ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss 19: ಬಿಗ್‌ಬಾಸ್‌ ವೇದಿಕೆ ಮೇಲೆಯೇ ಕಣ್ಣೀರಿಟ್ಟ ಸಲ್ಮಾನ್‌ ಖಾನ್!‌ ಅಷ್ಟಕ್ಕೂ ಆಗಿದ್ದೇನು?

Salman Khan: ನಟ ಸಲ್ಮಾನ್‌ ಖಾನ್‌ ಸಾರಥ್ಯದಲ್ಲಿ ʻಬಿಗ್‌ ಬಾಸ್‌ ಸೀಸನ್‌ 19ʼ ಈಗಾಗಲೇ ಆರಂಭವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೇ ರಿಯಾಲಿಟಿ ಶೋ ನ ಕಂಟೆಸ್ಟೆಂಟ್ ಆದ ನಟಿ ಕುನಿಕಾ ಸದಾನಂದ್ ಅವರು ಸ್ಪರ್ಧಿಯಾಗಿ ತಮ್ಮ ವೈಯಕ್ತಿಕ ವಿಚಾರದಿಂದ ಭಾರೀ ಸದ್ದು ಮಾಡುತ್ತಿದ್ದಾರೆ. ಈ ವಾರದ ವೀಕೆಂಡ್ ಶೋನಲ್ಲಿ ನಟಿ ಕುನಿಕಾ ಅವರ ಪುತ್ರ ಅಯಾನ್ ಲಾಲ್ ಅವರು ತಮ್ಮ ತಾಯಿಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಇದನ್ನು ಕೇಳಿ ನಟ ಸಲ್ಮಾನ್ ಖಾನ್ ಕೂಡ ಕಣ್ಣೀರು ಹಾಕಿದ್ದು ಇಡೀ ಬಿಗ್ ಬಾಸ್ ಶೋ ಭಾವನಾತ್ಮಕ ಕ್ಷಣ ಸೆರೆಹಿಡಿದಂತಿತ್ತು.

ಬಿಗ್‌ಬಾಸ್‌ ವೇದಿಕೆ ಮೇಲೆಯೇ ಕಣ್ಣೀರಿಟ್ಟ ಸಲ್ಮಾನ್‌ ಖಾನ್!‌

-

Profile Pushpa Kumari Sep 7, 2025 2:37 PM

ನವದೆಹಲಿ: ಭಾರತೀಯ ಸಿನಿಮಾ ರಂಗದಲ್ಲಿ 80-90ರ ದಶಕದ ಬಾಲಿವುಡ್‌ನ ಜನಪ್ರಿಯ ನಟಿ ಯಾಗಿ ಗುರುತಿಸಿಕೊಂಡ ಕುನಿಕಾ ಸದಾನಂದ್ (Kunickaa Sadanand) ಅವರು ಆ ಕಾಲದಲ್ಲೇ ಬಹಳ ಖ್ಯಾತಿ ಪಡೆದಿದ್ದರು‌‌. ಜವಾನಿ ಫಿರ್ ನಹಿ ಅನಿ, ಭೌರಿ, ಮೇರಿ ಬೀಬಿ ಕಾ ಜವಾಬ್ ನಹಿ ಸೇರಿ ದಂತೆ ಅನೇಕ ಸಿನಿಮಾದಿಂದ ಪ್ರಸಿದ್ಧ ಪಡೆದ ನಟಿಯಾಗಿದ್ದಾರೆ. ಬಳಿಕ ಗಾಯನ ಹಾಗೂ ಟೆಲಿ ವಿಷನ್ ರಿಯಾಲಿಟಿ ಶೋ ಮೂಲಕ ಇವರು ಮನೆಮಾತಾಗಿದ್ದರು. ಸದ್ಯ ಅವರು ಬಾಲಿವುಡ್ ಜನ ಪ್ರಿಯ ರಿಯಾಲಿಟಿ ಶೋ ಎಂದು ಖ್ಯಾತಿ ಪಡೆದಿರುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ನಟ ಸಲ್ಮಾನ್‌ ಖಾನ್‌ ಸಾರಥ್ಯದಲ್ಲಿ ʻಬಿಗ್‌ ಬಾಸ್‌ ಸೀಸನ್‌ 19ʼ ಈಗಾಗಲೇ ಆರಂಭವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೇ ರಿಯಾಲಿಟಿ ಶೋ ನ ಕಂಟೆಸ್ಟೆಂಟ್ ಆದ ನಟಿ ಕುನಿಕಾ ಸದಾನಂದ್ ಅವರು ಸ್ಪರ್ಧಿಯಾಗಿ ತಮ್ಮ ವೈಯಕ್ತಿಕ ವಿಚಾರದಿಂದ ಭಾರೀ ಸದ್ದು ಮಾಡುತ್ತಿದ್ದಾರೆ. ಈ ವಾರದ ವೀಕೆಂಡ್ ಶೋನಲ್ಲಿ ನಟಿ ಕುನಿಕಾ ಅವರ ಪುತ್ರ ಅಯಾನ್ ಲಾಲ್ ಅವರು ತಮ್ಮ ತಾಯಿಯ ಬಗ್ಗೆ ಭಾವನಾತ್ಮಕವಾಗಿ ಮಾತ ನಾಡಿದ್ದಾರೆ. ಇದನ್ನು ಕೇಳಿ ನಟ ಸಲ್ಮಾನ್ ಖಾನ್ ಕೂಡ ಕಣ್ಣೀರು ಹಾಕಿದ್ದು ಇಡೀ ಬಿಗ್ ಬಾಸ್ ಶೋ ಭಾವನಾತ್ಮಕ ಕ್ಷಣ ಸೆರೆಹಿಡಿದಂತಿತ್ತು.

