BBK 12: ಬಟ್ಟೆ ಬಿಸಾಡಿ ರೊಚ್ಚಿಗೆದ್ದು ಗಿಲ್ಲಿಗೆ ಹೊಡೆದ ರಿಷಾ! ಅಂತದ್ದೇನಾಯ್ತು?
ಬಿಗ್ ಬಾಸ್ ಸೀಸನ್ 12ರಲ್ಲಿ ದೊಡ್ಡ ಸಂಗತಿಯೇ ನಡೆದು ಹೋಗಿದೆ. ಹೌದು ರಿಷಾ ಅವರು ಗಿಲ್ಲಿಗೆ ಹೊಡೆದಿದ್ದಾರೆ. ಬಟ್ಟೆಯ ವಿಚಾರಕ್ಕೆ ರೊಚ್ಚಿಗೆದ್ದ ರಿಷಾ ಅವರು ಗಿಲ್ಲಿ ಮೇಲೆ ಹರಿಹಾಯ್ದಿದ್ದಾರೆ. ಬಕೆಟ್ ವಿಚಾರಕ್ಕೆ ಜಗಳ ತಾರಕಕ್ಕೇರಿದೆ. ನಗ್ತಾರೆ ನಗಿಸ್ತಾರೆ ಅಂದಮಾತ್ರಕ್ಕೆ ಕೋಪ ಬರಲ್ಲ ಅಂತ ಅರ್ಥ ಅಲ್ಲ… ಹಾಗಂತ ಸುಮ್ ಸುಮ್ನೆ ಕೋಪ ಬರುತ್ತೆ ಅಂತಾನೂ ಅಲ್ಲ! ಎಲ್ಲವೂ ಎಷ್ಟರಲ್ಲಿ ಇರಬೇಕೋ ಅಷ್ಟ್ರಲ್ಲಿ ಇದ್ರೆ ಚಂದ! ಅಂತ ಗಿಲ್ಲಿ ಪೇಜ್‌ನಲ್ಲಿಯೂ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
bigg boss kannada -
Yashaswi Devadiga
Nov 3, 2025 8:55 AM
ರಿಷಾ ಅವರು (Risha) ಗಿಲ್ಲಿಗೆ ಹೊಡೆದಿದ್ದಾರೆ. ಬಟ್ಟೆಯ ವಿಚಾರಕ್ಕೆ ರೊಚ್ಚಿಗೆದ್ದ ರಿಷಾ ಅವರು ಗಿಲ್ಲಿ ಮೇಲೆ ಹರಿಹಾಯ್ದಿದ್ದಾರೆ. ಬಕೆಟ್ (Bigg Boss Kannada 12) ವಿಚಾರಕ್ಕೆ ಜಗಳ ತಾರಕಕ್ಕೇರಿದೆ. ನಗ್ತಾರೆ ನಗಿಸ್ತಾರೆ ಅಂದಮಾತ್ರಕ್ಕೆ ಕೋಪ ಬರಲ್ಲ ಅಂತ ಅರ್ಥ ಅಲ್ಲ… ಹಾಗಂತ ಸುಮ್ ಸುಮ್ನೆ ಕೋಪ ಬರುತ್ತೆ ಅಂತಾನೂ ಅಲ್ಲ! ಎಲ್ಲವೂ ಎಷ್ಟರಲ್ಲಿ ಇರಬೇಕೋ ಅಷ್ಟ್ರಲ್ಲಿ ಇದ್ರೆ ಚಂದ! ಅಂತ ಗಿಲ್ಲಿ ಪೇಜ್‌ನಲ್ಲಿಯೂ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಮೊದಲಿಗೆ ಬಕೆಟ್ ವಿಚಾರಕ್ಕೆ ಗಿಲ್ಲಿ, ರಿಷಾ ಅವರ ಬಳಿ ಕೇಳಿದ್ದಾರೆ. ಬಕೆಟ್‌ವನ್ನು ಕೊಡದೇ ಇರದ ಕಾರಣ ಗಿಲ್ಲಿ ಅವರು ಬಾತ್ ರೂಮ್ ಏರಿಯಾದಲ್ಲಿ ರಿಷಾ ಅವರ ಬಟ್ಟೆಗಳನ್ನು ಹಾಕುತ್ತಾರೆ. ಬಾತ್‌ರೂಮ್‌ನಿಂದ ಬಂದ ರಿಷಾ ರೊಚ್ಚಿಗೆದ್ದು ಕೂಗಿ, ಗಿಲ್ಲಿಗೆ ಹೊಡೆದಿದ್ದಾರೆ. ಬಟ್ಟೆ ತಂದು ಬಾತ್ ರೂಮ್ ಬಳಿ ಇಟ್ಟಿರೋದು ತಮಾಷೆನಾ? ಎಂದು ಗಿಲ್ಲಿ ಅವರನ್ನು ತಳ್ಳಿದ್ದಾರೆ. ರಕ್ಷಿತಾ ಅವರು ಎಷ್ಟೇ ತಡೆಯಲು ಪ್ರಯತ್ನಿಸಿದರೂ ರಿಷಾ ಕೋಪ ಮಾತ್ರ ತಣ್ಣಗಾಗಿಲ್ಲ.
