ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಫೆ.2ರಂದು ರಶ್ಮಿಕಾ - ವಿಜಯ್‌ ದೇವರಕೊಂಡ ಮದುವೆ ನಡೆಯೋದಿಲ್ಲ! ಹಾಗಾದ್ರೆ, ವೆಡ್ಡಿಂಗ್‌ ಡೇಟ್‌ ಯಾವತ್ತು? ಇಲ್ಲಿದೆ ಹೊಸ ಅಪ್ಡೇಟ್‌!

Rashmika Mandanna Vijay Deverakonda Wedding: ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ರಾಜಸ್ಥಾನದ ಉದಯಪುರದಲ್ಲಿ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಈ ನಡುವೆ ಅವರ ಮದುವೆ ದಿನಾಂಕದ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿವೆ.

ರಶ್ಮಿಕಾ -ವಿಜಯ್ ದೇವರಕೊಂಡ ಮದುವೆ ಫಿಕ್ಸ್? ಆದ್ರೆ, ಫೆಬ್ರವರಿ.2ರಂದು ಅಲ್ಲ!

-

Avinash GR
Avinash GR Feb 2, 2026 12:16 PM

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅವರು ರಾಜಸ್ಥಾನದ ಉದಯಪುರದಲ್ಲಿ ಮದುವೆ ಆಗಲಿದ್ದಾರೆ, ಅದು ಫೆಬ್ರವರಿ 2ರಂದೇ ಈ ವಿವಾಹ ನೆರವೇರಲಿದೆ ಎಂಬ ಟಾಕ್‌ ಬಹಳ ಜೋರಾಗಿ ಕೇಳಿಬಂದಿದೆ. ಇದರ ಮಧ್ಯೆ ಉದಯ್‌ಪುರದಲ್ಲಿ ಮದುವೆ ತಯಾರಿ ಕುರಿತ ವಿಡಿಯೋಗಳು ವೈರಲ್‌ ಆಗುತ್ತಿವೆ. ಆದರೆ ಈ ಎಲ್ಲಾ ಊಹಾಪೋಹಗಳ ನಡುವೆ, ಮದುವೆಯು ಫೆಬ್ರವರಿ 2 ಅಲ್ಲ, ಫೆಬ್ರವರಿ 5 ರಂದು ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಫೆಬ್ರವರಿ ತಿಂಗಳು ಆರಂಭವಾಗುತ್ತಿದ್ದಂತೆಯೇ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ವದಂತಿಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈ ತಾರಾ ಜೋಡಿ ಹಸೆಮಣೆ ಏರಲು ಸಜ್ಜಾಗಿದೆ ಎಂದು ಹಲವಾರು ವರದಿಗಳು ಹೇಳುತ್ತಿವೆ. ಈ ಮೊದಲು ಈ ಜೋಡಿ ಫೆಬ್ರವರಿ 26 ರಂದು ಮದುವೆಯಾಗಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈಗ ಮದುವೆ ದಿನಾಂಕವನ್ನು ಫೆಬ್ರವರಿ 5 ಕ್ಕೆ ಬದಲಾಯಿಸಲಾಗಿದೆ ಎನ್ನಲಾಗಿದೆ. ಫೆಬ್ರವರಿ 2 ರಿಂದಲೇ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಲಿವೆ.

Rashmika-Vijay Wedding: ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಸಿದ್ಧತೆ ಜೋರು? ವಿಡಿಯೋದಲ್ಲಿದೆ ಮಹಾಸತ್ಯ!

ಮೊದಲು ಸಂಗೀತ, ಅರಿಶಿನ ಶಾಸ್ತ್ರ ಮತ್ತು ಮೆಹಂದಿ ಕಾರ್ಯಕ್ರಮಗಳು ನಡೆಯಲಿದ್ದು, ನಂತರ ಮದುವೆ ಹಾಗೂ ಆರತಕ್ಷತೆ ನಡೆಯುವ ನಿರೀಕ್ಷೆಯಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣಗೆ ಜ್ಯೋತಿಷಿಗಳು ಫೆಬ್ರವರಿ 26ರ ಬದಲು ಫೆಬ್ರವರಿ 5ರಂದೇ ಮದುವೆಯಾಗಲು ಸಲಹೆ ನೀಡಿದ್ದರಿಂದ, ಈ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಖಾಸಗಿಯಾಗಿ ನಡೆಯಲಿರುವ ಮದುವೆ

