Bhagya Lakshmi Serial: ಪೂಜಾಳ ಹುಟ್ಟುಹಬ್ಬದ ಪಾರ್ಟಿಯಲ್ಲಿ ತಾಂಡವ್ನ ಕೆನ್ನೆಗೆ ಬಾರಿಸಿದ ಭಾಗ್ಯ
ಆದೀ ಹಾಗೂ ಕಿಶನ್ ಪೂಜಾ ಬರ್ತ್ ಡೇಯನ್ನು ಮನೆಯಲ್ಲೇ ಗ್ರ್ಯಾಂಡ್ ಆಗಿ ಆಚರಿಸಿ ಆಕೆಗೆ ಸರ್ಪ್ರೈಸ್ ನೀಡಿದ್ದಾರೆ. ಆದರೆ, ಈ ಹುಟ್ಟುಹಬ್ಬದ ಆಚರಣೆಗೆ ತಾಂಡವ್ ಹಾಗೂ ಶ್ರೇಷ್ಠಾ ಕೂಡ ಬಂದಿದ್ದಾರೆ. ಇಲ್ಲಿ ಜಗಳ ನಡೆದು ಎಲ್ಲರ ಮುಂದೆಯೇ ತಾಂಡವ್ನ ಕೆನ್ನೆಗೆ ಬಾರಿಸಿದ್ದಾಳೆ ಭಾಗ್ಯ.

Bhagya lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತಂಗಿ ಪೂಜಾಳ ಬರ್ತ್ ಡೇ ಪಾರ್ಟಿ ಎಪಿಸೋಡ್ ನಡೆಯುತ್ತಿದೆ. ರಾಮ್ದಾಸ್ ಮನೆಗೆ ಸೊಸೆಯಾಗಿ ಬಂದ ಬಳಿಕ ನಡೆಯುತ್ತಿರುವ ಮೊದಲ ಪಾರ್ಟಿ ಎಂದು ಆದೀಶ್ವರ್ ಕಾಮತ್ ಎಲ್ಲರಿಗೂ ಹೇಳಿ ಇದನ್ನು ಗ್ರ್ಯಾಂಡ್ ಆಗಿ ಮಾಡಿದ್ದಾನೆ. ಆದೀ ಹಾಗೂ ಕಿಶನ್ ಪೂಜಾ ಬರ್ತ್ ಡೇಯನ್ನು ಮನೆಯಲ್ಲೇ ಗ್ರ್ಯಾಂಡ್ ಆಗಿ ಆಚರಿಸಿ ಆಕೆಗೆ ಸರ್ಪ್ರೈಸ್ ನೀಡಿದ್ದಾರೆ. ಆದರೆ, ಈ ಹುಟ್ಟುಹಬ್ಬದ ಆಚರಣೆಗೆ ತಾಂಡವ್ ಹಾಗೂ ಶ್ರೇಷ್ಠಾ ಕೂಡ ಬಂದಿದ್ದಾರೆ. ಇಲ್ಲಿ ಜಗಳ ನಡೆದು ಎಲ್ಲರ ಮುಂದೆಯೇ ತಾಂಡವ್ನ ಕೆನ್ನೆಗೆ ಬಾರಿಸಿದ್ದಾಳೆ ಭಾಗ್ಯ.
ಮೊದಲು ಈ ಪಾರ್ಟಿಗೆ ಭಾಗ್ಯ ನಾವು ಯಾರೂ ಬರುವುದಿಲ್ಲೆ ಎಂದು ಆದೀ ಬಳಿ ಹೇಳಿದ್ದಳು. ನಮ್ಮ ಪೂಜಾನ ಕೊಟ್ಟಿರೊ ಮನೆ ಅದು.. ಪದೇ ಪದೇ ನಾವು ಅಲ್ಲಿಗೆ ಹೋಗೋದು ಸರಿ ಇರಲಿಲ್ಲ.. ಹಾಗೆ ಹೋಗೋಕೆ ಶುರು ಮಾಡಿದ್ರೆ ಜನ ಏನೇನೋ ಮಾತನಾಡಿ ಕೊಳ್ಳುತ್ತಾರೆ.. ಪೂಜಾಗೆ ವಿಶ್ ಮಾಡಿದ್ವಿ ಅಲ್ವಾ ಅಷ್ಟೇ ಸಾಕು ಎಂದು ಭಾಗ್ಯ ಹೇಳಿದ್ದಾಳೆ. ಬಳಿಕ ಆದೀಯೇ ಸ್ವತಃ ಭಾಗ್ಯ ಮನೆಗೆ ಬಂದು ಪಾರ್ಟಿಗೆ ಬರಲೇಬೇಕು ಎಂದು ಹೇಳಿದ್ದಾನೆ. ಹೀಗಾಗಿ ಮನೆಯವರೆಲ್ಲರೂ ಈ ಪಾರ್ಟಿಗೆ ಬಂದಿದ್ದಾರೆ.
