ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

160 ಕೋಟಿಗೆ ಸೇಲ್‌ ಆಯ್ತು 'ಜೈಲರ್ 2' OTT ರೈಟ್ಸ್;‌ ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ರಜನಿಕಾಂತ್ ಸಿನಿಮಾ!‌ ಖರೀದಿ ಮಾಡಿದ್ಯಾರು?

ಜೈಲರ್‌ 2 ಸಿನಿಮಾದ ಒಟಿಟಿ ಹಕ್ಕುಗಳು ಬಿಡುಗಡೆಗೂ ಮುನ್ನವೇ ಬರೋಬ್ಬರಿ ಅಮೇಜಾನ್ ಪ್ರೈಮ್ ವಿಡಿಯೋ ಪಾಲಾಗಿವೆ. ಇದು ತಮಿಳು ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತದ ಡೀಲ್ ಆಗಿದ್ದು, ರಜನಿಕಾಂತ್ ಅವರ ಸ್ಟಾರ್ ಪವರ್ ಏನೆಂಬುದನ್ನು ಸಾಬೀತುಪಡಿಸಿದೆ. ನೆಲ್ಸನ್ ನಿರ್ದೇಶನದ ಈ ಚಿತ್ರವು 2026ರ ಆಗಸ್ಟ್‌ನಲ್ಲಿ ತೆರೆಕಾಣುವ ನಿರೀಕ್ಷೆಯಿದೆ.

ರಿಲೀಸ್‌ಗೂ ಮುನ್ನವೇ ʻಜೈಲರ್ 2ʼ ದಾಖಲೆ; ಭಾರಿ ಮೊತ್ತಕ್ಕೆ OTT ರೈಟ್ಸ್ ಸೇಲ್

-

Avinash GR
Avinash GR Apr 18, 2026 4:06 PM

ʻಸೂಪರ್‌ ಸ್ಟಾರ್‌ʼ ರಜನಿಕಾಂತ್ ನಟನೆಯ ಬಹುನಿರೀಕ್ಷಿತ 'ಜೈಲರ್ 2' ಸಿನಿಮಾಗೆ ಕೊನೇ ಹಂತದ ಶೂಟಿಂಗ್‌ ನಡೆಯುತ್ತಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, 2026ರ ಆಗಸ್ಟ್‌ನಲ್ಲೇ ಈ ಸಿನಿಮಾ ತೆರೆಕಾಣಲಿದೆ. ಈ ಸೀಕ್ವೇಲ್‌ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆಗಳು ಹೆಚ್ಚುತ್ತಿವೆ. ಸದ್ಯ ಸಿನಿಮಾವು ತೆರೆಗೆ ಬರುವುದಕ್ಕೂ ಮುನ್ನವೇ ಒಂದು ಮಹಾನ್‌ ದಾಖಲೆಯನ್ನು ಬರೆದಿದೆ. ಅದು ಓಟಿಟಿ ಹಕ್ಕುಗಳ ವಿಚಾರದಲ್ಲಿ.

ದುಬಾರಿ ಮೊತ್ತಕ್ಕೆ ಸೇಲ್‌ ಆಯ್ತು ಓಟಿಟಿ ಹಕ್ಕುಗಳು

ಜೈಲರ್‌ 2 ಸಿನಿಮಾಗಳ ಹಕ್ಕುಗಳನ್ನು ಖರೀದಿ ಮಾಡಲು ಓಟಿಟಿ ವೇದಿಕೆಗಳು ನಾ ಮುಂದು ತಾ ಮುಂದು ಅಂತ ಪೈಪೋಟಿ ನಡೆಸುತ್ತಿದ್ದವು. ಅಂತಿಮವಾಗಿ ಅಮೇಜಾನ್‌ ಪ್ರೈಮ್‌ ವಿಡಿಯೋ ತೆಕ್ಕೆಗೆ ಜೈಲರ್‌ 2 ಸಿನಿಮಾದ ಡಿಜಿಟಲ್‌ ಹಕ್ಕುಗಳು ಸೇಲ್‌ ಆಗಿವೆ. ಅದು ಕೂಡ ದಾಖಲೆ ಮೊತ್ತಕ್ಕೆ ಅನ್ನೋದು ವಿಶೇಷ. ಹೌದು, ಬರೋಬ್ಬರಿ 160 ಕೋಟಿ ರೂಪಾಯಿಗಳಿಗೆ ಜೈಲರ್‌ 2 ಡಿಜಿಟಲ್‌ ಹಕ್ಕುಗಳು ಸೇಲ್‌ ಆಗಿವೆ ಎಂಬ ಮಾಹಿತಿ ಹೊರಬಿದ್ದಿದೆ.

