Bhagya Lakshmi Serial: ತಾಂಡವ್ನ ನೋಡಿ ಬದಲಾದ ಸುನಂದ, ಕುಸುಮಾ: ಭಾಗ್ಯಾಗೆ ಹೊಸ ಟೆನ್ಶನ್
ತಾಂಡವ್ ಮಾಡಿದ ಪ್ಲ್ಯಾನ್ಗೆ ಕುಸುಮಾ ಮತ್ತು ಸುನಂದಾ ಬಿದ್ದಂತೆ ಕಾಣುತ್ತಿದೆ. ಇದನ್ನ ಭಾಗ್ಯಾ ಹೇಗೆ ಬಯಲಿಗೆಳೆಯುತ್ತಾಳೆ ಎಂಬುದು ಕುತೂಹಲ ಕೆರಳಿಸಿದೆ.


ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi Serial) ಹೊಸ ತಿರುವು ಪಡೆದುಕೊಂಡಿದ್ದು, ಮನೆಬಿಟ್ಟು ಹೋಗಿದ್ದ ತಾಂಡವ್ ಮತ್ತೆ ಮನೆಗೆ ಬಂದಿದ್ದಾನೆ. ಶ್ರೇಷ್ಠಾ ಜೊತೆ ಮನೆಬಿಟ್ಟು ಹೊರಬಂದ ಎರಡೇ ದಿನಕ್ಕೆ ತಾಂಡವ್ ಮತ್ತೆ ಮನೆಯ ಗೂಡು ಸೇರಿದ್ದಾನೆ. ತಂದೆ ಕಾಲು ಹಿಡಿದು ಕ್ಷಮೆ ಕೇಳಿದ್ದಾನೆ ತಾಂಡವ್. ಆದರೆ, ಇದರಲ್ಲಿ ಯಾವುದೊ ಹೊಸ ಪ್ಲ್ಯಾನ್ ಇದ್ದಂತೆ ಕಾಣುತ್ತಿದೆ. ಭಾಗ್ಯಾ ಒಬ್ಬಳೆ ಇರುವಾಗ ಅವಳ ಬಳಿ ಬಂದು ಚಾಲೆಂಜ್ ಕೂಡ ಮಾಡಿದ್ದಾನೆ. ಆದರೆ, ಭಾಗ್ಯಾಳ ಅಮ್ಮ ಸುನಂದ ಹಾಗೂ ಅತ್ತೆ ಕುಸುಮಾಗೆ ಈ ತಾಂಡವ್ ಪ್ಲ್ಯಾನ್ ಅರ್ಥ ಆಗುತ್ತಿಲ್ಲ. ಇವನು ನಿಜವಾಗಿಯೂ ಬದಲಾಗಿ ವಾಪಾಸ್ ಮನೆಗೆ ಬಂದಿದ್ದಾನೆ ಎಂದು ಅಂದುಕೊಂಡಿದ್ದಾರೆಎ.
ತಾಂಡವ್ ಲಗ್ಗೇಜ್ ಸಹಿತ ಮನೆಗೆ ಬಂದಿದ್ದನ್ನು ಕಂಡು ಕುಸುಮಾ ಹಾಗೂ ಸುನಂದಾಗೆ ತುಂಬಾ ಸಂತೋಷವಾಗುತ್ತದೆ. ಅಪ್ಪನ ಕಾಲಿಗೆ ಬಿದ್ದು ತಾಂಡವ್ ಕ್ಷಮೆ ಕೂಡ ಕೇಳುತ್ತಾನೆ. ಆದ್ರೆ ತಂದೆಗೆ ಮಗನ ಬುದ್ದಿ ತಿಳಿದಿರುವ ಕಾರಣ, ಹೇ.. ತಾಂಡವ್ ಯಾಕೆ ಹೀಗೆ ಮಾಡ್ತಾ ಇದ್ದೀಯಾ?, ನನ್ ಕಾಲು ಮುಟ್ಟಬೇಡ ನೀನು.. ನನ್ನ ಅಪ್ಪ ಅಂತ ಕರಿಬೇಡ.. ಎಂದು ದೂರ ಹೋಗುತ್ತಾರೆ. ಬಳಿಕ ಮಕ್ಕಳ ಬಳಿ ಬಂದು ಅವರನ್ನು ತನ್ನತ್ತ ಸೆಳೆಯಲು ಮುಂದಾಗುತ್ತಾನೆ. ಆದರೆ, ಅವರು ಕೂಡ ದೂರ ಹೋಗುತ್ತಾರೆ.
