ತು 'ಸತ್ಯ s/o ಹರಿಶ್ಚಂದ್ರ' ಚಿತ್ರಗಳು ಅವರ ಲೈನಪ್‌ನಲ್ಲಿವೆ. ಇನ್ನೊಂದೆಡೆ ಅನೂಪ್ ಭಂಡಾರಿ 'ಬಿಲ್ಲ ರಂಗ ಭಾಷಾ' ಚಿತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಇನ್ನು, ಶ್ರೀನಿಧಿ ಶೆಟ್ಟಿ ನಟಿಸುತ್ತಿರುವ 'ಆದರ್ಶ ಕುಟುಂಬಂ' ಸಿನಿಮಾದಲ್ಲಿ ವಿಕ್ಟರಿ ವೆಂಕಟೇಶ್ ನಾಯಕರಾಗಿದ್ದು, ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾವು ಅಕ್ಟೋಬರ್ 2ರಂದು ತೆರೆಗೆ ಬರಲಿದೆ.