Bhagyalakshmi Serial: ಭಾಗ್ಯಲಕ್ಷ್ಮೀ ಸೀರಿಯಲ್‌ಗೆ ಎಂಟ್ರಿ ಕೊಟ್ಟ ಖ್ಯಾತ ನಟಿ! ಯಾರದು?
Colors Kannada: ಆದಿ ಮತ್ತು ಭಾಗ್ಯರಿಗೆ ಒಬ್ಬರ ಮೇಲೊಬ್ಬರಿಗೆ ಇನ್ನೂ ಲವ್ ಏನೂ ಶುರುವಾಗಿಲ್ಲ. ಆದರೆ ಆದಿಗೆ ಇನ್ನೇನು ಭಾಗ್ಯಳ ಮೇಲೆ ಪ್ರೀತಿ ಶುರುವಾಗೋ ಹಂತದಲ್ಲೇ ಮನೆಯಲ್ಲಿ ಆದಿಗೆ ಹುಡುಗಿ ಹುಡುಕಲು ಶುರು ಮಾಡಿದ್ದಾರೆ. ಇದೀಗ ಸೀರಿಯಲ್‌ಗೆ ಖ್ಯಾತ ನಟಿ ಎಂಟ್ರಿ ಆಗಿದೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರದು?
ಭಾಗ್ಯಲಕ್ಷ್ಮೀ ಧಾರಾವಾಹಿ -
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ (bhagya lakshmi Serial) ಟ್ವಿಸ್ಟ್ ಪಡೆದು ಸಾಗುತ್ತಿದೆ. ಭಾಗ್ಯ ಮತ್ತು ಆದಿಯನ್ನು (Bhagya Adi) ಒಂದು ಮಾಡಲು ಕುಸುಮಾ ಹರಸಾಹಸ ಪಡುತ್ತಿದ್ದಾಳೆ. ಅಷ್ಟಕ್ಕೂ ಆದಿ ಮತ್ತು ಭಾಗ್ಯರಿಗೆ ಒಬ್ಬರ ಮೇಲೊಬ್ಬರಿಗೆ ಇನ್ನೂ ಲವ್ ಏನೂ ಶುರುವಾಗಿಲ್ಲ. ಆದರೆ ಆದಿಗೆ ಇನ್ನೇನು ಭಾಗ್ಯಳ ಮೇಲೆ ಪ್ರೀತಿ ಶುರುವಾಗೋ ಹಂತದಲ್ಲೇ ಮನೆಯಲ್ಲಿ ಆದಿಗೆ ಹುಡುಗಿ ಹುಡುಕಲು ಶುರು ಮಾಡಿದ್ದಾರೆ. ಇದೀಗ ಸೀರಿಯಲ್‌ಗೆ ಖ್ಯಾತ ನಟಿ (Actress) ಎಂಟ್ರಿ ಆಗಿದೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರದು?
ಕಲರ್ಸ್ ಕನ್ನಡದ ಜನಪ್ರಿಯ ಮೆಗಾ ಧಾರಾವಾಹಿ ಭಾಗ್ಯಲಕ್ಷ್ಮೀಯಲ್ಲಿ ನಟಿ ಮೇಘಾಶ್ರೀ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಪಿಸೋಡ್ ನೋಡಿ ಪ್ರೇಕ್ಷಕರಲ್ಲಿ ಹೊಸ ಕುತೂಹಲವನ್ನು ಮೂಡಿಸಿದೆ.
ಇದನ್ನೂ ಓದಿ: Bigg Boss Kannada 12: ಬರ್ತ್‌ಡೇ ಪಾರ್ಟಿಗೆ ಗಿಲ್ಲಿನ ಮಾತ್ರ ಸೇರಿಸಲ್ಲ! ಹೀಗ್ಯಾಕೆ ಅಂದ್ರು ಡಾಗ್ ಸತೀಶ್?
