ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸಮಂತಾ; ಮಗುವಿನ ಹೆಸರು ದೇವ್‌

Samantha welcome baby boy: ಈ ವಾರದ ಆರಂಭದಲ್ಲಿ, ಸಮಂತಾ ಮತ್ತು ರಾಜ್ ತಮ್ಮ ಮನೆಯಲ್ಲಿ ಪೂಜೆಯೊಂದನ್ನು ಆಯೋಜಿಸಿದ್ದರು. ಈ ಆಪ್ತ ಸಮಾರಂಭದಲ್ಲಿ ಅವರ ಕುಟುಂಬದ ಆಪ್ತ ಸದಸ್ಯರು ಭಾಗವಹಿಸಿದ್ದರು. ಸಮಂತಾ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು.

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸಮಂತಾ

Samantha, husband Raj Nidimoru -

Abhilash BC
Abhilash BC Nov 20, 2026 2:20 PM

ಚೆನ್ನೈ, ನ.20: ಖ್ಯಾತ ನಟಿ ಸಮಂತಾ ರುತ್ ಪ್ರಭು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ವಿಚಾರವನ್ನು ಸಮಂತಾ ಮತ್ತು ಅವರ ಪತಿ, ಚಲನಚಿತ್ರ ನಿರ್ಮಾಪಕ ರಾಜ್‌ ನಿಡಿಮೋರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡರು. ತಮ್ಮ ಮಗನಿಗೆ 'ದೇವ್ ನಿಡಿಮೋರು' ಎಂದು ಹೆಸರಿಟ್ಟಿರುವುದಾಗಿಯೂ ಅವರು ಬಹಿರಂಗಪಡಿಸಿದ್ದಾರೆ.

ನವೆಂಬರ್ 19, ರಂದು ಸಮಂತಾ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಒಂದು ದಿನದ ನಂತರ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ನವಜಾತ ಶಿಶುವು ಬೆರಳುಗಳನ್ನು ಹಿಡಿದುಕೊಂಡಿರುವ ಮುದ್ದಾದ ಫೋಟೋವೊಂದನ್ನೂ ದಂಪತಿಗಳು ಹಂಚಿಕೊಂಡಿದ್ದು, ತಮಗೆ ಗಂಡು ಮಗುವಾಗಿದ್ದು, ಮಗುವಿಗೆ 'ದೇವ್ ನಿಡಿಮೋರು' ಎಂದು ಹೆಸರಿಟ್ಟಿರುವುದಾಗಿ ಬರೆದುಕೊಂಡಿದ್ದಾರೆ.

'ನಮ್ಮ ಸುಂದರ ಗಂಡು ಮಗು, ದೇವ್ ನಿಡಿಮೊರು, 19.11.2026. ನಮ್ಮ ಹೃದಯಗಳು ಎಂದೆಂದಿಗಿಂತೂ ಖುಷಿಯಾಗಿವೆ" ಎಂದು ರೆಡ್ ಹಾರ್ಟ್ ಹಾಗೂ ಎವಿಲ್ ಐ ಎಮೋಜಿ ಹಾಕಿದ್ದಾರೆ.

ಈ ಘೋಷಣೆಯಾದ ಬೆನ್ನಲ್ಲೇ, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂತು. ನಟ ವರುಣ್ ಧವನ್, ತಮನ್ನಾ ಭಾಟಿಯಾ ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಅವರು ಈ ದಂಪತಿಗೆ ಅಭಿನಂದನೆ ಸಲ್ಲಿಸಿದರು.

Bigg Boss Kannada 13: ಪ್ರೋಮೋ ಕಟ್‌ಗಾಗಿ ಶೆಟ್ಟಿ ಡಾನ್‌ ಪ್ಲ್ಯಾನ್‌? ಸೌಂದರ್ಯ ವಿರುದ್ಧ ಸ್ಪರ್ಧಿಗಳ ಅಸಮಾಧಾನ

ಈ ವಾರದ ಆರಂಭದಲ್ಲಿ, ಸಮಂತಾ ಮತ್ತು ರಾಜ್ ತಮ್ಮ ಮನೆಯಲ್ಲಿ ಪೂಜೆಯೊಂದನ್ನು ಆಯೋಜಿಸಿದ್ದರು. ಈ ಆಪ್ತ ಸಮಾರಂಭದಲ್ಲಿ ಅವರ ಕುಟುಂಬದ ಆಪ್ತ ಸದಸ್ಯರು ಭಾಗವಹಿಸಿದ್ದರು. ಸಮಂತಾ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು.