Bhagya Lakshmi Serial: ಮಗಳಿಗೆ ಪಾಠ ಕಲಿಸಲು ಕಟುವಾದ ಭಾಗ್ಯ: ಕೋಪಗೊಂಡ ತನ್ವಿ
ತನ್ವಿಗೆ ಅಮ್ಮನ ಕಷ್ಟಗಳ ಬಗ್ಗೆ ಯೋಚನೆಯೇ ಇಲ್ಲ. ಆಕೆಗೆ ತನ್ನ ಗೆಳೆಯರ ಜೊತೆಗೆ ಮಜಾ ಮಾಡುವುದು ಎಂದರೆ ಬಹಳಷ್ಟು ಇಷ್ಟ. ಆದರೆ ಭಾಗ್ಯಗೆ ಬಹಳ ಕಷ್ಟವಾಗುತ್ತದೆ. ಕೊನೆಗೆ ನಿಮ್ಮ ಅಜ್ಜಿಯ ಬಳಿ ಒಂದು ಮಾತು ಹೇಳುತ್ತೇನೆ. ಅವರು ಒಪ್ಪಿದರೆ ನೀನು ಹೋಗಬಹುದು ಎಂದು ಭಾಗ್ಯ ಹೇಳಿದಾಗ ತನ್ವಿಗೆ ಸಿಟ್ಟು ಬರುತ್ತೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi) ಭಾಗ್ಯಾಳ ಕಷ್ಟದ ದಿನಗಳು ಕೊನೆಗೊಳ್ಳುತ್ತಿವೆ. ತಾಂಡವ್ ಆಡಿದ ನೋವಿನ ಮಾತುಗಳೇ ಭಾಗ್ಯಾಳಿಗೆ ಶ್ರೀರಕ್ಷೆಯಾಗಿದೆ. ಇದಕ್ಕೆ ಜೂನಿಯರ್ ರಾಕಿ ಭಾಯ್ ಕೂಡ ಸಾಥ್ ನೀಡಿದ್ದಾನೆ. ಭಾಗ್ಯಾಳ ಲೈಫ್ ಜೂನಿಯರ್ ರಾಕಿ ಭಾಯ್‌ನಿಂದ ಬದಲಾಗುವ ಎಲ್ಲಾ ಸೂಚನೆ ಸಿಕ್ಕಿದೆ. ನಮ್ಮ ಹಾಸ್ಟೆಲ್ ಹುಡುಗರು ಮನೆ ಊಟವನ್ನು ಮಿಸ್ ಮಾಡಿಕೊಳ್ತಿದ್ದಾರೆ. ನೀವು ಏನು ಮಾಡಿದ್ರೂ ಚೆನ್ನಾಗಿ ಮಾಡ್ತೀರಾ. ನಿಮ್ಮ ಊಟ ಹಾಸ್ಟೆಲ್ ಹುಡುಗರಿಗೆ ಸಿಕ್ಕಿದರೆ ತುಂಬ ಖುಷಿಯಾಗ್ತಾರೆ ಅಂತ ಹೇಳುತ್ತಾನೆ.
ಸದ್ಯ ಭಾಗ್ಯ ಇದೇ ವಿಚಾರವನ್ನು ಗಟ್ಟಿಯಾಗಿ ತೆಗೆದುಕೊಂಡಿದ್ದಾಳೆ. ಮನೆ ಮನೆಗೆ ಊಟದ ಡಬ್ಬ ತಲುಪಿಸುವ ಬಗ್ಗೆ ಯೋಜನೆ ರೂಪಿಸಿದ್ದಾಳೆ. ಅದಕ್ಕೆ ಮನೆಯವರೆಲ್ಲರೂ ಸಹಕಾರ ನೀಡಿದ್ದಾರೆ. ಭಾಗ್ಯಗೆ ಅವರ ಪ್ರೋತ್ಸಾಹ ಕಂಡು ಮತ್ತಷ್ಟು ಖುಷಿಯಾಗಿದೆ. ಹೀಗಾಗಿ ಅವಳು, ಚೆಂದದ ಒಂದು ಲೋಗೊ ಕೂಡ ರೂಪಿಸಿದ್ದಾಳೆ. ಇದಕ್ಕೆ ಕೈ ರುಚಿ ಎಂಬ ನಾಮಕರಣವೂ ಆಗಿದೆ. ಹೀಗೆ ಮನೆಯಲ್ಲಿ ಸಂಭ್ರಮ ಮನೆಮಾಡಿರುವಾಗ ಭಾಗ್ಯ ಮಗಳು ತನ್ವಿ ಮನೆಯವರಿಗೆ ಮತ್ತೆ ಬೇಜಾರು ಮಾಡಿದ್ದಾಳೆ.
ತನ್ವಿಗೆ ಗೆಳತಿಯರ ಜತೆ ರೆಸಾರ್ಟ್‌ಗೆ ಟ್ರಿಪ್ ಹೋಗಲು ತಯಾರಾಗಿದ್ದಾಳೆ. ಆದರೆ ಇದಕ್ಕೆ ಮನೆಯಿಂದ ಪರ್ಮೀಷನ್ ಸಿಗುತ್ತ-ಇಲ್ವಾ ಅನ್ನೋದು ಆಕೆಗೆ ಡೌಟ್. ಮೊದಲಿಗೆ ತನ್ವಿ ಅಜ್ಜಿ ಕುಸುಮಾ ಮತ್ತು ಪೂಜಾ ಒಟ್ಟಿಗೆ ಇರುವಾಗ ಮೆಲ್ಲನೇ ಹೋಗಿ ಅನುಮತಿ ಕೇಳಿದ್ದಾಳೆ. ಆದರೆ ಅಜ್ಜಿ ಕುಸುಮಾ, ಅವಳ ಮಾತು ಕೇಳುತ್ತಲೇ ಕೋಪಗೊಂಡಿದ್ದಾರೆ. ನೀವು ಹುಡುಗಿಯರೇ ಸೇರಿಕೊಂಡು ಎಲ್ಲಿಗೂ ಹೋಗುವುದು ಬೇಡ. ಸುಮ್ಮನೆ ಮನೆಯಲ್ಲಿ ಬಿದ್ದಿರು ಎಂದು ಜೋರು ಮಾಡುತ್ತಾರೆ.
