ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

666 Operation Dream Theatre: 6 ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ ʻಕನ್ನಡತಿʼ ಪ್ರಿಯಾಂಕಾ ಮೋಹನ್!

Actress Priyanka Mohan: ಆರು ವರ್ಷಗಳ ಸುದೀರ್ಘ ವಿರಾಮದ ನಂತರ ʻಕನ್ನಡತಿʼ ಪ್ರಿಯಾಂಕಾ ಮೋಹನ್, ʻ666 ಆಪರೇಷನ್ ಡ್ರೀಮ್ ಥಿಯೇಟರ್ʼ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಶಿವಣ್ಣ ಮತ್ತು ಧನಂಜಯ್ ಪ್ರಮುಖ ಪಾತ್ರಗಳಲ್ಲಿರುವ ಈ ಚಿತ್ರವು ಹೇಮಂತ್ ಎಂ. ರಾವ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ.

ಶಿವಣ್ಣ -  ಧನಂಜಯ್ ಚಿತ್ರಕ್ಕಾಗಿ ಕನ್ನಡಕ್ಕೆ ಮರಳಿದ ನಟಿ ಪ್ರಿಯಾಂಕಾ ಮೋಹನ್!

-

Avinash GR
Avinash GR Nov 20, 2025 12:43 PM

ನಟಿ ಪ್ರಿಯಾಂಕಾ ಮೋಹನ್‌ ಅವರು ಮೂಲತಃ ಕನ್ನಡತಿ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಇವರು ಇಂದು ಬಹುಭಾಷೆಯಲ್ಲಿ ಫೇಮಸ್‌ ಆಗಿದ್ದಾರೆ. ಆದರೆ ಪ್ರಿಯಾಂಕಾ ನಟಿಸಿದ್ದ ಮೊದಲ ಸಿನಿಮಾ ತೆರೆಕಂಡಿದ್ದು ಕನ್ನಡದಲ್ಲಿ ಅನ್ನೋದು ವಿಶೇಷ. 2019ರಲ್ಲಿ ತೆರೆಕಂಡ ʻಒಂದ್ ಕಥೆ ಹೇಳ್ಲಾʼ‌ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾಂಕಾ ಇದೀಗ ಪುನಃ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ.

‘666 ಆಪರೇಷನ್‌ ಡ್ರೀಮ್‌ ಥಿಯೇಟರ್‌’ ಚಿತ್ರದಲ್ಲಿ ಪ್ರಿಯಾಂಕಾ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘666 ಆಪರೇಷನ್‌ ಡ್ರೀಮ್‌ ಥಿಯೇಟರ್‌’ ಚಿತ್ರಕ್ಕೀಗ ಬಹುಭಾಷಾ ನಟಿ ಪ್ರಿಯಾಂಕಾ ಮೋಹನ್ ಎಂಟ್ರಿ ಕೊಟ್ಟಿದ್ದಾರೆ.

ತಮ್ಮ ಅಭಿನಯದ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ಪ್ರಿಯಾಂಕಾ ಮೋಹನ್, ಈಗ ʻ666 ಆಪರೇಷನ್ ಡ್ರೀಮ್ ಥಿಯೇಟರ್ʼ ಸಿನಿಮಾದ ‌ಭಾಗವಾಗಿದ್ದಾರೆ. ಪವನ್ ಕಲ್ಯಾಣ್, ನಾನಿ, ಧನುಷ್, ಶಿವಕಾರ್ತಿಕೇಯನ್ ಮುಂತಾದ ಸ್ಟಾರ್‌ ಹೀರೋಗಳ ಜೊತೆ ಅಭಿನಯಿಸಿರುವ ಪ್ರಿಯಾಂಕಾ, ಆರು ವರ್ಷಗಳ ನಂತರ ಕನ್ನಡಕ್ಕೆ ಮರಳಿದ್ದಾರೆ. ಅಂದಹಾಗೆ,

