ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಪೂಜಾ-ಕಿಶನ್ ಮೊದಲ ರಾತ್ರಿಯನ್ನು ಹಾಳು ಮಾಡಿದ ಕನ್ನಿಕಾ

ಪೂಜಾ-ಕಿಶನ್ ಮೊದಲ ರಾತ್ರಿಗೆ ಹೂವಿನ ಅಲಂಕಾರದಿಂದ ರೂಮ್ ರೆಡೆಯಾಗಿರುತ್ತದೆ. ಆದರೆ, ಕನ್ನಿಕಾ ಇದನ್ನ ಕಂಡು ಕೋಪಗೊಂಡಿದ್ದಾಳೆ. ಹಾಸಿಗೆ ಮೇಲಿದ್ದ ಹೂವಿನ ಅಲಂಕಾರವನ್ನೆಲ್ಲ ಹಾಳು ಮಾಡಿದ್ದಾಳೆ. ಆಗ ಆದೀಶ್ವರ್ ಕಾಮತ್ ಬಂದಿದ್ದು, ಕನ್ನಿಕಾಗೆ ಕ್ಲಾಸ್ ತೆಗೆದುಕೊಂಡಿದ್ದಾನೆ.

ಪೂಜಾ-ಕಿಶನ್ ಮೊದಲ ರಾತ್ರಿಯನ್ನು ಹಾಳು ಮಾಡಿದ ಕನ್ನಿಕಾ

Bhagya Lakshmi Serial

Profile Vinay Bhat Jul 23, 2025 11:46 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಪೂಜಾ-ಕಿಶನ್ ಮದುವೆ ಕೊನೆಗೂ ನಡೆದಿದೆ. ಅನೇಕ ಅಡೆತಡೆಗಳ ಮಧ್ಯೆ ಈ ಮದುವೆ ಕೊನೆಗೂ ಸಂಪೂರ್ಣವಾಗಿದೆ. ಆದೀಶ್ವರ್ ಕಾಮತ್ ಕ್ಷಮೆ ಕೇಳಿ ಮುಂದೆ ನಿಂತು ಭಾಗ್ಯಾಗೆ ಮಾತುಕೊಟ್ಟು ಈ ಮದುವೆಯನ್ನು ಮಾಡಿಸಿದ್ದಾರೆ. ಈ ಮೂಲಕ ಮದುವೆ ನಿಲ್ಲಿಸಬೇಕು ಅಂದುಕೊಂಡಿದ್ದ ಮೀನಾಕ್ಷಿ-ಕನ್ನಿಕಾ ಪ್ಲ್ಯಾನ್ ಎಲ್ಲ ಫೇಲ್ ಆಗಿದೆ. ಆದರೆ, ಪೂಜಾ ಗಂಡನ ಮನೆಗೆ ಬಂದ ಬಳಿಕ ಇಲ್ಲಿ ಕನ್ನಿಕಾ ದರ್ಬಾರ್ ಶುರುವಾಗಿದೆ.

ಈ ಮದುವೆಯನ್ನು ಹೇಗಾದರು ನಿಲ್ಲಿಸ ಬೇಕೆಂದು ಮೀನಾಕ್ಷಿ-ಕನ್ನಿಕಾ ಈ ಹಿಂದೆ ಮಾಡಿದ ಎಲ್ಲ ಪ್ಲ್ಯಾನ್ ಫಾಫ್ ಆಯಿತು. ಭಾಗ್ಯಾಳನ್ನು ಎಮೋಷನ್ ಆಗಿ ಕುಗ್ಗಿಸಲು ಮಾಡಿದ ಯೋಜನೆ ಕೂಡ ನಡೆಯಲಿಲ್ಲ. ತನ್ನೆಲ್ಲ ಯೋಜನೆ ವಿಫಲವಾದ ಬಳಿಕ ಮೀನಾಕ್ಷಿ, ಈ ಮದುವೆ ಆಗಲಿ.. ಆ ಪೂಜಾ ನಮ್ಮ ಮನೆಯಲ್ಲಿ ಅದು ಹೇಗೆ ಸಂತೋಷವಾಗಿ ಇರುತ್ತಾಳೆ ಅಂತ ನಾನೂ ನೋಡ್ತೀನಿ.. ಅವಳಿಗೆ ನರಕ ದರ್ಶನ ಮಾಡುತ್ತೇನೆ ಎಂದು ಹೇಳಿದ್ದಳು.

ಅದರಂತೆ ಪೂಜಾ ರಾಮ್​ದಾಸ್ ಕಾಮತ್ ಮನೆಗೆ ಬಲಗಾಲಿಟ್ಟು ಒಳಗೆ ಬಂದಿದ್ದಾಳೆ. ಆದೀಶ್ವರ್-ರಾಮ್​ದಾಸ್ ಹಾಗೂ ಕಿಶನ್ ಪ್ರೀತಿಯಿಂದ ಪೂಜಾಳನ್ನು ಬರಮಾಡಿಕೊಂಡಿದ್ದಾರೆ. ಆದರೆ, ಪೂಜಾಗೆ ಈ ಹೊಸ ಮನೆಯಲ್ಲಿ ಒಂಟಿತನ ಕಾಡುತ್ತಿದೆ. ಇಷ್ಟುದಿನ ಭಾಗ್ಯ ಜೊತೆದ್ದ ಪೂಜಾಗೆ ಈಗ ಆ ಮನೆಯ ನೆನಪು ಕಾಡುತ್ತಿದೆ. ಊಟ ಮಾಡಲೂ ಮನಸ್ಸು ಬರುತ್ತಿಲ್ಲ. ಅತ್ತ ಭಾಗ್ಯಾಗೆ ಕೂಡ ಊಟ ಸೇರುತ್ತಿಲ್ಲ. ಊಟ ಮಾಡಲು ಶುರುಮಾಡಿದಾಗ ತುತ್ತು ಇನ್ನೇನು ಬಾಯಿಗೆ ಇಡಬೇಕು ಎಂಬೊತ್ತಿಗೆ ಪೂಜಾ ಹೇಗಿದ್ದಾಳೊ ಅಲ್ಲಿ?, ಆ ಮನೆಗೆ ಅಡ್ಜಸ್ಟ್ ಆಗುತ್ತಾಳಾ?, ಬೇಸರದಲ್ಲಿದ್ದಾಳಾ? ಎಂದೆಲ್ಲ ಭಾಗ್ಯ ಮನಸ್ಸಿಗೆ ಹೋಗಿದೆ.

