ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sanjay Dutt: ಸಂಜಯ್ ದತ್ ಹೊಸ ಸಿನಿಮಾ ‘ಆಖ್ರಿ ಸವಾಲ್’ ಫಸ್ಟ್ ಲುಕ್ ಪೋಸ್ಟರ್ ಔಟ್‌!

Sanjay Dutt: ಸಂಜಯ್ ದತ್ ಅಭಿನಯದ ‘ಧುರಂಧರ್: ದಿ ರಿವೆಂಜ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಅದರಲ್ಲಿ ಅವರು ಪಾಕಿಸ್ತಾನಿ ಪೊಲೀಸ್ ಅಧಿಕಾರಿ ಚೌಧರಿ ಅಸ್ಲಂ ಪಾತ್ರದಲ್ಲಿ ಮಿಂಚಿದ್ದಾರೆ. ಈ ಪಾತ್ರಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ‘ಧುರಂಧರ್ 2’ ಯಶಸ್ಸಿನ ಬಳಿಕ ಅವರ ಹೊಸ ಸಿನಿಮಾ ‘ಆಖ್ರಿ ಸವಾಲ್ ರಿಲೀಸ್​ಗೆ ಸಜ್ಜಾಗಿದೆ. ಈ ಚಿತ್ರವು ಮೇ 15, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸಂಜಯ್ ದತ್ ಹೊಸ ಸಿನಿಮಾ ‘ಆಖ್ರಿ ಸವಾಲ್’ ಫಸ್ಟ್ ಲುಕ್ ಪೋಸ್ಟರ್ ಔಟ್‌!

ಸಂಜಯ್‌ ದತ್‌ -

Yashaswi Devadiga
Yashaswi Devadiga Mar 26, 2026 6:25 PM

ಸಂಜಯ್ ದತ್ (Sanjay Dutt) ಅಭಿನಯದ ‘ಧುರಂಧರ್: ದಿ ರಿವೆಂಜ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಅದರಲ್ಲಿ ಅವರು ಪಾಕಿಸ್ತಾನಿ ಪೊಲೀಸ್ ಅಧಿಕಾರಿ ಚೌಧರಿ ಅಸ್ಲಂ ಪಾತ್ರದಲ್ಲಿ ಮಿಂಚಿದ್ದಾರೆ. ಈ ಪಾತ್ರಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ‘ಧುರಂಧರ್ 2’ (Dhurandhar film) ಯಶಸ್ಸಿನ ಬಳಿಕ ಅವರ ಹೊಸ ಸಿನಿಮಾ ‘ಆಖ್ರಿ ಸವಾಲ್ ರಿಲೀಸ್​ಗೆ (Aakhri Sawal) ಸಜ್ಜಾಗಿದೆ. ಈ ಚಿತ್ರವು ಮೇ 15, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಫಸ್ಟ್‌ ಲುಕ್‌ ಪೋಸ್ಟರ್‌ ಔಟ್

ಆಖ್ರಿ ಸವಾಲ್ ಚಿತ್ರದ ಪೋಸ್ಟರ್ ಕೂಡ ಔಟ್‌ ಆಗಿದೆ. ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಸಂಜಯ್ ದತ್ ಅತ್ಯಂತ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಅವರ ಈ ಭಾವಚಿತ್ರವು ಒಂದು ಬೃಹತ್ ಪ್ರಶ್ನಾರ್ಥಕ ಚಿಹ್ನೆಯ ಒಳಗೆ ಅಡಕವಾಗಿದೆ. ಪೋಸ್ಟರ್‌ನ ವಿನ್ಯಾಸ ಗಮನ ಸೆಳೆದಿದೆ. ‘The Question India Never Stopped Asking’ ಎಂಬ ಟ್ಯಾಗ್‌ಲೈನ್ ಇದೆ.

ಇದನ್ನೂ ಓದಿ: Amulya Gowda: ಒಂದೇ ಸೀರಿಯಲ್‌ ಮೂಲಕ ಮತ್ತೆ ಕಮ್‌ಬ್ಯಾಕ್‌ ಆದ್ರು ಅಮೃತಾ- ಅಮೂಲ್ಯ ಗೌಡ! ಪ್ರಸಾರ ಯಾವಾಗಿನಿಂದ?