ಇಮಕ್ಕಳ ಬಳಿ ಬಂದು ತಬ್ಬಿಕೊಂಡ ತಾಂಡವ್, ನನ್ಗೆ ಸಿಕ್ಕಾಪಟ್ಟೆ ಖುಷಿ ಕೊಡು ಹೆಲ್ಪ್ ನೀವು ಮಾಡಬೇಕು ಎನ್ನುತ್ತಾನೆ. ಇದಕ್ಕೆ ಮಕ್ಕಳು ಅದೇನು ಅಂತ ಹೇಳಿ.. ನೀವು ನಮಿಗೋಸ್ಕರ ಶಾಪಿಂಗ್ ಕರ್ಕೊಂಡು ಹೋದ್ರೆ ಅದೇನು ಬೇಕಿದ್ರೂ ಮಾಡ್ತೀವಿ ಎನ್ನುತ್ತಾರೆ. ಆಗ ತಾಂಡವ್, ನೀವು ಇನ್ಮುಂದೆ ಅಮ್ಮನ ಜೊತೆ ಇರಲ್ಲ ನನ್ನ ಜೊತೆ ಇರ್ತೀನಿ ಅಂತ ಹೇಳ್ಬೇಕು ಅಥವಾ ನೀವು ಅಮ್ಮನ್ನ ಈ ಮನೆ ಬಿಟ್ಟು ಓಡಿಸಬೇಕು ಎಂದು ಹೇಳಿದ್ದಾನೆ. ಇದನ್ನು ಕೇಳಿ ತಾಂಡವ್ ತಂದೆಗೆ ಕೋಪ ಬಂದಿದೆ.
ಮಕ್ಕಳು ಸೀದಾ ಅಮ್ಮನ ಬಳಿ ಓಡಿ ಬಂದು, ಅಮ್ಮನ ಬಿಟ್ಟು ನಾವು ಯಾರ ಜೊತೆನೂ ಇರಲ್ಲ.. ನಮ್ಮನ್ನ ನೀವು ಹೊರಗಡೆ ಕರ್ಕೊಂಡು ಹೋಗೋದು ಬೇಡ.. ನನ್ಗೆ ನೀವು ಬೇಡ.. ನಿಮ್ ಶಾಪಿಂಗ್ ಬೇಡ.. ನಮ್ಗೆ ಅಮ್ಮ ಇದ್ರೆ ಸಾಕು.. ಅಮ್ಮನ ಮುಂದೆ ನಮ್ಗೆ ಯಾವುದೀ ಇಂಪಾರ್ಟೆಂಟ್ ಅಲ್ಲ ಎಂದು ತಾಂಡವ್ಗೆ ಮುಖಕ್ಕೆ ಹೊಡೆದಂಗೆ ಹೇಳುತ್ತಾರೆ. ಅತ್ತ ತಾಂಡವ್ ತಂದೆ, ಕೊನೆ ಸಲ ಹೇಳ್ತಾ ಇದ್ದೇನೆ ನಿನ್ಗೆ.. ನಮಿಗೆ ಯಾವತ್ತಿದ್ರೂ ಭಾಗ್ಯಾನೇ ಮುಖ್ಯ. ನಮ್ಮಿಂದ ಭಾಗ್ಯಾನಾ.. ಭಾಗ್ಯನಿಂದ ನಮ್ಮನ್ನ ಯಾವತ್ತೂ ಯಾರಿಂದಲೂ ದೂರ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ.