Jailer 2 Update: ಜೈಲರ್ 2 ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರಜನಿಕಾಂತ್! ಕಮಲ್‌ ಜೊತೆಗಿನ ಮೂವಿ ಬಗ್ಗೆ ಹೇಳಿದ್ದನು?

ಇದು ರಜನಿಕಾಂತ್‌ ಹವಾ

ಇದು ತಮಿಳು ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಒಟಿಟಿ ಡೀಲ್ ಆಗಿದ್ದು, ಈ ಹಿಂದೆ ಕಮಲ್ ಹಾಸನ್ ಅವರ 'ಥಗ್ ಲೈಫ್' (150 ಕೋಟಿ ರೂ.) ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ. ಇನ್ನೂ ರಿಲೀಸ್‌ ದಿನಾಂಕವೇ ಘೋಷಣೆ ಆಗಿಲ್ಲ. ಆಗಲೇ ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ರಜನಿಕಾಂತ್‌ ಅವರ ಸ್ಟಾರ್‌ ಪವರ್‌ ಎಂಥದ್ದು ಎಂಬುದನ್ನು ಸಾಬೀತು ಮಾಡಿದೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಜೈಲರ್‌ 2 ಚಿತ್ರದ ಕಥೆ ಏನು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಆದರೆ ರಜನಿಕಾಂತ್ ಅವರ ಪಾತ್ರದ ಸುತ್ತ ಆಕ್ಷನ್ ಮತ್ತು ಎಮೋಷನಲ್ ಡ್ರಾಮಾ ಇರಲಿದೆ ಎಂಬುದು ಖಚಿತವಾಗಿದೆ.

ದಕ್ಷಿಣ ಭಾರತದ ಖ್ಯಾತ ನಟರಾದ ರಮ್ಯಾ ಕೃಷ್ಣನ್, ಯೋಗಿ ಬಾಬು, ಮೋಹನ್ ಲಾಲ್, ಶಿವರಾಜ್‌ಕುಮಾರ್ ಅವರು ಭಾಗ 2ರಲ್ಲೂ ಮುಂದುವರಿದಿದ್ದಾರೆ. ಜೊತೆಗೆ ಈ ಬಾರಿ ಸೂರಜ್ ವೆಂಜಾರಮೂಡು, ಎಸ್‌ಜೆ ಸೂರ್ಯ, ಮಿಥುನ್‌ ಚಕ್ರವರ್ತಿ, ವಿಜಯ್ ಸೇತುಪತಿ ಸೇರಿದಂತೆ ಮತ್ತೊಂದಿಷ್ಟು ಕಲಾವಿದರು ಸೇರ್ಪಡೆಗೊಂಡಿದ್ದಾರೆ. ಸನ್‌ ಪಿಕ್ಚರ್ಸ್‌ ನಿರ್ಮಾಣದ ಈ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.

Jailer 2 Movie: ಮತ್ತೊಮ್ಮೆ ಆ್ಯಕ್ಷನ್‌ ಅವತಾರದಲ್ಲಿ ರಜನಿಕಾಂತ್‌; 'ಜೈಲರ್‌ 2' ಚಿತ್ರದ ಟೀಸರ್‌ ಔಟ್‌

ಪೈರಸಿ ಬಗ್ಗೆ ಭಾರಿ ಮುನ್ನೆಚ್ಚರಿಕೆ

ಈಚೆಗೆ ಸಿನಿಮಾಗಳು ಆನ್‌ಲೈನ್‌ನಲ್ಲಿ ಲೀಕ್‌ ಆಗುತ್ತಿರುವುದು ಗೊತ್ತೇ ಇದೆ. ಜೈಲರ್‌ 2 ಸಿನಿಮಾದ ಶೂಟಿಂಗ್‌ ವಿಶುವಲ್ಸ್‌ ಕೂಡ ಈಚೆಗೆ ಸೋರಿಕೆ ಆಗಿತ್ತು. ಸದ್ಯ ಈ ಚಿತ್ರಕ್ಕೆ ಭಾರಿ ಹೈಪ್ ಇರುವ ಬೆನ್ನಲ್ಲೇ, ಪೈರಸಿ ತಡೆಗಟ್ಟಲು ನಿರ್ಮಾಪಕರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇಂತಹ ಸೋರಿಕೆಯಾದ ದೃಶ್ಯಗಳನ್ನು ವೀಕ್ಷಿಸಬೇಡಿ ಅಥವಾ ಹಂಚಿಕೊಳ್ಳಬೇಡಿ ಎಂದು ಅಭಿಮಾನಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅದಕ್ಕಾಗಿಯೇ ಒಂದು ತಂಡ ನಿರಂತರವಾಗಿ ಕೆಲಸ ಮಾಡುತ್ತಿದೆಯಂತೆ.