BBK 11 Finale, Hanumantha: ಹನುಮಂತುಗೆ ‘ದೋಸ್ತಾ ನಿನಗೆ ಮನದಾಳದ ಅಭಿನಂದನೆಗಳು’ ಎಂದ ಬಿಗ್ ಬಾಸ್
ಹುನಮಂತು ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಮನೆಯೊಳಗೆ ಬಂದ ಹೆಚ್ಚಿನ ಜನರು ಇವರ ಫ್ಯಾನ್ಸ್ ಆಗಿದ್ದಾರೆ. ಇದೀಗ ಬಿಗ್ ಬಾಸ್ ಕೂಡ ಇವರನ್ನು ಹಾಡಿಹೊಗಳಿದ್ದಾರೆ. ‘‘ಬಿಗ್ ಬಾಸ್ನ ಈ ಸೀಸನ್ನ ಒಂದು ಹೊಸ ಸ್ವರವನ್ನು ತಂದುಕೊಟ್ಟ ಗ್ರಾಮೀಣ ತ್ರತಿಭೆ ಹನುಮಂತ.. ದೋಸ್ತಾ ನಿನಗೆ ಮನದಾಳದ ಅಭಿನಂದನೆಗಳು’’ ಎಂದು ಹನುಮಂತು ಬಗ್ಗೆ ಬಿಗ್ ಬಾಸ್ ಮಾತನಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ ಇಂದು ಮತ್ತೊಮ್ಮೆ ಇಡೀ ಕರ್ನಾಟಕದ ಎಲ್ಲರ ಮನೆ ಗೆದ್ದು ಫೈನಲ್ಗೆ ತಲುಪಿದ್ದಾರೆ. ತಮ್ಮ ನಡತೆ, ಮಾತಿನ ಶೈಲಿಗಳಿಂದಲೇ ಕೇವಲ ಸ್ಪರ್ಧಿಗಳನ್ನು ಮಾತ್ರವಲ್ಲದೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದಾರೆ. ಇವರ ಗ್ರಾಮೀಣ ಸೊಗಡಿನ ಭಾಷೆ, ಹಾಡುಗಳಿಗೆ ಎಲ್ಲರೂ ಫಿದಾ ಆಗಿದ್ದಾರೆ. ಉತ್ತರ ಕರ್ನಾಟಕದವರಾದ ಇವರು ಫಿಕ್ಟರ್ ಇಲ್ಲದೇ ಆಡುವ ಕೆಲವು ಮಾತುಗಳು ಕೂಡ ನಗು ಉಕ್ಕಿಸಿವೆ.
ಹೀಗಾಗಿಯೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಗೆಲ್ಲಬಹುದು ಎನ್ನಲಾಗುತ್ತಿರುವ ಮೊದಲ ಲಿಸ್ಟ್ನಲ್ಲಿ ಇವರ ಹೆಸರಿದೆ. ಹೆಚ್ಚೇನೂ ಲೆಕ್ಕಾಚಾರ ಹಾಕದೇ ಅವರ ಆಟ ಅವರು ಆಡುತ್ತಾ ಬಂದಿದ್ದಾರೆ ಆಡುತ್ತಾರೆ. ಯಾರ ಬಗ್ಗೆಯೂ ಕೆಟ್ಟ ಮಾತುಗಳನ್ನು ಆಡಿಲ್ಲ. ವೈಯಕ್ತಿಕ ದ್ವೇಷ ಎಂಬುದು ಅವರಲ್ಲಿ ಇಲ್ಲವೇ ಇಲ್ಲ. ಪಕ್ಷಪಾತ ಕೂಡ ಮಾಡುವುದಿಲ್ಲ. ಈ ಗುಣವನ್ನು ಮನೆ ಮಂದಿ ಮತ್ತು ವೀಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ. ಟಾಸ್ಕ್ಗಳಲ್ಲೂ ಹನುಮಂತು ಹಿಂದೆ ಬಿದ್ದಿಲ್ಲ. ಘಟಾನುಘಟಿಗಳಿಗೂ ಪೈಪೋಟಿ ನೀಡಿ ಅವರು ಫಿನಾಲೆಗೆ ಬಂದಿದ್ದಾರೆ.