ರಿಷಾ ಅವರು ಗಿಲ್ಲಿ ಮೇಲೆ ಹಲ್ಲೆ ಮಾಡಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ದೈಹಿಕ ಹಲ್ಲೆ ಮಾಡಿದವರನ್ನು ತಕ್ಷಣವೇ ಹೊರಹಾಕುವ ನಿಯಮವಿರುವುದರಿಂದ, ರಿಷಾ ಅವರು ಎಲಿಮಿನೇಟ್ ಆಗುತ್ತಾರೆಯೇ ಎಂದು ಇದೀಗ ವೀಕ್ಷಕರು ಕಮೆಂಟ್ ಮಾಡ್ತಿದ್ದಾರೆ. ಅಷ್ಟೇ ಅಲ್ಲ ಸಣ್ಣ ತಮಾಷೆಗೆ ಇಷ್ಟೆಲ್ಲ ರಂಪಾಟ ಮಾಡೋ ಅಗತ್ಯ ಇರಲಿಲ್ಲ ಅಂತ ಕಮೆಂಟ್ ಮಾಡ್ತಿದ್ದಾರೆ ವೀಕ್ಷಕರು.
ಇದನ್ನೂ ಓದಿ: BBK 12: ಬಟ್ಟೆ ಬಿಸಾಡಿ ರೊಚ್ಚಿಗೆದ್ದು ಗಿಲ್ಲಿಗೆ ಹೊಡೆದ ರಿಷಾ! ಅಂತದ್ದೇನಾಯ್ತು?
ಗಿಲ್ಲಿ ಬಟ್ಟೆಗಳನ್ನೆಲ್ಲ ಎತ್ತಿ ಬೀಸಾಕಿದ್ದಾರೆ. ಸೂಟ್ಕೇಸ್ನ ಒದ್ದಿದ್ದಾರೆ ಆ ಬಳಿಕ ಗಿಲ್ಲಿಯನ್ನು ತಳ್ಳಿದ್ದಾರೆ. ರಿಷಾ ಮಾಡಿದ್ದು ಬಿಗ್ ಬಾಸ್ ಮೂಲ ನಿಯಮಗಳಿಗೆ ವಿರುದ್ಧವಾಗಿದೆ. ಕಳೆದ ಸೀಸನ್ಗಳಲ್ಲಿ ಈ ರೀತಿ ಮಾಡಿದಾಗ ತಕ್ಷಣವೇ ಅವರನ್ನು ದೊಡ್ಮನೆಯಿಂದ ಹೊರಕ್ಕೆ ಹಾಕಲಾಗಿತ್ತು. ಆದರೆ ತಕ್ಷಣಕ್ಕೆ ಬಿಗ್ ಬಾಸ್ ಈಗ ರಿಷಾ ಅವರ ಮೇಲೆ ಯಾವುದೇ ಆಕ್ಷನ್ ತೆಗೆದುಕೊಂಡಿಲ್ಲ. ಹೀಗಾಗಿ ವೀಕೆಂಡ್‌ನಲ್ಲಿ ಈ ಬಗ್ಗೆ ಚರ್ಚೆ ಆಗಿ ರಿಷಾ ಅವರು ಎಲಿಮಿನೇಟ್ ಆಗ್ತಾರಾ? ಎನ್ನುವ ಪ್ರಶ್ನೆ ವೀಕ್ಷಕರದ್ದು.
ಮೊದಲಿಂದಲೂ ಗಿಲ್ಲಿಗೂ ರಿಷಾಗೂ ಅಷ್ಟಕಷ್ಟೆ!
