BBK 12: ಪ್ರೋಮೋದಲ್ಲೇ ಹೊಸ ಸೀಸನ್ನ ಕಾನ್ಸೆಪ್ಟ್ ಬಗ್ಗೆ ಹಿಂಟ್ ಕೊಟ್ಟ ಬಿಗ್ ಬಾಸ್?
ಪ್ರೋಮೋದಲ್ಲಿ ಕರ್ನಾಟಕದ ವಿವಿಧ ರಾಜ್ಯಗಳ ಸಾಂಸ್ಕೃತಿಕ ಆಚರಣೆಯ ತುಣುಕು ತೋರಿಸಲಾಗಿದೆ. ಇದರ ಜತೆ ಬಿಗ್ ಬಾಸ್ ನೋಡುತ್ತಾ ಗಾಸಿಪ್ ಮಾಡುವ ಜನ ಸಮೂಹವನ್ನು ತೋರಿಸಲಾಗಿದೆ. ಕರ್ನಾಟಕದ ವೈವಿಧ್ಯತೆ ಎತ್ತಿ ಹಿಡಿದಿರುವುದರಿಂದ ಕನ್ನಡಕ್ಕೆ ಮೊದಲ ಆಧ್ಯತೆ ಎಂಬುದು ಗೊತ್ತಾಗಿದೆ. ಹೀಗಾಗಿ ಕರುನಾಡಿಗೆ ಸಂಬಂಧಿಸಿದ ಕಾನ್ಸೆಪ್ಟ್ ಏನಾದರು ಈ ಸೀಸನ್ನಲ್ಲಿ ಇರಲಿದೆಯಾ? ಎಂಬ ಗುಸು ಗುಸು ಕೂಡ ಕೇಳಿಬರುತ್ತಿದೆ.

BBK 12 Promo -

ಬಿಗ್ ಬಾಸ್ ಕನ್ನಡ ಹೊಸ 12ನೇ ಸೀಸನ್‌ಗೆ (Bigg Boss Kannada 12) ದಿನಗಣನೆ ಶುರುವಾಗಿದೆ. ಇದೇ ಸೆಪ್ಟೆಂಬರ್ 28 ರಂದ ಬಿಬಿಕೆ 12 ಗ್ರ್ಯಾಂಡ್ ಓಪನಿಂದ ನಡೆಯಲಿದೆ. ಸೆ. 29 ರಿಂದ ಮತ್ತೆ ದೊಡ್ಮನೆ ಆಟ ಪ್ರಾರಂಭಗಾಗಲಿದೆ. ಮೊನ್ನೆಯಷ್ಟೆ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿತು. ಈ ಬಾರಿ ಹೊಸ ಸೀಸನ್‌ಗೆ ತಕ್ಕಂತೆ ವಿಶೇಷ ಪ್ರೋಮೋವನ್ನು ಶೂಟ್ ಮಾಡಲಾಗಿದೆ. ಕಿಚ್ಚ ಸುದೀಪ್ ಅಂತೂ ಉದ್ದನೆಯ ಹೊಸ ಹೇರ್ ಸ್ಟೈಲ್ನಲ್ಲಿ ಸಖತ್ ಆಗಿ ಮಿಂಚಿದ್ದಾರೆ.
ಪ್ರೋಮೋದಲ್ಲಿ ಕರ್ನಾಟಕದ ವಿವಿಧ ರಾಜ್ಯಗಳ ಸಾಂಸ್ಕೃತಿಕ ಆಚರಣೆಯ ತುಣುಕು ತೋರಿಸಲಾಗಿದೆ. ಇದರ ಜತೆ ಬಿಗ್ ಬಾಸ್ ನೋಡುತ್ತಾ ಗಾಸಿಪ್ ಮಾಡುವ ಜನ ಸಮೂಹವನ್ನು ತೋರಿಸಲಾಗಿದೆ. ‘ನನ್ನ ಪ್ರೀತಿಯ ಸಮಸ್ತ ಕನ್ನಡ ಕುಟುಂಬಕ್ಕೆ ಸ್ವಾಗತ' ಎಂದು ಕಿಚ್ಚ ಸುದೀಪ್ ಪ್ರೋಮೋದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ‘‘ಹೊಸ ಸೆಟ್ ರೆಡಿ.. ಹೊಸ ಕಂಟೆಸ್ಟೆಂಟ್ ರೆಡಿ.. ಏಳು ಕೋಟಿ ಕನ್ನಡಿಗರು ಕೂಡ ರೆಡಿ.. ಸರ್ ನೀವು..?'' ಎಂಬ ಬ್ಯಾಕ್ಗ್ರೌಂಡ್ನಲ್ಲಿ ಮಹಿಳಾ ವಾಯ್ಸ್ ಕೇಳಿಸುತ್ತದೆ. ಇದಕ್ಕೆ ಸುದೀಪ್ ಕೂಡ 'ನಾನು ರೆಡಿ' ಎಂದು ಹೇಳಿದ್ದಾರೆ.