ಬಿಗ್ ಬಾಸ್ ಸೀಸನ್ 19 ರ ವೀಕೆಂಡ್ ಕಾ ವಾರ್ ಕಾರ್ಯಕ್ರಮದಲ್ಲಿ ಈ ಭಾರೀ ಕೂಡ ನಟ ಸಲ್ಮಾನ್ ಖಾನ್ ಅವರು ಸ್ಪರ್ಧಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ.ಈ ವೇಳೆ ನಟ ಸಲ್ಮಾನ್ ಖಾನ್ ಅವರು ಈ ವಾರದಲ್ಲಿ ನಡೆದ ಅನೇಕ ವಿಚಾರದ ಬಗ್ಗೆ ಪ್ರಶ್ನಿಸಿದ್ದಾರೆ. ಬಳಿಕ ಸ್ಪರ್ಧಿ ಕುನಿಕಾ ಸದಾನಂದ್ ಅವರನ್ನು ಕೂಡ ಪ್ರಶ್ನೆ ಮಾಡಿದ್ದು ಈ ವೇಳೆ ತನ್ನ ಮಗ ಅಯಾನ್ ಲಾಲ್ ಜೊತೆ ಮಾತನಾಡಲು ಅವಕಾಶ ನೀಡಿದ್ದಾರೆ. ತನ್ನ ತಾಯಿಯ ಜೀವನದ ಹೋರಾಟದ ಬಗ್ಗೆ ನಟ ಅಯಾನ್ ಕೂಡ ಮನಬಿಚ್ಚಿ ಮಾತನಾಡಿದ್ದು ಇದನ್ನು ಕೇಳಿ ಸ್ವತಃ ಸಲ್ಮಾನ್ ಖಾನ್ ಅವರೆ ದುಃಖಿತರಾಗಿದ್ದಾರೆ

ಅಯಾನ್ ತನ್ನ ತಾಯಿಯ ಬಗ್ಗೆ ಹೃದಯಸ್ಪರ್ಶಿ ಮಾತುಗಳನ್ನಾಡಿ, ಬಿಗ್ ಬಾಸ್ ಗೆ ಸ್ಪರ್ಧಿ ಯಾದ ಕುರಿತು ನಮಗೆಲ್ಲ ಬಹಳ ಹೆಮ್ಮೆ ಇದೆ. ಇಡೀ ಹಿಂದೂಸ್ಥಾನವೇ ಈಗ ನಿನ್ನನ್ನು ನೋಡುತ್ತಿದೆ ಅಮ್ಮ.... ನನ್ನ ಮೊಮ್ಮಕ್ಕಳು, ನಾನು, ನಿನ್ನ ಹಿರಿಯ ಮಗ, ಪ್ರತಿಯೊಬ್ಬರೂ ನಿನ್ನನ್ನು ಕಂಡು ಬಹಳ ಹೆಮ್ಮೆ ಪಡುತ್ತಿದ್ದೇವೆ. ನೀನು ವಕೀಲೆಯಾಗಿ ಸಹಾಯ ಮಾಡಿದ ಎಲ್ಲ ಸಮಾಜ ಈಗ ನಿನ್ನನ್ನು ನೆನೆಯುತ್ತಿದೆ. ನಾನು ಇಂದು ಏನೇ ಆಗಿದ್ದರೂ, ಅದು ನಿನ್ನಿಂದಲೇ.. ನಿನ್ನನ್ನು ತಾಯಿಯಾಗಿ ಪಡೆದ ಜಗತ್ತಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ನಾನು, ನೀನು ಯಾವುದೇ ವಿಚಾರಕ್ಕೂ ಕುಗ್ಗಬೇಡ... ಜಗತ್ತಿನ ಬಲಶಾಲಿಯಾಗಿ ವ್ಯಕ್ತಿ ನೀನು...ನಿನಗೆ ಇಡೀ ಸಮಾಜದ ಬೆಂಬಲವಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:Hello 123 Movie: ʼಹಲೋ 123' ಮೂಲಕ ಸ್ಯಾಂಡಲ್‌ವುಡ್‌ಗೆ ಭುವನ್‌ ಪೊನ್ನಣ್ಣ ರೀ ಎಂಟ್ರಿ; ಯೋಗರಾಜ್‌ ಭಟ್‌ ಸಾಥ್‌