ಇದು ತಾಂಡವ್ನ ಹೊಸ ಪ್ಲ್ಯಾನ್ ಎಂಬುದು ಕುಸುಮಾ ಮತ್ತು ಸುನಂದಾಗೆ ಮಾತ್ರ ಅರ್ಥವಾಗುತ್ತಿಲ್ಲ. ಸುನಂದ ಅವರು ಭಾಗ್ಯಾ ಬಳಿ ಬಂದು, ಹೋಗು ಊಟಕ್ಕೆ ರೆಡಿ ಮಾಡು ಎಂದು ಹೇಳುತ್ತಾರೆ. ಅದಕ್ಕೆ ಭಾಗ್ಯಾ ಇಷ್ಟು ಬೇಗ ಬೇಡ ಅತ್ತೆ-ಮಾಗ ಮಾತ್ರೆ ತೆಗೊಂಡಿದ್ದಾರಷ್ಟೆ.. ಅವ್ರು ಮಾತ್ರೆ ತಂದು 15-20 ನಿಮಿಷ ಕಳಿಬೇಕು ಎಂದು ಹೇಳುತ್ತಾಳೆ. ಆಗ ಸುನಂದ, ನಾನು ನಿನ್ನ ಹತ್ತೆ-ಮಾವನ ಬಗ್ಗೆ ಮಾತಾಡ್ತಿಲ್ಲ.. ನಾನು ನಿನ್ನ ಗಂಡನ ಬಗ್ಗೆ ಮಾತಾಡ್ತಾ ಇದ್ದೇನೆ.. ಪಾಪಾ ಆಫೀಸಿಂದ ನೇರವಾಗಿ ಮನೆಗೆ ಬಂದಿದ್ದಾರೆ, ಆ ಶ್ರೇಷ್ಠಾ ಏನೂ ಅಡಿಗೆ ಮಾಡಿರಲ್ಲ.. ಎಷ್ಟು ಹಸಿವಾಗಿರುತ್ತೊ ಏನೋ ಅದಿಕೆ ಊಟಕ್ಕೆ ತಯಾರು ಮಾಡು ಅಂದಿದ್ದು. ನಿನ್ನ ಅತ್ತೆ-ಮಾವ ಅವ್ರ ಟೈಮ್ಗೆ ಬರ್ತಾರೆ ಎಂದು ಹೇಳಿದ್ದಾರೆ.
ಆಗ ಕುಸುಮಾ ಬಂದು, ಏನು ಅಮ್ಮ-ಮಗಳದ್ದು ಚರ್ಚೆ ಎಂದು ಕೇಳುತ್ತಾಳೆ. ಭಾಗ್ಯಾ ವಿಚಾರ ತಿಳಿಸಿದಾಗ, ಹೌದು ಭಾಗ್ಯಾ ಸುನಂದ ಸರಿಯಾಗೆ ಹೇಳಿದ್ದಾಳೆ. ಪಾಪಾ ಹಸಿವುಕೊಂಡು ಬಂದರ್ತಾನೆ ಅವ್ನು.. ನೀನು ಬೇಗ ಬೇಗ ಊಟಕ್ಕೆ ರೆಡಿ ಮಾಡು.. ನಾನು ಮಾವಾನ ಮತ್ತು ತಾಂಡವ್ನ ಕರಿತೀನಿ ಎಂದು ಹೇಳುತ್ತಾರ. ಆಗ ಭಾಗ್ಯಾ, ಅಲ್ಲ ಅತ್ತೆ ನೀವು ಈಗ ತಾನೆ ಮಾತ್ರೆ ತೆಗೊಂಡಿದ್ದೀರಿ.. 15 ನಿಮಿಷ ಕಳುಬೇಕು ಅಲ್ವಾ ಊಟ ಮಾಡೋಕೆ ಎಂದಿದ್ದಾಳೆ. ಅದಕ್ಕೆ ಕುಸುಮಾ, ಅಯ್ಯೋ ಬಿಡು ಭಾಗ್ಯಾ.. ಮಗನಿಗೋಸ್ಕರ ಒಂದುಹೊತ್ತು ಬೇಗ ಊಟ ಮಾಡಿದ್ರೆ ಏನೂ ಆಗಲ್ಲ ಎನ್ನುತ್ತಾಳೆ. ಒಟ್ಟಾರೆ ತಾಂಡವ್ ಮಾಡಿದ ಪ್ಲ್ಯಾನ್ಗೆ ಕುಸುಮಾ ಮತ್ತು ಸುನಂದಾ ಬಿದ್ದಂತೆ ಕಾಣುತ್ತಿದೆ. ಇದನ್ನ ಭಾಗ್ಯಾ ಹೇಗೆ ಬಯಲಿಗೆಳೆಯುತ್ತಾಳೆ ಎಂಬುದು ಕುತೂಹಲ ಕೆರಳಿಸಿದೆ.