Bhagya Lakshmi Serial: ತಾಂಡವ್‌ನ ಮೈಚಳಿ ಬಿಡಿಸಿದ ಭಾಗ್ಯಾ, ಶ್ರೇಷ್ಠಾಗೂ ಖಡಕ್ ವಾರ್ನಿಂಗ್
ತಾಂಡವ್‌ಗೆ ವಾರ್ನ್ ಮಾಡಲು ಬಂದಾಗ ಶ್ರೇಷ್ಠಾ ಅಡ್ಡ ಬರುತ್ತಾಳೆ. ಸುಮ್ನೆ ಇರಿಟೇಟ್ ಮಾಡ್ಬೇಡ ಎಂದು ಶ್ರೇಷ್ಠಾ ಹೇಳುತ್ತಾಳೆ. ಇದರಿಂದ ಕೆರಳಿದ ಭಾಗ್ಯಾ.. ನನ್ಗೆ ಸುಮ್ನೆ ಅಡ್ಡ ಬರಬೇಡ.. ನನಗೆ ತಲೆ ಕೆಟ್ರೆ ಏನಾಗುತ್ತೆ ಅಂತ ನಿನ್ಗೆ ತುಂಬಾ ಚೆನ್ನಾಗಿ ಗೊತ್ತು ಎಂದು ಕೈಯಲ್ಲೇ ವಾರ್ನ್ ಮಾಡುತ್ತಾಳೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi Kannada Serial) ಭಾಗ್ಯಾಳಿಗೆ ಒಳ್ಳೆಯ ದಿನಗಳು ಬರುವ ಸೂಚನೆ ಸಿಕ್ಕಿದೆ. ಒಂದೇ ದಿನದಲ್ಲಿ 40 ಸಾವಿರ ಹಣ ಸಂಪಾದಿಸಿ ಮನೆಯ ಲೋನ್ ಕಟ್ಟಿದ್ದಾಳೆ. ಇದರಿಂದ ತಾಂಡವ್-ಶ್ರೇಷ್ಠಾಗೆ ದೊಡ್ಡ ಮುಖಭಂಗ ಆಗಿದೆ. ಭಾಗ್ಯಳನ್ನ ಸೋಲಿಸಬೇಕು, ಭಾಗ್ಯ ಬಂದು ತನ್ನ ಕಾಲನ್ನ ಹಿಡಿಯಬೇಕು ಅಂತ ತಾಂಡವ್, ಶ್ರೇಷ್ಠಾ ಜೊತೆ ಸೇರಿಕೊಂಡು ಮಾಡಿದ ಪ್ಲ್ಯಾನ್ ಎಲ್ಲ ಎಕ್ಕುಟ್ಟೋಗಿದೆ. ತಾಂಡವ್ ಕನಸೆಲ್ಲಾ ಅಕ್ಷರಶಃ ನುಚ್ಚು ನೂರಾಗಿದೆ. ಇದರ ಬೆನ್ನಲ್ಲೇ ಭಾಗ್ಯಾ ಇವರಿಬ್ಬರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾಳೆ. ಇನ್ಮುಂದೆ ನನ್ನ ವಿಷಯಕ್ಕೆ ಅಥವಾ ಈ ಮನೆಯ ತಂಟೆಗೆ ಬಂದ್ರೆ ಸುಮ್ನೆ ಇರಲ್ಲ ಎಂದು ಹೇಳಿದ್ದಾಳೆ.
ದೇವಸ್ಥಾನದಲ್ಲಿ 250 ಜನರಿಗೆ ಅಡುಗೆ ಮಾಡುವ ಕೆಲಸ ಭಾಗ್ಯಾಗೆ ಸಿಗುತ್ತದೆ. ಇದರಿಂದ ಭಾಗ್ಯಾ ಮನೆಯ ಲೋನ್ ಕಟ್ಟುತ್ತಾಳೆ. ಇದನ್ನೆಲ್ಲ ಕಂಡು ತಾಂಡವ್-ಶ್ರೇಷ್ಠಾಗೆ ಮತ್ತೊಮ್ಮೆ ಆಘಾತ ಆಗಿದೆ. ಮನೆ ಸೀಝ್ ಆಗುತ್ತೆ, ನೀವೆಲ್ಲ ಬೀದಿಗೆ ಬರುತ್ತೀರಿ ಎಂದು ಅರಚುತ್ತಿದ್ದ ತಾಂಡವ್ ಮತ್ತೊಮ್ಮೆ ಎಲ್ಲರೆದುರು ಮುಖಭಂಗ ಅನುಭವಿಸುತ್ತಾನೆ.
ಮನೆಯ ಸಾಲದ ಕಂತು ಕಟ್ಟದೇ ಸತಾಯಿಸಿ, ಭಾಗ್ಯ ಮತ್ತು ಮನೆಯವರಿಗೆ ಕಿರುಕುಳ ನೀಡಿದ ತಾಂಡವ್ ಮತ್ತು ಶ್ರೇಷ್ಠಾಗೆ ಮೊದಲಿಗೆ ಕುಸುಮಾ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಇನ್ನೂ ಯಾಕೆ ಇಲ್ಲಿಯೇ ನಿಂತಿರುವೆ, ಇನ್ನೊಮ್ಮೆ ಇಲ್ಲಿಗೆ ಬರಬೇಡ ಎಂದು ತಾಂಡವ್‌ನ ಕತ್ತು ಹಿಡಿದು, ಮನೆಯಿಂದ ಎಳೆದುಕೊಂಡು ಹೋಗಿ ಆಚೆ ಕಳುಹಿಸಿದ್ದಾಳೆ. ಅದರ ಜತೆಗೇ, ಶ್ರೇಷ್ಠಾಳನ್ನೂ ಮನೆಯಿಂದ ಹೊರಗೆ ಅಟ್ಟಿದ್ದಾಳೆ. ಇದರಿಂದ ಇಬ್ಬರಿಗೂ ಮತ್ತೊಮ್ಮೆ ಮರ್ಯಾದೆ ಕಳೆದುಕೊಂಡಂತಾಗಿದೆ.
