Rakkasapuradhol Trailer: ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರ ಕೊರತೆ ಇದೆ: ರಾಜ್ ಬಿ ಶೆಟ್ಟಿ
Raj B Shetty: ರಕ್ಕಸಪುರದೋಳ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಚಿತ್ರದಲ್ಲಿ ನಟ ರಾಜ್ ಬಿ ಶೆಟ್ಟಿ ಖಡಕ್ ಪೊಲೀಸ್ ಪಾತ್ರ. ನಿರ್ದೇಶಕ ರವಿ ಸಾರಂಗ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ರಕ್ಕಸಪುರದೋಳ್ ಸಿನಿಮಾ ಫೆ.6 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. 'ರಕ್ಕಸಪುರದೋಳ್' ಸಿನಿಮಾದ ಟ್ರೇಲರ್ ಅನ್ನು ಇಂದು ನಟ ಸುದೀಪ್ ಅವರು ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲಿಸ್ ಪಾತ್ರದಲ್ಲಿ ನಟಿಸಿರುವ ರಾಜ್ ಬಿ. ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
ರಾಜ್ ಬಿ ಶೆಟ್ಟಿ -
ರಕ್ಕಸಪುರದೋಳ್ (Rakkasapuradhol Trailer) ಚಿತ್ರದ ಟ್ರೈಲರ್ (Trailer) ಬಿಡುಗಡೆಯಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಚಿತ್ರದಲ್ಲಿ ನಟ ರಾಜ್ ಬಿ ಶೆಟ್ಟಿ ಖಡಕ್ ಪೊಲೀಸ್ ಪಾತ್ರ. ನಿರ್ದೇಶಕ ರವಿ ಸಾರಂಗ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ರಕ್ಕಸಪುರದೋಳ್ ಸಿನಿಮಾ ಫೆ.6 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. 'ರಕ್ಕಸಪುರದೋಳ್' ಸಿನಿಮಾದ ಟ್ರೇಲರ್ ಅನ್ನು ಇಂದು ನಟ ಸುದೀಪ್ (Sudeep_ ಅವರು ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲಿಸ್ ಪಾತ್ರದಲ್ಲಿ ನಟಿಸಿರುವ ರಾಜ್ ಬಿ. ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
ಕನ್ನಡದಲ್ಲಿ ಸಿನಿಮಾ ನಿರ್ದೇಶಕರರ ಕೊರತೆ ಇದೆ
ಸಣ್ಣ ಬಜೆಟ್ ಸಿನಿಮಾ ಗೆದ್ದರೆ ಮಾತ್ರ ಇಂಡಸ್ಟ್ರಿಗೆ ಭಾರಿ ಲಾಭ ಇದೆ. ಸು ಫ್ರಾಮ್ ಸೋ ಇದಕ್ಕೆ ಉತ್ತಮ ಉದಾಹರಣೆ. ಇದಕ್ಕೆ ಕಾರಣ ನಿರ್ದೇಶಕ. ಕನ್ನಡದಲ್ಲಿ ಸಿನಿಮಾ ನಿರ್ದೇಶಕರರ ಕೊರತೆ ಇದೆ. ಈ ಸಿನಿಮಾವನ್ನು ಏನೋ ಒಂದು ಗಿಮಕ್ ಮಾಡಬೇಕು ಅಂತ ಮಾಡಿದ್ದಲ್ಲ ಕಥೆ ಹೇಳಬೇಕು ಅಂತ ಮಾಡಿದ ಸಿನಿಮಾ.
ರವಿವರ್ಮ ಅವರು ಮೊದಲ ಬಾರಿಗೆ ನಿರ್ಮಾಪಕರಾಗಿದ್ದಾರೆ. ಒಳ್ಳೆಯ ಮ್ಯೂಸಿಕ್ ಇದೆ. ಫ್ಯಾಮಿಲಿ ನೋಡಬಹುದಾದ ಸಿನಿಮಾ. ಒಳ್ಳೆಯ ನಿರ್ದೇಶಕ ಕೂಡ ಈ ಮೂಲಕ ಬರ್ತಾ ಇದ್ದಾರೆ.
ಈ ಪಾತ್ರ ತುಂಬಾ ಸೆಟಲ್ ಪಾತ್ರ. ಅವನದ್ದೇ ಆದ ಹೋರಾಟದಲ್ಲಿ ಇರ್ತಾನೆ. ಇದುಇಂದು ಸರಳ ಕಟೆಂಟ್ ಸಿನಿಮಾ. ಸಿನಿಮಾದಲ್ಲಿ ಬೇರೆ ಬೇರೆ ರೀತಿ ಸಿನಿಮಾ ಬರಬೇಕು. ಇದರಲ್ಲಿ ಒಳ್ಳೆಯ ಕಥೆ ಇದೆ ಎಂದರು
ಜನಮನ ಸೆಳೆಯುವಲ್ಲಿ ಯಶಸ್ವಿ
‘ರಕ್ಕಸಪುರದೋಳ್’ ಚಿತ್ರದ ಹಾಡುಗಳು ಬಿಡುಗಡೆಗೂ ಮುನ್ನವೇ ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ವಿಶೇಷವಾಗಿ ‘ನೀನಾ ನೀನಾ’ ಹಾಗೂ ಇತ್ತೀಚೆಗೆ ಬಿಡುಗಡೆಯಾದ ‘ಸಿದ್ದಯ್ಯ ಸ್ವಾಮಿ ಬನ್ನಿ’ ಈ ಎರಡೂ ಹಾಡುಗಳು ಸಂಗೀತ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿವೆ.
ಅದರಲ್ಲೂ ‘ಸಿದ್ದಯ್ಯ ಸ್ವಾಮಿ ಬನ್ನಿ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಟ್ರೆಂಡ್ ಆಗಿದ್ದು, ರೀಲ್ಸ್ ಹಾಗೂ ಶಾರ್ಟ್ ವೀಡಿಯೋಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ರಾಜ್ ಬಿ. ಶೆಟ್ಟಿ ಅವರ ಜೊತೆಗೆ ಈ ಚಿತ್ರದಲ್ಲಿ ಅನೇಕ ಅನುಭವೀ ಮತ್ತು ಯುವ ಕಲಾವಿದರು ಅಭಿನಯಿಸಿದ್ದಾರೆ.‘
ಇದನ್ನೂ ಓದಿ: John Abraham: ಜಾನ್ ಅಬ್ರಾಹಂ ನೋಡಿ ಫ್ಯಾನ್ಸ್ ಶಾಕ್ ! ಆರೋಗ್ಯದ ಬಗ್ಗೆ ನೆಟ್ಟಿಗರ ಕಮೆಂಟ್
ಸು ಫ್ರಮ್ ಸೋ’, ‘45’ ಹಾಗೂ ‘ಲ್ಯಾಂಡ್ ಲಾರ್ಡ್’ ಸಿನಿಮಾಗಳ ನಂತರ ರಾಜ್ ಬಿ. ಶೆಟ್ಟಿಯವರಿಂದ ಬರುತ್ತಿರುವ ಈ ಚಿತ್ರವು ಯಾವ ರೀತಿಯ ಹೊಸ ಅನುಭವ ನೀಡಲಿದೆ ಎಂಬ ನಿರೀಕ್ಷೆ ಸಿನಿರಸಿಕರಲ್ಲಿ ಗಟ್ಟಿಯಾಗಿದೆ.