ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಹನಿಮೂನ್ ಕ್ಯಾನ್ಸಲ್ ಮಾಡಿದ ಕನ್ನಿಕಾಳ ಮೈಚಳಿ ಬಿಡಿಸಿದ ಪೂಜಾ: ಇನ್ಮೇಲೆ ಆಟ ಶುರು

ಸದ್ಯ ಕನ್ನಿಕಾ ಆಟ ಬಯಲಾಗುವ ಎಲ್ಲ ಲಕ್ಷಣ ಕಾಣುತ್ತಿದೆ.. ಒಂದು ಕಡೆ ಭಾಗ್ಯ ಕಡೆಯಿಂದ ಕನ್ನಿಕಾಗೆ ಕಂಟಕ ಎದುರಾದರೆ ಈಗ ಪೂಜಾ ಕೂಡ ಈಕೆಯ ಮೈಚಳಿ ಬಿಡಿಸಲು ಮುಂದಾಗಿದ್ದಾಳೆ. ಸದ್ಯ ಮುಂದಿನ ಎಪಿಸೋಡ್ ಹೇಗಿರುತ್ತದೆ ಎಂಬುದು ನೋಡಬೇಕಿದೆ.

ಹನಿಮೂನ್ ಕ್ಯಾನ್ಸಲ್ ಮಾಡಿದ ಕನ್ನಿಕಾಳ ಮೈಚಳಿ ಬಿಡಿಸಿದ ಪೂಜಾ

Bhagya Lakshmi Serial -

Profile Vinay Bhat Sep 19, 2025 11:53 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾ ತೊಟ್ಟಿಲು ಚಾರಿಟೆಬಲ್ ಟ್ರಸ್ಟ್​ನ ಎಂಡಿ ಆಗಿ ಅಧಿಕಾರ ಸ್ವೀಕರಿಸಿದ್ದಾಳೆ. ಅಲ್ಲಿ ನಡೆಯುತ್ತಿರುವ ಅಕ್ರಮವನ್ನು ಬಯಲಿಗೆಳೆಯರು ಭಾಗ್ಯ ಎಂಡಿ ಆಗಲು ನಿರ್ಧಾರ ತೆಗೆದುಕೊಂಡಳು. ಈ ಚಾರಿಟಿಯ ಅಕ್ರಮದಲ್ಲಿ ಕನ್ನಿಕಾಳ ಪಾಲು ಕೂಡ ಇದೆ. ಹೀಗಾಗಿ ಭಾಗ್ಯ ಎಂಡಿ ಆಗಿರುವುದು ಕನ್ನಿಕಾಗೆ ಟೆನ್ಶನ್ ಶುರುವಾಗಿದೆ. ಮತ್ತೊಂದೆಡೆ ಅತ್ತ ಭಾಗ್ಯ ತಂಗಿ ಪೂಜಾ ಕೂಡ ಕನ್ನಿಕಾಳ ಮೈಚಳಿ ಬಿಡಿಸಿದ್ದಾಳೆ.

ಮದುವೆ ಆದ ದಿನದಿಂದ ಕಿಶನ್ ಹಾಗೂ ಪೂಜಾ ಹನಿಮೂನ್​ಗೆ ಹೋಗಬೇಕೆಂದು ಪ್ಲ್ಯಾನ್ ಮಾಡುತ್ತಾ ಇದ್ದಾರೆ. ಕಿಶನ್ ವಿದೇಶಕ್ಕೆ ಟ್ರಿಪ್ ಹೋಗುವ ಎಂದಿದ್ದರೆ ಪೂಜಾ ಅಲ್ಲೆಲ್ಲ ಬೇಡ ನಾವು ಇಲ್ಲೇ ಗೋಕರ್ಣ, ಚಿಕ್ಕಮಗಳೂರು ಹೋಗುವ ಎಂದಿದ್ದಾಳೆ. ಇದಕ್ಕೆ ಒಪ್ಪದ ಕಿಶನ್ ನಾವು ವಿದೇಶಕ್ಕೆ ಹೋಗಬೇಕು ನೀನು ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೊನೆಗೆ ಇದಕ್ಕೆ ಪೂಜಾ ಒಪ್ಪಿದ್ದಾಳೆ. ಆದರೆ, ಯಾವ ದೇಶಕ್ಕೆ ಹೋಗಬೇಕು ಎಂಬುದು ಕಿಶನ್​ಗೆ ಫುಲ್ ಕನ್​ಫ್ಯೂಶನ್ ಆಗಿದೆ.

