Actor Darshan: ಕಾಲಿಗೆ ಬೀಳೋಕೆ ಬಂದ ಮಹಿಳಾ ಅಭಿಮಾನಿ; ನಟ ದರ್ಶನ್ ಮಾಡಿದ್ದೇನು ನೋಡಿ! ವೈರಲಾಯ್ತು ಈ ವಿಡಿಯೋ
ನಟ ದರ್ಶನ್ ನೋಡಲು ಬಂದ ಮಹಿಳಾ ಅಭಿಮಾನಿಯೊಬ್ಬರು ಹುಚ್ಚಾಟ ಮಾಡಿದ್ದು, ಅವರ ಕಾಟಕ್ಕೆ ದಾಸ ಎಸ್ಕೇಪ್ ಆಗಿದ್ದಾರೆ. ಹೌದು ಮಹಿಳಾ ಅಭಿಮಾನಿಯೊಬ್ಬರು ದರ್ಶನ್ ಬೆನ್ನು ಬಿಡದೆ ಹಿಂಬಾಲಿಸಿದ್ದು, ಅವರ ಕಾಲಿಗೆ ಬಿದ್ದು ನಮಸ್ಕಾರಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ದರ್ಶನ್‌ಗೆ ಅವರ ವರ್ತನೆ ಕಂಡು ಶಾಕ್ ಆಗಿದ್ದು ಸದ್ಯ ಈ ವಿಡೀಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದರ್ಶನ್

ಬೆಂಗಳೂರು: ಮಹಿಳಾ ಅಭಿಮಾನಿಯೊಬ್ಬರು ದರ್ಶನ್(Actor Darshan) ಜೈಲಿನಲ್ಲಿದ್ದಾಗ ಬಳ್ಳಾರಿ ಸೆಂಟ್ರಲ್ ಜೈಲ್ ಮುಂಭಾಗ ಬಂದು ಹೈ ಡ್ರಾಮಾ ಮಾಡಿರೋ ಸಂಗತಿ ಎಲ್ಲಾರಿಗೂ ಗೊತ್ತೇ ಇದೆ. ವಿಜಯಲಕ್ಷ್ಮಿ ತರ ನಾನು ಮದುವೆ ಆಗ್ತೀನಿ, ನನಗೆ ದರ್ಶನ್ ಇಷ್ಟ ಎಂದು ಲಕ್ಷ್ಮೀ ಎಂಬ ಮಹಿಳಾ ಅಭಿಮಾನಿ ದರ್ಶನ್ ನೊಡಲೇಬೇಕು ಅಂತಾ ಬಳ್ಳಾರಿ ಸೆಂಟ್ರಲ್ ಜೈಲ್ ಬಳಿ ಸೀನ್ ಕ್ರಿಯೇಟ್ ಮಾಡಿದ್ದರು. ಬೆಂಗಳೂರಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಹಣ್ಣು ಹಂಪಲು, ಜೊತೆಗೆ ಆಧಾರ್ ಕಾರ್ಡ್ ಹಿಡಿದು ಬಂದಿದ್ದರು, ಆ ವಿಡೀಯೋ ಅಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್(Viral Video) ಆಗಿತ್ತು. ಇದೀಗ ಇಂತದೇ ಮತ್ತೊಂದು ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಡಿ ಬಾಸ್ ಮಹಿಳಾ ಅಭಿಮಾನಿಯೊಬ್ಬರು ದರ್ಶನ್ ಅವರೊಂದಿಗೆ ಮಾತಾಡಬೇಕು, ಅವರ ಕಾಲಿಗೆ ಬೀಳಬೇಕು ಎಂದು ಹಠ ಹಿಡಿದು ಕೂಗಾಟ, ರಂಪಾಟ ಮಾಡಿರುವ ದೃಶ್ಯ ವಿಡೀಯೋದಲ್ಲಿ ಸೆರೆಯಾಗಿದೆ.
ಹೌದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಸದ್ಯ ಜಾಮೀನಿನ ಮೇಲೆ ಹೊರಗಿರುವ ದಾಸ ಹೆಚ್ಚಾಗಿ ಯಾವುದೇ ಸಾಮಾಜಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅನಾರೋಗ್ಯದ ನಿಮಿತ್ತ ಅಭಿಮಾನಿಗಳಿಂದಲೂ ಅಂತರ ಕಾಯ್ದು ಕೊಂಡಿರುವ ದಚ್ಚು ಈ ಬಾರಿ ತಮ್ಮ ಬರ್ತ್ ಡೇ ಸೆಲೆಬ್ರೇಷನ್ ಗೂ ಬ್ರೇಕ್ ಹಾಕಿದ್ದರು. ಅಭಿಮಾನಿಗಳನ್ನು ಮನೆ ಬಳಿ ಬರದಂತೆ ವಿನಂತಿಸಿಕೊಂಡಿದ್ದರು.
ಈ ಸುದ್ದಿಯನ್ನು ಓದಿ: Abhedyam Movie: ವಿಜಯ ರಾಘವೇಂದ್ರ ಅಭಿನಯದ ʼಅಭೇದ್ಯಂʼ ಚಿತ್ರ ಶೀಘ್ರ ತೆರೆಗೆ
ಆದ್ರೆ ಎಷ್ಟೇ ಹೇಳಿದ್ದರೂ ಕೇಳದ ಅಭಿಮಾನಿಗಳು ಪ್ರತಿದಿನ ಬೆಳ್ಳಗಾಗುತ್ತಿದಂತೆ ತೂಗುದೀಪ ನಿವಾಸದ ಹತ್ತಿರ ತಮ್ಮ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಳ್ಳಲು ಜಮಾಹಿಸುತ್ತಿದ್ದು, ಡಿ ಬಾಸ್ ಮೀಟ್ ಆಗಬೇಕೆಂದು ಪಟ್ಟು ಹಿಡಿದು ಕಾಯುತ್ತಿದ್ದಾರೆ. ಹೀಗೆ ಮನೆ ಬಳಿ ಬರುವ ಫ್ಯಾನ್ಸ್ ಗಳನ್ನು ನಿರಾಸೆಗೊಳಿಸದ ದಚ್ಚು, ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು ಅಭಿಮಾನಿಗಳನ್ನು ಪ್ರೀತಿಯಿಂದ ಕಂಡು, ಮಾತಾಡಿಸಿ ಕಳುಹಿಸುತ್ತಿದ್ದಾರೆ.
ಹೀಗೆ ಮಾರ್ಚ್ 7ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ ಮನೆ ಮುಂದೆ ಎಂದಿನಂತೆ ಅಭಿಮಾನಿಗಳನ್ನು ಕಾಣಲು ಡಿ ಬಾಸ್ ಮುಂದಾಗಿದ್ದು, ಪೆಚ್ಚಾಟ್ಟಕ್ಕೆ ಸಿಲುಕಿರುವ ಘಟನೆ ನಡೆದಿದೆ. ದರ್ಶನ್ ಕಾಣಲು ಬಂದಿದ್ದ ಬಂದಿದ್ದ ಫ್ಯಾನ್ಸ್ ಗುಂಪಿನಲ್ಲಿದ್ದ ಮಹಿಳಾ ಅಭಿಮಾನಿಯೊಬ್ಬರು ದರ್ಶನ ಕಾಲಿಗೆ ಬೀಳಲು ಪ್ರಯತ್ನಿಸಿದ್ದು, ದಾಸ ಕಾಣುತ್ತಿದ್ದಂತೆ ಅವರ ಬಳಿ ಓಡಿ ಹೋಗಿ ಅವರಿಗೆ ನಮಸ್ಕಾರ ಮಾಡಲು ಪ್ರಯತ್ನಿಸಿದ್ದಾರೆ. ಅಲ್ಲದೇ ಒಮ್ಮೆ ಮಾತಾಡಿಸಿದರು ಅವರೊಂದಿಗೆ ಇನ್ನೂ ಮಾತಾಡ ಬೇಕು ಅಂತ ಆ ಮಹಿಳಾ ಅಭಿಮಾನಿ ಹಠ ಹಿಡಿದಿದ್ದು, ದರ್ಶನ್ ಆ ಮಹಿಳಾ ಅಭಿಮಾನಿಗೆ ತಮ್ಮ ಬೆನ್ನು ನೋವು ಇದೆ. ಹೆಚ್ಚು ಹೊತ್ತು ನಿಲ್ಲಲು ಆಗುವುದಿಲ್ಲ ಎಂದು ಹೇಳಿದ್ದರು ಅರ್ಥ ಮಾಡಿಕೊಳ್ಳದೇ ತಮ್ಮ ಹಠವನ್ನು ಮುಂದುವರೆಸಿದ್ದಾರೆ.
