ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kannada Serial TRP: ಟ್ವಿಸ್ಟ್ ನೀಡಿದರೂ ಟಿಆರ್​ಪಿಯಲ್ಲಿ ಮೇಲೇಳದ ಅಮೃತಧಾರೆ: ನಂ. 1 ಧಾರಾವಾಹಿ ಯಾವುದು?

36ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಆದರೆ ಈ ಬಾರಿ ವೀಕ್ಷಕರ ಊಹೆ ತಪ್ಪಾಗಿದೆ. ಕಳೆದ ಕೆಲವು ವಾರಗಳಿಂದ ಭರ್ಜರಿ ಟ್ವಿಸ್ಟ್-ಟರ್ನ್ ಮೂಲಕ ಸಾಗುತ್ತಿರುವ ಝೀ ಕನ್ನಡದ ಅಮೃತಧಾರೆ ಧಾರಾವಾಹಿ ನಂಬರ್ ಒನ್ ಸ್ಥಾನದಲ್ಲಿ ಇರಬಹುದು ಎಂದು ನಂಬಲಾಗಿತ್ತು. ಆದರೆ,..

ಟ್ವಿಸ್ಟ್ ನೀಡಿದರೂ ಟಿಆರ್​ಪಿಯಲ್ಲಿ ಮೇಲೇಳದ ಅಮೃತಧಾರೆ

Amruthadare Serial -

Profile Vinay Bhat Sep 19, 2025 7:42 AM

ಕನ್ನಡ ಕಿರುತೆರೆಯಲ್ಲಿ ಸೀರಿಯಲ್​ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಇದರಲ್ಲಿ ಕೆಲವು ವರ್ಕೌಟ್ ಆದರೆ ಇನ್ನೂ ಕೆಲವು ಧಾರಾವಾಹಿಗೆ ಕೆಟ್ಟ ಕಮೆಂಟ್​ಗಳು ಬರುತ್ತವೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್​​ಪಿ ಮೂಲಕ ತಿಳಿಯಲಿದೆ. ಒಂದೇ ಚಾನೆಲ್​ನಲ್ಲಿ ಪ್ರಸಾರ ಆಗುವ ಧಾರಾವಾಹಿಗಳಾದರೂ ಅವುಗಳ ಮಧ್ಯೆ ಟಿಆರ್​ಪಿ ಸ್ಪರ್ಧೆ ಇದ್ದೇ ಇರುತ್ತದೆ. ಒಳ್ಳೆಯ ಕ್ವಾಲಿಟಿ ಕಂಟೆಂಟ್​ ಕೊಟ್ಟರೇ ವೀಕ್ಷಕರು ಖಂಡಿತ ಕೈ ಬಿಡೋದಿಲ್ಲ.

ಇದೀಗ 36ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಆದರೆ ಈ ಬಾರಿ ವೀಕ್ಷಕರ ಊಹೆ ತಪ್ಪಾಗಿದೆ. ಕಳೆದ ಕೆಲವು ವಾರಗಳಿಂದ ಭರ್ಜರಿ ಟ್ವಿಸ್ಟ್-ಟರ್ನ್ ಮೂಲಕ ಸಾಗುತ್ತಿರುವ ಝೀ ಕನ್ನಡದ ಅಮೃತಧಾರೆ ಧಾರಾವಾಹಿ ನಂಬರ್ ಒನ್ ಸ್ಥಾನದಲ್ಲಿ ಇರಬಹುದು ಎಂದು ನಂಬಲಾಗಿತ್ತು. ಆದರೆ, ಇದು ಸುಳ್ಳಾಗಿದೆ. ಈ ಧಾರಾವಾಹಿ 8.1 ಟಿವಿಆರ್​ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಸಾಕಷ್ಟು ಟ್ವಿಸ್ಟ್​ಗಳು ಕೆಲವರಿಗೆ ಇಷ್ಟ ಆದರೆ, ಇನ್ನೂ ಕೆಲವರಿಗೆ ಬೇಸರ ತಂದಿದೆ.

