BBK 11: ಫಿನಾಲೆ ವೀಕ್ನಲ್ಲಿ ಮಂಜು ಉಗ್ರ ಅವತಾರ: ಭವ್ಯಾ-ರಜತ್ ಟಾರ್ಗೆಟ್
ಮನದಲ್ಲಿ ಉದಿಗಿರುವ ಕೋಪ-ಬೇಸರ-ಹತಾಶೆಯನ್ನು ಮಡಿಕೆ ಒಡೆಯುತ್ತ ಮನದೊಳಗಿನ ಭಾರವನ್ನು ಇಳಿಸಬೇಕು ಎಂದು ಬಿಗ್ ಬಾಸ್ ಒಂದು ಚಟುವಟಿಕೆ ನೀಡಿದ್ದಾರೆ. ಈ ಟಾಸ್ಕ್ನಲ್ಲಿ ಉಗ್ರಂ ಮಂಜು ಅವರು ಭವ್ಯಾ ಹಾಗೂ ರಜತ್ ಹೆಸರು ತೆಗೆದುಕೊಂಡು ರುದ್ರವತಾರ ತಾಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಫಿನಾಲೆ ವೀಕ್ ಪ್ರಾರಂಭವಾಗಿದ್ದು, ಇನ್ನು ಆರು ದಿನಗಳಲ್ಲಿ ಶೋ ಮುಕ್ತಾಯಗೊಳ್ಳಲಿದೆ. ಮುಂದಿನ ಶನಿವಾರ-ಭಾನುವಾರ ಗ್ರ್ಯಾಂಡ್ ಫೈನಲ್ ನಡೆಯಲಿದೆ. ಕಳೆದ ವಾರ ನಡೆದ ಡಬಲ್ ಎಲಿಮಿನೇಷನ್ನಿಂದಾಗಿ ಸದ್ಯ ಮನೆಯೊಳಗೆ ಆರು ಮಂದಿ ಇದ್ದಾರಷ್ಟೆ. ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್, ಭವ್ಯಾ ಗೌಡ, ರಜತ್ ಹಾಗೂ ಉಗ್ರಂ ಮಂಜು ಕೊನೆಯದಾಗಿ ಉಳಿದುಕೊಂಡಿದ್ದಾರೆ.
ಇದೀಗ ಮನೆಯಲ್ಲಿರುವ ಘಟಾನುಘಟಿಗಳಿಗೆ ಬಿಗ್ ಬಾಸ್ ಒಂದು ಚಟುವಟಿಕೆ ನೀಡಿದ್ದಾರೆ. ಮನದಲ್ಲಿ ಉದಿಗಿರುವ ಕೋಪ-ಬೇಸರ-ಹತಾಶೆಯನ್ನು ಮಡಿಕೆ ಒಡೆಯುತ್ತ ಮನದೊಳಗಿನ ಭಾರವನ್ನು ಇಳಿಸಬೇಕು ಎಂದು ಬಿಗ್ ಬಾಸ್ ಒಂದು ಚಟುವಟಿಕೆ ನೀಡಿದ್ದಾರೆ. ನಿಮಗೆ, ಯಾರ ಮೇಲೆ ಕೋಪ ಇದೆಯೋ ಅವರ ಫೋಟೋವನ್ನು ಗೊಂಬೆ ತಲೆಯಾಗಿರುವ ಮಡಿಕೆಗೆ ಅಂಟಿಸಿ, ಕೋಲಿನಿಂದ ಹೊಡೆಯಬೇಕು ಎಂದು ಟಾಸ್ಕ್ ಕೊಡಲಾಗಿದೆ.
