BBK 12: ಲೋಗೋ ಜೊತೆಗೆ ಈ ಬಾರಿಯ ಬಿಗ್ ಬಾಸ್ ಕಾನ್ಸೆಪ್ಟ್ನ ಹಿಂಟ್ ಕೊಟ್ಟ ಕಲರ್ಸ್?
ಈ ಬಾರಿ ಬಿಗ್ ಬಾಸ್ ಲೋಗೊ ಭಿನ್ನವಾಗಿದೆ. ಚಿನ್ನದ ಬಣ್ಣದ ಅಂಚು ಅದರೊಳಗೆ ವಜ್ರಗಳ ರೀತಿ ಕಾಣುವಂತೆ ಡಿಸೈನ್ ಮಾಡಲಾಗಿದೆ. ಬಿಗ್ ಬಾಸ್ನ ಲೋಗೋದ ಮಧ್ಯ ಭಾಗದಲ್ಲಿ ಗಡಿಯಾರವೊಂದು ಕಾಣುತ್ತದೆ. ಈ ಬಾರಿ ಲೋಗೋದಲ್ಲಿ ಗಡಿಯಾರ ಇರುವುದರಿಂದ ಸಮಯದ ಮೇಲೆ ಏನಾದರೂ ಕಾನ್ಸೆಪ್ಟ್ ಮಾಡಲಾಗಿದೆಯಾ? ಎಂಬ ಅನುಮಾನ ಹುಟ್ಟುಕೊಂಡಿದೆ.

Bigg Boss 12 Logo

ಬಿಗ್ ಬಾಸ್ ಕನ್ನಡ (Bigg Boss Kannada 12) ಹೊಸ ಸೀಸನ್ಗಾಗಿ ಕಾತುರದಿಂದ ಕಾಯುತ್ತಿದ್ದ ಫ್ಯಾನ್ಸ್ಗೆ ಕೊನೆಗೂ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಸ್ವಾತಂತ್ರ್ಯ ದಿನದಂದು ಆಗಸ್ಟ್ 15 ರಂದು ಬಿಗ್ ಬಾಸ್ ಕನ್ನಡ ಸೀಸನ್ 12ರ ಹೊಸ ಲೋಗೋ ಬಿಡುಗಡೆ ಮಾಡುವ ಮೂಲಕ ಸದ್ಯದಲ್ಲೇ ಅತಿ ದೊಡ್ಡ ರಿಯಾಲಿಟಿ ಶೋ ಶುರುವಾಗುವ ಸೂಚನೆ ನೀಡಿದೆ. ಇಷ್ಟು ದಿನ ಕಾಯುತ್ತಿದ್ದ ವೀಕ್ಷಕರಿಗೆ ಈ ಮೂಲಕ ಬಿಗ್ ಅಪ್ಡೇಟ್ ಅನ್ನು ಕೊಟ್ಟಿದೆ ಬಿಗ್ ಬಾಸ್ ತಂಡ. ಈ ಲೋಗೋ ಬಿಡುಗಡೆ ಜೊತೆಗೆ ಈ ಬಾರಿಯ ಕಾನ್ಸೆಪ್ಟ್ನ ಹಿಂಟ್ ಕೂಡ ತಂಡ ಕೊಟ್ಟಂತೆ ಕಾಣುತ್ತಿದೆ.
ಈ ಬಾರಿ ಬಿಗ್ ಬಾಸ್ ಲೋಗೊ ಭಿನ್ನವಾಗಿದೆ. ಚಿನ್ನದ ಬಣ್ಣದ ಅಂಚು ಅದರೊಳಗೆ ವಜ್ರಗಳ ರೀತಿ ಕಾಣುವಂತೆ ಡಿಸೈನ್ ಮಾಡಲಾಗಿದೆ. ಬಿಗ್ ಬಾಸ್ನ ಲೋಗೋದ ಮಧ್ಯ ಭಾಗದಲ್ಲಿ ಗಡಿಯಾರವೊಂದು ಕಾಣುತ್ತದೆ. ಲೋಗೋದ ಕಣ್ಣಿನಲ್ಲೇ 12 ಎಂದು ಡಿಸೈನ್ ಮಾಡಲಾಗಿದೆ. ಪ್ರತಿ ಸೀಸನ್‌ಗೂ ಆಯಾ ಕಾನ್ಸೆಪ್ಟ್ ಮೇಲೆ ಲೋಗೋ ಡಿಸೈನ್ ಆಗೋದು ವಾಡಿಕೆ. ಈ ಬಾರಿ ಲೋಗೋದಲ್ಲಿ ಗಡಿಯಾರ ಇರುವುದರಿಂದ ಸಮಯದ ಮೇಲೆ ಏನಾದರೂ ಕಾನ್ಸೆಪ್ಟ್ ಮಾಡಲಾಗಿದೆಯಾ? ಎಂಬ ಅನುಮಾನ ಹುಟ್ಟುಕೊಂಡಿದೆ.
ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ವಾಚ್ ಅಥವಾ ಗಡಿಯಾರ ಇರುವುದಿಲ್ಲ. ಹೀಗಿರುವಾಗ ಈ ಬಾರಿ ಲೋಗೋದಲ್ಲೇ ವಾಚ್ ಬಂದಿರುವ ಕಾರಣ ಸಮಯಕ್ಕೆ ಸಂಬಂಧಿಸಿದ ಡಿಫರೆಂಟ್ ಕಾನ್ಸೆಪ್ಟ್ ಇರಬಹುದು ಎಂಬ ಚರ್ಚೆ ನಡೆಯುತ್ತಿದೆ.
ಇನ್ನು ಬಿಗ್ ಬಾಸ್ ಕನ್ನಡದ 11 ಸೀಸನ್‌ಗಳನ್ನು ನಿರೂಪಣೆ ಮಾಡಿದ್ದ ಕಿಚ್ಚ ಸುದೀಪ್ 12ನೇ ಸೀಸನ್ ಮಾಡುವುದಿಲ್ಲ ಎಂದು ಹೇಳಿದ್ದರು. ಕಲರ್ಸ್ ಕನ್ನಡದ ಬಿಗ್ ಬಾಸ್ ತಂಡದೊಂದಿಗೆ ಚಿಕ್ಕದೊಂದು ಮನಸ್ತಾಪವಿದ್ದಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದರು. ಆದರೆ, ಕಲರ್ಸ್ ಟೀಮ್ ಕಿಚ್ಚನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, 12ನೇ ಸೀಸನ್ ಸೇರಿ ಇನ್ನೂ ನಾಲ್ಕು ಸೀಸನ್‌ಗಳನ್ನು ಇವರೇ ನಿರೂಪಣೆ ಮಾಡುತ್ತಿದ್ದಾರೆ.
ಸೆಪ್ಟೆಂಬರ್ ಅಂತ್ಯದಲ್ಲಿ ಬಿಗ್ ಬಾಸ್ 12 ಶುರುವಾಗಬಹುದು ಎನ್ನಲಾಗುತ್ತಿದ್ದು, ದಿನಾಂಕ ಇನ್ನೂ ಬಹಿರಂಗವಾಗಿಲ್ಲ. ಸ್ಪರ್ಧಿಗಳ ಸಂಭಾವ್ಯ ಪಟ್ಟಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಪೈಕಿ ನ್ಯೂಸ್ ಆಂಕರ್ ಚಂದನ್ ಶರ್ಮಾ, ಡಾ ಬ್ರೋ, ಅರ್ಚನಾ ಜೋಯಿಸ್, ಜಾಹ್ನವಿ, ಶ್ರೀ ಮಹಾದೇವ್, ಗಗನ್ ಚಿನ್ನಪ್ಪ, ಪೂಜಾ ಲೋಕೇಶ್, ನೂರು ಜನ್ಮಕೂ, ಗೀತಾ ಸೀರಿಯಲ್‌ನಲ್ಲಿ ನಟಿಸಿದ್ದ ಧನುಷ್ ಗೌಡ ಹೀಗೆ ಕೆಲವು ಹೆಸರುಗಳಿವೆ.
BBK 12: ಕಾದಿದ್ದು ಸಾಕು, ಬಿಗ್ ಬಾಸ್ ಈಸ್ ಬ್ಯಾಕ್: ಬಿಗ್ ಬಾಸ್ ಕನ್ನಡದ ಲೋಗೋ ಲಾಂಚ್