BBK 12 Grand Opening: ಇಂದು ಬಿಗ್ ಬಾಸ್ ಕನ್ನಡ 12 ಗ್ರ್ಯಾಂಡ್ ಓಪನಿಂಗ್: ಯಾರೆಲ್ಲ ಸ್ಪರ್ಧಿಗಳು?
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಇಂದು ಚಾಲನೆ ಸಿಗಲಿದೆ. ಈಗಾಗಲೇ ಕಲರ್ಸ್ ಕನ್ನಡ ತನ್ನ ಚಿಕ್ಕ ಪ್ರೋಮೋ ಮೂಲಕ ಮನೆಯ ಲುಕ್ ರಿವೀಲ್ ಮಾಡಿದ್ದು, ಅರಮನೆಯಂತೆ ಕಂಗೊಳಿಸುತ್ತಿದೆ. ಕರ್ನಾಟಕದ ಶ್ರೀಮಂತ ಇತಿಹಾಸವನ್ನ ಪ್ರತಿಬಿಂಬಿಸುವಂತೆ ಮನೆಯ ವಿನ್ಯಾಸವನ್ನ ತೋರಿಸಲಾಗಿದೆ.

BBK 12 Grand Opening -

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ (Bigg Boss Kannada season 12) ಇಂದು ಚಾಲನೆ ಸಿಗಲಿದೆ. ಬಿಗ್ ಬಾಸ್ ರಿಯಾಲಿಟಿ ಶೋ, ಈ ಬಾರಿ "ಎಕ್ಸ್ ಪೆಕ್ಟ್ ದ ಅನ್ ಎಕ್ಸ್ ಪೆಕ್ಟೆಟ್" ಎಂಬ ಥೀಮ್‌ನಲ್ಲಿ ಹಲವು ಅನಿರೀಕ್ಷಿತ ಗಳನ್ನು ಇಟ್ಟುಕೊಂಡು ಪ್ರೇಕ್ಷಕರ ಮನರಂಜನೆಯ ಹೊಸ ಭಾಷ್ಯವನ್ನು ಬರೆಯಲು ಸಜ್ಜಾಗಿದೆ. ಈಗಾಗಲೇ ಕಲರ್ಸ್ ಕನ್ನಡ ತನ್ನ ಚಿಕ್ಕ ಪ್ರೋಮೋ ಮೂಲಕ ಮನೆಯ ಲುಕ್ ರಿವೀಲ್ ಮಾಡಿದ್ದು, ಅರಮನೆಯಂತೆ ಕಂಗೊಳಿಸುತ್ತಿದೆ. ಕರ್ನಾಟಕದ ಶ್ರೀಮಂತ ಇತಿಹಾಸವನ್ನ ಪ್ರತಿಬಿಂಬಿಸುವಂತೆ ಮನೆಯ ವಿನ್ಯಾಸವನ್ನ ತೋರಿಸಲಾಗಿದೆ. ಮೈಸೂರು ದಸರಾದ ಸಂಕೇತವಾದ ಆನೆಯ ಚಿತ್ರಣಗಳು ಮನೆಯ ಎಂಟ್ರನ್ಸ್‌ನಲ್ಲಿ ಕಾಣಬಹುದು.
ನಮ್ಮ ರಿಚ್ ಆಗಿರೋ ಕರ್ನಾಟಕ ಒಂದೇ ಜಾಗದಲ್ಲಿ ಸ್ಕೆಚ್ ಮಾಡಿದ್ರೆ, ಹೇಗಿರುತ್ತೆ ಅಂತ ನೀವೇನಾದರೂ ನೋಡಬೇಕು ಅಂದರೆ, ಹೀಗಿರುತ್ತೆ. ಒಂದು ಅರಮನೆಯನ್ನ ಉಳಿಸಿಕೊಳ್ಳೋದಕ್ಕೆ ಎಷ್ಟೋ ಯುದ್ದಗಳು ನಡೆದಿದೆ. ಈ ಅರಮನೆಯಲ್ಲಿ ತಮ್ಮನ್ನ ತಾವು ಉಳಿಸಿಕೊಳ್ಳೋದಕ್ಕೆ ಬಹಳ ಯುದ್ದಗಳು ನಡೆಯಲಿದೆ. ನಮ್ಮ ನಾಡಿಗೆ ದಸರಾ ಹಬ್ಬ ಶುರುವಾಗಿ, ಒಂದು ವಾರ ಆಯ್ತು. ನಮ್ಮ ಬಿಗ್ ಬಾಸ್ ಮನೆಯಲ್ಲಿ ಅಸಲಿ ಹಬ್ಬ ಇವಾಗ ಶುರು ಎಂದು ಕಿಚ್ಚ ಸುದೀಪ್ ಪ್ರೋಮೋದಲ್ಲಿ ಹೇಳಿಕೊಂಡಿದ್ದಾರೆ.
ಈ ಬಾರಿ ದೊಡ್ಮನೆಗೆ ಯಾರೆಲ್ಲ ಹೋಗುತ್ತಾರೆ ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹೆಸರು ಹರಿದಾಡುತ್ತಿದೆ. ಇದರ ಮಧ್ಯೆ ಕಾಕ್ರೋಚ್ ಸುಧಿ ಅವರು ಬಿಗ್ ಬಾಸ್ ಮನೆಗೆ ಬರುವುದು ಬಹುತೇಕ ಫೈನಲ್ ಆಗಿದೆ. ಉಳಿದಂತೆ ಗೀತಾ ಧಾರಾವಾಹಿ ಮೂಲಕ ಕರ್ನಾಟಕ ಜನತೆಯಲ್ಲಿ ಮನದಲ್ಲಿ ನೆಲೆಸಿರುವ ಧನುಷ್ ಬಿಗ್ ಬಾಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
Bigg Boss Kannada: ಬಿಗ್ ಬಾಸ್ ನ ಮೊದಲ ಸ್ಪರ್ಧಿ ಬಗ್ಗೆ ಸಿಕ್ತು ಸುಳಿವು! ಯಾರಿವನು ಮಾಸ್ಕ್ ಮ್ಯಾನ್!
ಇನ್ನು ಮೀಡಿಯಾ ಕೋಟಾದಿಂದ ದಿವ್ಯಾ ವಸಂತ್ ಬರಲಿದ್ದಾರೆ ಎನ್ನಲಾಗಿದೆ. ಅನನ್ಯಾ ಅಮರ್, ಗಿಲ್ಲಿ ನಟ, ಸತ್ಯ ಹೀರೋ ನಟ ಸಾಗರ್, ಶ್ವೇತಾ ಪ್ರಸಾದ್ ಹೆಸರು ಕೂಡ ಪಟ್ಟಿಯಲ್ಲಿ ಇದೆ. ಇನ್ನು ಪಡ್ಡೆ ಹುಲಿ ಸಿನಿಮಾದ ಮೂಲಕ ಗಮನ ಸೆಳೆದ ನಟ ಶ್ರೇಯಸ್ ಮಂಜು ಕೂಡ ಬಿಗ್ ಬಾಸ್ ಸೀಸನ್ 12ಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗೆ ಅನೇಕ ಹೆಸರುಗಳು ಕೇಳಿಬರುತ್ತಿದ್ದರೂ ಅಧಿಕೃತವಾಗಿ ಯಾರೆಲ್ಲ ಮನೆಯೊಳಗೆ ಹೋಗುತ್ತಾರೆ ಎಂಬುದು ಇನ್ನೇನು ಕೆಲವೇ ಗಂಟೆಗಳಲ್ಲಿ ರಿವೀಲ್ ಆಗಲಿದೆ.