ಶಿವಣ್ಣ-ಧನಂಜಯ್-ಹೇಮಂತ್‌ ರಾವ್‌ ಕಾಂಬಿನೇಷನ್‌ನ ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಚಿತ್ರಕ್ಕಾಗಿ ಬೃಹತ್ ಸೆಟ್ ರೆಡಿ

ತೆಲುಗಿನ 'ಗ್ಯಾಂಗ್‌ಲೀಡರ್', 'ಸರಿಪೋದ ಶನಿವಾರಂ', ತಮಿಳಿನ 'ಡಾಕ್ಟರ್', 'ಟಿಕ್‌ಟಾಕ್', 'ಕ್ಯಾಪ್ಟನ್ ಮಿಲ್ಲರ್', 'ಬ್ರದರ್' ಸಿನಿಮಾಗಳಲ್ಲಿ ಪ್ರಿಯಾಂಕಾ ಮೋಹನ್ ನಟಿಸಿದ್ದಾರೆ.

ನಟಿ ಪ್ರಿಯಾಂಕಾ ಏನಂದ್ರು?

ʻಸಪ್ತ ಸಾಗರದಾಚೆ ಎಲ್ಲೋʼ ಸಿನಿಮಾ ಖ್ಯಾತಿಯ ಹೇಮಂತ್ ಎಂ. ರಾವ್ ನಿರ್ದೇಶನದ 80ರ ದಶಕದ ಬಾಂಡ್ - ಸ್ಪೈ ಕಥೆ ಹೊಂದಿರುವ ‘666 ಆಪರೇಷನ್‌ ಡ್ರೀಮ್‌ ಥಿಯೇಟರ್‌’ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆಗೆ ಬರಲಿದೆ. ʻ666 ಆಪರೇಷನ್ ಡ್ರೀಮ್ ಥಿಯೇಟರ್ʼ ಚಿತ್ರಕ್ಕೆ ಆಯ್ಕೆ ಆಗಿರುವ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಮೋಹನ್, "ನಾನು ಡಾ. ಶಿವರಾಜ್ ಕುಮಾರ್ ಸರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ಭಾಗವಾಗುವ ಮೂಲಕ ನನ್ನ ಕನಸು ನನಸಾಗಿದೆ. ಪ್ರತಿಭಾನ್ವಿತ ನಟ ಧನಂಜಯ ಅವರೊಂದಿಗೆ ಕೆಲಸ ಮಾಡುವುದಕ್ಕಾಗಿ ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಹೇಮಂತ್ ಎಂ ರಾವ್ ಅವರ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದೆ. ಆದರೆ ಅದು ಇಷ್ಟು ಬೇಗ ನೆರವೇರುತ್ತದೆ ಅಂತ ಭಾವಿಸಿರಲಿಲ್ಲ" ಎಂದಿದ್ದಾರೆ.

ಪ್ರಿಯಾಂಕಾ ಮೋಹನ್‌ ಹಂಚಿಕೊಂಡಿರುವ ಪೋಸ್ಟ್‌

ʻ666 ಆಪರೇಷನ್ ಡ್ರೀಮ್ ಥಿಯೇಟರ್ʼ ಸಿನಿಮಾವನ್ನು ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಕ್ ಜೆ ಗೌಡ ನಿರ್ಮಿಸುತ್ತಿದ್ದಾರೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಡಿಸೆಂಬರ್ ಮೊದಲ ವಾರದಲ್ಲಿ ಮೂರನೇ ಹಂತದ ಶೂಟಿಂಗ್ ನಡೆಸಲು ಯೋಜನೆ ಹಾಕಿಕೊಂಡಿದೆ. ಶಿವರಾಜ್‌ಕುಮಾರ್ ಹಾಗೂ ಧನಂಜಯ್‌‌ ಅವರ ರೆಟ್ರೋ ಲುಕ್‌ಗಳು ಗಮನಸೆಳೆದಿವೆ. ಈ ಸಿನಿಮಾಕ್ಕೆ ಚರಣ್‌ ರಾಜ್‌ ಸಂಗೀತ ನಿರ್ದೇಶನ ಮಾಡುತ್ತಿದ್ದು, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ.