Bhagya Lakshmi Serial: ಭಾಗ್ಯ ಫ್ಯಾಮಿಲಿ ಮುಂದೆ ಮಂಡಿಯೂರಿ ಕ್ಷಮೆ ಕೇಳಿದ ಆದೀಶ್ವರ್ ಕಾಮತ್
ಭಾಗ್ಯ ಮನೆಯವರಿಗೆ ದುಡ್ಡು ಮುಖ್ಯ ಅಲ್ಲ ಎಂಬ ಅರಿವು ಆದೀಗೆ ಬಂದಿದೆ. ಭಾಗ್ಯಾನ ಮೇಲೆ ಅನುಮಾನ ಪಟ್ಟು ನಾನು ತಪ್ಪು ಮಾಡಿದೆ.. ನನ್ನ ಜೀವನದಲ್ಲಿ ಆಗಿರುವ ಕಹಿ ಅನುಭವದಿಂದ ಇಂತಹ ಸಂಸ್ಕಾರವಂತ ಕುಟುಬಂದ ಮೇಲೆ ಅನುಮಾನ ಪಟ್ಟೆ ಎಂದು ಅಂದುಕೊಂಡಿದ್ದಾನೆ. ಅಲ್ಲದೆ ಈ ಮದವೆ ನಿಲ್ಲಬಾರದು ಎಂದು ಭಾಗ್ಯಾ ಫ್ಯಾಮಿಲಿ ಮುಂದೆ ಮಂಡಿಯೂರಿ ಕ್ಷಮೆ ಕೇಳಿದ್ದಾನೆ.

Bhagya lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯಾ ತಂಗಿ ಪೂಜಾ ಕಲ್ಯಾಣೋತ್ಸವದಲ್ಲಿ ದೊಡ್ಡ ಟ್ವಿಸ್ಟ್ ನೀಡಲಾಗಿದೆ. ಮೀನಾಕ್ಷಿ-ಕನ್ನಿಕಾ ಪ್ಲ್ಯಾನ್ ಏನು ಎಂಬುದು ಭಾಗ್ಯಾಗೆ ತಿಳಿದಿದ್ದು, ಇದರಿಂದ ಈ ಮದಿವೆಯನ್ನೇ ಭಾಗ್ಯ ಕ್ಯಾನ್ಸಲ್ ಮಾಡಿದ್ದಾಳೆ. ನನ್ನ ತಂಗಿ ಆ ಮನೆಗೆ ಸೊಸೆಯಾಗಿ ಹೋದರೆ ಅವಳು ಖುಷಿಯಾಗಿ ಇರುವುದಿಲ್ಲ ಎಂದು ಭಾಗ್ಯ ಹೇಳಿದ್ದಾಳೆ. ಮತ್ತೊಂದೆಡೆ ಭಾಗ್ಯಾ ಫ್ಯಾಮಿಲಿಯನ್ನು ಇಷ್ಟು ದಿನ ತಪ್ಪಾಗಿ ಅರ್ಥಹಿಸಿದ್ದ ಆದೀಶ್ವರ್ ಕಾಮತ್ಗೆ ಈಗ ತನ್ನ ತಪ್ಪಿನ ಅರಿವಾಗಿದೆ. ಇದಕ್ಕಾಗಿ ಭಾಗ್ಯ ಕುಟುಂಬದ ಮುಂದೆ ಮಂಡಿಯೂರಿ ಕ್ಷಮೆ ಕೇಳಿದ್ದಾನೆ.
ಈ ಮದುವೆಯನ್ನು ಹೇಗಾದರು ನಿಲ್ಲಿಸ ಬೇಕೆಂದು ಮೀನಾಕ್ಷಿ-ಕನ್ನಿಕಾ ಈ ಹಿಂದೆ ಮಾಡಿದ ಎಲ್ಲ ಪ್ಲ್ಯಾನ್ ಫಾಫ್ ಆಯಿತು. ಭಾಗ್ಯಾಳನ್ನು ಎಮೋಷನ್ ಆಗಿ ಕುಗ್ಗಿಸಲು ಕೆಲವೂ ನಡೆಯಲಿಲ್ಲ. ಕೊನೆಯದಾಗಿ ಮೀನಾಕ್ಷಿ ದುಬಾರಿ ಬೆಲೆಯ ಚಿನ್ನ, ಡೈಮಂಡ್ ತಂದು ಪೂಜಾ ಬಳಿ ಇದನ್ನೆಲ್ಲ ಹಾಕಿಕೊಂಡು ಬಾ ಎಂದು ಹೇಳುತ್ತಾರೆ. ನಿನ್ನ ಕೊರಳಿನಲ್ಲಿ ಈಗ ಇರುವ ಚಿನ್ನವನ್ನು ತೆಗೆದು ಬಿಸಾಕು.. ಕಾಮತ್ ಫ್ಯಾಮಿಲಿಗೆ ಆ ಚಿನ್ನ ಎಲ್ಲ ಸ್ಯೂಟ್ ಆಗಲ್ಲ ಎನ್ನುತ್ತಾರೆ. ಆದರೆ, ಇದಕ್ಕೆ ಪೂಜಾ ಒಪ್ಪುವುದಿಲ್ಲ. ನನ್ನ ಅಕ್ಕ ಕಷ್ಟಪಟ್ಟು- ಇಷ್ಟದಿಂದ ಮಾಡಿದ ಚಿನ್ನ ಇದು ನಾನು ಇದನ್ನೇ ಹಾಕೋದು.. ನೀವು ಕೊಡುವ ಚಿನ್ನ ಬೇಡ ಎಂದು ಹೇಳಿದ್ದಾಳೆ.
