ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಜೈ ಹನುಮಾನ್' ಚಿತ್ರಕ್ಕಾಗಿ ಮೈತ್ರಿ ಮೂವೀ ಮೇಕರ್ಸ್ ಜೊತೆ ಕೈಜೋಡಿಸಿದ ರಿಷಬ್ ಶೆಟ್ಟಿ ಫಿಲ್ಮ್ಸ್

Rishab Shetty Jai Hanuman Movie: ರಿಷಬ್‌ ಶೆಟ್ಟಿ ಅವರು ಜೈ ಹನುಮಾನ್ ಚಿತ್ರಕ್ಕಾಗಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಈ ಮಹತ್ವಾಕಾಂಕ್ಷಿ ಪ್ರಾಜೆಕ್ಟ್‌ಗೆ 'ಮೈತ್ರಿ ಮೂವೀ ಮೇಕರ್ಸ್' ಜೊತೆ 'ರಿಷಬ್ ಶೆಟ್ಟಿ ಫಿಲ್ಮ್ಸ್' ಕೂಡ ಕೈಜೋಡಿಸಿದೆ. ಮೇ ತಿಂಗಳಿನಿಂದ ಈ ಸಿನಿಮಾದ ಚಿತ್ರೀಕರಣದಲ್ಲಿ ರಿಷಬ್‌ ಶೆಟ್ಟಿ ಭಾಗಿಯಾಗಲಿದ್ದಾರೆ.

ʻಜೈ ಹನುಮಾನ್ʼ ಚಿತ್ರಕ್ಕೆ ರಿಷಬ್ ಶೆಟ್ಟಿ ಫಿಲ್ಮ್ಸ್ ಸಾಥ್

-

Avinash GR
Avinash GR Mar 31, 2026 4:26 PM

ʻಕಾಂತಾರ: ಚಾಪ್ಟರ್‌ 1ʼ ಸಿನಿಮಾದ ಸಕ್ಸಸ್‌ ಬಳಿಕ ನಟ ರಿಷಬ್‌ ಶೆಟ್ಟಿ ಅವರು ಈಚೆಗೆ ಇನ್‌ಸ್ಟಾಗ್ರಾಮ್‌ ಫಾಲೋಯಿಂಗ್‌ ವಿಚಾರಕ್ಕೆ ಎಲ್ಲರ ಗಮನಸೆಳೆದರು. ಅವರೀಗ ಪತ್ನಿ ಪ್ರಗತಿ, ತಮ್ಮ ಪ್ರೊಡಕ್ಷನ್‌ ಹಾಗೂ ಫೌಂಡೇಷನ್ ಹೊರತಾಗಿ ಬೇರೆ ಯಾರನ್ನೂ ಫಾಲೋ ಮಾಡುತ್ತಿಲ್ಲ. ಸದ್ಯ ಅವರ ಗಮನವೆಲ್ಲಾ ʻಜೈ ಹನುಮಾನ್‌ʼ ಚಿತ್ರದ ಮೇಲಿದೆ. ʻಕಾಂತಾರ: ಚಾಪ್ಟರ್‌ 1ʼ ನಂತರ ತೆರೆಗೆ ಬರುತ್ತಿರುವ ಈ ಚಿತ್ರವು ಕೂಡ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ.

ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಸದ್ಯ ಹೈದರಾಬಾದ್‌ನಲ್ಲಿ ಬೀಡುಬಿಟ್ಟಿದ್ದು, ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಬಹುನಿರೀಕ್ಷಿತ 'ಜೈ ಹನುಮಾನ್' ಚಿತ್ರದ ಚಿತ್ರೀಕರಣಕ್ಕೆ ಸೇರಲು ಸಜ್ಜಾಗುತ್ತಿದ್ದಾರೆ. ರಿಷಬ್ ಅವರು ಮೇ ತಿಂಗಳಿನಿಂದ ಚಿತ್ರೀಕರಣ ಆರಂಭಿಸುವ ನಿರೀಕ್ಷೆಯಿದೆ. ಸದ್ಯ ಅವರು ಲುಕ್ ಟೆಸ್ಟ್ ಮತ್ತು ಇತರ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ನಡೆಯುತ್ತಿವೆ. ಈ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಂಗೀತ ನೀಡುತ್ತಿದ್ದು, ಎಸ್. ತಿರುನಾವಕ್ಕರಸು ಅವರ ಛಾಯಾಗ್ರಹಣ ಮಾಡುತ್ತಿದ್ದಾರೆ.