ಪ್ರೋಮೋದಲ್ಲಿ ತೋರಿಸಿರುವಂತೆ ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕರ್ನಾಟಕದ ವಿವಿಧ ಪ್ರದೇಶಗಳಿಂದ ಸ್ಪರ್ಧಿಗಳು ಬರ್ತಾರಾ? ಬಿಗ್ ಬಾಸ್ ಮನೆಯಲ್ಲಿ ನಾವು ವಿವಿಧತೆಯಲ್ಲಿ ಏಕತೆಯನ್ನ ಕಾಣಬಹುದಾ? ಪ್ರತಿ ಮೂರು ಮೈಲಿಗೊಂದು ಭಾಷೆ, ಭಾವ, ಊಟ, ತೊಡುವ ಬಟ್ಟೆ ಎಂಬಂತೆ ಬೇರೆ ಬೇರೆ ಪ್ರದೇಶಗಳಿಂದ ಸ್ಪರ್ಧಿಗಳನ್ನ ಕರೆತಂದು ಬಿಗ್ ಬಾಸ್ ಮನೆಯಲ್ಲಿ ಒಟ್ಟುಗೂಡಿಸಬಹುದಾ? ಎಂಬ ಅನುಮಾನ ಮೂಡಿದೆ.
ಮತ್ತೊಂದೆಡೆ ಪ್ರೋಮೋದಲ್ಲಿ ಕರ್ನಾಟಕದ ವೈವಿಧ್ಯತೆ ಎತ್ತಿ ಹಿಡಿದಿರುವುದರಿಂದ ಕನ್ನಡಕ್ಕೆ ಮೊದಲ ಆಧ್ಯತೆ ಎಂಬುದು ಗೊತ್ತಾಗಿದೆ. ಹೀಗಾಗಿ ಕರುನಾಡಿಗೆ ಸಂಬಂಧಿಸಿದ ಕಾನ್ಸೆಪ್ಟ್ ಏನಾದರು ಈ ಸೀಸನ್ನಲ್ಲಿ ಇರಲಿದೆಯಾ? ಎಂಬ ಗುಸು ಗುಸು ಕೂಡ ಕೇಳಿಬರುತ್ತಿದೆ. ಪ್ರೋಮೋದಲ್ಲೇ, ಒಬ್ಬರಿಗೆ ನ್ಯೂಸ್ ಇಷ್ಟ, ಇನ್ನೊಬ್ಬರಿಗೆ ಸ್ಪೋರ್ಟ್ಸ್, ಒಬ್ಬರಿಗೆ ಸಿನಿಮಾ, ಇನ್ನೊಬ್ಬರಿಗೆ ರೀಲ್ಸ್, ಸಾಂಗ್ಸ್, ಡ್ಯಾನ್ಸ್, ಸೀರಿಯಲ್ಸ್ ಇಷ್ಟ ಅಂತ ಹೇಳಲಾಗಿದೆ. ಹೀಗಾಗಿ ಈ ಬಾರಿ ನ್ಯೂಸ್ ಆಂಕರ್, ಕ್ರೀಡಾಪಟು, ರೀಲ್ಸ್ ಸ್ಟಾರ್, ಗಾಯಕರು, ನೃತ್ಯಗಾರರು, ಕಿರುತೆರೆ ಕಲಾವಿದರು ಹಾಗೂ ಸಿನಿಮಾ ತಾರೆಯರು ಸ್ಪರ್ಧಿಸುವುದು ಖಚಿತ ಎಂಬುದನ್ನು ಪ್ರೋಮೋ ಮೂಲಕ ತೋರಿಸಲಾಗಿದೆ.
Lakshmi Nivasa: ಲಕ್ಷ್ಮೀ ನಿವಾಸ ಧಾರಾವಾಹಿ ನಿರ್ಮಾಣಕ್ಕೆ ಹಣ ಪಡೆದು ಸೃಜನ್ ಲೋಕೇಶ್‌ಗೆ ಕೋಟಿಯ ವಂಚನೆ