Bhagya Lakshmi Serial: ಮಗಳ ಹುಟ್ಟುಹಬ್ಬಕ್ಕೇ ಜೋಕರ್ ವೇಷ ತೊಟ್ಟು ಹಣ ಸಂಪಾದಿಸಿದ ಭಾಗ್ಯಾ
ಭಾಗ್ಯಾ ಜೋಕರ್ ವೇಷ ತೊಟ್ಟು ತನ್ನ ಮಗಳ ಹುಟ್ಟುಹಬ್ಬಕ್ಕೆ ಏನಾದರು ಗಿಫ್ಟ್ ಕೊಡಬೇಕು ಎಂದು ಸಹಪಾಠಿಗಳ ಜೊತೆ ರೆಸಾರ್ಟ್ನಲ್ಲಿ ಡ್ಯಾನ್ಸ್ ಮಾಡುತ್ತಾ ಅತಿಥಿಗಳನ್ನು ರಂಜಿಸುತ್ತಿದ್ದಾಳೆ. ಅಂದು ಅಲ್ಲಿ ಆಯೋಜನೆಯಾಗಿರುವುದು ತನ್ನದೇ ಮಗಳ ಬರ್ತ್‌ಡೇ ಎನ್ನುವುದು ಅವಳ ಗಮನದಲ್ಲಿಲ್ಲ.

bhagya lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಲಾಗುತ್ತದೆ.. ಸದ್ಯ ಧಾರಾವಾಹಿ ಮಹತ್ವದ ಘಟ್ಟಕ್ಕೆ ಬಂದು ನಿಂತಿದ್ದು, ಕೆಲಸ ಕಳೆದುಕೊಂಡಿರುವ ಭಾಗ್ಯಾ ಬೇರೆ ದಾರಿಯಿಲ್ಲದೆ ಜೋಕರ್ ವೇಷ ತೊಟ್ಟು ನೃತ್ಯ ಮಾಡುತ್ತಿದ್ದಾಳೆ. ವಿಪರ್ಯಾಸ ಎಂದರೆ ಭಾಗ್ಯಾ ನೃತ್ಯ ಮಾಡಿ ಹಣ ಸಂಪಾದನೆ ಮಾಡಲು ಹೊರಟಿರುವುದು ಮಗಳ ಬರ್ತ್ ಡೇ ಸೆಲೆಬ್ರೇಷನ್ ಪಾರ್ಟಿಗೆ. ಇದು ಸ್ವತಃ ಭಾಗ್ಯಾಗೆ ಕೂಡ ತಿಳಿದಿರುವುದಿಲ್ಲ.
ಸದ್ಯ ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ರೆಸಾರ್ಟ್ನಲ್ಲಿ ತನ್ವಿ ಬರ್ತ್ ಡೇ ಸೆಲೆಬ್ರೇಷನ್ ಭರ್ಜರಿ ಆಗಿ ನಡೆಯುತ್ತಿದೆ. ತನ್ವಿ, ಕಡು ಗುಲಾಬಿ ಬಣ್ಣದ ಬಾರ್ಬಿ ಉಡುಗೆ ಧರಿಸಿ, ಮಿರ ಮಿರ ಮಿಂಚುತ್ತಿದ್ದಾಳೆ, ರಾಜಕುಮಾರಿ ರೀತಿ ಕಾಣಿಸುತ್ತಿದ್ದಾಳೆ, ಅಂದವಾಗಿ ಸಿಂಗಾರಗೊಂಡು ರೆಡಿಯಾಗಿರುತ್ತಾಳೆ. ಇದೆಲ್ಲವೂ ತಾಂಡವ್ನ ಕೊಡುಗೆ. ಬಂದಿರುವ ಎಲ್ಲ ಅತಿಥಿಗಳು ಕೂಡ ತನ್ವಿ ಹುಟ್ಟುಹಬ್ಬದ ಆಚರಣೆ ಮತ್ತು ಭರ್ಜರಿ ಸಿದ್ಧತೆಯನ್ನು ಕಂಡು ಕೊಂಡಾಡುತ್ತಿದ್ದಾರೆ. ತಾಂಡವ್ ಮತ್ತು ಶ್ರೇಷ್ಠಾಗೆ ಎಲ್ಲರ ಕಡೆಯಿಂದಲೂ ಶಹಬ್ಬಾಸ್ ದೊರೆಯುತ್ತಿದೆ.
ಭಾಗ್ಯಾ ಜೋಕರ್ ವೇಷ ತೊಟ್ಟು ತನ್ನ ಮಗಳ ಹುಟ್ಟುಹಬ್ಬಕ್ಕೆ ಏನಾದರು ಗಿಫ್ಟ್ ಕೊಡಬೇಕು ಎಂದು ಸಹಪಾಠಿಗಳ ಜೊತೆ ರೆಸಾರ್ಟ್ನಲ್ಲಿ ಡ್ಯಾನ್ಸ್ ಮಾಡುತ್ತಾ ಅತಿಥಿಗಳನ್ನು ರಂಜಿಸುತ್ತಿದ್ದಾಳೆ. ಅಂದು ಅಲ್ಲಿ ಆಯೋಜನೆಯಾಗಿರುವುದು ತನ್ನದೇ ಮಗಳ ಬರ್ತ್‌ಡೇ ಎನ್ನುವುದು ಅವಳ ಗಮನದಲ್ಲಿಲ್ಲ. ಅದರ ಸುಳಿವು ಕೂಡ ಆಕೆಗೆ ಸಿಕ್ಕಿಲ್ಲ, ವೇಷ ಧರಿಸಿ ಕುಣಿದು, ದುಡ್ಡು ತೆಗೆದುಕೊಂಡು ಹೋಗಬೇಕು, ಮಗಳ ಹುಟ್ಟುಹಬ್ಬವನ್ನು ಆಚರಿಸಬೇಕು ಎನ್ನುವುದು ಒಂದೇ ಅವಳ ಮನಸ್ಸಿನಲ್ಲಿದೆ.
ಭಾಗ್ಯಾ ಜೋಕರ್ ವೇಷದಲ್ಲಿ ಸಭೆಯ ಮಧ್ಯೆ ಕೇಕ್ ಹಿಡಿದುಕೊಂಡು ಬರುತ್ತಾಳೆ. ಆದರೆ, ಅಲ್ಲಿ ಭಾಗ್ಯಾಗೆ ದೊಡ್ಡ ಆಘಾತ ಕಾದಿರುತ್ತದೆ. ಭಾಗ್ಯಾ ಜೋಕರ್ ವೇಷ ತೊಟ್ಟು ಕೇಕ್ ಕೊಡಲು ಬಂದಿದ್ದು ಬೇರೆ ಯಾರದ್ದೋ ಬರ್ತ್ ಡೇಗೆ ಅಲ್ಲ.. ತನ್ನ ಸ್ವಂತ ಮಗಳ ಹುಟ್ಟುಹಬ್ಬಕ್ಕೆ. ತನ್ವಿ ಹುಟ್ಟುಹಬ್ಬದ ಆಚರಣೆಗೆ ಬಾರ್ಬಿ ಕೇಕ್ ತಯಾರಿಸಲಾಗಿದೆ. ಅದನ್ನು ವೇದಿಕೆಗೆ ತೆಗೆದುಕೊಂಡು ಹೋಗುವಂತೆ ಭಾಗ್ಯ ಮ್ಯಾನೇಜರ್ ಅವಳಿಗೆ ತಿಳಿಸಿದ್ದಾರೆ. ಅದಕ್ಕೆ ಅವಳು ಸರಿ ಎಂದು ಕೇಕ್ ಹಿಡಿದುಕೊಂಡು ವೇದಿಕೆಗೆ ಹೋಗಿದ್ದಾಳೆ.
ಆದರೆ ಹೋಗುವಾಗ ಎಲ್ಲರೂ ಹ್ಯಾಪಿ ಬರ್ತ್‌ಡೇ ಎಂದು ಹೇಳುತ್ತಾ, ಹಾಡುತ್ತಾ ಸಂಭ್ರಮಿಸಿ ಹೋಗುತ್ತಿದ್ದಾರೆ. ಅಷ್ಟರಲ್ಲಿ ಭಾಗ್ಯ, ಕೇಕ್ ಮೇಲೆ ಯಾರ ಹೆಸರು ಇದೆ ಎಂದು ನೋಡಿದ್ದಾಳೆ. ಅದರಲ್ಲಿ ಹ್ಯಾಪಿ ಬರ್ತ್‌ಡೇ ತನ್ವಿ ಎಂದು ಇರುವುದನ್ನು ಕಂಡು ಶಾಕ್‌ಗೆ ಒಳಗಾಗಿದ್ದಾಳೆ. ವೇದಿಕೆಗೆ ಸಾಗುವಾಗ ಅಳುತ್ತಲೇ ಇದ್ದಾಳು. ಮಗಳು ಮತ್ತು ಗಂಡನನ್ನು ನೋಡಿ ಅಲ್ಲೆ ನಿಂತು ಬಿಟ್ಟಳು. ಇದನ್ನ ಕಂಡ ಶ್ರೇಷ್ಠಾ, ನೀವೇಕೆ ಇಲ್ಲಿ ನಿಂತಿದ್ದೀರಿ, ಬದಿಗೆ ಹೋಗಿ ಎಂದು ತಳ್ಳಿದ್ದಾಳೆ.
ಶ್ರೇಷ್ಠಾ ತಳ್ಳಿದ ಪರಿಣಾಮ ಭಾಗ್ಯ ವೇದಿಕೆಯಲ್ಲಿಯೇ ಬಿದ್ದಿದ್ದಾಳೆ. ಅದನ್ನು ಕಂಡು ತನ್ವಿ ಹೋಗಿ, ಅವಳನ್ನು ಎಬ್ಬಿಸಲು ಮುಂದಾಗುತ್ತಾಳೆ. ಆದರೆ, ತನ್ವಿಯನ್ನು ಶ್ರೇಷ್ಠಾ ತಡೆಯುತ್ತಾಳೆ. ಬಳಿಕ ಭಾಗ್ಯಾ ಅಲ್ಲಿಂದ ಎದ್ದು ಹೋಗಿ ರೂಮ್ಗೆ ತೆರಳಿ ಮತ್ತಷ್ಟು ಅಳುತ್ತಾಳೆ. ಕೊನೆಗೆ ತನಗೆ ತಾನೇ ಸಮಾಧಾನ ಮಾಡಿಕೊಂಡು, ತನ್ವಿ ಎಷ್ಟಾದರು ತನ್ನ ಅಪ್ಪನ ಜೊತೆ ತಾನೆ ಬರ್ತ್ ಡೇ ಸೆಲೆಬ್ರೇಟ್ ಮಾಡ್ತಾ ಇರೋದು.. ತಾಂಡವ್ಗೂ ತನ್ನ ಮಗಳ ಮೇಲೆ ಹಕ್ಕಿದೆ.. ಅವರಿಗೂ ಮಗಳು ಖುಷಿಯಿಂದ ಇರಬೇಕು ಎಂಬೂದಿದೆ ಎಂದು ಹೇಳಿ ತಾನೇ ಸಮಾಧಾನ ಮಾಡಿಕೊಳ್ಳುತ್ತಾಳೆ.
ಈ ಎಲ್ಲ ಘಟನೆ ನಡೆದ ಬಳಿಕ ಭಾಗ್ಯಾ ಮಗಳಿಗೆ ಏನಾದರು ಗಿಫ್ಟ್ ಕೊಡಬೇಕು ಎಂದು ಮೊಬೈಲ್ ಶಾಪ್ಗೆ ಹೋಗುತ್ತಾಳೆ. ಆದರೆ ರಾತ್ರಿ ಆಗಿದ್ದರಿಂದ ಅಂಗಡಿ ಬಾಗಿಲು ಮುಚ್ಚಲು ತಯಾರಾಗಿರುತ್ತದೆ. ಅವರನ್ನು ಕರೆದು ರಿಕ್ವೆಸ್ಟ್ ಮಾಡಿ ಒಂದು ಮೊಬೈಲ್ ಕೊಡಿ ಎಂದು ಹೇಳುತ್ತಾಳೆ. ಕೊನೆಗೆ ಅಂಗಡಿಯವರು ಒಂದು ಮೊಬೈಲ್ ತೋರಿಸುತ್ತಾರೆ.. ಭಾಗ್ಯಾಗೂ ಅದು ಇಷ್ಟವಾಗುತ್ತದೆ.
ಆದರೆ, ಅದರ ಬೆಲೆ ಭಾಗ್ಯಾ ಬಜೆಟ್ಗಿಂತ ಜಾಸ್ತಿ ಇರುತ್ತದೆ. ಆದರೂ ಹಾಗೊ ಹೀಗೋ ಹಣ ಎಡ್ಜಸ್ಟ್ ಮಾಡಿಕೊಂಡು ಭಾಗ್ಯಾ ಮೊಬೈಲ್ ಖರೀದಿಸುತ್ತಾಳೆ. ಸದ್ಯ ಕುತೂಹಲ ಎಂದರೆ ಅಷ್ಟುದೊಡ್ಡ ಅದ್ಧೂರಿ ಬರ್ತ್ ಡೇ ಸೆಲೆಬ್ರೇಟ್ ಮಧ್ಯೆ ತನ್ವಿಗೆ ಭಾಗ್ಯಾಳ ಈ ಚಿಕ್ಕ ಮೊಬೈಲ್ ಗಿಫ್ಟ್ ಕಾಣಿಸುತ್ತಾ?, ಭಾಗ್ಯಾಳ ಪ್ರೀತಿಯ ಗಿಫ್ಟ್ ಕಂಡು ತನ್ವಿ ರಿಯಾಕ್ಷನ್ ಹೇಗಿರುತ್ತೆ ಎಂಬುದು ಮುಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.
Hanumantha Lamani: ಬಿಗ್ ಬಾಸ್ ವಿನ್ನರ್ ಹನುಮಂತ ರಾಜಕೀಯಕ್ಕೆ ಎಂಟ್ರಿ?: ವೈರಲ್ ಆಗ್ತಿದೆ ಆಡಿಯೋ