BBK 12: ಮುಂದಿನ ವಾರ ಬಿಗ್ ಬಾಸ್ನಲ್ಲಿರಲಿದೆ ಯಾರೂ ಊಹಿಸಿರದ ಟ್ವಿಸ್ಟ್?
ಸದ್ಯದಲ್ಲೇ ಬಿಗ್ ಬಾಸ್ನಲ್ಲಿ ಮಾಸ್ ಎಲಿಮಿನೇಷನ್ ನಡೆಯಲಿದೆಯಂತೆ. ಮನೆ ಅರ್ಧಕರ್ಧ ಖಾಲಿ ಆಗಲಿದೆಯಂತೆ. ಎಷ್ಟು ಮಂದಿ ಸ್ಪರ್ಧಿಗಳು ಹೊರಹೋಗುತ್ತಾರೋ ಅಷ್ಟೇ ಮಂದಿ ಸ್ಪರ್ಧಿಗಳು ಪುನಃ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರಂತೆ. ಅಂದಹಾಗೆ ಈ ಕುರಿತು ಕಳೆದ ವೀಕೆಂಡ್ ಕಿಚ್ಚ ಸುದೀಪ್ ಅವರೇ ಒಂದು ಹಿಂಟ್ ನೀಡಿದ್ದರು.

Bigg Boss Kannada 12 ( -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾದ ಮೊದಲ ದಿನದಿಂದಲೇ ಸ್ಪರ್ಧಿಗಳಿಗೆ ಶಾಕ್ ಮೇಲೆ ಶಾಕ್ ನೀಡಲಾಗುತ್ತಿದೆ. ಸ್ಪರ್ಧಿಗಳಿಗೆ ಒಂದರ ಹಿಂದೆ ಒಂದರಂತೆ ಟ್ವಿಸ್ಟ್ ನೀಡಲಾಗುತ್ತಿದೆ. ಮನೆಯೊಳಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿ ಆಚೆ ಹೋಗಬೇಕಾಯಿತು. ಬಳಿಕ ವೀಕೆಂಡ್ನಲ್ಲಿ ಒಳ ಹೋದರು. ಎರಡನೇ ದಿನ ಬಿಗ್ ಬಾಸ್ ಮೂರನೇ ವಾರದಲ್ಲೇ ಒಂದು ಫಿನಾಲೆ ನಡೆಯಲಿದೆ ಎಂದು ಹೇಳಿದರು. ಬಳಿಕ ವೀಕೆಂಡ್ನಲ್ಲಿ ಡಬಲ್ ಎಲಿಮಿನೇಷನ್ ನಡೆಯಿತು.
ಇವೆಲ್ಲದರ ಜೊತೆಗೆ ಸ್ಪರ್ಧಿಗಳು ಒಮ್ಮೆ ಮನೆಯಿಂದ ಹೊರ ಹೋಗಿ ಒಳ ಬರಬೇಕಾಯಿತು. ಇದೀಗ ಸದ್ಯದಲ್ಲೇ ಬಿಗ್ ಬಾಸ್ ಕಡೆಯಿಂದ ಮತ್ತೊಂದು ದೊಡ್ಡ ಟ್ವಿಸ್ಟ್ ಇರಲಿದೆ ಎನ್ನಲಾಗಿದೆ. ಹೌದು, ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಎರಡು ವಾರ ಆಗುತ್ತ ಬರುತ್ತಿದೆ. ಅದಾಗಲೇ ಶೋನಲ್ಲಿ ಯಾರೂ ಊಹಿಸಿರದಂತ ಅನೇಕ ಟ್ವಿಸ್ಟ್ಗಳನ್ನು ನೀಡಲಾಗಿದೆ. ಈ ಹಿಂದೆ ನಡೆದ ಸೀಸನ್ಗಳಂತೆ ಈ ಬಾರಿಯ ಸೀಸನ್ ಅಲ್ಲ ಎಂಬ ವಾಖ್ಯವನ್ನು ಬಿಗ್ ಬಾಸ್ ಸಾಭೀತು ಪಡಿಸುತ್ತಿದೆ.
