Boys vs Girls: ನಾನೇನು ಗತಿಗೆಟ್ಟಿದ್ದೀನಾ..?: ವೇದಿಕೆ ಮೇಲೆ ಗರಂ ಆದ ಚೈತ್ರಾ ಕುಂದಾಪುರ
ಬಾಯ್ಸ್ V/S ಗರ್ಲ್ಸ್ ರಿಯಾಲಿಟಿ ಶೋ ವೇದಿಕೆಯಲ್ಲಿ ನಿರೂಪಕಿ ಅನುಪಮಾ ಗೌಡ, ಪುಣ್ಯ, ರಜತ್‌ಗೆ ಈಗಾಗಲೇ ಮದುವೆ ಆಗಿದೆ. ಚೈತ್ರಾ ಮತ್ತು ನೀವು ಜೋಡಿಯಾಗಿದ್ದರೆ..." ಅಂತ ಹೇಳಿದ್ದಾರೆ. ಆಗ ಚೈತ್ರಾ ಅವರು ಏರು ಧ್ವನಿಯಲ್ಲಿ "ಸಾಧ್ಯವಿಲ್ಲ.. ನಾನೇನು ಗತಿಗೆಟ್ಟಿದ್ದೀನಾ..? ನಾನೇನು ಅಷ್ಟೊಂದು ಬರಗೆಟ್ಟಿಲ್ಲ ಬಿಡು.." ಅಂತ ಹೇಳಿದ್ದಾರೆ.

Chaithra Kundapura

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 11 ಕಾರ್ಯಕ್ರಮ ಮುಗಿದ ಬಳಿಕ ಹೊಸದಾಗಿ ವೀಕೆಂಡ್ನಲ್ಲಿ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಶುರುವಾಗಿದೆ. ಈಗಾಗಲೇ ಎರಡು ವಾರ ಈ ಪ್ರೊಗ್ರಾಂ ಟೆಲಿಕಾಸ್ಟ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಬಹುತೇಕ ಬಿಗ್ ಬಾಸ್ ಸ್ಪರ್ಧಿಗಳಿಂದಲೇ ಕೂಡಿರುವ ಈ ಶೋ ಸಖತ್ ಕಿಕ್ ಕೊಡುತ್ತಿದೆ. ಹುಡುಗರು ಹುಡುಗಿಯರಿಗೆ ಹಾಕುವ ಚಾಲೆಂಜ್ ಮತ್ತು ಹುಡುಗಿಯರು ಹುಡುಗರಿಗೆ ಹಾಕುವ ಚಾಲೆಂಜ್ ಪ್ರೇಕ್ಷಕರನ್ನು ನಕ್ಕು ನಗಿಸುತ್ತಿದೆ.
ವಿಶೇಷ ಎಂದರೆ ಬಿಗ್ ಬಾಸ್ ಮನೆಯಲ್ಲಿ ಸದಾ ಕಿತ್ತಾಡುತ್ತಿದ್ದ ರಜತ್ ಕಿಶನ್ ಮತ್ತು ಚೈತ್ರಾ ಕುಂದಾಪುರ ಈ ರಿಯಾಲಿಟಿ ಶೋನಲ್ಲಿದ್ದು, ಇಲ್ಲೂ ಅದೇ ಕೋಳಿ ಜಗಳ ಮುಂದುವರೆಸಿದ್ದಾರೆ. ಫೈರ್‌ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ತಮ್ಮ ಜೋರು ದನಿಯಿಂದಲೇ ಹೆಸರು ಮಾಡಿದರು. ಯಾವುದೇ ಸಂದರ್ಭದಲ್ಲಿ ಇವರು ಬಿಟ್ಟುಕೊಡುತ್ತಿರಲಿಲ್ಲ. ಮಾತಿನ ಮೂಲಕವೇ ಎಲ್ಲ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದ್ದರು. ಇತ್ತ ವೈಲ್ಡ್‌ಕಾರ್ಡ್ ಮೂಲಕ ದಿಢೀರ್ ಎಂಟ್ರಿ ಕೊಟ್ಟ ರಜತ್ ಕಿಶನ್ ಕೂಡ ಕಡಿಮೆಯೇನಿರಲಿಲ್ಲ. ತಮ್ಮ ನೇರ ಮಾತು ಹಾಗೂ ಫಿಲ್ಟರ್ ಇಲ್ಲದೆ ಕೊಡುವಂತಹ ಕೌಂಟರ್ಗಳಿಗೆ ಎದುರಾಳಿ ನಡುಗುತ್ತಿದ್ದರು.
