ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಟೂರ್ ಹೋಗಲು ಶ್ರೇಷ್ಠಾಳ ಸಹಿ ಪಡೆದ ತನ್ವಿ: ಭಾಗ್ಯಾಗೆ ಗೊತ್ತಾದ್ರೆ ಅಷ್ಟೇ..

ಭಾಗ್ಯ ಮಗಳು ತನ್ವಿ ಮಹಾ ಎಡವಟ್ಟು ಮಾಡಿದ್ದಾಳೆ. ಗೆಳತಿಯರ ಜತೆ ರೆಸಾರ್ಟ್‌ಗೆ ಟ್ರಿಪ್ ಹೋಗಲು ಯಾರೂ ಪೇಪರ್ಗೆ ಸಹಿ ಹಾಕದ ಕಾರಣ ಬೇರೆ ಗತಿಯಿಲ್ಲದೆ ಶ್ರೇಷ್ಠಾ ಬಳಿ ಹೋಗಿದ್ದಾಳೆ. ಈ ಎಲ್ಲ ವಿಚಾರ ಭಾಗ್ಯಾಗೆ ಗೊತ್ತಿಲ್ಲ.. ತಾಂಡವ್ಗೂ ತಿಳಿದಿಲ್ಲ.. ಈ ಪ್ರಸಂಗ ಭಾಗ್ಯಾಗೆ ಗೊತ್ತಾದರೆ ದೊಡ್ಡ ಜಗಳವೇ ನಡೆಯಲಿದೆ.

ಟೂರ್ ಹೋಗಲು ಶ್ರೇಷ್ಠಾಳ ಸಹಿ ಪಡೆದ ತನ್ವಿ: ಭಾಗ್ಯಾಗೆ ಗೊತ್ತಾದ್ರೆ ಅಷ್ಟೇ..

Bhagya Lakshmi Serial

Profile Vinay Bhat Mar 28, 2025 12:16 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ಹೊಸ ಉದ್ಯಮ ಅಷ್ಟೊಂದು ಕ್ಲಿಕ್ ಆಗಿಲ್ಲ ಎಂಬ ಬೇಸರದಲ್ಲಿದ್ದಾಳೆ. ಫೈವ್ ಸ್ಟಾರ್ ಹೋಟೆಲ್​ನಲ್ಲಿ ಚೆಫ್ ಕೆಲಸ ಮಾಡುತ್ತಿದ್ದ ಭಾಗ್ಯ ಈಗ ಬೀದಿಗಳಲ್ಲಿ ಊಟ ಬಡಿಸುವ ಕೆಲಸಕ್ಕೆ ಮುಂದಾಗಿದ್ದಾಳೆ. ಮನೆಯಿಂದಲೇ ಅಡುಗೆ ಮಾಡಿ ಹಾಸ್ಟೆಲ್‌ ಹುಡುಗರಿಗೆ, ಆಫೀಸ್‌ನಲ್ಲಿದ್ದವರಿಗೆ ಬಾಕ್ಸ್‌ ಕಳಿಸಿಕೊಡುವ ಪ್ಲಾನ್ ಭಾಗ್ಯಾಳದ್ದು, ಇದಕ್ಕೆ ರೆಸ್ಪಾನ್ಸ್ ಬರದ ಕಾರಣ ಬೀದಿಗೆಯೇ ಅಡುಗೆ ಮಾಡಿದ್ದನ್ನು ತೆಗೆದುಕೊಂಡು ಹೋಗಿ ಬಳಿಸಲು ಮುಂದಾಗಿದ್ದಾಳೆ. ಆದರೆ, ಅದಕ್ಕೂ ಉತ್ತಮ ಪ್ರತಿಕ್ರಿಯೆ ಸಿಗದ ಕಾರಣ ಫ್ರೀ ಆಗಿ ಊಟ ಬಡಿಸಿದ್ದಾಳೆ.

