ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಕಿಚ್ಚʼ ಸುದೀಪ್‌ ಸೋದರಳಿಯ ಸಂಚಿತ್‌ಗೆ ರಿಷಬ್‌ ಶೆಟ್ಟಿ ಮೆಚ್ಚುಗೆ; ʻಮ್ಯಾಂಗೋ ಪಚ್ಚʼ ಟ್ರೇಲರ್‌ ನೋಡಿ ಏನಂದ್ರು ʻಡಿವೈನ್‌ ಸ್ಟಾರ್‌ʼ?

ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ಹೀರೋ ಆಗಿ 'ಮ್ಯಾಂಗೋ ಪಚ್ಚ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾದ ಟ್ರೇಲರ್‌ಗೆ 'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ಭರ್ಜರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸುಪ್ರಿಯಾನ್ವಿ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ, ವಿವೇಕ್ ನಿರ್ದೇಶನ ಮಾಡಿದ್ದಾರೆ.

ಸುದೀಪ್ ಸೋದರಳಿಯನ ʻಮ್ಯಾಂಗೋ ಪಚ್ಚʼ ‌ಟ್ರೇಲರ್‌ಗೆ ರಿಷಬ್ ಶೆಟ್ಟಿ ಫಿದಾ!

-

Avinash GR
Avinash GR May 26, 2026 6:25 PM

ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ‘ಮ್ಯಾಂಗೋ ಪಚ್ಚ’ ಚಿತ್ರದ ಟ್ರೇಲರ್ ಸದ್ದು ಮಾಡುತ್ತಿದೆ. ಸದ್ಯ ಈ ಭರವಸೆಯ ಟ್ರೇಲರ್‌ಗೆ ‘ಕಾಂತಾರ’ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮನಸೋತಿದ್ದು, ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ರಿಷಬ್‌ ಟ್ವೀಟ್‌ನಲ್ಲಿ ಏನಿದೆ?

"ಮ್ಯಾಂಗೋ ಪಚ್ಚ ಚಿತ್ರದ ಟ್ರೇಲರ್ ಅದ್ಭುತವಾಗಿ ಮೂಡಿಬಂದಿದೆ! ಅತ್ಯುತ್ತಮವಾದ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಉತ್ತಮ ಅಭಿನಯಕ್ಕಾಗಿ ಯುವ ಪ್ರತಿಭೆ ಸಂಚಿತ್ ಸಂಜೀವ್ ಅವರಿಗೆ ನನ್ನ ಹೃತ್ಪೂರ್ವಕ ಶುಭ ಹಾರೈಕೆಗಳು. ನಿರ್ದೇಶಕ ವಿವೇಕ್, ಸುಪ್ರಿಯಾನ್ವಿ ಸ್ಟುಡಿಯೋಸ್, ಕೆಆರ್‌ಜಿ ಸ್ಟುಡಿಯೋಸ್, ಪ್ರಿಯಾ ರಾಧಾಕೃಷ್ಣನ್ ಮತ್ತು ಇಡೀ ಚಿತ್ರತಂಡಕ್ಕೆ ಈ ಸಿನಿಮಾ ದೊಡ್ಡ ಯಶಸ್ಸನ್ನು ತರಲಿ ಎಂದು ಆಶಿಸುತ್ತೇನೆ. ಇಡೀ ಮ್ಯಾಂಗೋ ಪ್ಚ ತಂಡಕ್ಕೆ ಶುಭವಾಗಲಿ" ಎಂದು ರಿಷಬ್‌ ಶೆಟ್ಟಿ ಹಾರೈಸಿದ್ದಾರೆ.

Mango Pachcha: ಸಂಕ್ರಾಂತಿ ಸಂಭ್ರಮಕ್ಕೆ ʻಅರಗಿಣಿಯೇʼ ಎನ್ನುತ್ತಾ ಬಂದ ಸಂಚಿತ್‌ ಸಂಜೀವ್‌; ʻಕಿಚ್ಚʼ ಸುದೀಪ್‌ ಪುತ್ರಿ ಹಾಡಿದ 2ನೇ ಸಾಂಗ್‌ ರಿಲೀಸ್‌

ಮೈಸೂರಿನಲ್ಲಿ ನಡೆಯುವ ಕಥೆ

ಕಿಚ್ಚ ಸುದೀಪ್ ಅವರ ‘ಸುಪ್ರಿಯಾನ್ವಿ ಸ್ಟುಡಿಯೋಸ್’ ಹಾಗೂ ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ‘ಕೆಆರ್‌ಜಿ ಸ್ಟುಡಿಯೋಸ್’ ಜಂಟಿ ಸಹಯೋಗದೊಂದಿಗೆ ಈ ಬಿಗ್ ಬಜೆಟ್ ಸಿನಿಮಾ ನಿರ್ಮಾಣವಾಗಿದೆ. ಮೈಸೂರು ಮೂಲದ ನಿರ್ದೇಶಕ ವಿವೇಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮೈಸೂರಿನಲ್ಲೇ ನಡೆಯುವ ಕಥಾಹಂದರ ಹೊಂದಿರುವ ಈ ಸಿನಿಮಾ ಔಟ್ ಅಂಡ್ ಔಟ್ ಕಮರ್ಷಿಯಲ್ ಶೈಲಿಯಲ್ಲಿದೆ.

