ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಟಾಕ್ಸಿಕ್‌ʼ ಬಳಿಕ ಸದ್ದಿಲ್ಲದೇ ಕೆವಿಎನ್‌ ಪ್ರೊಡಕ್ಷನ್ಸ್‌ ಜೊತೆ ಮತ್ತೊಂದು ಸಿನಿಮಾಕ್ಕೆ ಕೈಜೋಡಿಸಿದ ನಟಿ ರುಕ್ಮಿಣಿ ವಸಂತ್

ನಟಿ ರುಕ್ಮಿಣಿ ವಸಂತ್‌ ಅವರು 'ಟಾಕ್ಸಿಕ್' ಚಿತ್ರದ ನಂತರ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಮತ್ತೊಂದು ಹೊಸ ಕನ್ನಡ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಆರಂಭವಾಗಿದ್ದು, ವಿಶೇಷ ಪಾತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ ಕಾಣಿಸಿಕೊಳ್ಳುತ್ತಿದ್ದಾರೆ.

'ಟಾಕ್ಸಿಕ್' ಬೆನ್ನಲ್ಲೇ ಕೆವಿಎನ್ ಜೊತೆ ರುಕ್ಮಿಣಿ ವಸಂತ್ ಹೊಸ ಸಿನಿಮಾ

-

Avinash GR
Avinash GR Apr 2, 2026 3:32 PM

ಕಾಂತಾರ: ಚಾಪ್ಟರ್‌ 1 ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ ನಟಿ ರುಕ್ಮಿಣಿ ವಸಂತ್.‌ ಸದ್ಯ ಅವರು ಪ್ರಶಾಂತ್ ನೀಲ್ ಮತ್ತು ಜೂ. ಎನ್‌ಟಿಆರ್‌ ಕಾಂಬಿನೇಷನ್‌ನ ಸಿನಿಮಾಗೆ ನಾಯಕಿ ಎಂದು ಹೇಳಲಾಗುತ್ತಿದೆ. ಈ ನಡುವೆ ಅವರು ಹೊಸ ಕನ್ನಡ ಸಿನಿಮಾವೊಂದನ್ನು ಒಪ್ಪಿಕೊಂಡು, ಅದರ ಶೂಟಿಂಗ್‌ನಲ್ಲೂ ಭಾಗಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಅಂದಹಾಗೆ, ಆ ಸಿನಿಮಾ ಯಾವುದು? ಮುಂದೆ ಓದಿ.

ಟಾಕ್ಸಿಕ್‌ ನಿರ್ಮಾಪಕರ ಜೊತೆ ರುಕ್ಮಿಣಿ ಸಿನಿಮಾ

ಗೀತು ಮೋಹನ್‌ದಾಸ್ ನಿರ್ದೇಶನದ ಯಶ್ ಅವರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾದಲ್ಲಿ ರುಕ್ಮಿಣಿ ವಸಂತ್‌ ನಟಿಸಿದ್ದಾರೆ. ಈ ಚಿತ್ರವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣ ಮಾಡಿದೆ. ಇದೀಗ ಅದೇ ಬ್ಯಾನರ್‌ನ ಹೊಸ ಸಿನಿಮಾಗೆ ರುಕ್ಮಿಣಿ ವಸಂತ್‌ ನಾಯಕಿಯಾಗಿ ಸೆಲೆಕ್ಟ್‌ ಆಗಿದ್ದಾರೆ. ಇದರ ಚಿತ್ರೀಕರಣ ಈಗಾಗಲೇ ಸದ್ದಿಲ್ಲದೆ ಆರಂಭವಾಗಿದೆ. ಮೂಲಗಳ ಪ್ರಕಾರ ಇದು ಕನ್ನಡ ಸಿನಿಮಾ ಆಗಿದ್ದು, ಹಲವು ಭಾಷೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಮತ್ತೊಂದು ವಿಶೇಷವೆಂದರೆ, ನಿರ್ದೇಶಕ ಹೇಮಂತ್ ಎಂ. ರಾವ್ ಈ ಸಿನಿಮಾದ ಕೆಲಸಗಳಲ್ಲಿ ಪರೋಕ್ಷವಾಗಿ ಸಾಥ್‌ ನೀಡಿದ್ದಾರಂತೆ.‌

Rishab Shetty: ಹೊಂಬಾಳೆ ಬಳಿಕ ರಾಜ್‌ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಅನ್‌ಫಾಲೋ ಮಾಡಿದ ರಿಷಬ್‌ ಶೆಟ್ಟಿ!

ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ ಅಭಿನಯದ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಹೇಮಂತ್‌ ಎಂ. ರಾವ್‌ ಬ್ಯುಸಿಯಾಗಿದ್ದರೂ, ರುಕ್ಮಿಣಿ - ಕೆವಿಎನ್‌ ಅವರ ಹೊಸ ಚಿತ್ರಕ್ಕೂ ಸಹಕಾರ ನೀಡುತ್ತಿದ್ದಾರೆ ಎನ್ನಲಾಗಿದೆ.

ಸಾಥ್‌ ನೀಡಿದ ಲೇಡಿ ಸೂಪರ್‌ ಸ್ಟಾರ್‌

ಮತ್ತೊಂದು ವಿಶೇಷ ಎಂದರೆ, ಸ್ಯಾಂಡಲ್‌ವುಡ್‌ ʻಲೇಡಿ ಸೂಪರ್‌ ಸ್ಟಾರ್‌ʼ ಮಾಲಾಶ್ರೀ ಅವರು ಈ ಹೊಸ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಈ ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದು ಯಾವ ಜಾನರ್‌ನ ಸಿನಿಮಾ? ನಿರ್ದೇಶಕರು ಯಾರು? ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ ಎಂಬುದು ಇನ್ನಷ್ಟೇ ಮಾಹಿತಿ ಗೊತ್ತಾಗಬೇಕಿದೆ.

BIFFes: ಕಾರ್ಯಕ್ರಮಕ್ಕೆ ನನ್ನನ್ನ ಕರೆದಿದ್ದು ದೊಡ್ಡ ಗೌರವ! ಸಿನಿಮೋತ್ಸವ ಉದ್ಘಾಟನೆ ವೇಳೆ ರುಕ್ಮಿಣಿ ವಸಂತ್ ಮಾತು

ಸದ್ಯ ಕೆವಿಎನ್ ಪ್ರೊಡಕ್ಷನ್ಸ್ ಈಗಾಗಲೇ ಧ್ರುವ ಸರ್ಜಾ ಅವರ 'ಕೆಡಿ' ಮತ್ತು ದಳಪತಿ ವಿಜಯ್ ಅವರ 'ಜನ ನಾಯಗನ್' ಅಂತಹ ದೊಡ್ಡ ಚಿತ್ರಗಳನ್ನು ನಿರ್ಮಿಸಿದ್ದು, ರಿಲೀಸ್‌ ಮಾಡಲು ರೆಡಿಯಾಗಿದೆ. ಇದರ ಜೊತೆಗೆ ಬಹುನಿರೀಕ್ಷಿತ ಟಾಕ್ಸಿಕ್‌ ಸಿನಿಮಾವನ್ನು ಜೂನ್‌ 4ರಂದು ಬಿಡುಗಡೆ ಮಾಡಲು ಸಜ್ಜಾಗಿದೆ.