ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohanlal: 54 ದಿನಗಳಲ್ಲಿ ʻದೃಶ್ಯಂ 3ʼ ಶೂಟಿಂಗ್‌ ಮುಕ್ತಾಯ, ರಿಲೀಸ್‌ಗೂ ಮುನ್ನವೇ 350 ಕೋಟಿ ವ್ಯಾಪಾರ! ಪ್ಯಾನ್‌ ಇಂಡಿಯಾ ಮೇಕರ್ಸ್‌ ಕಲಿಬೇಕಿರುವುದೇನು?

Drishyam 3 Shooting: ಮೋಹನ್‌ಲಾಲ್‌ ನಟನೆಯ ಬಹುನಿರೀಕ್ಷಿತ ʻದೃಶ್ಯಂ 3ʼ (Drishyam 3: The Conclusion) ಚಿತ್ರದ ಚಿತ್ರೀಕರಣ ಕೇವಲ 54 ದಿನಗಳಲ್ಲಿ ಮುಕ್ತಾಯಗೊಂಡಿದೆ. ನಿರ್ದೇಶಕ ಜೀತು ಜೋಸೆಫ್ ಅಚ್ಚುಕಟ್ಟಾದ ಸಿದ್ಧತೆಯೊಂದಿಗೆ ಸಿನಿಮಾ ಮುಗಿಸಿದ್ದಾರೆ. ಈ ಸಿನಿಮಾವು ರಿಲೀಸ್‌ಗೂ ಮುನ್ನವೇ 350 ಕೋಟಿ ರೂ. ವ್ಯವಹಾರ ಮಾಡಿ ದಾಖಲೆ ಬರೆದಿದೆ.

ಮೋಹನ್‌ಲಾಲ್‌ ನಟನೆಯ ʻದೃಶ್ಯಂ 3ʼ ಶೂಟಿಂಗ್‌ 54 ದಿನಗಳಲ್ಲಿ ಮುಕ್ತಾಯ!

-

Avinash GR
Avinash GR Dec 4, 2025 2:35 PM

ಮೋಹನ್‌ಲಾಲ್‌ ನಟನೆಯ ಬಹುನಿರೀಕ್ಷಿತ ʻದೃಶ್ಯಂ 3ʼ (Drishyam 3: The Conclusion) ಸಿನಿಮಾದ ಶೂಟಿಂಗ್‌ ಮುಕ್ತಾಯವಾಗಿದೆ. ಅಚ್ಚರಿ ಎಂದರೆ, ಈ ಚಿತ್ರದ ಚಿತ್ರೀಕರಣವನ್ನು ಕೇವಲ 54 ದಿನಗಳಲ್ಲಿ ಮುಗಿಸಿರುವುದು ವಿಶೇಷ. ʻದೃಶ್ಯಂʼ ಸರಣಿಯ ಮೂರನೇ ಸಿನಿಮಾ ಇದಾಗಿದ್ದು, ಜೀತು ಜೋಸೆಫ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾವನ್ನು ಏಪ್ರಿಲ್‌ ವೇಳೆಗೆ ತೆರೆಗೆ ತರುವುದಕ್ಕೆ ನಿರ್ಮಾಪಕರು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ.

ವೇಗವಾಗಿ ಶೂಟಿಂಗ್‌ ಮುಗಿಸಿದ ಜೀತು

ಹೌದು, ʻದೃಶ್ಯಂ 3ʼ ಸಿನಿಮಾದ ಶೂಟಿಂಗ್‌ ಶುರುವಾಗಿದ್ದು ಸೆಪ್ಟೆಂಬರ್‌ 22ರಂದು. ಸಿನಿಮಾದ ಶೂಟಿಂಗ್‌ ಮುಗಿದಿದ್ದು ಡಿಸೆಂಬರ್‌ 3ರಂದು. ಇದರಲ್ಲಿ ವಿವಿಧ ಶೆಡ್ಯೂಲ್‌ಗಳಲ್ಲಿ ಒಟ್ಟು 54 ದಿನಗಳಲ್ಲಿ ʻದೃಶ್ಯಂ 3ʼ ಸಿನಿಮಾವನ್ನು ಶೂಟಿಂಗ್‌ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ವೇಗವಾಗಿ ಸ್ಟಾರ್‌ ನಟರೊಬ್ಬರ ಸಿನಿಮಾವೊಂದು ಶೂಟಿಂಗ್‌ ಮುಗಿಸಿದ್ದು ಅಪರೂಪ. ನಿರ್ದೇಶಕ ಜೀತು ಜೋಸೆಫ್‌ ಸಕಲ ಸಿದ್ಧತೆಗಳೊಂದಿಗೆ ಅಚ್ಚುಕಟ್ಟಾಗಿ ಶೂಟಿಂಗ್‌ ಮುಗಿಸಿದ್ದಾರೆ.