ಸಂಜಯ್ ದತ್ ಅವರ ಮುಖ ಪ್ರಶ್ನಾರ್ಥಕ ಚಿಹ್ನೆಯ ಮಧ್ಯೆ ಇದೆ. ಬಹುಶಃ ಅವರ ಪಾತ್ರವೇ ಉತ್ತರಗಳನ್ನು ಹುಡುಕಲು ಪ್ರಯತ್ನಿಸುತ್ತಿರಬಹುದು. ‌

ಮೇ 15 ರಂದು ಚಿತ್ರಮಂದಿರಗಳಲ್ಲಿ

ಸಂಜಯ್ ದತ್, ಅಮಿತ್ ಸಾಧ್, ನಮಾಶಿ ಚಕ್ರವರ್ತಿ, ಸಮೀರಾ ರೆಡ್ಡಿ, ತ್ರಿಧಾ ಚೌಧರಿ ಮತ್ತು ನೀತು ಚಂದ್ರ ಈ ಸಿನಿಮಾ ಭಾಗವಾಗಿದ್ದಾರೆ. ಸಂಜಯ್ ಪೋಸ್ಟ್ ಮಾಡಿದ ಶೀರ್ಷಿಕೆ ಹೀಗಿದೆ: "ಭಾರತ ಎಂದಿಗೂ ಕೇಳುವುದನ್ನು ನಿಲ್ಲಿಸದ ಪ್ರಶ್ನೆ. ಮೇ 15 ರಂದು ಚಿತ್ರಮಂದಿರಗಳಲ್ಲಿ ಮಾತ್ರ ಉತ್ತರವನ್ನು ತಿಳಿಯಲು ಸಿದ್ಧರಾಗಿ."ಎಂದು ಬರೆದುಕೊಂಡಿದ್ದಾರೆ.

ಆಖ್ರಿ ಸವಾಲ್ ಕೇವಲ ಒಂದು ಕಥೆಯನ್ನು ಹೇಳುತ್ತಿಲ್ಲ; ಅದು ಪೂರ್ಣ ಶತಮಾನ ಹಿಂದಕ್ಕೆ ಹೋಗುತ್ತದೆ. ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಕತೆ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. 1925 ರಲ್ಲಿ ಕೇಶವ್ ಬಲಿರಾಮ್ ಹೆಡ್ಗೆವಾರ್ ಸ್ಥಾಪಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ವರ್ಷಗಳ ಪ್ರಯಾಣವನ್ನು ಇದೆ ಎನ್ನಲಾಗುತ್ತಿದೆ.

ಆಖ್ರಿ ಸವಾಲ್’ ಚಿತ್ರವನ್ನು ನಿಖಿಲ್ ನಂದಾ, ಧನರಾಜ್ ನಾಥ್ವಾನಿ ಮತ್ತು ಸ್ವತಃ ಸಂಜಯ್ ದತ್ ನಿರ್ಮಿಸುತ್ತಿದ್ದಾರೆ. ಈ ಚಿತ್ರವು ‘ನಿಖಿಲ್ ನಂದಾ ಮೋಷನ್ ಪಿಕ್ಚರ್ಸ್’ ಮತ್ತು ‘ನೀಮ್ ಟ್ರೀ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿದೆ.

ಇದನ್ನೂ ಓದಿ: Amruthadhaare serial: ಜೇಡಿಯಿಂದ ಮಲ್ಲಿ ಬಾಳು ಕಾಪಾಡ್ತಾನಾ ಗೌತಮ್? ಮಕ್ಕಳ ಮಾತಿಗೆ ಓಗೊಡಲೇಬೇಕು ಭೂಮಿ!

ಧುರಂಧರ್ ನಂತರ ಅರ್ಜುನ್ ರಾಂಪಾಲ್ ಕೂಡ ತಮ್ಮ ಮುಂದಿನ ಯೋಜನೆಯನ್ನು ಬಿಲಿಯನೇರ್ ಎಂದು ಘೋಷಿಸಿದ್ದಾರೆ. ಖ್ಯಾತ ಚಲನಚಿತ್ರ ನಿರ್ಮಾಪಕರಾದ ಹನ್ಸಲ್ ಮೆಹ್ತಾ ಮತ್ತು ರಾಬಿ ಗ್ರೆವಾಲ್ ನಿರ್ದೇಶನದ ಈ ಸರಣಿಯನ್ನು ಅನುಭವ್ ಚೋಪ್ರಾ ಮತ್ತು ಶಾಂತನು ಸಾಗರ ಬರೆದಿದ್ದಾರೆ ಮತ್ತು ಪ್ರಭ್ಲೀನ್ ಸಂಧು ನಿರ್ಮಿಸಿದ್ದಾರೆ. ಬಿಲಿಯನೇರ್ ಶೀಘ್ರದಲ್ಲೇ ಅಮೆಜಾನ್ ಎಂಎಕ್ಸ್ ಪ್ಲೇಯರ್ ಮತ್ತು ಪ್ರೈಮ್ ವಿಡಿಯೋದಲ್ಲಿ ಉಚಿತವಾಗಿ ಸ್ಟ್ರೀಮ್ ಆಗಲಿದೆ.