ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12 Live Streaming: ಬಿಗ್ ಬಾಸ್ ಕನ್ನಡ 12 ಗ್ರ್ಯಾಂಡ್ ಓಪನಿಂಗ್ ಎಷ್ಟು ಗಂಟೆಗೆ?, ಆನ್​ಲೈನ್​ನಲ್ಲಿ ನೋಡುವುದು ಹೇಗೆ?

BBK 12 Live Streaming: ಇಂದು ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ನಡೆಯಲಿದ್ದು, ನಾಳೆಯಿಂದ ದೊಡ್ಮನೆಯ ಅಸಲಿ ಆಟ ಶುರುವಾಗಲಿದೆ. ಹಾಗಾದರೆ ಬಿಬಿಕೆ 12 ಗ್ರ್ಯಾಂಡ್ ಓಪನಿಂಗ್ ಎಷ್ಟು ಗಂಟೆಗೆ ಶುರುವಾಗಲಿದೆ, ಯಾವುದರಲ್ಲಿ ನೇರಪ್ರಸಾರ, ಆನ್ಲೈನ್ನಲ್ಲಿ ಲೈವ್ ವೀಕ್ಷಿಸುವುದು ಹೇಗೆ ಎಂಬುದನ್ನು ನೋಡೋಣ.

BBK 12 ಓಪನಿಂಗ್ ಎಷ್ಟು ಗಂಟೆಗೆ?, ಆನ್​ಲೈನ್​ನಲ್ಲಿ ನೋಡುವುದು ಹೇಗೆ?

BBK 12 Live Streaming -

Profile Vinay Bhat Sep 28, 2025 7:07 AM

‘‘Expect the Unexpected’’ ಎಂಬ ಥೀಮ್‌ನೊಂದಿಗೆ ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಎಲ್ಲ ತಯಾರಿ ನಡೆದಿದೆ. ಇಂದು ಗ್ರ್ಯಾಂಡ್ ಓಪನಿಂಗ್ ನಡೆಯಲಿದ್ದು, ನಾಳೆಯಿಂದ ದೊಡ್ಮನೆಯ ಅಸಲಿ ಆಟ ಶುರುವಾಗಲಿದೆ. ಈ ಬಾರಿ ಹಲವು ಅನಿರೀಕ್ಷಿತ ತಿರುವುಗಳ ಮೂಲಕ ಬಿಗ್ ಬಾಸ್ ಶೋ ಸಾಗಲಿದೆಯಂತೆ. ಈ ಹಿಂದಿನ ಸೀಸನ್‌ನಲ್ಲಿ ಸ್ವರ್ಗ, ನರಕ ಎಂಬ ಕಾನ್ಸೆಪ್ಟ್ ಇತ್ತು. ಆದರೆ, ಈ ಬಾರಿ ಹಾಗಲ್ಲ.. ಏನು ಅಂದುಕೊಳ್ತೀವೋ.. ಅದು ಆಗಲ್ಲ ಎಂದು ಸುದೀಪ್ ಪ್ರೊಮೋದಲ್ಲಿ ಒತ್ತಿ ಹೇಳಿದ್ದಾರೆ. ಹೀಗಾಗಿ ಈ ಬಾರಿ ಏನೆಲ್ಲ ಇರಲಿದೆ ಎಂಬುದು ರೋಚಕತೆ ಸೃಷ್ಟಿಸಿದೆ.

ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ಎಷ್ಟು ಗಂಟೆಗೆ ಶುರುವಾಗಲಿದೆ, ಯಾವುದರಲ್ಲಿ ನೇರಪ್ರಸಾರ, ಆನ್​ಲೈನ್​ನಲ್ಲಿ ಲೈವ್ ವೀಕ್ಷಿಸುವುದು ಹೇಗೆ ಎಂಬುದನ್ನು ನೋಡೋಣ.

ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ಎಷ್ಟು ಗಂಟೆಗೆ?

ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ಸೆಪ್ಟೆಂಬರ್ 28 ಭಾನುವಾರ ಸಂಜೆ 6 ಗಂಟೆಗೆ ಶುರುವಾಗಲಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ಎಲ್ಲಿ ವೀಕ್ಷಿಸಬಹುದು?

ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ಕಲರ್ಸ್ ಕನ್ನಡ ಚಾನೆಲ್​ನಲ್ಲಿ ವೀಕ್ಷಿಸಬಹುದು.

ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ಆನ್​ಲೈನ್​ನಲ್ಲಿ ಯಾವುದರಲ್ಲಿ ವೀಕ್ಷಿಸಬಹುದು?

ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ಆನ್​ಲೈನ್​ನಲ್ಲಿ ಜಿಯೋ ಹಾಟ್​ಸ್ಟಾರ್ ಆ್ಯಪ್ ಮೂಲಕ ವೀಕ್ಷಿಸಬಹುದು.

ಬಿಗ್ ಬಾಸ್ ಕನ್ನಡ ಸೀಸನ್ 12 ಪ್ರತಿದಿನ ರಾತ್ರಿ ಎಷ್ಟು ಗಂಟೆಗೆ ಪ್ರಸಾರವಾಗಲಿದೆ?

ಬಿಗ್ ಬಾಸ್ ಕನ್ನಡ ಸೀಸನ್ 12 ಸೋಮವಾರದುಂದ ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ವೀಕ್ಷಿಸಬಹುದು. ಹಾಗೆಯೆ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರಕಾಣಲಿದೆ.

BBK 12 Grand Opening: ಇಂದು ಬಿಗ್ ಬಾಸ್ ಕನ್ನಡ 12 ಗ್ರ್ಯಾಂಡ್ ಓಪನಿಂಗ್: ಯಾರೆಲ್ಲ ಸ್ಪರ್ಧಿಗಳು?

ಇದರ ಜೊತೆಗೆ ಮನೆಯೊಳಗೆ ನಡೆಯುವ ವಿಚಾರಗಳ, ಪ್ರತಿ ಕ್ಷಣವನ್ನೂ ಜಿಯೋ ಹಾಟ್‌ಸ್ಟಾರ್‍‌ನಲ್ಲಿ 24ಗಂಟೆ ಲೈವ್‌ ಚಾನೆಲ್‌ನಲ್ಲಿ ನೋಡಬಹುದು. ನೋಡುವುದರ ಜೊತೆಗೆ ವೀಕ್ಷಕರಿಗೆ ಆಡುವ ಮಜಾ ನೀಡು ವುದಕ್ಕಾಗಿ ಜೀತೋ ಧನ್ ಧನಾ ಧನ್ ಸ್ಪರ್ಧೆ ಇದೆ. ಎಪಿಸೋಡ್ ಪ್ರಸಾರವಾಗುವ ವೇಳೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಕೇಳುವ ಸರಳ ಪ್ರಶ್ನೆಗಳಿಗೆ ಉತ್ತರಿಸಿದರೆ ಚಿನ್ನದ ನಾಣ್ಯವನ್ನು ನಿಮ್ಮದಾಗಿಸಿ ಕೊಳ್ಳಬಹುದು. ಫ್ಯಾನ್‌ ಝೋನ್‌ನಲ್ಲಿ ಸಕ್ರಿಯರಾಗಿದ್ದರೆ ಸೀಸನ್ ಅಂತ್ಯದಲ್ಲಿ ನಡೆಯುವ ಫಿನಾಲೆಯಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವ ಅವಕಾಶ ಪಡೆಯಬಹುದು.