ಹೀಗೆ ಯಾರೂ ಊಹಿಸದ ರೀತಿಯಲ್ಲಿ ಫಿನಾಲೆಗೆ ಬಂದಿರುವ ಹನುಮಂತು ಅವರನ್ನು ಬಿಗ್ ಬಾಸ್ ಹಾಡಿಹೊಗಳಿದ್ದಾರೆ. ಬಿಗ್ ಬಾಸ್ ಮನೆಗೆ ಪ್ರೇಕ್ಷಕ ಮಹಾಪ್ರಭುಗಳು ಎಂಟ್ರಿ ಕೊಟ್ಟಿದ್ದಾರೆ. ಇವರು ಎದುರು ಆರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಬಿಗ್ ಬಾಸ್ ಜರ್ನಿ ಹೇಗಿತ್ತು, ಇಲ್ಲಿನ ಅಡೆತಡೆಗಳು ಏನು, ಯಾರು ಟಾರ್ಗೆಟ್ ಮಾಡಿದರು, ಟಾಸ್ಕ್ಗಳನ್ನು ಹೇಗೆಲ್ಲಾ ಆಡಲಾಯಿತು ಎನ್ನುವ ಮಾಹಿತಿಯನ್ನು ಅಭಿಮಾನಿ ದೇವರುಗಳ ಜೊತೆ ಶೇರ್ ಮಾಡಿಕೊಳ್ಳಲಿದ್ದಾರೆ. ನನಗೆ ವೋಟ್ ಮಾಡಿ ಗೆಲ್ಲಿಸಿ ಎಂದು ತಮ್ಮದೇ ಮಾದರಿಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ವೋಟ್ ಕೇಳಲಿದ್ದಾರೆ.
ಇದಕ್ಕಾಗಿ ಬಿಗ್ ಬಾಸ್ ವೇದಿಕೆ ಕೂಡ ಸಿದ್ಧ ಪಡಿಸಿದ್ದಾರೆ. ಗಾರ್ಡರ್ ಏರಿಯಾ ಪೂರ್ತಿ ಅಭಿಮಾನಿಗಳು ತುಂಬಿದ್ದು ತಮ್ಮ ನೆಚ್ಚಿನ ಸ್ಪರ್ಧಿಗಳ ಪೋಸ್ಟರ್ ಹಿಡಿದು ಲವ್ ಯು ತ್ರಿವಿಕ್ರಮ್, ವೋಟ್ ಫಾರ್ ಹನುಮಂತ ಎಂದೆಲ್ಲ ಬರೆದುಕೊಂಡು ಬಂದಿದ್ದಾರೆ. ಫಿನಾಲೆ ಕಂಟೆಸ್ಟೆಂಟ್ಗಳು ಒಬ್ಬೊಬ್ಬರಾಗಿ ಗಾರ್ಡರ್ ಏರಿಯಾದಲ್ಲಿರುವ ಕಟಕಟೆಯಲ್ಲಿ ನಿಂತು ತಮ್ಮ ಜರ್ನಿಯ ಬಗ್ಗೆ ಹೇಳಿ ವೋಟ್ ಮಾಡುವಂತೆ ಕೇಳಿಕೊಳ್ಳಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ.
ಹುನಮಂತು ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಮನೆಯೊಳಗೆ ಬಂದ ಹೆಚ್ಚಿನ ಜನರು ಇವರ ಫ್ಯಾನ್ಸ್ ಆಗಿದ್ದಾರೆ. ಇದೀಗ ಬಿಗ್ ಬಾಸ್ ಕೂಡ ಇವರನ್ನು ಹಾಡಿಹೊಗಳಿದ್ದಾರೆ. ‘‘ಬಿಗ್ ಬಾಸ್ನ ಈ ಸೀಸನ್ನ ಒಂದು ಹೊಸ ಸ್ವರವನ್ನು ತಂದುಕೊಟ್ಟ ಗ್ರಾಮೀಣ ತ್ರತಿಭೆ ಹನುಮಂತ.. ದೋಸ್ತಾ ನಿನಗೆ ಮನದಾಳದ ಅಭಿನಂದನೆಗಳು’’ ಎಂದು ಹನುಮಂತು ಬಗ್ಗೆ ಬಿಗ್ ಬಾಸ್ ಮಾತನಾಡಿದ್ದಾರೆ. ಆದರೆ, ಹನುಮಂತ ಅವರು ಇಷ್ಟು ಜನರನ್ನು ಕಂಡು, ನಿಮ್ಮನ್ನ ನೋಡಿ ಹೆದರಿಗೆ ಆಗ್ತಿದೆ ಎಂದು ಹೇಳಿದ್ದಾರೆ.
BBK 11 Finale, Trivikram: ‘ಈ ವ್ಯಕ್ತಿತ್ವದ ಆಟದಲ್ಲಿ ವ್ಯಕ್ತಿಯಾಗಿ ಉತ್ತಮ ತ್ರಿವಿಕ್ರಮ’ ಎಂದ ಬಿಗ್ ಬಾಸ್