ಗಮನ ಸೆಳೆದ ಪವರ್‌ಫುಲ್ ಸಂಭಾಷಣೆಗಳು

ಟ್ರೇಲರ್‌ನಲ್ಲಿ ನಾಯಕ ಸಂಚಿತ್ ಸಂಜೀವ್ ಹೇಳುವ, "ಶಕ್ತಿ ಇರುವವರು ಯುದ್ಧ ಗೆಲ್ಲುತ್ತಾರೆ, ಆತ್ಮಶಕ್ತಿ ಉಳ್ಳವರು ಸಾಮ್ರಾಜ್ಯ ಕಟ್ಟುತ್ತಾರೆ", "ಬೆಳೆಯೋದಕ್ಕೆ ದುಡ್ಡೂ ಬೇಕು, ಮರ್ಯಾದೆನೂ ಬೇಕು" ಎಂಬ ಎಂಬ ಪವರ್‌ಫುಲ್ ಸಂಭಾಷಣೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಮೈಸೂರಿನ ಸಾಮಾನ್ಯ ಹುಡುಗನಾದ ಪ್ರಶಾಂತ್, ಅನಿವಾರ್ಯ ಪರಿಸ್ಥಿತಿಗಳಿಂದಾಗಿ ಭೂಗತ ಲೋಕದ ‘ಮ್ಯಾಂಗೋ ಪಚ್ಚ’ನಾಗಿ ಹೇಗೆ ಬದಲಾಗುತ್ತಾನೆ ಎಂಬ ರೋಚಕ ಕಥೆಯ ಸುಳಿವನ್ನು ಟ್ರೇಲರ್‌ನಲ್ಲಿ ನೀಡಲಾಗಿದೆ. ಚಿತ್ರದಲ್ಲಿ ಭರಪೂರ ಆಕ್ಷನ್ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್, ಕ್ಯೂಟ್ ಲವ್ ಸ್ಟೋರಿ ಹಾಗೂ ಹಾಸ್ಯದ ಕಚಗುಳಿಯೂ ಇರಲಿದೆಯಂತೆ.

ಮ್ಯಾಂಗೋ ಪಚ್ಚಗೆ ರಿಷಬ್‌ ಶೆಟ್ಟಿ ಹಾರೈಕೆ



ಪಚ್ಚನಿಗೆ ಸಾನ್ವಿ ಗಾಯನ

ಈ ಸಿನಿಮಾದ ಪ್ರಮುಖ ಹೈಲೈಟ್ ಎಂದರೆ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಈ ಚಿತ್ರದಲ್ಲಿ ಒಂದು ವಿಶೇಷ ಹಾಡನ್ನು ಹಾಡಿದ್ದು, ಸಂಗೀತ ನಿರ್ದೇಶಕ ಚರಣ್ ರಾಜ್ ಅದ್ಭುತ ಟ್ಯೂನ್ ಹಾಕಿದ್ದಾರೆ. ಮಸ್ತ್‌ ಮೈಲೈಕಾ ಸಾಂಗ್‌ ಹಿಟ್‌ ಆಗಿದ್ದು, ಸಾನ್ವಿಗೆ ಈ ಸಿನಿಮಾದ ಹಾಡು ಕೂಡ ಲಕ್‌ ತಂದುಕೊಡಲಿದೆಯಾ ಎಂಬುದನ್ನು ಕಾದುನೋಡಬೇಕು. ಮೊದಲ ಚಿತ್ರದಲ್ಲೇ ಸಂಚಿತ್ ಸಂಜೀವ್ ಮಾಸ್ ಲುಕ್‌ನಲ್ಲಿ ಭರವಸೆಯ ನಟನಾಗಿ ಎಂಟ್ರಿ ನೀಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎನ್ನುತ್ತಿದ್ದಾರೆ ಕಿಚ್ಚನ ಫ್ಯಾನ್ಸ್.

ಈ ಚಿತ್ರದಲ್ಲಿ ಸಂಚಿತ್‌ಗೆ ಜೋಡಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಖಡಕ್ ವಿಲನ್ ಆಗಿ ಮಯೂರ್ ಪಟೇಲ್ ಅಬ್ಬರಿಸಿದ್ದಾರೆ. ಉಳಿದಂತೆ ‘ಉಗ್ರಂ’ ಮಂಜು, ಜೈ ಗೋಪಿನಾಥ್‌, ಹರಿಣಿ ಶ್ರೀಕಾಂತ್‌, ಹಂಸ, ರಾಕ್‌ಲೈನ್‌ ವೆಂಕಟೇಶ್‌ ಮುಂತಾದವರು ನಟಿಸಿದ್ದಾರೆ. ಜೂನ್‌ 5ರಂದು ಈ ಸಿನಿಮಾವು ತೆರೆಗೆ ಬರಲಿದೆ.