ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಶ್ರೇಷ್ಠಾ ಮಾಡಿರೋ ಮಾಸ್ಟರ್ ಪ್ಲ್ಯಾನ್​ಗೆ ಬಲಿಯಾಗ್ತಾಳ ಭಾಗ್ಯ?

ಭಾಗ್ಯಾಳನ್ನು ಹೇಗಾದರು ಮಾಡಿ ಸೋಲಿಸಬೇಕೆಂದು ಇಬ್ಬರೂ ಪಣತೊಟ್ಟಿದ್ದಾರೆ. ತನ್ಮಯ್ನ ಸ್ಕೂಲ್ ಫೀಸ್ ಕಟ್ಟಲು ಇಂದು ಕೊನೆಯ ದಿನವಾಗಿದೆ. ಭಾಗ್ಯ ಯಾವುದೇ ಕಾರಣಕ್ಕೂ ಫೀಸ್ ಕಟ್ಟಲ್ಲ.. ಅವಳ ಹತ್ರ ಹಣ ಇಲ್ಲ ಎಂದು ಶ್ರೇಷ್ಠಾ ಹೇಳುತ್ತಾಳೆ. ಹಾಗೊಂದು ವೇಳೆ ಕಟ್ಟಿದರೆ ಅದಕ್ಕೆ ನಾವು ಅಡ್ಡಿಪಡಿಸಬೇಕು ಎಂದು ಪ್ಲ್ಯಾನ್ ಮಾಡಿದ್ದಾರೆ.

ಶ್ರೇಷ್ಠಾ ಮಾಡಿರೋ ಮಾಸ್ಟರ್ ಪ್ಲ್ಯಾನ್​ಗೆ ಬಲಿಯಾಗ್ತಾಳ ಭಾಗ್ಯ?

Bhagya Lakshmi Serial

Profile Vinay Bhat Apr 8, 2025 12:39 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಗೆ ಕೆಡುಕು ಬಯಸಲು ತಾಂಡವ್ ಹಾಗೂ ಶ್ರೇಷ್ಠಾ ನಾನಾ ಪ್ರಯುತ್ನ ಮಾಡುತ್ತಿದ್ದಾರೆ. ಆದರೆ, ಈ ವರೆಗೆ ಇವರು ಮಾಡಿರುವ ಯಾವ ಪ್ಲ್ಯಾನ್ ಕೂಡ ಯಶಸ್ಸು ಕಂಡಿಲ್ಲ. ತನಗೆ ಬಂದ ಕಷ್ಟಗಳನ್ನೆಲ್ಲ ಭಾಗ್ಯ ಧೈರ್ಯದಿಂದ ಎದುರಿಸಿ ಗೆಲುವು ಕಂಡಿದ್ದಾಳೆ. ಈಗ ಭಾಗ್ಯಾಗೆ ಇವರಿಬ್ಬರ ಕಡೆಯಿಂದ ಮತ್ತೊಂದು ದೊಡ್ಡ ಗಂಡಾಂತರ ಗೊತ್ತಿಲ್ಲದೆ ಬಂದೊದಗಿದೆ. ಭಾಗ್ಯಾಳನ್ನು ಸೋಲಿಸಲು ಶ್ರೇಷ್ಠಾ ಒಂದು ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿದ್ದಾಳೆ. ಭಾಗ್ಯಾಳ ಹೊಟ್ಟೆ ತುಂಬಿಸುತ್ತಿರುವ ಕೈ ತುತ್ತು ಮೇಲೆ ಶ್ರೇಷ್ಠಾ-ತಾಂಡವ್ ಕಣ್ಣು ಹಾಕಿದ್ದಾರೆ.

ಭಾಗ್ಯಾಳನ್ನು ಹೇಗಾದರು ಮಾಡಿ ಸೋಲಿಸಬೇಕೆಂದು ಇಬ್ಬರೂ ಪಣತೊಟ್ಟಿದ್ದಾರೆ. ತನ್ಮಯ್​ನ ಸ್ಕೂಲ್ ಫೀಸ್ ಕಟ್ಟಲು ಇಂದು ಕೊನೆಯ ದಿನವಾಗಿದೆ. ಭಾಗ್ಯ ಯಾವುದೇ ಕಾರಣಕ್ಕೂ ಫೀಸ್ ಕಟ್ಟಲ್ಲ.. ಅವಳ ಹತ್ರ ಹಣ ಇಲ್ಲ ಎಂದು ಶ್ರೇಷ್ಠಾ ಹೇಳುತ್ತಾಳೆ. ಹಾಗೊಂದು ವೇಳೆ ಕಟ್ಟಿದರೆ ಅದಕ್ಕೆ ನಾವು ಅಡ್ಡಿಪಡಿಸಬೇಕು ಎಂದು ಪ್ಲ್ಯಾನ್ ಮಾಡಿದ್ದಾರೆ. ಭಾಗ್ಯಾಳಿಗೆ ಒಂದು ಫೋನ್ ಕರೆ ಬರುತ್ತದೆ. ಶ್ರೇಷ್ಠಾ ಗೆಳತಿ ಫೋನ್ ಮಾಡಿ, 200 ಜನಕ್ಕೆ ಊಟಕ್ಕೆ ರೆಡಿ ಮಾಡಿ ಎಂದು ಹೇಳಿದ್ದಾಳೆ. ಮನೆಯಲ್ಲಿ ಫಂಕ್ಷನ್ ಇದೆ, ಹೀಗಾಗಿ ನೀವು ಅಡುಗೆ ಮಾಡಿ ಕೊಡಬೇಕು, ಊಟ ಇಲ್ಲಿ ತಂದು ಕೊಟ್ಟ ಬಳಿಕ ಹಣ ಕೊಡುತ್ತೇನೆ ಎಂದು ಹೇಳಿದ್ದಾಳೆ.

