BBK 11: ಅಂಕಲ್-ಆಂಟಿ ಲವ್ ಸ್ಟೋರಿ ಎಂದು ಟ್ರೋಲ್ ಮಾಡಿದವರಿಗೆ ಖಡಕ್ ಮಾತು ಹೇಳಿದ ಗೌತಮಿ
ಬಿಗ್ ಬಾಸ್ನಲ್ಲಿ ಗೆಳೆಯ-ಗೆಳತಿ ಎಂದೇ ಗೌತಮಿ ಹಾಗೂ ಮಂಜು ಅವರು ದೊಡ್ಮನೆಯಲ್ಲಿದ್ದರು. ಆದರೆ, ಕೆಲವರು ಇವರಿಬ್ಬರ ಸ್ನೇಹಕ್ಕೆ ಹುಳಿ ಹಿಂಡುವ ಕೆಲಸ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೆಲ ಟ್ರೋಲ್ಗಳಲ್ಲಿ ಇಬ್ಬರ ಬಗ್ಗೆ ಅಂಕಲ್- ಆಂಟಿ ಲವ್ ಸ್ಟೋರಿ ಎಂದು ಕರೆದಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಫಿನಾಲೆ ವೀಕ್ ಪ್ರಾರಂಭವಾಗಿದ್ದು ಮುಂದಿನ ಶನಿವಾರ-ಭಾನುವಾರ ಗ್ರ್ಯಾಂಡ್ ಫೈನಲ್ ನಡೆಯಲಿದೆ. ಕಳೆದ ವಾರ ನಡೆದ ಡಬಲ್ ಎಲಿಮಿನೇಷನ್ನಿಂದಾಗಿ ಸದ್ಯ ಮನೆಯೊಳಗೆ ಆರು ಮಂದಿ ಇದ್ದಾರಷ್ಟೆ. ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್, ಭವ್ಯಾ ಗೌಡ, ರಜತ್ ಹಾಗೂ ಉಗ್ರಂ ಮಂಜು ಫಿನಾಲೆ ವಾರದಲ್ಲಿದ್ದಾರೆ. ಕಳೆದ ವಾರ ಡಬಲ್ ಎಲಿಮಿನೇಷನ್ನಲ್ಲಿ ಗೌತಮಿ ಜಾಧವ್ ಹಾಗೂ ಧನರಾಜ್ ಆಚಾರ್ ಎಲಿಮಿನೇಟ್ ಆದರು.
ತನ್ನ ಪಾಸಿಟಿವಿಟಿ ಮೂಲಕ ಕರ್ನಾಟಕ ಜನತೆಯ ಮನಗೆದ್ದ ಗೌತಮಿ ಶನಿವಾರ ದೊಡ್ಮನೆಯಿಂದ ಹೊರಬಂದರು. ಇವರನ್ನು ಫಿನಾಲೆ ಕಂಟೆಸ್ಟೆಂಟ್ ಎಂದೇ ನಂಬಲಾಗಿತ್ತು. ತನ್ನ ವಿಭಿನ್ನ ವ್ಯಕ್ತಿತ್ವದ ಮೂಲಕ ಗಮನ ಸೆಳೆದಿದ್ದರು. ಆದರೆ, ಅಂತಿಮ ಹಂತದಲ್ಲಿ ಎಲಿಮಿನೇಟ್ ಆದರು. ಇದೀಗ ಗೌತಮಿ ಅವರು ಮನೆಯೊಳಗಿರುವಾಗ ಹೊರಗಡೆ ನಡೆದ ಟ್ರೋಲ್ಗೆ ಸಂಬಂಧಿಸಿದಂತೆ ಕೆಲ ಮಾತುಗಳನ್ನು ಹೇಳಿದ್ದಾರೆ.
ಬಿಗ್ ಬಾಸ್ನಲ್ಲಿ ಗೆಳೆಯ-ಗೆಳತಿ ಎಂದೇ ಗೌತಮಿ ಹಾಗೂ ಮಂಜು ಅವರು ದೊಡ್ಮನೆಯಲ್ಲಿದ್ದರು. ಅವರ ನಡುವೆ ಎಷ್ಟೇ ವೈಮನಸ್ಸು ಅಥವಾ ಗೊಂದಲಗಳಾಗಿದ್ದರು ಒಬ್ಬರನ್ನೊಬ್ಬರು ಸಮಾಧಾನ ಮಾಡಿಕೊಳ್ಳುತ್ತಾ ಪರಿಶುದ್ಧ ಸ್ನೇಹಿತರಾಗಿ ದೊಡ್ಮನೆಯಲ್ಲಿದ್ದರು. ಆದರೆ, ಕೆಲವರು ಇವರಿಬ್ಬರ ಸ್ನೇಹಕ್ಕೆ ಹುಳಿ ಹಿಂಡುವ ಕೆಲಸ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೆಲ ಟ್ರೋಲ್ಗಳಲ್ಲಿ ಇಬ್ಬರ ಬಗ್ಗೆ ಅಂಕಲ್- ಆಂಟಿ ಲವ್ ಸ್ಟೋರಿ ಎಂದು ಕರೆದಿದ್ದರು.
