ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramya Krishnan: 'ಬಾಹುಬಲಿ' ನಟಿ ರಮ್ಯಾ ಕೃಷ್ಣ ವಿಚ್ಛೇದನ? ಕೊನೆಗೂ ಕ್ಲಾರಿಟಿ ಕೊಟ್ಟ ಗಂಡ ಕೃಷ್ಣ ವಂಶಿ

Director Krishna Vamsi : 90ರ ದಶಕದಲ್ಲಿ ಸ್ಟಾರ್ ನಾಯಕಿಯಾಗಿ ಖ್ಯಾತಿ ಗಳಿಸಿದ ರಮ್ಯಾ ಕೃಷ್ಣ (Ramya Krishna) 2003 ರಲ್ಲಿ ಖ್ಯಾತ ನಿರ್ದೇಶಕ ಕೃಷ್ಣ ವಂಶಿ ಅವರನ್ನು ಪ್ರೀತಿಸಿ ಮದುವೆಯಾದರು. ಸ್ವಲ್ಪ ಸಮಯದವರೆಗೆ ಅವರು ಸ್ಟಾರ್ ನಾಯಕಿಯಾಗಿ ಉಳಿದು ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅಪಾರ ಜನಪ್ರಿಯತೆ ಗಳಿಸಿದರು. ಚಿತ್ರರಂಗದಲ್ಲಿ ಮುದ್ದಾದ ಜೋಡಿ ಎಂದೇ ಹೆಸರಾಗಿರುವ ಈ ಜೋಡಿ ಬೇರೆಯಾಗುತ್ತಿದೆ, ಡಿವೋರ್ಸ್‌ ಪಡೆದುಕೊಳ್ಳುತ್ತಿದೆ ಎಂಬ ವದಂತಿ ಹಬ್ಬಿತ್ತು. ಈಗ, ಕೃಷ್ಣ ವಂಶಿ ಅಂತಿಮವಾಗಿ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.

'ಬಾಹುಬಲಿ' ನಟಿ ರಮ್ಯಾ ಕೃಷ್ಣ ವಿಚ್ಛೇದನ?

ರಮ್ಯಾ ಕೃಷ್ಣನ್‌ -

Yashaswi Devadiga
Yashaswi Devadiga Jan 5, 2026 7:02 PM

90ರ ದಶಕದಲ್ಲಿ ಸ್ಟಾರ್ ನಾಯಕಿಯಾಗಿ ಖ್ಯಾತಿ ಗಳಿಸಿದ ರಮ್ಯಾ ಕೃಷ್ಣ (Ramya Krishna) 2003 ರಲ್ಲಿ ಖ್ಯಾತ ನಿರ್ದೇಶಕ ಕೃಷ್ಣ ವಂಶಿ (Krishna Vamshi) ಅವರನ್ನು ಪ್ರೀತಿಸಿ ಮದುವೆಯಾದರು. ಸ್ವಲ್ಪ ಸಮಯದವರೆಗೆ ಅವರು ಸ್ಟಾರ್ ನಾಯಕಿಯಾಗಿ ಉಳಿದು ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅಪಾರ ಜನಪ್ರಿಯತೆ ಗಳಿಸಿದರು. ಚಿತ್ರರಂಗದಲ್ಲಿ ಮುದ್ದಾದ ಜೋಡಿ ಎಂದೇ ಹೆಸರಾಗಿರುವ ಈ ಜೋಡಿ ಬೇರೆಯಾಗುತ್ತಿದೆ, ಡಿವೋರ್ಸ್‌ (Divorce) ಪಡೆದುಕೊಳ್ಳುತ್ತಿದೆ ಎಂಬ ವದಂತಿ ಹಬ್ಬಿತ್ತು. ಈಗ, ಕೃಷ್ಣ ವಂಶಿ ಅಂತಿಮವಾಗಿ ಈ ಬಗ್ಗೆ ಕ್ಲಾರಿಟಿ (Clarity) ಕೊಟ್ಟಿದ್ದಾರೆ ಎಂದು ವರದಿಯಾಗಿದೆ.

