Hanumantha Lamani: ವೈರಲ್ ಆಗ್ತಿದೆ ಹನುಮಂತನ ಬಗ್ಗೆ ಕಾರ್ತಿಕ್ ಮಹೇಶ್ ಆಡಿದ ಮಾತು: ಏನಂದ್ರು ನೋಡಿ
ಹನುಮಂತ ಬಿಗ್ ಬಾಸ್ನಲ್ಲಿ ಗೆದ್ದ ಬಗ್ಗೆ ನಿಮಗೆ ಎಷ್ಟು ಖುಷಿ ಇದೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಕಾರ್ತಿಕ್ ಮಹೇಶ್, ಹನುಮಂತ ಅವರು ತುಂಬಾ ಚೆನ್ನಾಗಿ ಆಡಿದ್ದಾರೆ.. ಅವರು ಕಪ್ ಗೆಲ್ಲಲು ಅರ್ಹರು.. ನಾನು ಒಳಗಡೆ ಹೋಗಿದ್ನಲ್ಲ.. ಒಳ್ಳೆ ಹುಡುಗ ಆತ ಎಂದು ಹೇಳಿದ್ದಾರೆ.

Karthik Mahesh and Hanumantha

ಹಳ್ಳಿ ಹೈದ ಹನುಮಂತ ಲಮಾಣಿ ಬಿಗ್ ಬಾಸ್ ಕನ್ನಡ ಸೀಸನ್ 11 ಟ್ರೋಫಿ ಗೆದ್ದ ಬಳಿಕ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಕಲರ್ಸ್ ಕನ್ನಡದ ಮತ್ತೊಂದು ರಿಯಾಲಿಟಿ ಶೋ ಬಾಯ್ಸ್ vs ಗರ್ಲ್ನಲ್ಲಿ ಇವರು ಭಾಗವಹಿಸುತ್ತಿದ್ದಾರೆ. ಸಿನಿಮಾ ಆಫರ್ಗಳು ಕೂಡ ಬರುತ್ತಿವೆಯಂತೆ. ಮೊನ್ನೆಯಷ್ಟೆ ಟ್ರೋಫಿ ಹಿಡಿದುಕೊಂಡು ಹುಟ್ಟೂರಿಗೆ ಹೋದಾಗ ಇವರನ್ನು ನೋಡಲು ಜನಸಾಗರವೇ ಬಂದಿತ್ತು. ಹೀಗೆ ಹನುಮಂತನ ಹವಾ ಕರುನಾಡಲ್ಲಿ ಭರ್ಜರಿ ಆಗೇ ಇದೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಹನುಮಂತನ ಬಗ್ಗೆ ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ.
ಇತ್ತೀಚೆಗಷ್ಟೆ ಹಾವೇರಿ ಜಿಲ್ಲೆಯ ರಾಜಕೀಯ ನಾಯಕ ಹಾಗೂ ಮಾಜಿ ಕೃಷಿ ಸಚಿವರು ಆದ ಬಿಸಿ ಪಾಟೀಲ್ ಅವರು ಹನುಮಂತನಿಗೆ ಕರೆ ಮಾಡಿ ಬಿಗ್ ಬಾಸ್ ವಿನ್ನರ್ ಆಗಿದ್ದಕ್ಕೆ ಶುಭಕೋರಿದ್ದರು. ಅಲ್ಲದೆ ನೀವು ಹಾವೇರಿಯ ಘನತೆ ಗೌರವವನ್ನು ಎತ್ತಿ ಹಿಡಿದಿದ್ದೀರಾ, ನಾನು ನಿನ್ನ ಆಟ ನೋಡಿದ್ದೆ, ತುಂಬಾ ಚೆನ್ನಾಗಿ ಆಡಿದ್ದೀರಾ ಎಂದು ಹೇಳಿದ್ದರು. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಕೂಡ ಹನುಮಂತನನ್ನು ಹಾಡಿ ಹೊಗಳಿದ್ದಾರೆ.
ಹನುಮಂತ ಬಿಗ್ ಬಾಸ್ನಲ್ಲಿ ಗೆದ್ದ ಬಗ್ಗೆ ನಿಮಗೆ ಎಷ್ಟು ಖುಷಿ ಇದೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಕಾರ್ತಿಕ್ ಮಹೇಶ್, ಹನುಮಂತ ಅವರು ತುಂಬಾ ಚೆನ್ನಾಗಿ ಆಡಿದ್ದಾರೆ.. ಅವರು ಕಪ್ ಗೆಲ್ಲಲು ಅರ್ಹರು.. ನಾನು ಒಳಗಡೆ ಹೋಗಿದ್ನಲ್ಲ.. ಒಳ್ಳೆ ಹುಡುಗ ಆತ ಎಂದು ಹೇಳಿದ್ದಾರೆ. ಅವರ ಸಿಂಪ್ಲಿಸಿಟಿ ಮಾತ್ರ ಅಲ್ಲ.. ಅವರ ಪರ್ಸನಾಲಿಟಿ ಕೂಡ ನನಗೆ ಇಷ್ಟ.. ಅವರು ಇರೋದು, ಅವರ ಇನೊಸೆನ್ಸ್, ಅವರು ಕೌಂಟರ್ ಕೊಡೋದು ಎಲ್ಲ ಚೆನ್ನಾಗಿದೆ.. ಅವರು ಕಪ್ ಗೆಲ್ಲಲು ಅರ್ಹರು ಎಂದಿದ್ದಾರೆ.
ಹೊಸ ಬ್ಯುಸಿನೆಸ್ ಶುರು ಮಾಡಿದ ಕಾರ್ತಿಕ್ ಮಹೇಶ್:
ಕಾರ್ತಿಕ್ ಇದೀಗ ನಟನೆಯ ಜತೆಗೆ ಹೊಸದಾದ ಉದ್ಯಮವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಾಹಸಕ್ಕೆ ಅವರ ಅಮ್ಮನೂ ಜತೆ ನಿಂತಿದ್ದಾರೆ. ಸೋಡಾ ಬಾಟಲ್ ಉದ್ಯಮವನ್ನು ಕಾರ್ತಿಕ್ ಮಹೇಶ್ ಆರಂಭಿಸಿದ್ದಾರೆ. ಈ ಉದ್ಯಮ ಶೀಘ್ರದಲ್ಲಿ ಮಾರುಕಟ್ಟೆಯನ್ನೂ ಪ್ರವೇಶಿಸಲಿದೆ. ವಿವಿಧ ಫ್ಲೇವರ್ನಲ್ಲಿ ಇದು ಲಭ್ಯವಿರಲಿದೆ ಎನ್ನಲಾಗಿದೆ. ಶೀಘ್ರವೇ ಇದು ಮಾರುಕಟ್ಟೆಗೆ ಬರಲಿದೆಯಂತೆ.
Bhagya Lakshmi Serial: ಭಾಗ್ಯಾಗೆ ಐ ಲವ್ ಯೂ ಎಂದು ಖುಷಿ ಪಡಿಸಿದ ತನ್ವಿ: ತಲೆಕೆಳಗಾಯ್ತು ತಾಂಡವ್ನ ಎಲ್ಲ ಪ್ಲ್ಯಾನ್