ಇದು ಮೀನಾಕ್ಷಿಗೆ ಕೋಪ ತರಿಸಿದೆ. ತನ್ನ ಪ್ಲ್ಯಾನ್ ಫ್ಲಾಪ್ ಆಯಿತೆಂದು ಸಿಡಿಮಿಡಿಗೊಂಡಿದ್ದಾಳೆ. ಅಲ್ಲದೆ ಹೊರಬಂದು, ಈ ಮದುವೆ ಆಗಲಿ.. ಆ ಪೂಜಾ ನಮ್ಮ ಮನೆಯಲ್ಲಿ ಅದು ಹೇಗೆ ಸಂತೋಷವಾಗಿ ಇರುತ್ತಾಳೆ ಅಂತ ನಾನೂ ನೋಡ್ತೀನಿ.. ಅವಳಿಗೆ ನರಕ ದರ್ಶನ ಮಾಡುತ್ತೇನೆ, ಅವಳ ಅಕ್ಕನ ರೀತಿಯೇ ಇವಳು ಕೂಡ ಗಂಡನ ಬಿಟ್ಟು ಹೋಗಬೇಕು ಆರೀತಿ ಮಾಡುತ್ತಾನೆ ಎಂದು ಹೇಳುತ್ತಾಳೆ. ಮೀನಾಕ್ಷಿ ಆಡಿದ ಈ ಮಾತು ಮಹಿತಾ ಕಾಮತ್ ಕೇಳಿಸಿಕೊಳ್ಳುತ್ತಾಳೆ.
ಈ ಮದುವೆ ನಡೆದರೆ ಇಷ್ಟುದೊಡ್ಡ ಅನುಹುತ ಆಗುತ್ತಾ.. ಪಾಪಾ ಪೂಜಾ ಕಷ್ಟ ಅನುಭವಿಸುತ್ತಾಳಾ? ಎಂದು ಅಂದುಕೊಂಡು ಈ ಎಲ್ಲ ವಿಚಾರ ಭಾಗ್ಯಾಗೆ ಹೇಳಿದ್ದಾಳೆ. ದಯವಿಟ್ಟು ಈ ಮದುವೆ ಆಗೋದು ಬೇಡ.. ಇದು ನಾನು ನಿಮ್ಮ ಒಳ್ಳೆಯದಕ್ಕೆ ಹೇಳುತ್ತಿದ್ದೇನೆ. ಮೀನಾಕ್ಷಿ ಈರೀತಿ ಪ್ಲ್ಯಾನ್ ಮಾಡಿದ್ದಾರೆ.. ತಪ್ಪಿದ್ದರೆ ನನ್ನ ಕ್ಷಮಿಸು ನಿನ್ನ ಜೀವನದಲ್ಲಿ ಏನೆಲ್ಲ ನಡೆಯಿತು ಅಂತ ನೋಡಿದ್ದೀಯಾ.. ಈಗ ಪೂಜಾಳ ಜೀವನ ಕೂಡ ಹಾಳಾಗುವುದು ಬೇಡ ಎಂದು ಭಾಗ್ಯ ಬಳಿ ಮಹಿತಾ ಹೇಳಿದ್ದಾಳೆ.