ಇನ್ನು ನಂಬರ್ ಒನ್ ಸ್ಥಾನದಲ್ಲಿ ಕರ್ಣ ಭದ್ರವಾಗಿದ್ದಾನೆ. 9.5 ಟಿವಿಆರ್ ಪಡೆದುಕೊಂಡು ಮತ್ತೆ ಕನ್ನಡದ ನಂಬರ್ ಒನ್ ಧಾರಾವಾಹಿ ಆಗಿದೆ. 9.2 ಟಿವಿಆರ್ ದಾಖಲಿಸಿ ಅಣ್ಣಯ್ಯ ಎರಡನೇ ಸ್ಥಾನದಲ್ಲಿದೆ. ಲಕ್ಷ್ಮೀ ನಿವಾಸ ಸೀರಿಯಲ್‌ 8.4 ಟಿವಿಆರ್​ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಶಾಕಿಂಗ್ ಎಂದರೆ, ಹಿಂದೆಲ್ಲಾ 8+ ಅಥವಾ 9+ ಟಿವಿಆರ್‌ ಪಡೆದುಕೊಳ್ಳುತ್ತಿದ್ದ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ 36ನೇ ವಾರ ಕೇವಲ 4.4 ಟಿವಿಆರ್ ಪಡೆದುಕೊಂಡಿದೆ. ಇದಕ್ಕೆ ಕಾರಣ ಸಮಯ ಬದಲಾವಣೆ. ಹಿಂದೆ ಪ್ರೈಮ್ ಟೈಮ್‌ನಲ್ಲಿ ಈ ಸೀರಿಯಲ್ ಪ್ರಸಾರವಾಗುತ್ತಿತ್ತು. ಆದ್ರೀಗ ಟೈಮಿಂಗ್ಸ್ ಚೇಂಜ್ ಮಾಡಲಾಗಿದೆ. 6 ಗಂಟೆಯ ಸ್ಲಾಟ್‌ನಲ್ಲಿ ಟೆಲಿಕಾಸ್ಟ್ ಆಗುತ್ತಿರುವ ಕಾರಣ ಟಿಆರ್​ಪಿ ಡೌನ್ ಆಗಿದೆ.

Karna Serial: ಅಪ್ಪನ ಮುಂದೆ ಪ್ರೀತಿ ಬಿಚ್ಚಿಟ್ಟ ಕರ್ಣ: ನಿಧಿ-ಕರ್ಣ ಪ್ರೇಮ ಸಂಗಮಕ್ಕೆ ರಮೇಶನೆ ಸೇತುವೆ

ಇನ್ನು ಕಲರ್ಸ್ ಕನ್ನಡದ ವಿಚಾರಕ್ಕೆ ಬಂದರೆ, ನಂದಗೋಕುಲ ಧಾರಾವಾಹಿ ಟಾಪ್​ನಲ್ಲಿದೆ. ಈ ಧಾರಾವಾಹಿಗೆ 5.6 ಟಿವಿಆರ್ ಲಭಿಸಿದೆ. ಭಾಗ್ಯ ಲಕ್ಷ್ಮೀ ಧಾರಾವಾಹಿ ಮತ್ತು ಮುದ್ದು ಸೊಸೆ ಅರ್ಬಲ್‌ + ರೂರಲ್‌ ಮಾರ್ಕೆಟ್‌ನಲ್ಲಿ 4.9 ಟಿವಿಆರ್‌ ಪಡೆದು ಕಲರ್ಸ್​ನ ಎರಡನೇ ಧಾರಾವಾಹಿ ಆಗಿದೆ.

ಇತ್ತೀಚೆಗೆ ಆರಂಭವಾದ ಅಕುಲ್ ಬಾಲಾಜಿ ನಡೆಸಿಕೊಡುವ ಹಳ್ಳಿ ಪವರ್ ಶೋ ಲಾಂಚಿಂಗ್ ಈವೆಂಟ್​​ಗೆ 1.5 ಟಿವಿಆರ್ ಹಾಗೂ ಮೊದಲ ವೀಕ್​ನಲ್ಲಿ 1.7 ಟಿವಿಆರ್​ನ ಪಡೆದುಕೊಂಡಿದೆ.