ಕೊನೆಗೂ ಒಂದು ಪ್ಲೇಸ್ ಸೆಲೆಕ್ಟ್ ಮಾಡಿದ್ದಾನೆ. ಆದರೆ, ಹೋಗೋ ಪ್ಲ್ಯಾನ್ ಹೇಗೆ ಎಂಬುದು ಕಿಶನ್​ಗೆ ಗೊತ್ತಾಗುತ್ತಿಲ್ಲ. ಇದಕ್ಕಾಗಿ ಆತ ಆದೀ ಆಫೀಸ್​ನಲ್ಲಿರುವ ಟ್ರಾವೆಲ್ ಏಜೆನ್ಸಿಯನ್ನು ಕಾಂಟೆಕ್ಟ್ ಮಾಡಿ ನಮ್ಮ ಹನಿಮೂನ್​ನ ಎಲ್ಲ ಪ್ಲ್ಯಾನ್ ಮಾಡುವಂತೆ ಸೂಚಿಸಿದ್ದಾರೆ. ಆತ ತಕ್ಷಣವೇ ಎಲ್ಲ ಪ್ಲ್ಯಾನ್ ರೆಡಿ ಮಾಡಿ ಡೇಟ್ ಕೂಡ ಕಳುಹಿಸಿದ್ದಾರೆ. ಈ ಖುಷಿಯ ವಿಚಾರವನ್ನು ಕಿಶನ್ ಪೂಜಾಳಿಗೆ ಹೇಳಿದ್ದಾನೆ. ಇದೇ ಸಂದರ್ಭ ಇವರ ರೂಮ್​ನ ಹಿಂದೆ ನಿಂತು ಕನ್ನಿಕಾ ಈ ಎಲ್ಲ ವಿಷಯವನ್ನು ಕೇಳಿಸಿಕೊಂಡಿದ್ದಾಳೆ.

ಕನ್ನಿಕಾ ತಕ್ಷಣವೇ ಟ್ರಾವೆಲ್ ಏಜೆನ್ಸಿಯವನಿಗೆ ಕಾಲ್ ಮಾಡಿ ಕಿಶನ್-ಪೂಜಾ ಹನಿಮೂನ್​ಗೆ ಯಾವುದೇ ಕಾರಣಕ್ಕೂ ಹೋಗಬಾರದು.. ಅದು ಕ್ಯಾನ್ಸಲ್ ಆಗುತ್ತಲೇ ಇರಬೇಕು.. ಏನಾದ್ರು ನೆಪ ಹೇಳಿ ಮುಂದೂಡುತ್ತ ಇರು ಎಂದು ಹೇಳಿದ್ದಾಳೆ. ಇದಕ್ಕೆ ಆತ ಕೂಡ ಒಕೆ ಎಂದಿದ್ದಾರೆ. ನಾನಿಲ್ಲಿ ಸೋಲಿನ ರುಚಿ ನೋಡಿ ಒದ್ದಾಡುತ್ತ ಇದ್ದೀನಿ ನೀನು ಹನಿಮೂನ್​ಗೆ ಹೋಗ್ತೀಯಾ.. ಹನಿಮಾನ್​ಗೆ ಅಲ್ಲ ಈ ಮನೆಯಿಂದ ಹೊರಗಡೆ ಹೋಗೋಕು ನಿನ್ನ ಬಿಡಲ್ಲ ಎಂದು ಕನ್ನಿಕಾ ಹೇಳಿದ್ದಾಳೆ. ಕನ್ನಿಕಾ ಹೀಗೆ ಕಾಲ್ ಮಾಡಿ ಹೇಳಿರುವುದು ಪೂಜಾ ಕಿವಿಗೆ ಬಿದ್ದಿದೆ. ಇಬ್ಬರ ನಡುವೆ ಮಾತಿನ ಯುದ್ಧ ನಡೆದಿದೆ.