ಇದರಿಂದ ಭಾಗ್ಯಾಗೆ ಏನು ಮಾಡಬೇಕು ಎಂದು ತಿಳಿಯುವುದಿಲ್ಲ.. ತುಂಬಾ ಯೋಚಿಸಿ ನನ್ನ ತಂಗಿಯ ಭವಿಷ್ಯ ನನಗೆ ಮುಖ್ಯ.. ಅವಳು ಖುಷಿ ಆಗಿರಬೇಕು.. ಅಲ್ಲಿ ಹೋದರೆ ನರಕ ಅನುಭವಿಸುತ್ತಾಳೆ ಅಂತಾದರೆ ಈ ಮದುವೆ ಬೇಡ ಎಂದು ಮಂಟಪಕ್ಕೆ ಬಂದು ಮದುವೆ ನಿಲ್ಲಿಸಿ ಎನ್ನುತ್ತಾಳೆ. ಕುಸುಮಾ ಹಾಗೂ ಸುನಂದಾಗೆ ಎಲ್ಲವನ್ನು ವಿವರಿಸಿ ಪೂಜಾ ಕೂಡ ಅಕ್ಕನಿಗೆ ಇಷ್ಟವಿಲ್ಲದ ಈ ಮದುವೆ ನನಗೂ ಬೇಡ ಎನ್ನುತ್ತಾಳೆ. ಆದರೆ, ಕಿಶನ್ ಭಾಗ್ಯಾಗೆ ಮಾತು ಕೊಡುತ್ತಾನೆ. ಅವಳಿಗೆ ಆ ಮನೆಯಲ್ಲಿ ಏನೂ ತೊಂದರೆ ಆಗದ ರೀತಿ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಎಂದು ಹೇಳುತ್ತಾನೆ.
ಆದರೆ, ಕಿಶನ್ ಮಾತನ್ನೂ ಕೇಳದ ಭಾಗ್ಯ ಮಂಟಪದಿಂದ ಕೆಳಬಂದು ಹೊರಡಲು ಮುಂದಾಗುತ್ತಾಳೆ. ಅಷ್ಟೊತ್ತಿಗೆ ಅಲ್ಲಿಗೆ ಆದೀಶ್ವರ್ ಕಾಮತ್ ಬಂದಿದ್ದಾನೆ. ಭಾಗ್ಯ ಮನೆಯವರ ಒಳ್ಳೆಯತನ ಆದೀಗೆ ಈಗ ಅರಿವಾಗಿದೆ. ಭಾಗ್ಯ ಮನೆಯವರಿಗೆ ದುಡ್ಡು ಮುಖ್ಯ ಅಲ್ಲ ಎಂಬ ಅರಿವು ಆದೀಗೆ ಬಂದಿದೆ. ಭಾಗ್ಯಾನ ಮೇಲೆ ಅನುಮಾನ ಪಟ್ಟು ನಾನು ತಪ್ಪು ಮಾಡಿದೆ.. ನನ್ನ ಜೀವನದಲ್ಲಿ ಆಗಿರುವ ಕಹಿ ಅನುಭವದಿಂದ ಇಂತಹ ಸಂಸ್ಕಾರವಂತ ಕುಟುಬಂದ ಮೇಲೆ ಅನುಮಾನ ಪಟ್ಟೆ ಎಂದು ಅಂದುಕೊಂಡಿದ್ದಾನೆ. ಅಲ್ಲದೆ ಈ ಮದವೆ ನಿಲ್ಲಬಾರದು ಎಂದು ಭಾಗ್ಯಾ ಫ್ಯಾಮಿಲಿ ಮುಂದೆ ಮಂಡಿಯೂರಿ ಕೈ ಮುಗಿದು, ‘‘ನನ್ನ ಕಡೆಯಿಂದ ತಪ್ಪಾಗಿದೆ.. ನನ್ನ ಲೈಫ್ನಲ್ಲಿ ಮೊದಲ ಬಾರಿ ಮಂಡಿಯೂರಿ ಕ್ಷಮೆ ಕೇಳುತ್ತಾ ಇದ್ದೇನೆ.. ದಯವಿಟ್ಟು ನನ್ನ ಕ್ಷಮಿಸಿ ಬಿಡಿ.. ಪೂಜಾ ನಿಮ್ಮ ಮನೆ ಮಗಳು ಅಷ್ಟೇ ಅಲ್ಲ.. ನಮ್ಮ ಮನೆ ಮಗಳು ಕೂಡ.. ಇದು ಈ ಆದೀಶ್ವರ್ ಕಾಮತ್ ನಿಮಗೆ ಕೊಡುತ್ತಿರುವ ಮಾತು’’ ಎಂದು ಹೇಳಿದ್ದಾನೆ. ಸದ್ಯ ಈ ಮದುವೆ ನಡೆಯುತ್ತ ಅಥವಾ ಇಲ್ಲವೋ ಎಂಬುದು ರೋಚಕತೆ ಸೃಷ್ಟಿಸಿದೆ.
Mokshitha Pai: ನದಿಯ ತಡದಲ್ಲಿ ಬಿಳಿ ಸೀರೆಯುಟ್ಟು ಫೋಟೋಕ್ಕೆ ಪೋಸ್ ಕೊಟ್ಟ ಮೋಕ್ಷಿತಾ