ತಂದಿದ್ದ ಊಟವನ್ನೆಲ್ಲಾ ಉಚಿತವಾಗಿ ಹಾಸ್ಟೆಲ್ ಹುಡುಗರಿಗೆ ಹಂಚಿದ ಬಳಿಕ ಭಾಗ್ಯ, ಪೂಜಾ ಮತ್ತು ಸುಂದರಿ ಮನೆಗೆ ಮರಳಿದ್ದಾಳೆ. ಉಚಿತವಾಗಿ ಊಟ ಕೊಟ್ಟು ಬಂದಿರುವ ಸಂಗತಿ ಗೊತ್ತಾದ ಕೂಡಲೇ ಭಾಗ್ಯ ಅಮ್ಮ ಸುನಂದಾ ಕೋಪಗೊಂಡಿದ್ದಾರೆ. ಆದರೆ ಕುಸುಮಾ ಮತ್ತು ಧರ್ಮರಾಜ್ ಭಾಗ್ಯಾಳಿಗೆ ಅವಳಿಗೆ ಬೆಂಬಲ ಕೊಡುತ್ತಾರೆ. ಆಗ ಅಲ್ಲಿಗೆ ತನ್ಮಯ್‌ನ ಗೆಳೆಯ ಜೂನಿಯರ್ ರಾಕಿ ಭಾಯ್ ಬರುತ್ತಾನೆ. ಅವನ ಜೊತೆ ಹಾಸ್ಟೆಲ್‌ನ ನಾಲ್ಕು ಮಂದಿ ಹುಡುಗರು ಕೂಡ ಇರುತ್ತಾರೆ.

ಮನೆಯೊಳಗೆ ಬಂದ ಕೂಡಲೇ ಭಾಗ್ಯಾಗೆ ಸ್ವೀಟ್ ಶಾಕ್ ಕೊಟ್ಟಿದ್ದಾರೆ ಈ ಹುಡುಗರು. ನಿಮ್ಮ ಊಟ ತಿಂದು ನಮಗೆ ಹಾಗೆ ಆಯಿತು, ಹೀಗೆ ಆಯಿತು ಎಂದಿದ್ದಾರೆ. ಕೊನೆಗೆ ನಾವು ತಮಾಷೆ ಮಾಡಿದೆವು, ನಿಮ್ಮ ಊಟದಲ್ಲಿ ಅಮ್ಮನ ಕೈರುಚಿಯಿದೆ, ಪ್ರೀತಿಯಿದೆ. ಅಮೃತವಿದೆ, ಇನ್ನು ಮುಂದೆ ದಿನವೂ ಮೂರು ಹೊತ್ತು ನೀವೇ ನಮಗೆ ಊಟ ಕೊಡಬೇಕು ಎನ್ನುತ್ತಾರೆ. ಜತೆಗೆ ದುಡ್ಡನ್ನೂ ಕೊಟ್ಟು ಹೋಗುತ್ತಾರೆ. ಇದನ್ನೆಲ್ಲ ಕಂಡು ಭಾಗ್ಯಾಗೆ ತುಂಬಾ ಖುಷಿ ಆಗಿದೆ.

ಇದರ ಮಧ್ಯೆ ಭಾಗ್ಯ ಮಗಳು ತನ್ವಿ ಮಹಾ ಎಡವಟ್ಟು ಮಾಡಿದ್ದಾಳೆ. ಗೆಳತಿಯರ ಜತೆ ರೆಸಾರ್ಟ್‌ಗೆ ಟ್ರಿಪ್ ಹೋಗಲು ಯಾರೂ ಪೇಪರ್​ಗೆ ಸಹಿ ಹಾಕದ ಕಾರಣ ಬೇರೆ ಗತಿಯಿಲ್ಲದೆ ಶ್ರೇಷ್ಠಾ ಬಳಿ ಹೋಗಿದ್ದಾಳೆ. ಮನೆಯಲ್ಲಿ ಪರ್ಮಿಷನ್ ಕೇಳಿದಾಗ ಅಮ್ಮ ಮತ್ತು ಅಜ್ಜಿ ಕಡೆಯಿಂದ ಸರಿಯಾದ ಬೈಗುಳ ಸಿಗುತ್ತದೆ. ಹುಡುಗಿಯರೇ ಹೋಗೋದು ಬೇಡ ಅಂತ ಹೇಳ್ತಾರೆ.. ಬಳಿಕ ಅಪ್ಪ ತಾಂಡವ್ ಜೊತೆ ಕೇಳಿದಾಗ ಅವನು ಕೂಡ ಹಾಗೇ ಹೇಳುತ್ತಾನೆ.