ಅಜ್ಜಿಯ ಮಾತು ಕೇಳಿ ತನ್ವಿಗೆ ಬೇಸರವಾಗಿದೆ, ಇವರ ಬಳಿ ಮಾತನಾಡಿ ಪ್ರಯೋಜನವಿಲ್ಲ ಎಂದು ಮತ್ತೆ ಅಮ್ಮನ ಬಳಿ ತೆರಳುತ್ತಾಳೆ. ಭಾಗ್ಯ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ತನ್ವಿ ಅಮ್ಮನ ಬಳಿಗೆ ಬಂದು ಅಮ್ಮ ಏನ್ ಮಾಡ್ತಿದ್ದೀಯಾ ಎಂದು ಮೊದಲು ಪ್ರಶ್ನೆಯನ್ನು ಕೇಳುತ್ತಾಳೆ. ಭಾಗ್ಯ ತಾನು ಅಡುಗೆ ಕೆಲಸ ಮಾಡುತ್ತಿರುವುದಾಗಿ ತನ್ವಿ ಬಳಿ ಬಹಳ ಕೂಲಾಗಿ ಮಾತನಾಡುತ್ತಾಳೆ ಆಗ ತನ್ವೀ ತನ್ನ ತಾಯಿಯ ಬಳಿ ತನ್ನ ಗೆಳೆಯರ ಜೊತೆ ಔಟಿಂಗ್ ಹೋಗುವುದಾಗಿ ಹೇಳುತ್ತಾಳೆ. ಅದಕ್ಕೆ ಒಂದಿಷ್ಟು ಹಣ ಬೇಕು ಎಂದು ತನ್ನ ತಾಯಿಯ ಎದುರು ಬೇಡಿಕೆ ಇಡುತ್ತಾಳೆ. ಆದರೆ ಭಾಗ್ಯಗೆ ತನ್ವಿಯ ಖುಷಿ ಮುಖ್ಯ. ಆದರೆ ಆಕೆಗೆ ಹಣದ ತೊಂದರೆ ಇದೆ. ಹೀಗಾಗಿ ಮಗಳ ಆಸೆಯನ್ನು ಈಡೇರಿಸುವುದಕ್ಕೆ ಆಗುವುದಿಲ್ಲ.
ತನ್ವಿಗೆ ಅಮ್ಮನ ಕಷ್ಟಗಳ ಬಗ್ಗೆ ಯೋಚನೆಯೇ ಇಲ್ಲ. ಆಕೆಗೆ ತನ್ನ ಗೆಳೆಯರ ಜೊತೆಗೆ ಮಜಾ ಮಾಡುವುದು ಎಂದರೆ ಬಹಳಷ್ಟು ಇಷ್ಟ. ಆದರೆ ಭಾಗ್ಯಗೆ ಬಹಳ ಕಷ್ಟವಾಗುತ್ತದೆ. ಕೊನೆಗೆ ನಿಮ್ಮ ಅಜ್ಜಿಯ ಬಳಿ ಒಂದು ಮಾತು ಹೇಳುತ್ತೇನೆ. ಅವರು ಒಪ್ಪಿದರೆ ನೀನು ಹೋಗಬಹುದು ಎಂದು ಭಾಗ್ಯ ಹೇಳಿದಾಗ ತನ್ವಿಗೆ ಸಿಟ್ಟು ಬರುತ್ತೆ. ಅಮ್ಮ ಇದೀಗ ನಿನ್ನ ಮನೆ. ಈಗಲೂ ಕೂಡ ನೀನು ಅಜ್ಜಿಯ ಬಳಿ ಎಲ್ಲಾವನ್ನು ಹೇಳುತ್ತೀಯಾ? ಇದ್ಯಾವುದು ಕೂಡ ಇಷ್ಟವಾಗುತ್ತಿಲ್ಲ ಎನ್ನುತ್ತಾಳೆ. ಈ ಮಾತಿನಿಂದ ಕೆರಳಿದ ಭಾಗ್ಯ ಜೋರಾಗಿಯೇ ತನ್ವಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಸದ್ಯ ಭಾಗ್ಯ ತನ್ವಿಯನ್ನು ರೆಸಾರ್ಟ್‌ಗೆ ಕಳುಹಿಸುತ್ತಾಳಾ?, ಕಳುಹಿಸಬೇಕಾದರೆ ಹಣಕ್ಕಾಗಿ ಏನು ಮಾಡುತ್ತಾಳೆ?, ಭಾಗ್ಯಾಳ ಹೊಸ ಕೈ ರುಚಿ ಬ್ಯುಸಿನೆಸ್ ಹೇಗೆ ನಡೆಯುತ್ತೆ? ಎಂಬುದೆಲ್ಲ ಮುಂದಿನ ಎಪಿಸೋಡ್ನಲ್ಲಿ ಗೊತ್ತಾಗಬೇಕಿದೆ.
Kannada Serial TRP: ಕರಿಮಣಿ ಅಲ್ಲ: ಕರ್ನಾಟಕದ ನಂಬರ್ ಒನ್ ಧಾರಾವಾಹಿ ಇದುವೇ ನೋಡಿ