ನಂತರ ಮನೆಯಿಂದ ಹೊರಗಡೆ ಇದ್ದ ತಾಂಡವ್‌ಗೆ ಮತ್ತೊಮ್ಮೆ ಮುಖಾಮುಖಿ ಮೂಲಕ ಎಚ್ಚರಿಕೆ ನೀಡಿದ್ದಾಳೆ. ತಾಂಡವ್‌ಗೆ ವಾರ್ನ್ ಮಾಡಲು ಬಂದಾಗ ಶ್ರೇಷ್ಠಾ ಅಡ್ಡ ಬರುತ್ತಾಳೆ. ಸುಮ್ನೆ ಇರಿಟೇಟ್ ಮಾಡ್ಬೇಡ ಎಂದು ಶ್ರೇಷ್ಠಾ ಹೇಳುತ್ತಾಳೆ. ಇದರಿಂದ ಕೆರಳಿದ ಭಾಗ್ಯಾ.. ನನ್ಗೆ ಸುಮ್ನೆ ಅಡ್ಡ ಬರಬೇಡ.. ನನಗೆ ತಲೆ ಕೆಟ್ರೆ ಏನಾಗುತ್ತೆ ಅಂತ ನಿನ್ಗೆ ತುಂಬಾ ಚೆನ್ನಾಗಿ ಗೊತ್ತು ಎಂದು ಕೈಯಲ್ಲೇ ವಾರ್ನ್ ಮಾಡುತ್ತಾಳೆ.
ಭಾಗ್ಯಾಳ ಮಾತಿಗೆ ಹೆದರಿ ಶ್ರೇಷ್ಠಾ ಹಿಂದೆ ಸರಿಯುತ್ತಾಳೆ. ಬಳಿಕ ತಾಂಡವ್‌ಗೆ ವಾರ್ನ್ ಮಾಡಿದ ಭಾಗ್ಯಾ, ನಾನು ಸೋಲಬೇಕು ಅಂತ ನೀವು ತುಂಬಾ ಪ್ರಾರ್ಥನೆ ಮಾಡಿದ್ರಿ ಅನ್ಸುತ್ತೆ.. ಆದ್ರೆ ಪಾಪಾ ಏನೂ ಯೂಸ್ ಆಗಿಲ್ಲ. ನೀವು ಏನೇ ಮಾಡಿದರೂ, ನಾನು ಸುಮ್ಮನಿರುವುದಿಲ್ಲ. ಮನೆಯನ್ನು ಮತ್ತು ಈ ಮನೆಯವರನ್ನು ಜೋಪಾನವಾಗಿ ಉಳಿಸಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ನೀವು ನನ್ಗೆ ಈ ರೀತಿ ತೊಂದ್ರೆ ಕೊಡ್ತಾನೆ ಇರಬೇಕು ಅಂತ ಡಿಸೈಡ್ ಮಾಡಿದ್ರೆ ತೊಂದ್ರೆ ಮಾಡಿ.. ನಾನು ಈ ರೀತಿ ಗೆಲ್ತನೇ ಹೋಗ್ತಾ ಇರ್ತೇನೆ. 24 ಗಂಟೆಯಲ್ಲಿ 40 ಸಾವಿರ ಕಟ್ಟಿದವಳಿಗೆ ಮುಂದಿನ ತಿಂಗಳ ಹೊತ್ತಿಗೆ ಪುನಃ 40 ಸಾವಿರ ಕಟ್ಟೋಕೆ ಆಗಲ್ವಾ ಎಂದು ಹೇಳಿ ಎಚ್ಚರಿಕೆ ನೀಡಿದ್ದಾಳೆ.
ಸದ್ಯ ಭಾಗ್ಯಾ ಈ ತಿಂಗಳ ಮನೆಯ ಲೋನ್ ಕಟ್ಟಿ ಮುಗಿಸಿದ್ದಾಳೆ. ಆದರೆ, ಮುಂದಿನ ತಿಂಗಳು ಲೋನ್ ಕಟ್ಟಲು ಏನು ಮಾಡುತ್ತಾಳೆ.. ಭಾಗ್ಯಳ ಸಮಸ್ಯೆಗಳೆಲ್ಲಾ ತೀರುತ್ತಾ? ತಾಂಡವ್‌ಗೆ ಕೇಡುಗಾಲ ಆರಂಭವಾಗುತ್ತಾ? ಎಂಬುದು ಕುತೂಹಲ ಕೆರಳಿಸಿದೆ.
Gauthami Jadav: ಬಿಗ್ ಬಾಸ್ ಬಳಿಕ ಹೊಸ ಅಪ್ಡೇಟ್ ಕೊಡಲು ಮುಂದಾದ ಗೌತಮಿ: ಸದ್ಯದಲ್ಲೇ ಬರಲಿದೆ ಬೆಂಕಿ ಫೋಟೋ