ಹೀಗಾಗಿ ಬೇರೆ ದಾರಿಯಯಿಲ್ಲದೆ ತನ್ವಿ ಯಾರಿಗೂ ತಿಳಿಯದಂತೆ ಶ್ರೇಷ್ಠಾಗೆ ಕರೆ ಮಾಡಿ ರೆಸಾರ್ಟ್ ಬಗ್ಗೆ ಹೇಳುತ್ತಾಳೆ. ನನಗೆ ಯಾರೂ ಕೂಡ ಸಹಾಯ ಮಾಡುತ್ತಿಲ್ಲ. ನೀವಾದರೂ ಸಹಾಯ ಮಾಡಿದರೆ ನನಗೆ ಬಹಳ ಖುಷಿ ಆಗುತ್ತದೆ ಎಂದು ಬೇಡಿಕೊಳ್ಳುತ್ತಾಳೆ. ಅತ್ತ ಶ್ರೇಷ್ಠಾ ನಿನ್ನ ತಂದೆ ಈ ವಿಚಾರ ನನ್ನ ಬಳಿ ಹೇಳಿ ಗರಂ ಆಗಿದ್ದಾರೆ ಎಂದು ತನ್ವಿ ಬಳಿ ಹೇಳುತ್ತಾಳೆ. ತನ್ವಿಗೆ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ಬಳಿಕ ಶ್ರೇಷ್ಠಾ ನಾಳೆ ಮೀಟ್ ಆಗುವಂತೆ ಹೇಳುತ್ತಾಳೆ. ತನ್ವಿ ಜೊತೆ ಶ್ರೇಷ್ಠಾ ಮಾತನಾಡಲು ಶುರು ಮಾಡುತ್ತಾಳೆ. ಶ್ರೇಷ್ಠಾ ನಯವಾಗಿ ಮಾತನಾಡಿ ತನ್ವಿಯಿಂದ ಹೇಗಾದರೂ ಮಾಡಿ ಭಾಗ್ಯಳನ್ನು ದೂರ ಮಾಡ್ಬೇಕು ಎಂದುಕೊಂಡಿರುತ್ತಾಳೆ. ರೆಸಾರ್ಸ್‌ಗೆ ಹೋಗು ತನ್ವಿ. ನಾನು ನಿನಗೆ ಹಣ ನೀಡುತ್ತೇನೆ, ಸೈನ್ ಮಾಡುತ್ತೇನೆ ಎಂದು ಹೇಳುತ್ತಾಳೆ. ಶ್ರೇಷ್ಠಾ ಮಾತು ಕೇಳಿದ ತನ್ವಿಗೆ ಖುಷಿ ಆಗುತ್ತೆ. ರೆಸಾರ್ಟ್‌ಗೆ ಹೋಗಲು ಪರ್ಮಿಷನ್ ಕೊಟ್ಟಿರುವುದು ತನ್ವಿಗೆ ಬಹಳ ಖುಷಿ ಆಗುತ್ತೆ.

ಸದ್ಯ ಈ ಎಲ್ಲ ವಿಚಾರ ಭಾಗ್ಯಾಗೆ ಗೊತ್ತಿಲ್ಲ.. ತಾಂಡವ್​ಗೂ ತಿಳಿದಿಲ್ಲ.. ಈ ಪ್ರಸಂಗ ಭಾಗ್ಯಾಗೆ ಗೊತ್ತಾದರೆ ದೊಡ್ಡ ಜಗಳವೇ ನಡೆಯಲಿದೆ. ಇದು ಎಲ್ಲಿಗೆ ಹೋಗಿ ತಲುಪುತ್ತೆ?, ಭಾಗ್ಯಾಳ ಕೈ ತುತ್ತು ಯಶಸ್ವಿಯಾದಂತೆ ಕಾಣುತ್ತಿದ್ದು, ಮುಂದಿನ ದಿನಕ್ಕೆ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ಬರುತ್ತದೆ ಎಂಬುದೆಲ್ಲ ನಾಳಿನ ಸಂಚಿಕೆಯಲ್ಲಿ ತಿಳಿದುಬರಲಿದೆ.

Neha Gowda: ನೇಹಾ ಗೌಡ ತನ್ನ ಮಗಳಿಗೆ ಶಾರದ ಅಂತ ಹೆಸರಿಟ್ಟಿದ್ದೇಕೆ?: ಇಲ್ಲಿದೆ ಕಾರಣ