ಯಾವುದೇ ಸಮಸ್ಯೆಗಳಿಲ್ಲ

ವಿಚ್ಛೇದನದ ವದಂತಿಗಳನ್ನು ಕೃಷ್ಣ ವಂಶಿ ನಿರಾಕರಿಸಿದ್ದಾರೆ. ರಮ್ಯಾ ಚೆನ್ನೈನಲ್ಲಿ, ತಾನು ಹೈದರಾಬಾದ್‌ನಲ್ಲಿ ಇರುವುದರಿಂದ ಈ ವದಂತಿ ಹಬ್ಬಿದೆ. ತಮ್ಮ ನಡುವೆ ಪ್ರೀತಿ, ಗೌರವ ಹಾಗೆಯೇ ಇದೆ ಎಂದು ಕೃಷ್ಣ ವಂಶಿ ಹೇಳಿದ್ದಾರೆ. ಕೆಲಸದ ಕಾರಣಗಳಿಂದಾಗಿ ಬೇರೆ ಪ್ರದೇಶಗಳಲ್ಲಿದ್ದೇವೆ. ನಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ನಮ್ಮಿಬ್ಬರ ನಡುವೆ ಪ್ರೀತಿ ಮತ್ತು ಗೌರವವಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Bigg Boss Kannada 12: ಒರಗಿಕೊಳ್ಳೋಕೆ ರಘು ತೊಡೆ, ಹೆಗಲು ಬೇಕು! ರಾಶಿಕಾ ವಿರುದ್ಧ ಅಶ್ವಿನಿ ಹೇಳಿಕೆ, ಫ್ಯಾನ್ಸ್‌ ಗರಂ

ಸ್ನೇಹ ಪ್ರೀತಿಯಾಗಿ ಅರಳಿತು

ರಮ್ಯಾ ಕೃಷ್ಣ ಬಗ್ಗೆ ಹೇಳುವುದಾದರೆ, ಬಾಹುಬಲಿ ಚಿತ್ರದ ಮೂಲಕ ಶಿವಗಾಮಿಯಾಗಿ ಪಾತ್ರದಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದರು. ನಂತರ ಸರಣಿ ಚಲನಚಿತ್ರಗಳಲ್ಲಿ ಪಾತ್ರ ಕಲಾವಿದೆಯಾಗಿ ನಟಿಸುವ ಮೂಲಕ ಅಪಾರ ಜನಪ್ರಿಯತೆಯನ್ನು ಗಳಿಸಿದರು.

2003 ರಲ್ಲಿ ನಿರ್ದೇಶಕ ಕೃಷ್ಣ ವಂಶಿ ಅವರೊಂದಿಗಿನ ರಮ್ಯಾ ಕೃಷ್ಣ ಅವರ ವಿವಾಹವು ಒಂದು ದೊಡ್ಡ ವಿಷಯವಾಗಿತ್ತು. ಅವರ ಸ್ನೇಹ ಪ್ರೀತಿಯಾಗಿ ಅರಳಿತು ಮತ್ತ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದರು. ಈ ದಂಪತಿಗೆ ರಿತ್ವಿಕ್ ಎಂಬ ಮಗನಿದ್ದಾನೆ.

200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

1985ರಲ್ಲಿ 14ನೇ ವಯಸ್ಸಿನಲ್ಲಿ ನಟಿಯಾಗಿ ಪದಾರ್ಪಣೆ ಮಾಡಿದ ರಮ್ಯಾ ಕೃಷ್ಣನ್ ಅವರಿಗೆ ‘ಮುತ್ಯಾಲ ವಸಂತಂ’ ಸಿನಿಮಾದಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ‘ಪಡೆಯಪ್ಪ’ ಚಿತ್ರದಲ್ಲಿ ರಮ್ಯಾ ಕೃಷ್ಣನ್ ನೀಲಾಂಬರಿ ಪಾತ್ರದಲ್ಲಿ ನಟಿಸಿದ್ರು. ನೀಲಾಂಬರಿ ಖಡಕ್​ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ರು.ಸಿನಿಮಾಗಳ ಜೊತೆಗೆ ರಮ್ಯಾ ಕೃಷ್ಣನ್ ವೆಬ್ ಸೀರಿಸ್ ಗಳಲ್ಲೂ ನಟಿಸುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada 12: ಮನೆಯಿಂದ ಹೊರಗೆ ಒಬ್ಬನೇ ಬಾ ಇದೆ ನಿಂಗೆ! ಧ್ರುವಂತ್‌ಗೆ ನೇರ ಸವಾಲ್‌ ಹಾಕಿದ ರಘು, ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಸ್ಪರ್ಧಿಗಳು

ಜಯಲಲಿತಾ ಜೀವನಾಧಾರಿತ ಕ್ವಿನ್ಸ್ ವೆಬ್ ಸೀರಿಸ್ ನಲ್ಲಿ ರಮ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ರಮ್ಯಾ ಕೃಷ್ಣನ್ ಹಲವು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ. 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಮ್ಯಾ ಕೃಷ್ಣನ್ ಅವರು ತಮ್ಮ ಅದ್ಭುತ ನಟನೆಯಿಂದ ಎಲ್ಲರ ಮನಗೆದ್ದಿದ್ದಾರೆ.