ರಶ್ಮಿಕಾ - ವಿಜಯ್ ಮದುವೆಯು ಅತ್ಯಂತ ಖಾಸಗಿಯಾಗಿ ನಡೆಯಲಿದ್ದು, ಕೇವಲ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸುವ ನಿರೀಕ್ಷೆಯಿದೆ. ಮದುವೆ ಕೆಲಸದಲ್ಲಿ ತೊಡಗಿರುವವರ ಪ್ರಕಾರ, ಈ ಕಾರ್ಯಕ್ರಮವು "ಸಾಂಪ್ರದಾಯಿಕವಾಗಿ ಮತ್ತು ರಾಜಮನೆತನದ ಶೈಲಿಯಲ್ಲಿ ಇರುತ್ತದೆ, ಆದರೆ ಅತಿಯಾದ ಆಡಂಬರ ಇರುವುದಿಲ್ಲ" ಎನ್ನಲಾಗಿದೆ. ಬೆಂಗಳೂರಿನ ಹೂವಿನ ವ್ಯಾಪಾರಿಗಳಿಂದ ರಾಜಸ್ಥಾನಕ್ಕೆ ದೊಡ್ಡ ಪ್ರಮಾಣದ ಹೂವಿನ ಆರ್ಡರ್‌ಗಳು ಹೋಗಿವೆ ಎಂದೂ ಹೇಳಲಾಗುತ್ತಿದ್ದು, ಇದು ಮದುವೆ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ.

Rashmika Mandanna: ರಶ್ಮಿಕಾ-ವಿಜಯ್ ಮದುವೆ ಕುರಿತು ಬಿಗ್‌ ಅಪ್‌ಡೇಟ್; ಭರದಿಂದ ಸಾಗಿದ ಸಿದ್ಧತೆ, ಮುಹೂರ್ತ ಫಿಕ್ಸ್!

ವೈರಲ್‌ ಆಗಿತ್ತು ವಿಡಿಯೋ

ಈಚೆಗೆ ಫೆ.2ರಂದು ವಿಜಯ್‌ ರಶ್ಮಿಕಾ ಮದುವೆ ಎಂದು ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಉದಯ್‌ಪುರದಲ್ಲಿ ಮದುವೆ ಸಿದ್ಧತೆಗಳು ನಡೆಯುತ್ತಿರುವ ದೃಶ್ಯಗಳಿದ್ದವು. ವಿಡಿಯೋ ಚಿತ್ರೀಕರಿಸಿದ ವ್ಲಾಗರ್ ಒಬ್ಬರು, "ಇದು ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ಸಿದ್ಧತೆ ಎಂದು ಹೇಳಿಕೊಂಡಿದ್ದರು. ಅಲ್ಲದೆ, ಫೆಬ್ರವರಿ 2 ರಂದೇ ಮದುವೆ ನಡೆಯಲಿದೆ ಎಂದೂ ಅವರು ತಿಳಿಸಿದ್ದರು. ಆದರೆ, ಈ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ಇನ್ನೂ ಪ್ರಶ್ನೆಗಳಿವೆ. ಆ ವಿಡಿಯೋದಲ್ಲಿ, "ಸ್ನೇಹಿತರೇ, ನಾನು ನಿಮಗೆ ಒಂದು ಅಪ್‌ಡೇಟ್ ನೀಡುತ್ತಿದ್ದೇನೆ. ನಾವು ಉದಯಪುರದ ಸಿಟಿ ಪ್ಯಾಲೇಸ್‌ನಲ್ಲಿದ್ದೇವೆ. ಇಲ್ಲಿ ಅರಮನೆಯನ್ನು ಅಲಂಕರಿಸುತ್ತಿದ್ದಾರೆ. ಇಲ್ಲಿ ಯಾರೋ ಮದುವೆಯಾಗುತ್ತಿದ್ದಾರೆ ಎಂದು ನಮಗೆ ತಿಳಿದುಬಂದಿದೆ. ಯಾರಿರಬಹುದು ಊಹಿಸಿ? ಅದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ. ಅವರು ಮದುವೆಯಾಗುತ್ತಿದ್ದಾರೆ. ಅಲಂಕಾರಗಳನ್ನು ನಾನು ನಿಮಗೆ ತೋರಿಸುತ್ತೇನೆ" ಎಂದಿದ್ದರು.

ವಿಶೇಷವೆಂದರೆ, ಈ ಬಗ್ಗೆ ರಶ್ಮಿಕಾ ಮಂದಣ್ಣ ಆಗಲಿ ಅಥವಾ ವಿಜಯ್ ದೇವರಕೊಂಡ ಆಗಲಿ ಇಲ್ಲಿಯವರೆಗೂ ಯಾವುದೇ ಅಧಿಕೃತವಾಗಿ ಏನನ್ನೂ ಖಚಿತಪಡಿಸಿಲ್ಲ.