ಇದೀಗ ಹರಿದಾಡುತ್ತಿರುವ ಹೊಸ ವಿಚಾರ ಏನಂದ್ರೆ, ಸದ್ಯದಲ್ಲೇ ಬಿಗ್ ಬಾಸ್ನಲ್ಲಿ ಮಾಸ್ ಎಲಿಮಿನೇಷನ್ ನಡೆಯಲಿದೆಯಂತೆ. ಮನೆ ಅರ್ಧಕರ್ಧ ಖಾಲಿ ಆಗಲಿದೆಯಂತೆ. ಎಷ್ಟು ಮಂದಿ ಸ್ಪರ್ಧಿಗಳು ಹೊರಹೋಗುತ್ತಾರೋ ಅಷ್ಟೇ ಮಂದಿ ಸ್ಪರ್ಧಿಗಳು ಪುನಃ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರಂತೆ. ಅಂದಹಾಗೆ ಈ ಕುರಿತು ಕಳೆದ ವೀಕೆಂಡ್ ಕಿಚ್ಚ ಸುದೀಪ್ ಅವರೇ ಒಂದು ಹಿಂಟ್ ನೀಡಿದ್ದರು.
BBK 12 TRP: ಟಿಆರ್ಪಿಯಲ್ಲಿ ಇತಿಹಾಸ ಸೃಷ್ಟಿಸಿದ ಬಿಗ್ ಬಾಸ್ ಕನ್ನಡ 12: ನಂಬರ್ಸ್ ಕೇಳಿದ್ರೆ ಶಾಕ್ ಆಗ್ತೀರಿ
‘‘ಈ ಸೀಸನ್‌ನಲ್ಲಿ ಪ್ರತಿಯೊಂದು ನಿಮಿಷವೂ ಕೌಂಟ್ ಆಗಲಿದೆ. ಲಾಸ್ಟ್ ಸೀಸನ್ ಅಲ್ಲಿ ವೈಲ್ಡ್ ಕಾರ್ಡ್ ಆಗಿ ಬಂದವರು ಫಿನಾಲೆ ಗೆದ್ದಿದ್ದರು. ಹಾಗಾಗಿ, ಮಧ್ಯದಲ್ಲಿ ಯಾರ್ ಬೇಕಾದರೂ ಬರ್ತಾರೆ. ಈ ಸೀಸನ್‌ನಲ್ಲಿ ಎಷ್ಟು ಜನ ಬೇಕಾದರೂ ಬರ್ತಾರೆ. ನಿಮಗೆ ಒಂದು ಸುಳಿವು ಕೊಡ್ತಾ ಇದ್ದೇನೆ. ಎಷ್ಟು ಜನ ಬೇಕಾದರೂ ಬರ್ತಾರೆ ಎಂದು ನಾನು ಹೇಳಿದ್ದೀನಿ ಅಂದ್ರೆ, ಇಲ್ಲಿ ಇರುವವರಲ್ಲಿ, ಅಷ್ಟೇ ಜನ ಖಾಲಿ ಆಗಿಯೇ ಆಗ್ತಾರೆ’’ ಎಂದು ಸುದೀಪ್ ಹೇಳಿದ್ದರು. ಹೀಗಾಗಿ ಈ ಬಾರಿ ವೈಲ್ಡ್ ಕಾರ್ಡ್ ಮೂಲಕ ಸಾಕಷ್ಟು ಮಂದಿ ಎಂಟ್ರಿ ನೀಡೋದು ಖಚಿತ.
ಇದಕ್ಕೆ ಪುಷ್ಠಿ ಎಂಬಂತೆ ಮುಂದಿನ ವಾರದಲ್ಲೇ ಒಂದು ಫಿನಾಲೆ ನಡೆಯಲಿದ್ದು, ಇಲ್ಲಿಯೇ ಬಿಗ್ ಬಾಸ್ ಬಿಗ್ ಟ್ವಿಸ್ಟ್ ನೀಡುವ ಸಾಧ್ಯತೆ ಇದೆ. ಈಗ ಇರುವ ಸ್ಪರ್ಧಿಗಳಲ್ಲಿ ಯಾವಾಗ ಬೇಕಾದರೂ, ಯಾರು ಬೇಕಾದರೂ ಎಲಿಮಿನೇಟ್ ಆಗಬಹುದಾಗಿದೆ. ಸ್ಪರ್ಧಿಗಳು ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಬೋದು ಅಥವಾ ಗುಂಪು ಗುಂಪಾಗಿ ಎಲಿಮಿನೇಟ್ ಆಗಬಹುದು ಎಂಬ ಭಯವನ್ನು ನೀಡಿದ್ದಾರೆ ಬಿಗ್ ಬಾಸ್. ಸದ್ಯ ವೈಲ್ಡ್ ಕಾರ್ಡ್ ಮೂಲಕ ಎಷ್ಟು ಮಂದಿ ಬರಬಹುದು?, ಅವರು ಯಾರೆಲ್ಲ? ಎಂಬುದು ನೋಡಬೇಕಿದೆ.