ಅತ್ತ ಪೂಜಾ ತವರು ಮನೆಯಿಂದ ಕೊಟ್ಟ ಸ್ಯೂಟ್ ಕೇಸ್ ತೆರೆದು ನೋಡಿದಾಗ ಅದರಲ್ಲಿ ಭಾಗ್ಯ ಊಟದ ಡಬ್ಬಿ ಇಟ್ಟಿರುವುದು ಸಿಗುತ್ತದೆ. ಇದನ್ನು ನೋಡಿ ಪೂಜಾಗೆ ತುಂಬಾ ಖುಷಿ ಆಗುತ್ತದೆ. ಅಕ್ಕನನ್ನು ನೆನೆದು ಪೂಜಾ ಅದನ್ನೆ ತಿನ್ನುತ್ತಾಳೆ. ಬಳಿಕ ಭಾಗ್ಯಾಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಾಳೆ. ಎಲ್ಲವೂ ಒಳ್ಳೆಯದಿದೆ.. ಇಲ್ಲೇನೂ ತೊಂದರೆ ಇಲ್ಲ.. ನನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾಳೆ.



ಮತ್ತೊಂದೆಡೆ ಪೂಜಾ-ಕಿಶನ್ ಮೊದಲ ರಾತ್ರಿಗೆ ಹೂವಿನ ಅಲಂಕಾರದಿಂದ ರೂಮ್ ರೆಡೆಯಾಗಿರುತ್ತದೆ. ಆದರೆ, ಕನ್ನಿಕಾ ಇದನ್ನ ಕಂಡು ಕೋಪಗೊಂಡಿದ್ದಾಳೆ. ಹಾಸಿಗೆ ಮೇಲಿದ್ದ ಹೂವಿನ ಅಲಂಕಾರವನ್ನೆಲ್ಲ ಹಾಳು ಮಾಡಿದ್ದಾಳೆ. ಆಗ ಆದೀಶ್ವರ್ ಬಂದಿದ್ದು, ಕನ್ನಿಕಾಗೆ ಕ್ಲಾಸ್ ತೆಗೆದುಕೊಂಡಿದ್ದಾನೆ. ಕನ್ನಿಕಾ ಜಸ್ಟ್ ಸ್ಟಾಪಿಡ್.. ಏನು ಮಾಡ್ತಾ ಇದ್ದೀಯಾ ನೀನು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕನ್ನಿಕಾ, ನೀನು ಏನು ಮಾಡ್ತಾ ಇದ್ದೀಯಾ?, ಏನು ಇದೆಲ್ಲ ಶಾಸ್ತ್ರ ಎಂದು ಕೇಳಿದ್ದಾಳೆ. ಅದಕ್ಕೆ ಆದೀ, ನೀನು ನನ್ಗೆ ಹೇಳೋಕೆ ಬರ್ಬೇಡ.. ಯಾವ ಟೈಮ್​ನಲ್ಲಿ ಏನು ಮಾಡಬೇಕು ಅಂತ ನಿನಗಿಂತ ಚೆನ್ನಾಗಿ ನನ್ಗೆ ಗೊತ್ತು ಎಂದು ಹೇಳಿದ್ದಾನೆ.

ಸದ್ಯ ಅನೇಕ ಅಡೆತಡೆಗಳ ಮಧ್ಯೆ ಪೂಜಾ-ಕಿಶನ್ ಮದುವೆ ನೆರವೇರಿದೆ.. ಪೂಜಾ ರಾಮ್​ದಾಸ್ ಮನೆಗೂ ಬಂದಾಗಿದೆ. ಅತ್ತ ಕನ್ನಿಕಾ-ಮೀನಾಕ್ಷಿ ತಾವು ಅಂದುಕೊಂಡಂತೆ ಪೂಜಾಗೆ ಕಿರುಕುಳ ಕೊಡಲು ಒಂದೊಂದೆ ಆಟ ಶುರುಮಾಡಿದ್ದಾರೆ. ಇದಕ್ಕೆ ಪೂಜಾ ಹೇಗೆ ತಿರುಗೇಟು ಕೊಡುತ್ತಾಳೆ?, ಭಾಗ್ಯ ಏನು ಮಾಡುತ್ತಾಳೆ?, ಕಿಶನ್-ಪೂಜಾ ಮನೆಬಿಟ್ಟು ಹೋಗುತ್ತಾರ ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

BBK 12: ಈ ಬಾರಿ ಬಿಗ್ ಬಾಸ್ ಕನ್ನಡ 12 ನಡೆಯೋದು ಎಲ್ಲಿ ಗೊತ್ತೇ?: ದಿಢೀರ್ ಲೊಕೇಷನ್ ಶಿಪ್ಟ್