ಭಾಗ್ಯ ಮೊದಲು ಆಗುವುದಿಲ್ಲ ಎಂದು ಹೇಳುತ್ತಾಳೆ. ನಂತರ ಮನೆಯವರ ಒತ್ತಾಯದಿಂದ ಒಪ್ಪಿಕೊಳ್ಳುತ್ತಾಳೆ. ಗುಂಡಣ್ಣನ ಸ್ಕೂಲ್ ಫೀಸ್ ಕಟ್ಟಲು ತೆಗೆದಿರಿಸಿದ ಹಣದಲ್ಲಿ ಅಡುಗೆ ಸಾಮಾಗ್ರಿ ತಂದು ಊಟಕ್ಕೆ ರೆಡಿ ಮಾಡುತ್ತಾಳೆ. ಊಟ ಎಲ್ಲ ರೆಡಿಯಾಗಿ ತಂದುಕೊಡುತ್ತೇನೆ ಎಂದಾಗ ಆರ್ಡರ್ ಕ್ಯಾನ್ಸಲ್ ಮಾಡುವುದು ಶ್ರೇಷ್ಠಾ-ತಾಂಡವ್ ಪ್ಲ್ಯಾನ್ ಆಗಿದೆ.



ಭಾಗ್ಯ ಇದನ್ನು ನಂಬಿ, ಊಟಕ್ಕೆ ರೆಡಿ ಮಾಡಿದ್ದಾಳೆ. ಅತ್ತ ಶ್ರೇಷ್ಠಾ ಮತ್ತು ಅವಳ ಗೆಳತಿ, ಭಾಗ್ಯಳನ್ನು ಹೇಗೆ ಸೋಲಿಸಬಹುದು ಎಂದು ಪ್ಲ್ಯಾನ್ ಮಾಡುತ್ತಿದ್ದಾಳೆ. ತಾಂಡವ್ ಕೂಡ ಅದಕ್ಕೆ ಸಾಥ್ ನೀಡಿದ್ದಾನೆ. ಭಾಗ್ಯಗೆ ಊಟದ ಆರ್ಡರ್ ಕೊಟ್ಟು ಅವಳು ಸ್ಕೂಲ್‌ಗೆ ಹೋಗದಂತೆ ಕೂಡ ತಡೆದಿದ್ದಾರೆ.

ಆದರೆ, ಇಲ್ಲಿ ಟ್ವಿಸ್ಟ್ ಏನೆಂದರೆ ತಾಂಡವ್ ಮರುದಿನ ತನ್ಮಯ್ ಸ್ಕೂಲ್ ಫೀಸ್ ನಾನೇ ಕಟ್ಟುವೆ ಎಂದು ಶಾಲೆಗೆ ತೆರಳಿದ್ದಾನೆ. ಆದರೆ, ಅಲ್ಲಿನ ಪ್ರಾಂಶುಪಾಲರು ಹೇಳಿದ ಮಾತು ಕೇಳಿ ತಾಂಡವ್​ಗೆ ಶಾಕ್ ಆಗುತ್ತಿದೆ. ತನ್ಮಯ್ ಫೀಸ್ ಈಗಾಗಲೇ ಭಾಗ್ಯ ಕಟ್ಟಿ ಆಗಿದೆ ಎಂದು ಅವರು ಹೇಳಿದ್ದಾರೆ. ಇದನ್ನು ಕೇಳಿ ತಾಂಡವ್​ ಆಘಾತಕ್ಕೊಳಗಾಗುತ್ತಾನೆ. ಭಾಗ್ಯ ಹಣವಿಲ್ಲದಿದ್ದರೂ ಹೇಗೆ ಫೀಸ್ ಕಟ್ಟಿದಳು?, ಊಟದ ಆರ್ಡರ್ ಕ್ಯಾನ್ಸಲ್ ಆಗಿದಾ? ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ತಿಳಿದುಬರಬೇಕಿದೆ.

Karna Serial: ಭವ್ಯಾ ಗೌಡ ಬಳಿಕ ಕರ್ಣ ಧಾರಾವಾಹಿಗೆ ಎರಡನೇ ಹೀರೋಯಿನ್ ಎಂಟ್ರಿ: ಯಾರು ನೋಡಿ