ʻದೃಶ್ಯಂ 3ʼ ಸಿನಿಮಾದ ಶೂಟಿಂಗ್‌ ಮುಕ್ತಾಯಕ್ಕೆ ಸಂಬಂಧಿಸಿದ ಪೋಸ್ಟ್‌

ಬೆರಗು ಮೂಡಿಸಿದ ಪ್ರೀ-ರಿಲೀಸ್‌ ಬ್ಯುಸಿನೆಸ್‌

2013ರಲ್ಲಿ ʻದೃಶ್ಯಂʼ ಸಿನಿಮಾವನ್ನು 3-4 ಕೋಟಿ ರೂ.ಗಳಲ್ಲಿ ನಿರ್ಮಾಣ ಮಾಡಲಾಗಿತ್ತು. ಆ ಚಿತ್ರ 60 ಕೋಟಿ ರೂ. ಮೇಲೆ ಗಳಿಕೆ ಮಾಡಿತ್ತು. ನಂತರ 2021ರಲ್ಲಿ ʻದೃಶ್ಯಂ 2ʼ ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್‌ ಮಾಡಲಾಗಿತ್ತು. ಅಚ್ಚರಿ ಎಂದರೆ, ಹಿಂದಿಯಲ್ಲಿ ಈ ಎರಡು ಚಿತ್ರಗಳನ್ನು ರಿಮೇಕ್‌ ಮಾಡಿ, 500 ಕೋಟಿ ರೂ. ಮೇಲೆ ವ್ಯವಹಾರ ಮಾಡಲಾಗಿದೆ. ಇದೀಗ ಚಿತ್ರಮಂದಿರಗಳಲ್ಲಿ ರಿಲೀಸ್‌ ಮಾಡಲು ನಿರ್ದೇಶಕ ಜೀತು ಜೋಸೆಫ್‌ ಅವರು ʻದೃಶ್ಯಂ 3ʼ ಸಿನಿಮಾವನ್ನು ರೆಡಿ ಮಾಡಿದ್ದಾರೆ. ಈ ವರ್ಷ ʻಮಿರಾಜ್ʼ ಸಿನಿಮಾವನ್ನು ರಿಲೀಸ್‌ ಮಾಡಿರುವ ಜೀತು ಜೋಸೆಫ್‌, ಅದರ ನಡುವೆ ʻವಲಧು ವಷತೆ ಕಲ್ಲನ್‌ʼ ಎಂಬ ಸಿನಿಮಾವನ್ನು ಇದೇ ವರ್ಷ ರಿಲೀಸ್‌ ಮಾಡುತ್ತಿದ್ದಾರೆ. ಇದರ ಮಧ್ಯೆ ಸದ್ದಿಲ್ಲದೇ ʻದೃಶ್ಯಂ 3ʼ ಚಿತ್ರವನ್ನು ಮುಗಿಸಿದ್ದಾರೆ.

Vrusshabha Movie: ಮೋಹನ್‌ಲಾಲ್‌ ನಟನೆಯ 'ವೃಷಭ' ಚಿತ್ರತಂಡ ಸಂಭಾವನೆಯನ್ನೇ ನೀಡಿಲ್ಲ; ವಿಡಿಯೊ ಮಾಡಿ ಬೇಸರ ಹೊರಹಾಕಿದ ಸ್ಯಾಂಡಲ್‌ವುಡ್‌ ನಟ