Rishab Shetty: ರಕ್ಷಿತ್‌ ಶೆಟ್ಟಿ ಸೇರಿ ಎಲ್ಲರನ್ನ ಅನ್‌ಫಾಲೋ ಮಾಡಿದ ರಿಷಬ್‌ ಶೆಟ್ಟಿ!

ಕೈಜೋಡಿಸಿದ ರಿಷಬ್‌ ಶೆಟ್ಟಿ ಫಿಲ್ಮ್ಸ್‌

ಹೌದು, ಜೈ ಹನುಮಾನ್‌ ಸಿನಿಮಾವನ್ನು 'ಮೈತ್ರಿ ಮೂವಿ ಮೇಕರ್ಸ್' ನಿರ್ಮಾಣ ಮಾಡುತ್ತಿದೆ. ಅದರ ಜೊತೆಗೆ ರಿಷಬ್ ಶೆಟ್ಟಿ ಅವರ ಸ್ವಂತ ನಿರ್ಮಾಣ ಸಂಸ್ಥೆಯಾದ 'ರಿಷಬ್ ಶೆಟ್ಟಿ ಫಿಲ್ಮ್ಸ್' ಕೂಡ ಕೈಜೋಡಿಸಿದೆ. ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ನಿರ್ಮಾಣದ ಈ ಚಿತ್ರವನ್ನು ಟಿ-ಸಿರೀಸ್‌ನ ಭೂಷಣ್ ಕುಮಾರ್ ಪ್ರೆಸೆಂಟ್ ಮಾಡುತ್ತಿದ್ದಾರೆ. ಇದು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Rishab Shetty: ಹೊಂಬಾಳೆ ಬಳಿಕ ರಾಜ್‌ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಅನ್‌ಫಾಲೋ ಮಾಡಿದ ರಿಷಬ್‌ ಶೆಟ್ಟಿ!

ಈಚೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಿಷಬ್‌ ಶೆಟ್ಟಿ, "ನ್ನನ ಪತ್ನಿ ಪ್ರಗತಿ ಶೆಟ್ಟಿ ಅವರು ಇನ್ಮುಂದೆ ನಿರ್ಮಾಣದ ಜವಾಬ್ದಾರಿಯನ್ನು ಇನ್ನಷ್ಟು ಸಕ್ರಿಯವಾಗಿ ನಿರ್ವಹಿಸಲಿದ್ದಾರೆ. ಪ್ರಗತಿ ಮೊದಲಿನಿಂದಲೂ ನನ್ನ ಪಯಣದಲ್ಲಿ ಜೊತೆಗಿದ್ದಾರೆ. ಈಗ ಅವರಿಗೆ ನಿರ್ಮಾಣದ ಸೂಕ್ಷ್ಮತೆಗಳು ಅರ್ಥವಾಗಿವೆ. ಅವರು 'ರಿಷಬ್ ಶೆಟ್ಟಿ ಫಿಲ್ಮ್ಸ್'ನ ದೊಡ್ಡ ಜವಾಬ್ದಾರಿಗಳನ್ನು ಸುಲಭವಾಗಿ ನಿಭಾಯಿಸಬಲ್ಲರು" ಎಂದು ಹೇಳಿಕೊಂಡಿದ್ದಾರೆ.

ಹೊಸ ಸ್ಕ್ರಿಪ್ಟ್‌ ಬರೆಯುತ್ತಿರುವ ರಿಷಬ್‌

ಜೈ ಹನುಮಾನ್‌ ಸಿನಿಮಾದಲ್ಲಿ ನಟಿಸುವುರ ಜೊತೆಗೆ ತಮ್ಮ ಮುಂದಿನ ಚಿತ್ರದ ಸ್ಕ್ರಿಪ್ಟ್ ಬರೆಯಲು ರಿಷಬ್ ಪ್ರಾರಂಭಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದು, ಸರಿಯಾದ ಸಮಯದಲ್ಲಿ ವಿಷಯವನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ರಿಷಬ್ ಮತ್ತು ಪ್ರಗತಿ ಶೆಟ್ಟಿ ಅವರು ಹೊಸ ಕನ್ನಡ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹೊಸ ಕಥೆಗಳನ್ನು ಕೇಳುತ್ತಿದ್ದು, ವಿಶಿಷ್ಠ ಕಥಾಹಂದರವುಳ್ಳ ಸಿನಿಮಾಗಳನ್ನು ನಿರ್ಮಿಸುವ ಗುರಿ ಹೊಂದಿದ್ದಾರೆ.