ಇದೇ ಪಾರ್ಟಿಗೆ ಆದೀಶ್ವರ್ ತನ್ನ ಬ್ಯುಸಿನೆಸ್ ಪಾರ್ಟ್ನರ್ ತಾಂಡವ್ನನ್ನೂ ಕರೆದಿದ್ದಾನೆ. ಆದೀಗೆ ಆತ ಭಾಗ್ಯಳ ಗಂಡ ಎನ್ನುವುದು ಗೊತ್ತಿಲ್ಲ. ತಾಂಡವ್ಗೂ ಪೂಜಾ ಇವನ ಮನೆಯ ಸೊಸೆಯಾಗಿ ಹೋಗಿದ್ದಾಳೆ ಎನ್ನುವುದು ತಿಳಿದಿಲ್ಲ. ಆದರೆ ಪೂಜಾಳ ಹುಟ್ಟುಹಬ್ಬಕ್ಕೆ ಆದೀ ತಾಂಡವ್ನ ಕರೆದುಬಿಟ್ಟಿದ್ದಾನೆ. ತಾಂಡವ್ ಬಂದಾಗ ಅವನಿಗೆ ಪೂಜಾಳನ್ನು ನೋಡಿ ಶಾಕ್ ಆಗಿದೆ. ಅಲ್ಲಿ ಭಾಗ್ಯಳನ್ನು ನೋಡಿ ಮತ್ತಷ್ಟು ಉರಿ ಹೊತ್ತಿಕೊಂಡಿದೆ.
ಪೂಜಾ ಇಷ್ಟು ದೊಡ್ಡ ಮನೆಯ ಸೊಸೆಯಾಗಿ ಹೋಗಿರುವುದು ಆತನಿಗೆ ಸಹಿಸಲು ಆಗಿಲ್ಲ. ಇದೇ ಕಾರಣಕ್ಕೆ ಭಾಗ್ಯಾ ಎದುರು ಸಿಕ್ಕಾಗ ಟಾಂಟ್ ಕೊಟ್ಟಿದ್ದಾನೆ. ದೊಡ್ಡವರ ಮನೆಯನ್ನು ಹುಡುಕಿ ಅವರನ್ನು ಬುಟ್ಟಿಗೆ ಹಾಕೋದು, ಅವರ ಮನೆ ಹುಡುಗರನ್ನು ಹುಡುಕಿ ತಂಗಿದೆ ಮದುವೆ ಮಾಡಿಕೊಡುವುದು.. ಇದಕ್ಕೆ ಮೊದಲ ಬಕ್ರಾ ನಾನು.. ಈಗ ಕಿಶನ್.. ಅಕ್ಕ-ತಂಗಿ ಸೇರ್ಕೊಂಡು ಒಬ್ಬರ ಜೀವನ ಹಾಳು ಮಾಡೋಕೆ ಏನು ಬೇಕಾದ್ರು ನಾಟಕ ಮಾಡ್ತೀರಿ ಅಲ್ವಾ ಎಂದಿದ್ದಾನೆ.
ಕೇಳುವಷ್ಟು ಕೇಳಿದ ಭಾಗ್ಯ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡಿದ್ದಾಳೆ. ತಂಗಿಯ ಬಗ್ಗೆ ಮಾತನಾಡಿದಾಗ ಕಂಟ್ರೋಲ್ ಮಾಡಲು ಆಗದ ಭಾಗ್ಯ ತಾಂಡವ್ಗೆ ಎಲ್ಲರ ಮುಂದೆಯೇ ಪಾರ್ಟಿಯಲ್ಲಿ ಕಪಾಳಮೋಕ್ಷ ಮಾಡಿದ್ದಾಳೆ. ಇದನ್ನು ಕನ್ನಿಕಾ ನೋಡಿದ್ದಾಳೆ. ಸಿಕ್ಕಿದ್ದೇ ಚಾನ್ಸ್ ಎಂದು ಕನ್ನಿಕಾ ಆದೀ ಬಳಿ ಹೋಗಿ ಭಾಗ್ಯ ಬಂದ ಗೆಸ್ಟ್ನ ಕಪಾಳಕ್ಕೆ ಹೊಡೆದಿದ್ದಾಳೆ ಎಂದು ಹೇಳಿದ್ದಾಳೆ. ಸದ್ಯ ಧಾರಾವಾಹಿ ರೋಚಕತೆ ಸೃಷ್ಟಿಸಿದೆ. ಆದೀಗೆ ಭಾಗ್ಯ ಮೇಲೆ ಪ್ರೀತಿ ಮೂಡುವ ಹಂತದಲ್ಲಿ ಇಂಥದ್ದೊಂದು ತಿರುವು ನೀಡಲಾಗಿದೆ. ಅಲ್ಲದೆ ಇದೇ ಪಾರ್ಟಿಯಲ್ಲಿ ತಾಂಡವ್ನೇ ಭಾಗ್ಯಾಳ ಗಂಡ ಎಂಬ ವಿಚಾರ ಆದೀಗೆ ಗೊತ್ತಾಗುತ್ತ ಎಂಬುದು ನೋಡಬೇಕಿದೆ.
Nee Iralu Jotheyalli: ರಜಿನಿ ಫ್ಯಾನ್ಸ್ಗೆ ಗುಡ್ ನ್ಯೂಸ್: ಹೊಸ ಸೀರಿಯಲ್ ಆ. 11 ರಿಂದ ಪ್ರಾರಂಭ