ಈ ಬಗ್ಗೆ ಇದೀಗ ಸ್ವತಃ ಗೌತಮಿ ಜಾದವ್ ಪ್ರತಿಕ್ರಿಯಿಸಿದ್ದು, ದೇವರ ದಯೆಯಿಂದ ನನ್ನ ಕುಟುಂಬದವರು ಇದನ್ನು ತುಂಬಾ ಸ್ಪೋರ್ಟಿವ್ ಆಗಿ ತಕ್ಕೊಂಡಿದ್ದಾರೆ ಎಂದು ಹೇಳಿದ್ದಾರೆ. ‘ದೇವರಿಗೆ ಧನ್ಯವಾದ ಹೇಳಬೇಕು. ನನ್ನ ಕುಟುಂಬಸ್ಥರು ಟ್ರೋಲ್ಗಳನ್ನು ಸ್ಪೋಟಿವ್ ಆಗಿ ತೆಗೆದುಕೊಂಡರು. ಈ ಟ್ರೋಲ್ಗಳೆಲ್ಲಾ ನನಗೆ ಹೊಸತು. ಆದರೆ ನನ್ನ ಫ್ಯಾಮಿಲಿ ಅವರು ಇದನೆಲ್ಲಾ ಎರಡು ಮೂರು ತಿಂಗಳಿನಿಂದ ನೋಡಿದ್ದಾರೆ. ತುಂಬಾ ಸ್ಪೋಟಿವ್ ಆಗಿ ತೆಗೆದುಕೊಂಡಿದ್ದಾರೆ. ಯಾಕೆಂದರೆ ಅವರಿಗೆ ನಾನೇನು ಎನ್ನುವುದು ಗೊತ್ತು. ಅದರ ಬಗ್ಗೆ ನನಗೆ ಖುಷಿ ಇದೆ' ಎಂದಿದ್ದಾರೆ.
‘ಬಿಗ್ ಬಾಸ್ ಮನೆಯಲ್ಲಿ ಅಂಥದ್ದೇನು ಇರಲಿಲ್ಲ. ಲವ್ ಸ್ಟೋರಿ ಅನ್ನೋದೇ ಇರಲಿಲ್ಲ. ಇದು ನೀವು ನೋಡುವ ರೀತಿ. ಯಾರು ಯಾರನ್ನು ಬೇಕಾದ್ರು ಅಂಕಲ್- ಆಂಟಿ ಅಂಥ ಕರೆಯಬಹುದು. ನನಗೆ ಅದರಿಂದ ಸಮಸ್ಯೆಯಿಲ್ಲ. ಲವ್ ಸ್ಟೋರಿ ಇರಲಿಲ್ಲ. ಉತ್ತಮ ಫ್ರೆಂಡ್ ಶಿಪ್ ಇತ್ತು ಎನ್ನುವ ಸ್ಪಷ್ಪನೆಯನ್ನು ನೀಡುತ್ತೇನೆ. ಇದೊಂದು ಟ್ರೋಲ್ ಅಷ್ಟೇ. ಯಾರ ಅಭಿಪ್ರಾಯ ಅಲ್ಲ. ಅಭಿಪ್ರಾಯಕ್ಕೂ ಟ್ರೋಲ್ಗೂ ವ್ಯತ್ಯಾಸ ಇದೆ. ನನ್ನ ಜೀವನದಲ್ಲಿ ಅಭಿಷೇಕ್ (ಗಂಡ) ಅವರೊಂದಿಗೆ ಮಾತ್ರ ಲವ್ ಸ್ಟೋರಿ ಇರೋದು’ ಎಂದು ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.
BBK 11: ತಲೆ ತಗ್ಗಿಸೊ ಕ್ಯಾರಕ್ಟರ್ ನಂದಲ್ಲ ಕಣಮ್ಮ: ಬಂದ ಅತಿಥಿಗಳೆದುರು ರಜತ್ ಹೀಗೆ ಹೇಳಿದ್ದೇಕೆ?