Life Today Movie: ಕನ್ನಡದ ಲೈಫ್ ಟುಡೇ ಸಿನಿಮಾದ ವಿಶೇಷ ಹಾಡಿಗೆ ಧನಿಯಾದ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಜಿ.ವಿ ಪ್ರಕಾಶ್
ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಗಾಯಕ ಜಿ.ವಿ ಪ್ರಕಾಶ್ ಅವರು ಲೈಫ್ ಟುಡೇ ಸಿನಿಮಾದ ವಿಶೇಷ ಹಾಡಿಗೆ ಧನಿಯಾಗಿದ್ದಾರೆ. ಜಿವಿ ಪ್ರಕಾಶ್ ತಮಿಳು ಆವೃತ್ತಿಯಲ್ಲಿ ‘ಕಡೆಚಲೆ ಕಡೆಚಲೆ’ ಎಂಬ ಹಾಡನ್ನು ಹಾಡಿದ್ದಾರೆ. ಅದೇ ಹಾಡಿನ ಕನ್ನಡ ಆವೃತ್ತಿಗೆ ‘ಸಿಕ್ಕರೆ ಸಿಕ್ಕರೆ’ ಎಂದು ಹೆಸರಿಡಲಾಗಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ.

GV Prakash

ಜಲ್ಸಾ ಮತ್ತು ಇರುವುದೆಲ್ಲವ ಬಿಟ್ಟು ಸಿನಿಮಾಗಳ ನಿರ್ದೇಶಕ ಕಾಂತ ಕನ್ನಲ್ಲಿ, ಪ್ರಸ್ತುತ ತಮ್ಮ ಮೂರನೇ ಚಿತ್ರ ಲೈಫ್ ಟುಡೇ (Life Today) ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿದ್ದು, ಈಗ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಕನ್ನಡ ಮತ್ತು ತಮಿಳಿನಲ್ಲಿ ತಯಾರಾಗಿರುವ ಲೈಫ್ ಟುಡೇ ಸಿನಿಮಾ ಇದೀಗ ಬಿಡುಗಡೆ ಮುಹೂರ್ತ ಹುಡುಕುತ್ತಿದೆ. ಇದರ ಮಧ್ಯೆ ಚಿತ್ರ ತಂಡದಿಂದ ವಿಶೇಷ ಸುದ್ದಿಯೊಂದು ಹೊರಬಿದ್ದಿದೆ. ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಗಾಯಕ ಜಿ.ವಿ ಪ್ರಕಾಶ್ ಅವರು ಲೈಫ್ ಟುಡೇ ಸಿನಿಮಾದ ವಿಶೇಷ ಹಾಡಿಗೆ ಧನಿಯಾಗಿದ್ದಾರೆ.
ಜಿವಿ ಪ್ರಕಾಶ್ ತಮಿಳು ಆವೃತ್ತಿಯಲ್ಲಿ ‘ಕಡೆಚಲೆ ಕಡೆಚಲೆ’ ಎಂಬ ಹಾಡನ್ನು ಹಾಡಿದ್ದಾರೆ. ಅದೇ ಹಾಡಿನ ಕನ್ನಡ ಆವೃತ್ತಿಗೆ ‘ಸಿಕ್ಕರೆ ಸಿಕ್ಕರೆ’ ಎಂದು ಹೆಸರಿಡಲಾಗಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ತಮಿಳು ಆವೃತ್ತಿಯನ್ನು ಕರುಣಾಕರನ್ ಬರೆದಿದ್ದರೆ, ಕನ್ನಡ ಆವೃತ್ತಿಯನ್ನು ನಿರ್ದೇಶಕ ಪ್ರೇಮ್ ಅಥವಾ ಗಾಯಕ ಕೈಲಾಶ್ ಖೇರ್ ಹಾಡುವ ನಿರೀಕ್ಷೆಯಿದೆ.
Bhagya Lakshmi Serial: ನೋವಿನಿಂದ ಮನೆಬಿಟ್ಟು ಬಂದ ಕಿಶನ್: ಭಾಗ್ಯ ಮನೆಯಲ್ಲೇ ವಾಸ?
ಮೇಘನಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಪ್ರದೀಪ್ ನಿರ್ಮಿಸಿರುವ ಲೈಫ್ ಟುಡೇ ಚಿತ್ರದಲ್ಲಿ ಹೊಸಬರು ನಟಿಸಿದ್ದಾರೆ. ಮತ್ತು ಕುಟುಂಬದ ಕಥಾಹಂದರ ಹೊಂದಿರುವ ಸಿನಿಮಾ ಇದಾಗಿದೆ. ಈ ಸಿನಿಮಾದ ಮೂಲಕ ಕಿರಣ್ ಆನಂದ್ ನಾಯಕನಾಗಿ ಎಂಟ್ರಿ ನೀಡುತ್ತಿದ್ದಾರೆ. ಲೇಖಾ ಚಂದ್ರ ನಾಯಕಿಯಾಗಿ ನಟಿಸುತ್ತಿದ್ದಾರೆ. ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ ರಥರ್ವ, ತಬಲಾ ನಾಣಿ, ಅಪೂರ್ವ, ಕಾಕ್ರೋಚ್ ಸುಧಿ ಮತ್ತು ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಗ್ಗಪ್ಪ ಕೂಡ ನಟಿಸಿದ್ದಾರೆ. ಛಾಯಾಗ್ರಹಣ ಗುರುಪ್ರಸಾದ್ ಎಂಜಿ ಅವರದ್ದಾಗಿದೆ.