ಬಿಗ್ ಬಾಸ್ ಮನೆಯೊಳಗೆ ಸಖತ್ ಸೌಂಡ್ ಮಾಡುತ್ತಿದ್ದ ಚೈತ್ರಾ- ರಜತ್ ಇದೀಗ ಹೊರಬಂದ ಬಳಿಕ ಮತ್ತೊಮ್ಮೆ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಮೂಲಕ ಮುಖಾಮುಖಿಯಾಗಿದ್ದಾರೆ. ಗ್ರ್ಯಾಂಡ್ ಓಪನಿಂಗ್ ದಿನವೇ ಈ ಜೋಡಿ ಮಾತಿನ ಮೂಲಕ ಧೂಳೆಬ್ಬಿಸಿತ್ತು. ಇದೀಗ ಒಳ್ಳೆಯ ಡ್ಯಾನ್ಸ್ ಪರ್ಫಾಮೆನ್ಸ್ ಕೊಟ್ಟು ಎಲ್ಲರನ್ನೂ ರಂಜಿಸಿದ್ದಾರೆ.
ಆದರೆ, ನೃತ್ಯದ ಬಳಿಕ ಇಲ್ಲೂ ಕೂಡ ಇವರಿಬ್ಬರ ಜಗಳ ಮುಂದುವರೆದಿದೆ. ಹಾಗಂತ ಇದೆಲ್ಲ ಗಂಭೀರ ಜಗಳವಂತೂ ಖಂಡಿತವಾಗಿಯೂ ಅಲ್ಲ. ಬಾಯ್ಸ್ V/S ಗರ್ಲ್ಸ್ ರಿಯಾಲಿಟಿ ಶೋ ವೇದಿಕೆಯಲ್ಲಿ ನಿರೂಪಕಿ ಅನುಪಮಾ ಗೌಡ, ಪುಣ್ಯ, ರಜತ್‌ಗೆ ಈಗಾಗಲೇ ಮದುವೆ ಆಗಿದೆ. ಚೈತ್ರಾ ಮತ್ತು ನೀವು ಜೋಡಿಯಾಗಿದ್ದರೆ..." ಅಂತ ಹೇಳಿದ್ದಾರೆ. ಆಗ ಚೈತ್ರಾ ಅವರು ಏರು ಧ್ವನಿಯಲ್ಲಿ "ಸಾಧ್ಯವಿಲ್ಲ.. ನಾನೇನು ಗತಿಗೆಟ್ಟಿದ್ದೀನಾ..? ನಾನೇನು ಅಷ್ಟೊಂದು ಬರಗೆಟ್ಟಿಲ್ಲ ಬಿಡು.." ಅಂತ ಹೇಳಿದ್ದಾರೆ. ಇದಕ್ಕೆ ರಜತ್ ಕೂಡ, "ನಾನು ಬರಗೆಟ್ಟಿದ್ದರು, ನಿನ್ನ ಮುಖವನ್ನೂ ನೋಡುತ್ತಿರಲಿಲ್ಲ ಬಿಡು" ಅಂದಿದ್ದಾರೆ. ಇದಕ್ಕೆ ವಿನಯ್ ಗೌಡ, "ನೀವಿಬ್ಬರೂ ಜೋಡಿಯಾಗಿದ್ದರೆ, ನಾವೆಲ್ಲಾ ಊರು ಬಿಟ್ಟು ಬಿಡುತ್ತಿದ್ವಿ" ಎಂದು ಕೌಂಟರ್ ಕೊಟ್ಟಿದ್ದಾರೆ.
Ugramm Manju: ಬಿಗ್ ಬಾಸ್ನಿಂದ ಹೊರಬಂದ ಬೆನ್ನಲ್ಲೇ ಹೊಸ ಸಿನಿಮಾದಲ್ಲಿ ಬಂಪರ್ ಆಫರ್ ಪಡೆದ ಉಗ್ರಂ ಮಂಜು