BBK 12: 100 ಕೋಟಿ ಬೆಲೆಯ ನಾಯಿ ಇರುವ ಡಾಗ್ ಸತೀಶ್ ಬಿಗ್ ಬಾಸ್ ಮನೆಗೆ ಎಂಟ್ರಿ
ವಿಶೇಷ ವ್ಯಕ್ತಿಯೊಬ್ಬರು ಬಿಗ್ ಬಾಸ್ಗೆ ಕಾಲಿಟ್ಟಿದ್ದಾರೆ ಅವರೇ ಡಾಗ್ ಸತೀಶ್. ಇವರು ಪ್ರಪಂಚದ ನಂ 1 ಡಾಗ್ ಬ್ರೀಡರ್ ಪ್ರಪಂಚದ ನಂ 1 ಡಾಗ್ ಬ್ರೀಡರ್. ಸತೀಶ್ ಡಾಗ್ ಬ್ರೀಡರ್ ಆಗಿದ್ದಾರೆ. ಬೀದಿ ನಾಯಿಗಳು, ಕ್ರಾಸ್ ಬ್ರೀಡ್ ಎಂದು ವಿವಿಧ ರೀತಿಯ ನಾಯಿಯನ್ನು ಖರೀದಿ ಮಾಡಿದ್ದಾರೆ.

Bigg Boss Dog Sathish -

ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಓಪನಿಂಗ್ ನಡೆಯುತ್ತಿದೆ. ಬಹುಮುಖ ಪ್ರತಿಭೆಗಳು ದೊಡ್ಮನೆಯೊಳಗೆ ಕಾಲಿಡುತ್ತಿದ್ದಾರೆ. ಈಗಾಗಲೇ ಕಾಕ್ರೋಚ್ ಸುಧಿ, ಕಾವ್ಯ, ಗಿಲ್ಲಿ ನಟ, ಜಾಹ್ನವಿ ದೊಡ್ಮನೆಗೆ ಆಗಮಿಸಿದ್ದಾರೆ. ಇವರ ಮಧ್ಯೆ ವಿಶೇಷ ವ್ಯಕ್ತಿಯೊಬ್ಬರು ಬಿಗ್ ಬಾಸ್ಗೆ ಕಾಲಿಟ್ಟಿದ್ದಾರೆ ಅವರೇ ಡಾಗ್ ಸತೀಶ್. ಇವರು ಪ್ರಪಂಚದ ನಂ 1 ಡಾಗ್ ಬ್ರೀಡರ್ ಪ್ರಪಂಚದ ನಂ 1 ಡಾಗ್ ಬ್ರೀಡರ್.
ಡಾಗ್ ಸತೀಶ್ ಯಾರು?
ಸತೀಶ್ ಡಾಗ್ ಬ್ರೀಡರ್ ಆಗಿದ್ದಾರೆ. ಬೀದಿ ನಾಯಿಗಳು, ಕ್ರಾಸ್ ಬ್ರೀಡ್ ಎಂದು ವಿವಿಧ ರೀತಿಯ ನಾಯಿಯನ್ನು ಖರೀದಿ ಮಾಡಿದ್ದಾರೆ. ಒಂದು ನಾಯಿ ಖರೀದಿ ಮಾಡೋದು, ಆಮೇಲೆ ಅದನ್ನು ಮಾರೋದು, ಅದರಿಂದ ಇನ್ನೊಂದು ನಾಯಿ ತಗೊಳೋದು ಮಾಡುತ್ತಾರೆ. ಅವರ ಕ್ಯಾಡಬೊಮ್ ಕೆನ್ನೆಲ್ಸ್ ಎಂಬ ಕೆನ್ನೆಲ್ ನಡೆಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸತೀಶ್, ತಮ್ಮನ್ನ ʻವಿಶ್ವದ ನಂ.1 ಸೆಲೆಬ್ರಿಟಿ ಡ್ರಾಗ್ ಬ್ರೀಡರ್ʼ, ʻಗ್ಲೋಬಲ್ ಸೂಪರ್‌ಸ್ಟಾರ್ʼ ಎಂದು ಕರೆದುಕೊಳ್ಳುತ್ತಾರೆ.
ಮೊದಲಿನಿಂದಲೂ ಸತೀಶ್ ಅವರಿಗೆ ನಾಯಿ ಅಂದರೆ ಇಷ್ಟ. ಚಿಕ್ಕ ವಯಸ್ಸಿನಲ್ಲಿದ್ದಾಗ ತಂದೆ ಶ್ವಾನವೊಂದನ್ನು ಕೊಡಿಸಿದ್ದರು. ಆಮೇಲೆ ಶ್ವಾನದಲ್ಲೂ ಒಂದಷ್ಟು ತಳಿ ಇದೆ ಎನ್ನೋದು ಅರ್ಥ ಆಯ್ತು. ಆಮೇಲೆ ಇದನ್ನೇ ಅವರು ಬ್ಯುಸಿನೆಸ್ ಮಾಡಿಕೊಂಡರಂತೆ. ಸತೀಶ್ ಅವರ ಬಳಿ ನೂರು ಕೋಟಿ ರೂಪಾಯಿ ನಾಯಿ ಇದೆ. ಕತ್ತೆಯಷ್ಟು ಸೈಜ್ ಇದೆ ಎಂದು ಆ ನಾಯಿಗೆ 100 ಕೋಟಿ ರೂಪಾಯಿ ಬೆಲೆ ಕಟ್ಟಲಾಗಿದೆಯಂತೆ. ವಿಟಿಯಲ್ಲಿ ತಮ್ಮ ಬಗ್ಗೆ ಹಲವು ವಿಚಾರಗಳನ್ನ ಹಂಚಿಕೊಂಡಿರುವ ಸತೀಶ್ ತಮ್ಮ ಪತ್ನಿಯಿಂದ ದೂರಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ.