ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss kannada 12: ಗಾರೆ ಕೆಲಸದಿಂದ, ದೊಡ್ಮನೆವರೆಗೂ...; ಬಿಗ್ ಬಾಸ್‌ಗೆ ಉತ್ತರ ಕರ್ನಾಟಕದ ಪ್ರತಿಭೆ ಮಲ್ಲಮ್ಮ ಎಂಟ್ರಿ!

Mallamma Manappa: ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ರೀಲ್ಸ್‌ಗಳಿಂದ ಸಖತ್‌ ವೈರಲ್‌ ಮೂಲಕ ಕನ್ನಗಡಿರ ಮನ ಗೆದ್ದಿರುವ ಮಲ್ಲಮ್ಮ ಅವರು, ಇದೀಗ ಕನ್ನಡದ ಅತ್ಯಂತ ಯಶಸ್ವಿ ರಿಯಾಲಿಟಿ ಶೋಗಳ ಪೈಕಿ ಅಗ್ರಪಂಕ್ತಿಯಲ್ಲಿರುವ ಬಿಗ್ ಬಾಸ್ ಸ್ಪರ್ಧೆ ಆಗಿರುವುದು ಅವರ ಗ್ರಾಮದ ಜನರಲ್ಲಿ ಸಂತಸ ಹೆಚ್ಚಿಸಿದೆ.

ಬಿಗ್ ಬಾಸ್‌ನಲ್ಲಿ ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭೆ ಮಲ್ಲಮ್ಮ!

-

Prabhakara R Prabhakara R Sep 28, 2025 9:17 PM

ಸುರಪುರ: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 12ನೇ ಸೀಸನ್‌ಗೆ ಉತ್ತರ ಕರ್ನಾಟಕದ ಪ್ರತಿಭೆ ಮಲ್ಲಮ್ಮ ಮಾನಪ್ಪ (Mallamma Manappa) ಆಯ್ಕೆಗೊಂಡಿದ್ದಾರೆ. ಅಪ್ಪಟ ಸೆಲಿಬಿಟ್ರಿಗಳ ಶೋ ಎನಿಸಿರುವ ಬಿಗ್ ಬಾಸ್‌ನಲ್ಲಿ (Bigg Boss kannada 12) ಇದೀಗ ಗ್ರಾಮೀಣ ಪ್ರತಿಭೆಯೊಬ್ಬರು ಆಯ್ಕೆಯಾಗಿದ್ದಾರೆ. ಹಾಯ್ ಫ್ರೆಂಡ್ಸ್, ಮಲ್ಲಮ್ಮ ಹಿಯರ್ ಎನ್ನುತ್ತಾ ಇನ್ಸ್ಟಾಗ್ರಾಮ್ ಸೇರಿ ಸೋಶಿಯಲ್ ಮೀಡಿಯಾಗಳಲ್ಲಿ ಧೂಳೆಬ್ಬಿಸಿರುವ ಮಲ್ಲಮ್ಮ ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರ ಕನ್ನೆಳ್ಳಿ ಗ್ರಾಮದರಾಗಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ರೀಲ್ಸ್‌ಗಳಿಂದ ಸಖತ್‌ ವೈರಲ್‌ ಮೂಲಕ ಕನ್ನಗಡಿರ ಮನ ಗೆದ್ದಿರುವ ಇವರು, ಇದೀಗ ಕನ್ನಡದ ಅತ್ಯಂತ ಯಶಸ್ವಿ ರಿಯಾಲಿಟಿ ಶೋಗಳ ಪೈಕಿ ಅಗ್ರಪಂಕ್ತಿಯಲ್ಲಿರುವ ಬಿಗ್ ಬಾಸ್ ಸ್ಪರ್ಧೆ ಆಗಿರುವುದು ಗ್ರಾಮದ ಜನರಲ್ಲಿ ಸಂತಸ ಹೆಚ್ಚಿಸಿದೆ.



ಯಾರಿವರು ಮಲ್ಲಮ್ಮ?