ನೀನು ನಿನ್ನ ತಂದೆಗಾಗಿ, ನಂತರ ನಿನ್ನ ಗಂಡನಿಗಾಗಿ ಮತ್ತು ನಿನ್ನ ಮಕ್ಕಳಿಗಾಗಿ ಇಷ್ಟು ವರ್ಷ ಬದುಕಿದ್ದೀಯ - ಈಗ ನಿನಗಾಗಿ ನೀನು ಬದುಕುವ ಸಮಯ ಬಂದಿದೆ. ನಿನಗೆ 62 ವರ್ಷ ಆಗಿದೆ ಎಂಬ ಅಂಜಿಕೆ ಬೇಡ. ನೀನಗಿರುವ ಧೈರ್ಯ ಸಾಮರ್ಥ್ಯದ ಬಗ್ಗೆ ಕೆಲ ವರಿಗೆ ತಿಳಿಯ ದಿರಬಹುದು. ಆದರೆ ನಿನ್ನ ಆಪ್ತರ ಪಾಲಿಗೆ ನೀನೊಂದು ಬಲಶಾಲಿಯಂತಿರುವೆ ಯಾವುದಕ್ಕೂ ಕುಗ್ಗದೆ ಮುನ್ನಡೆ ಬೇಕು ಅಮ್ಮ ಎಂದಿದ್ದಾರೆ. ಬಳಿಕ ತನ್ನ ತಾಯಿಯ ವೃತ್ತಿಜೀವನದ ಬಗ್ಗೆ ಮಾತನಾಡಿ, ನನ್ಮ ತಾಯಿಯು ತನ್ನ ಸಹೋದರನಿಗಾಗಿ ಸುದೀರ್ಘ ಹೋರಾಟ ಮಾಡಿ ತನ್ನ ವೃತ್ತಿ ಜೀವನವನ್ನು ಕೂಡ ತ್ಯಾಗ ಮಾಡಿದ್ದಾರೆ ಎಂದು ಅವರು ಹೇಳಿದರು.

ನಟಿ ಕುನಿಕಾ ಸದಾನಂದ ಅವರ ಬಗ್ಗೆ ಬಿಗ್ ಬಾಸ್ ಸಹ ಸ್ಪರ್ಧಿ ಫರ್ಹಾನಾ ಅವರು "ಫ್ಲಾಪ್ ನಟಿ" ಎಂದು ಕರೆದಿದ್ದರು. ಅವರ ಮಕ್ಕಳ ಬಗ್ಗೆ ಕೂಡ ಪರೋಕ್ಷವಾಗಿ ಹೇಳಿಕೆ ನೀಡಿದ್ದರು. ಇದಾದ ಬಳಿಕ ಸಲ್ಮಾನ್ ಖಾನ್ ವೀಕೆಂಡ್ ಮಾತುಕತೆಯಲ್ಲಿಯೂ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ನಟ ಸಲ್ಮಾನ್ ಖಾನ್ ಅವರು ಅಯಾನ್ ಅವರಿಗೆ ಫರ್ಹಾನಾ ಜೊತೆ ನೇರವಾಗಿ ಮಾತನಾಡಲು ಅವಕಾಶ ನೀಡಿದ್ದಾರೆ. ಕೊನೆಗೆ ನಟ ಸಲ್ಮಾನ್ ಮಾತನಾಡಿ, ಯಾರನ್ನಾದರೂ ಹೆಸರು ಹೇಳಿ ಅವರ ಜೀವನ ಪ್ರಯಾಣವನ್ನು ಅಲ್ಲೆಗೆಳೆಯಬೇಡಿ ಎಂದು ಎಲ್ಲ ಸ್ಪರ್ಧಿಗಳಿಗೆ ಸೂಚನೆ ಕೂಡ ನೀಡಿದರು.