ಮೂಲಗಳ ಪ್ರಕಾರ, ʻದೃಶ್ಯಂ 3ʼ ಸಿನಿಮಾವು ರಿಲೀಸ್‌ಗೂ ಮುನ್ನವೇ 350 ಕೋಟಿ ರೂ. ವ್ಯವಹಾರ ಮಾಡಿದೆ ಎಂಬ ಮಾಹಿತಿ ಇದೆ. ರಿಮೇಕ್‌ ಹಕ್ಕುಗಳು, ವಿತರಣಾ ಹಕ್ಕುಗಳು, ಒಟಿಟಿ, ಸ್ಯಾಟಲೈಟ್‌ ಹಕ್ಕುಗಳಿಂದಲೇ ಇಷ್ಟೊಂದು ದೊಡ್ಡ ಮೊತ್ತವು ನಿರ್ಮಾಪಕರಿಗೆ ಸಿಕ್ಕಿದೆ. ಪನೋರಮಾ ಸ್ಟುಡಿಯೋಸ್ ಸಂಸ್ಥೆಯು ʻದೃಶ್ಯಂ 3ʼ ಚಿತ್ರದ ವಿಶ್ವಾದ್ಯಂತ ರಿಲೀಸ್‌ ಹಕ್ಕುಗಳು, ಹಿಂದಿ ರಿಮೇಕ್‌ ಹಕ್ಕುಗಳನ್ನು ಖರೀದಿ ಮಾಡಿದೆ. ಬಾಲಿವುಡ್‌ ನಟ ಅಜಯ್‌ ದೇವ್‌ಗನ್‌ ನಾಯಕತ್ವದಲ್ಲಿ ಶೀಘ್ರದಲ್ಲೇ ʻದೃಶ್ಯಂ 3ʼ ಶುರುವಾಗುವ ಸಾಧ್ಯತೆ ಇದೆ.

'ಕಾಂತಾರ: ಚಾಪ್ಟರ್‌ 1' ಚಿತ್ರದಲ್ಲಿ ಚಾನ್ಸ್‌ ನೀಡುವಂತೆ ಮನವಿ ಮಾಡಿದ್ದ ದಾದಾಸಾಹೇಬ್‌ ಫಾಲ್ಕೆ ಪುರಸ್ಕೃತ ನಟ ಮೋಹನ್‌ಲಾಲ್‌

ಪ್ಯಾನ್‌ ಇಂಡಿಯಾ ಮೇಕರ್ಸ್‌ಗೆ ಇದು ಪಾಠವಾಗಲಿ

ಈಚೆಗೆ ಸಿನಿಮಾಗಳನ್ನು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ತರುವ ಉಮೇದಿನಲ್ಲಿ ಅನೇಕರು ಫಿಲ್ಮ್‌ ಮೇಕರ್‌ಗಳು ಅನಗತ್ಯವಾಗಿ ಕಾಲಹರಣ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ವರ್ಷಾನುಗಟ್ಟಲೇ ಶೂಟಿಂಗ್‌ ಮಾಡುವುದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ತಡ ಮಾಡುವುದು ಮಾಡುತ್ತಿದ್ದಾರೆ. ಅಂತಹ ಸಿನಿಮಾಗಳ ಹೀರೋಗಳ ಸಿನಿಮಾಗಳು 2-3 ವರ್ಷಕ್ಕೊಂದು ತೆರೆಗೆ ಬರುತ್ತಿವೆ. ಆದರೆ 350 ಕೋಟಿ ರೂ. ವ್ಯವಹಾರ ಮಾಡುವ ತಾಕತ್ತು ಇರುವಂತಹ ಮೋಹನ್‌ಲಾಲ್‌, ವರ್ಷಕ್ಕೆ 2-3 ಸಿನಿಮಾಗಳನ್ನು ರಿಲೀಸ್‌ ಮಾಡುತ್ತಾ ಮುನ್ನಡೆಯುತ್ತಿದ್ದಾರೆ. ʻದೃಶ್ಯಂ 3ʼ ಒಂದು ಸಕ್ಸಸ್‌ಫುಲ್‌ ಸರಣಿಯ ಸಿನಿಮಾ. ಹೀಗಿದ್ದರೂ, ಯಾವುದೇ ಅನಗತ್ಯ ಒತ್ತಡಗಳಿಲ್ಲದೇ, ಶೂಟಿಂಗ್‌ ಅನ್ನು ಸಲೀಸಾಗಿ ಮುಗಿಸಲಾಗಿದೆ.