ಮಲ್ಲಮ್ಮ ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮದವರಾಗಿದ್ದು, ಕೆಲಸನವನ್ನು ಅರಸಿ ಬೆಂಗಳೂರಿಗೆ ಬಂದಿದ್ದ ಮಲ್ಲಮ್ಮ, ತಮ್ಮೂರಿನಲ್ಲಿ ಸರಳ ಜೀವನ ನಡೆಸುತ್ತಾ ತುಂಬು ಕುಟುಂಬದೊಂದಿಗೆ ಬೆಳೆದವರು. ಕರ್ನಾಟಕದ ಗ್ರಾಮೀಣ ಸಂಸ್ಕೃತಿ ಹಾಗೂ ಹಳ್ಳಿ ಜೀವನದ ಶೈಲಿ ಹಾಗೂ ಇವರ ಸರಳತೆಯೇ ಮತ್ತು ಮುಗ್ಧತೆ ಇವರನ್ನು ಇಂದು ಇಲ್ಲಿಗೆ ತಂದು ನಿಲ್ಲಿಸಿದೆ.

ಮಲ್ಲಮ್ಮ ಕನ್ನೆಳ್ಳಿ ಗ್ರಾಮದ ಮಾನಪ್ಪನವರೊಂದಿಗೆ ವಿವಾಹವಾಗಿದ್ದರು. ಇಬ್ಬರ ಮಕ್ಕಳ ತಾಯಿಯಾಗಿರುವ ಇವರು ಜೀವನದ ಬಂಡಿ ಸಾಗಿಸಲು ಸದ್ಯ ಬೆಂಗಳೂರಿನಲ್ಲಿ ಫ್ಯಾಷನ್‌ ಬೋಟಿಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಗಾರೆ ಕೆಲಸ ಮಾಡುತ್ತಿದ್ದ ಮಲ್ಲಮ್ಮ ಅವರ ಲಕ್ ಬದಲಾಯಿಸಿದ್ದು, ಮಾತ್ರ ಫ್ಯಾಷನ್‌ ಬೋಟಿಕ್‌.



ಉತ್ತರ ಕರ್ನಾಟಕದ ರಗಡ್ ಭಾಷೆಯ ಮೂಲಕ ಮಲ್ಲಮ್ಮ ತಾನು ಕೆಲಸ ಮಾಡುವ ಪ್ರದೇಶದಲ್ಲಿ ಅತ್ಯಂತ ಜನಪ್ರಿಯಳಾಗಿದ್ದಾಳೆ. ಬದಲಾದ ಕಾಲಘಟ್ಟದಲ್ಲಿ ತನ್ನ ಮಾತುಗಾರಿಕೆಯಿಂದ ಸೋಷಿಯಲ್ ಮೀಡಿಯಾಗಳ ಮೂಲಕ ಜನರ ಮನ ಸೇರಿದ್ದಾಳೆ.ಗಾರೆ ಕೆಲಸದ ನಂತರ ಖಾಸಗಿ ಸಂಸ್ಥೆಯಲ್ಲಿ ಮಲ್ಲಮ್ಮ ಕೆಲಸಕ್ಕೆ ಸೇರಿದ್ದಾಳೆ. ಮಲ್ಲಮ್ಮ ಕೆಲಸ ಮಾಡುತ್ತಿರುವ ಸಂಸ್ಥೆಯ ಯಜಮಾನಿಯ ಸಹಕಾರದಿಂದ ಕಳೆದ ಒಂದು ವರ್ಷದ ಹಿಂದೆ ಇನ್ಸ್ಟಾಗ್ರಾಮ್, ಯೂಟ್ಯೂಬ್ ಅಕೌಂಟ್‌ಗಳ ಮೂಲಕ ಜನರ ಮುಂದೆ ಬಂದಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ 1.74 ಲಕ್ಷ ಹಿಂಬಾಲಕರು, ಯೂಟ್ಯೂಬ್‌ನಲ್ಲಿ 16.4 ಸಾವಿರ ಹಿಂಬಾಲಕರನ್ನು ಹೊಂದಿರುವ ಮಲ್ಲಮ್ಮ 199+119 ವಿಡಿಯೋಗಳ ಮೂಲಕ ಜನರನ್ನು ಮನರಂಜಿಸಿದ್ದಾರೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡುವ ಮಲ್ಲಮ್ಮಳ ವಿಡಿಯೋಗಳು ಅತಿ ಹೆಚ್ಚು ಶೇರ್ಸ್, ಲೈಕ್ಸ್, ವಿವ್ಸ್ ಪಡೆದುಕೊಂಡಿವೆ.