ಬರಲಿರುವ ಎಪಿಸೋಡ್‌ಗಳಲ್ಲಿ ಆದಿಯ ಕುಟುಂಬವು ಮದುವೆಯ ಒತ್ತಡ ಹೇರುತ್ತದೆ. ಈ ದಿಸೆಯಲ್ಲಿ ಹುಡುಗಿಯನ್ನು ನೋಡಲು ಆದಿ ಕುಟುಂಬ ಹೋಗುತ್ತೆ. ಆ ಹುಡುಗಿಯೇ ಮೇಘಾಶ್ರೀ. ಆದಿ ಹುಡುಗಿಯ ಬಳಿ ಮದುವೆ ನಿಲ್ಲಿಸಲು ರಿಕ್ವೆಸ್ಟ್ ಮಾಡಿದ್ದಾನೆ, ನನಗೆ ಬ್ಯಾಡ್ ಪಾಸ್ಟ್ ಇದೆ ಎಂದಿದ್ದಾನೆ.

ಆದಿ ಮುಂದೇನು ಮಾಡುತ್ತಾನೆ?
ಆದಿ ಮುಂದೇನು ಮಾಡುತ್ತಾನೆ? ಈ ಭೇಟಿಯು ಆದಿಯ ಬದುಕಿನಲ್ಲಿ ಹೊಸ ತಿರುವು ತರುತ್ತದೆಯೇ?ಕುಟುಂಬದೊಳಗಿನ ಹೊಸ ಸಂಘರ್ಷಗಳಿಗೆ ಕಾರಣವಾಗುತ್ತದೆಯೇ? ಎಂಬುದು ನೋಡಬೇಕಿದೆ.
ಆದಿಯನ್ನ ಮದುವೆ ಆಗ್ತಾಳಾ ಭಾಗ್ಯ?
ಆದೀಶ್ವರ್ ಕಾಮತ್ ಎಂಥ ಒಳ್ಳೆಯ ಹುಡುಗ ಎನ್ನೋದು ಕುಸುಮಾಗೆ ಗೊತ್ತಾಗಿದೆ. ಯಾರು ಎಷ್ಟೇ ಹೇಳಿದರೂ ಕೂಡ ತಾಂಡವ್ ಕೇಳದೆ, ಶ್ರೇಷ್ಠಳನ್ನು ಮದುವೆಯಾದನು. ತಾಂಡವ್‌ಗೆ ಮದುವೆಯಾಗಿದೆ, ಇಬ್ಬರು ಮಕ್ಕಳಿವೆ, ಅವನಿಗೆ ಮಕ್ಕಳನ್ನು ಕಂಡರೆ ತುಂಬ ಇಷ್ಟ ಎಂದು ಗೊತ್ತಿದ್ದರೂ ಕೂಡ, ಶ್ರೇಷ್ಠ ಕೂಡ ತಾಂಡವ್‌ನನ್ನು ಮದುವೆಯಾದಳು.
ಮುಂದಿನ ದಿನಗಳಲ್ಲಿ ಆದಿ, ಭಾಗ್ಯ ಮದುವೆ ಆಗ್ತಾರಾ? ಅಥವಾ ಭಾಗ್ಯ, ತಾಂಡವ್ ಮತ್ತೆ ಒಂದಾಗ್ತಾರಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: Bigg Boss Kannada 12: ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡ ಅಶ್ವಿನಿ-ಜಾಹ್ನವಿ; ಇವರೆಲ್ಲರ ಕಣ್ಣು ಬೀಳಬಾರದಂತೆ!
‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಸುಷ್ಮಾ ಕೆ ರಾವ್, ಪದ್ಮಜಾ ರಾವ್, ಹರೀಶ್ ರಾಜ್, ಮುಖ್ಯಮಂತ್ರಿ ಚಂದ್ರು, ಸುದರ್ಶನ್ ರಂಗಪ್ರಸಾದ್, ಕಾವ್ಯ ಗೌಡ, ಸುಕೃತಾ ನಾಗ್, ಭವ್ಯ ಶ್ರೀ ಮುಂತಾದವರು ಅಭಿನಯಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಸಂಜೆ 7 ಕ್ಕೆ ಭಾಗ್ಯಲಕ್ಷ್ಮೀ ಪ್ರಸಾರ ಕಾಣುತ್ತಿದೆ.