ಈ ಮುಂಚೆ ಕೂಡ ಕಳಪೆ ವಿಚಾರಕ್ಕಾಗಿ ಗಿಲ್ಲಿ ಅವರನ್ನ ಟಾರ್ಗೆಟ್ ಮಾಡಿದ್ದು ರಿಷಾ. ಅಶ್ವಿನಿ ಗೌಡ ಹಾಗೂ ರಿಷಾ ಮುಂದಿದ್ದರು. ಗುಂಪಿನಲ್ಲಿ ಮಾತನಾಡುವಾಗ ಅಶ್ವಿನಿ ಅವರು, ‘ಗಿಲ್ಲಿ ನಿನಗೆ ಈ ವಾರ ಎಲ್ಲರೂ ಕಳಪೆ ನೀಡಬೇಕು’ ಎಂದು ಹೇಳಿದ್ದಾರೆ. ಈ ಮೂಲಕ ಅಕ್ಕ-ಪಕ್ಕ ಇದ್ದವರ ಮೇಲೆ ಪ್ರಭಾವ ಬೀರಿದ್ದಾರೆ. ರಿಷಾ ಗೌಡ ಕೂಡ ಮಾತನಾಡುವಾಗ ‘ಗಿಲ್ಲಿಗೆ ಕಳಪೆ ಕೊಡಬೇಕು’ ಎಂದು ಹೇಳಿದ್ದರು.
ಕೋಡ್ ವರ್ಡ್
ಈ ಬಾರಿ ಸ್ಪರ್ಧಿಗಳು ಮನೆಯ ಹೊರಗೆ ಕೋಡ್ ವರ್ಡ್ ಮಾಡಿಟ್ಟುಕೊಂಡು ಬಂದಿದ್ದಾರೆ.ಕೋಡ್ಗಳನ್ನು ಡೀಕೋಡ್ ಮಾಡಲು ಎತ್ತಿದ ಕೈ ನಮ್ಮದು. ಈ ವಿಚಾರ ನಮ್ಮವರೆಗೆ ಬರಲ್ಲ ಎಂದು ಅನೇಕರು ಅಂದುಕೊಂಡಿರುತ್ತಾರೆ. ಆದರೆ, ಈ ರೀತಿಯ ವಿಚಾರ ಬಂದುಬಿಡ್ತದೆ. ಬಟ್ಟೆ ಬಟ್ಟೆಯಾಗಿರಬೇಕು. ಕೋಡ್ವರ್ಡ್ ಆಗಬಾರದು. ಎಂದಿದ್ದಾರೆ ಕಿಚ್ಚ.‘ಇಷ್ಟು ವರ್ಷಗಳಲ್ಲಿ ಈ ರೀತಿ ಯಾರೂ ಮಾಡಿರಲಿಲ್ಲ. ಆದರೆ, ನಮಗೆ ಈಗ ಈ ವಿಚಾರ ತಿಳಿದು ಬಂದಿದೆ ಎಂದರು ಕಿಚ್ಚ.
ಇದನ್ನೂ ಓದಿ: ರಹಸ್ಯವಾಗಿ ಈ ಪ್ಲ್ಯಾನ್‌ನಿಂದ ಸ್ಪರ್ಧಿಗಳು ಹೊರಗಿನ ಮೆಸೇಜ್ ಪಡೆದುಕೊಳ್ಳುತ್ತಿದ್ರಾ? ಕೋಡ್ ಡಿಕೋಡ್ ಬಗ್ಗೆ ಕಿಚ್ಚ ಹೇಳಿದ್ದೇನು?
ಯಾರ ಹೆಸರನ್ನು ಕಿಚ್ಚ ಸುದೀಪ್ ಅವರು ಬಹಿರಂಗಪಡಿಸಲಿಲ್ಲ. ಆದರೆ ದ ರಹಸ್ಯವಾಗಿ ತಮ್ಮ ಆಟದ ಕುರಿತು ಮೆಸೇಜ್ ಪಡೆದುಕೊಳ್ಳುತ್ತಿದ್ದ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡರು. ನಮಗೆ ನಿಮ್ಮಗಳ ಕೋಡ್ ಡಿಕೋಡ್ ಮಾಡೋದು ಗೊತ್ತಿದೆ ಎಂದು ಎಚ್ಚರಿಕೆ ಕೊಟ್ಟರು.