Today Exclusive Boss Look ❤️💥
— ಡೆವಿಲ್___😈🤫 (@dbosshudugaUk) March 7, 2025
ದಯವಿಟ್ಟು ಇತರ ಅತೀರಕ ಆಗಿ ಅಡ್ಬೇಡಿ ಬಾಸ್ ಮೊದಲು ಗುಣಮುಖರಾಗಲಿ ಅಮೇಲೆ ಬಾಸ್ ನಿಂತ್ಕೊಂಡು ಅಭಿಮಾನಿಗಳನ್ನ ಮಾತಾಡ್ಸ್ತಾರೆ #DBoss #DBoss𓃰 #BossOfSandalwood #TheDevil pic.twitter.com/NGwYMyDHdk
ಇನ್ನು ಪರಿಸ್ಥಿತಿ ನಿಭಾಹಿಸಲು ಆಗದೇ ದರ್ಶನ್ ಅಲ್ಲಿಂದ ತೆರಳಲು ಮುಂದಾಗಿದ್ದೂ, ಆ ಮಹಿಳಾ ಅಭಿಮಾನಿ ತನ್ನ ಹಠವನ್ನು ಬಿಡಲಿಲ್ಲ. ದರ್ಶನ್ ಕೈ ಹಿಡಿದುಕೊಂಡು ಎಳೆದಾಡಿದ್ದು, ದರ್ಶನ್ ಅವರಿಂದ ತಪ್ಪಿಸಿಕೊಂಡು ಹೋಗಿ ಕಾರು ಹತ್ತಿದ್ದಾರೆ. ಇಷ್ಟಾದರೂ ತಮ್ಮ ಮೊಂಡುತನ ಬಿಡದ ಆ ಮಹಿಳಾ ಅಭಿಮಾನಿ ಅಭಿಮಾನಿ ದರ್ಶನ್ ಅನ್ನು ಕಾರಿನ ಹತ್ತಲು ಬಿಡದೇ ಸೀನ್ ಕ್ರಿಯೇಟ್ ಮಾಡಿದ್ದಾರೆ.
ಹೇಗೋ ಹರಸಾಹಸ ಮಾಡಿ ಕಾರು ಹತ್ತಿದ ದರ್ಶನ್ ಹಿಂದೆಯೇ ಆ ಮಹಿಳೆ ಓಡಿ ಹೋಗಿದ್ದು, ಅವರನ್ನು ಹಿಡಿದು ಎಳೆದಾಡುವುದಕ್ಕೆ ಶುರು ಮಾಡಿದ್ದಾರೆ. ದರ್ಶನ್ ಜೊತೆ ಮಾತಾಡಲೇಬೇಕು ಅಂತ ಎಂದು ಕಣ್ಣೀರಾಕಿದ್ದಾರೆ. ದರ್ಶನ್ ತಮ್ಮ ಕಾರಿನ ಕಿಟಕಿಯನ್ನು ಏರಿಸಲು ಪ್ರಯತ್ನ ಪಟ್ಟಾಗ ಅದಕ್ಕೂ ಅಡ್ಡಿ ಪಡಿಸಿದ್ದು, ಕಿಟಕಿಗೆ ಕೈ ಹಾಕಿ ಎಳೆಯುವುದಕ್ಕೆ ಪ್ರಯತ್ನ ಮಾಡಿದ್ದಾರೆ. ಆ ಲೇಡಿ ಫ್ಯಾನ್ಸ್, ಗೋಳಾಟ ಮಾಡುವುದನ್ನು ನೋಡಲಾರದೆ, ಮತ್ತೆ ದರ್ಶನ್ ಕಾರಿನಿಂದ ಇಳಿದು ಆ ಮಹಿಳಾ ಅಭಿಮಾನಿಯನ್ನು ಭೇಟಿ ಮಾಡಿ, ಸಮಾಧಾನ ಮಾಡಿದ್ದಾರೆ. ಸದ್ಯ ಈ ವಿಡೀಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಡಿ ಬಾಸ್ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ ಎಂಬ ಕಾಮೆಂಟ್ ಗಳು ಬರುತ್ತಿದೆ.