Mallamma house

ದೊಡ್ಮನೆ ಆಟಕ್ಕೆ ಹೊಂದಿಕೊಳ್ಳುತ್ತಾರಾ ಮಲ್ಲಮ್ಮ?

ಹಳ್ಳಿಯಲ್ಲಿ ಹುಟ್ಟಿ ಬೆಳೆದಿರುವ ಮಲ್ಲಮ್ಮ ಇಂತಹ ಕಾರ್ಯಕ್ರಮಗಳನ್ನು ಟಿವಿಯಲ್ಲಿ ನೋಡಿತ್ತಿದ್ದರು. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಇರುವ ಮಲ್ಲಮ್ಮ ಬಿಗ್ ಬಾಸ್ ನೀಡುವ ಟಾಸ್ಕ್‌ಗಳನ್ನು ಅರಿತುಕೊಂಡು ಆಟ ಆಡುವುದು ಬಹುಮುಖ್ಯವಾಗಿದೆ.

ಈ ಸುದ್ದಿಯನ್ನೂ ಓದಿ | BBK 12: ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಮಲ್ಲಮ್ಮ: ಯಾರಿವರು?, ಹಿನ್ನಲೆ ಏನು?

ಮಲ್ಲಮ್ಮ ಮೊದಲನೇ ವಾರ ನಾಮಿನೇಟ್ ಎಂದ ನೆಟ್ಟಿಗರು!

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನೇಕ ರೀತಿಯ ಪ್ರಯತ್ನಗಳು ನಡೆಯುತ್ತವೆ. ಆದರೆ ಬಿಗ್ ಬಾಸ್ ಸೇರುವ ಬಹುತೇಕರು ಒಬ್ಬರಿಗೊಬ್ಬರು ಪರಿಚಯವಿರುತ್ತಾರೆ, ಇಲ್ಲವೇ ಅವರ ವೃತ್ತಿ ಪರಿಚಯ ಮಾಡಿಸುತ್ತೆ. ಆದರೆ ಎಲೆ ಮರೆ ಕಾಯಿಯಂತಿರುವ ಇಂತಹ ಪ್ರತಿಭೆಗಳನ್ನು ಉಳಿದ ಕಂಟೆಸ್ಟಂಟ್‌ಗಳು ಒಂದಾಗಿ ನಾಮಿನೇಟ್ ಮಾಡುವುದು ಬಿಗ್ ಬಾಸ್ ಮನೆಯ ಲಾಜಿಕ್ ಆಗಿದೆ. ಅದರಂತೆ. ಮಲ್ಲಮ್ಮಳನ್ನು ಈ ಭಾರಿ ಮೊದಲನೇ ವಾರದಲ್ಲಿ ನಾಮಿನೇಟ್ ಮಾಡುತ್ತಾರೆಂದು ಬಿಗ್ ಬಾಸ್ ವೀಕ್ಷಕ ಪಂಡಿತರ ಲೆಕ್ಕಾಚಾರವಾಗಿದೆ.

image

ನಾವು ಟಿವ್ಯಾಗ್ ಇಂಥ ಫಂಕ್ಷನ್ ನೋದೇವರೀ ನಮ್ಮೂರು ಮಲ್ಲವ್ವ. ಟಿವ್ಯಾಗ ಬರೋದು ಬಾಳ ಖುಷಿ ಆಗೆದರೀ, ಚಂದಂಗ ಆಡಿ ಗೆದ್ದ ಬರಲ್ರಿ...

ಅಂಬ್ರಮ್ಮ ಬೋನಾಳ, ಮಲ್ಲಮ್ಮಳ ಸ್ನೇಹಿತೆ
image

ನಮ್ಮೂರಿನ ಮಲ್ಲಮ್ಮ ಕೂಲಿ ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿ. ಬಿಗ್ ಬಾಸ್ ನಂತಹ ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನಮ್ಮ ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗಿದೆ. ನಮ್ಮೆಲ್ಲರ ಬೆಂಬಲ ಅವರಿಗಿದೆ. ಗೆದ್ದು ಬರಲಿ ಎಂದು ಆಶಿಸುತ್ತೇನೆ.

ಮಲ್ಲಿಕಾರ್ಜುನ ಚಾಂದಕೋಟಿ, ಕನ್ನಳ್ಳಿ ಗ್ರಾಮಸ್ಥರು