ನಾನು ಕಿಶನ್ ಚೆನ್ನಾಗಿರೋದನ್ನ ನೋಡಿ ಸಹಿಸೋಕೆ ಆಗ್ತಾ ಇಲ್ವಾ ನಿನ್ಗೆ ಎಂದು ಪೂಜಾ ಕೇಳಿದ್ದಾಳೆ. ಇದಕ್ಕೆ ಕನ್ನಿಕಾ, ಇಲ್ಲ ನೀನು ಮತ್ತು ನಿನ್ನ ಅಕ್ಕ ಆ ಭಾಗ್ಯ ಖುಷಿ ಆಗಿ ಇರಬಾರದು.. ನೀವು ಖುಷಿ ಆಗಿರಲು ನಾನು ಬಿಡುವುದಿಲ್ಲ ಎಂದಿದ್ದಾಳೆ. ಇದರಿಂದ ಕೆರಳಿದ ಪೂಜಾ, ಮಾತು ಯಾವಾಗ್ಲೂ ಒನ್​ವೇ ಆಗಿರಬಾರದು ಅಲ್ವಾ.. ನಿನ್ಗೆ ತಾಕತ್ತಿದ್ರೆ ನೀನು ಕೊಡೋ ಏಟಿಗೆ ನಾನು ಕೊಡೊ ತಿರುಗೇಟನ್ನ ತಡ್ಕೊಂಡು ನೋಡು.. ನಾನು ಸೈಲೆಂಟ್ ಇದ್ದೀನಿ ಅಂದ್ರೆ ಅದೇ ನನ್ನ ವೀಕ್ನೆಸ್ ಅಂತ ಅನ್ಕೋಬೇಡ.. ನಿನ್ಗೆ ಉತ್ತರ ಕೊಡೋದು ಹೇಗೆ ಅಂತ ನನ್ಗೆ ಚೆನ್ನಾಗಿ ಗೊತ್ತು. ಭಾಗ್ಯಕ್ಕ ತುಂಬಾ ಒಳ್ಳೆಯವಳು.. ಅವಳಿಗೆ ಒಳ್ಳೆಯದು ಮಾಡಿ ಮಾತ್ರ ಗೊತ್ತು.. ಆದ್ರೆ ನಾನು ಹಾಗಲ್ಲ.. ನಾನು ಕೆಟ್ಟವಳಾಗಿದ್ದು ಒಳ್ಳೆಯವಳಾಗಿ ಬದಲಾದವಳು.. ನನ್ಗೆ ಕೆಟ್ಟವರಿಗೆ ಕೆಟ್ಟದನ್ನ ಮಾಡೋದು ಚೆನ್ನಾಗಿ ಗೊತ್ತು ಎಂದು ಹೇಳಿದ್ದಾಳೆ.

ನಿನ್ಗೆ ನನ್ ಬಗ್ಗೆ ಇನ್ನೂ ಗೊತ್ತಿಲ್ಲ.. ಪ್ಲ್ಯಾನಿಂಗ್ ಮಾಡೋದ್ರಲ್ಲಿ ನನ್ನ ಮುಂದೆ ನೀನು ಏನೂ ಇಲ್ಲ, ನಿನಗಿಂತ ಚೆನ್ನಾಗಿ ತಿರುಗಿಸಿ ಕೋಡೋ ತಾಕತ್ತು ನನಗಿದೆ. ಅದನ್ನ ತಡ್ಕೊಳೋ ತಾಕತ್ ನಿನಗಿದೆಯೇ ಎಂದು ಪೂಜಾ ಕನ್ನಿಕಾಗೆ ಸವಾಲು ಹಾಕಿದ್ದಾಳೆ. ಇನ್ಮೇನು ನೀನು ಹೊಸ ಪೂಜಾನ ನೋಡ್ತೀಯಾ.. ನಮ್ಮ ಹನಿಮೂನ್​ನ ತಡಿತಾ ಇದ್ದಿ ಅಲ್ವಾ ನೀನು.. ನಾನು ನನ್ನ ಗಂಡ ಹನಿಮೂನ್​ಗೆ ಹೋಗೇ ಹೋಗ್ತೇವೆ ನಿನ್ನ ಕೈಯಿಂದ ಆದ್ರೆ ತಡೀ ನೋಡೋಣ ಎಂದು ಹೇಳಿದ್ದಾಳೆ.

ಸದ್ಯ ಕನ್ನಿಕಾ ಆಟ ಬಯಲಾಗುವ ಎಲ್ಲ ಲಕ್ಷಣ ಕಾಣುತ್ತಿದೆ.. ಒಂದು ಕಡೆ ಭಾಗ್ಯ ಕಡೆಯಿಂದ ಕನ್ನಿಕಾಗೆ ಕಂಟಕ ಎದುರಾದರೆ ಈಗ ಪೂಜಾ ಕೂಡ ಈಕೆಯ ಮೈಚಳಿ ಬಿಡಿಸಲು ಮುಂದಾಗಿದ್ದಾಳೆ. ಸದ್ಯ ಮುಂದಿನ ಎಪಿಸೋಡ್ ಹೇಗಿರುತ್ತದೆ ಎಂಬುದು ನೋಡಬೇಕಿದೆ.

Kannada Serial TRP: ಟ್ವಿಸ್ಟ್ ನೀಡಿದರೂ ಟಿಆರ್​ಪಿಯಲ್ಲಿ ಮೇಲೇಳದ ಅಮೃತಧಾರೆ: ನಂ. 1 ಧಾರಾವಾಹಿ ಯಾವುದು?