ಈ ಟಾಸ್ಕ್ನಲ್ಲಿ ಉಗ್ರಂ ಮಂಜು ರುದ್ರವತಾರ ತಾಳಿದ್ದಾರೆ. ಇದರಲ್ಲಿ ಮಂಜು ಅವರು ರಜತ್ ಹಾಗೂ ಭವ್ಯಾ ಗೌಡ ಹೆಸರು ತೆಗೆದುಕೊಂಡಿದ್ದಾರೆ. ಭವ್ಯಾ ಬಗ್ಗೆ ಮಾತನಾಡಿದ ಮಂಜು, ಮೊದಲಿಗೆ ಅಣ್ಣ ಅಂತೀಯ.. ಅಮೇಲೆ ಮಂಜು ಅವ್ರೇ ಅಂತೀಯಾ ಎಂದು ಹೇಳಿದ್ದಾರೆ. ಆಗ ಭವ್ಯಾ ಅವರು ನಾನು ಯಾರಿಗಾದ್ರು ನಿಮ್ಗೆ ಅಗ್ರಿಮೆಂಟ್ ಹಾಕಿ ಕೊಟ್ಟಿದ್ದೀನಾ ಮಂಜಣ್ಣ ಅಂತಾನೆ ಕರೀತಿನಿ ಅಂತಾ ಹೇಳಿದ್ದಾರೆ. ಆಗ ಮುಂದಿನ ರೀಸನ್ ತೆಗೆದುಕೊಂಡ ಮಂಜು ಹನುಮಂತುಗೆ ಹೊಡೆದಿದ್ದು ಎಂದು ಹೇಳಿದ್ದಾರೆ.
ಆಗ ಭವ್ಯಾ ಅವರು, ನೀವು ಯಾರೀ ಮಾತಾಡೋಕೆ.. ಫಸ್ಟ್ ನಿಮ್ಮ ಮನೇಲಿ ಎಷ್ಟು ತೂತಿದೆ ನೋಡ್ಕೊಳಿ ಎಂದಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಮಂಜು, ತ್ರಿವಿಕ್ರಮ್ ಸ್ಟೇಟ್ಮೆಂಟ್ ಕೊಟ್ರು ಅಲ್ವ ನನ್ನಿಂದಲೇ ಇಲ್ಲಿ ತನಕ ಬಂದಿದ್ದಿ ಅಂತ ಇಂಡಿವ್ಯೂಜುವಲ್ ಆಡ್ತಾ ಇಲ್ವೆ.. ಯಾರಿಗೋ ಸಿಗಬೇಕಾದ ಕ್ಯಾಪ್ಟನ್ಸಿ.. ಮೋಸ ಮಾಡ್ಕೊಂಡು ಕ್ಯಾಪ್ಟನ್ ಆದ್ನಾ ಎಂದು ಟಾರ್ಗೆಟ್ ಮಾಡಿದ್ದಾರೆ.
ಇದಾ ಬಳಿಕ ರಜತ್ ಹೆಸರು ತೆಗೆದುಕೊಂಡ ಮಂಜು, ಮುಂಚೆ ಹೇಳ್ತೀರಾ ಗ್ಯಾಂಗ್ಗಳನ್ನೆಲ್ಲ ಹರಿದಾಕ್ತೀನಿ ಅಂತಾ.. ಏನು ಹರಿದಾಕೋಕೆ ಆಗಿಲ್ಲ ನಂದು ಮತ್ತು ಗೌತಮಿ ಫ್ರೆಂಡ್ಶಿಪ್ನ. ನಿನ್ನ ವ್ಯಕ್ತಿತ್ವ ನೀನು ನೋಡ್ಕೊ ಹೋಗಲ್ಲೆ.. ಎಷ್ಟೊ ಜನ ನೋಡಿದ್ದೀನಿ ನಾನೂನು ಎಂದು ಹೇಳಿದ್ದಾರೆ. ಇದರು ರಜತ್ಗೆ ಮತ್ತಷ್ಟು ಕೋಪ ತರಿಸಿದೆ. ಒಳ್ಳೆ ಸಡೆ ನನ್ ಮಗನೆ.. ಏಳೆಂಟು ವಾರದಿಂದ ಗುಳ್ಳೆ ನರಿ ತರ ಇದೆ ಇವಗೇನೋ.. ಬರ್ತೀಯಾ.. ಬರ್ತೀಯಾ.. ಎಂದು ರಜತ್ ಎದುರು ಎದುರು ಹೋಗಿದ್ದಾರೆ.
Kiccha Sudeep: ಬಿಗ್ ಬಾಸ್‌ಗೆ ಕಿಚ್ಚ ಸುದೀಪ್ ಅಧಿಕೃತ ವಿದಾಯ; ಈ ಬಾರಿಯ ಫಿನಾಲೆಯೇ ಕೊನೆಯ ನಿರೂಪಣೆ