Lakshmi Baramma Serial: ಮುಕ್ತಾಯದ ಹಂತದಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿ: ಕ್ಲೈಮ್ಯಾಕ್ಸ್ ಫೋಟೋ ವೈರಲ್
ಲಕ್ಷ್ಮೀ ಬಾರಮ್ಮ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರ ಕಾಣುತ್ತಿದೆ. ಶೀಘ್ರವೇ ಈ ಧಾರಾವಾಹಿ ಕೊನೆ ಆಗಲಿದ್ದು, ಈ ಸ್ಥಾನಕ್ಕೆ ಹೊಸ ಧಾರಾವಾಹಿಯ ಆಗಮನ ಆಗಲಿದೆ. ಈ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಶಮಂತ್ ಬ್ರೋ ಗೌಡ, ಭೂಮಿಕಾ ರಮೇಶ್ ಮೊದಲಾದವರು ನಟಿಸುತ್ತಿದ್ದಾರೆ.

Lakshmi Baramma

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯೊಂದು ದಿಢೀರ್ ಮುಕ್ತಾಯದ ಹಂತಕ್ಕೆ ತಲುಪಿದೆ. ಯಾವುದೇ ಸೂಚನೆ ನೀಡದೆ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯನ್ನು ಕೊನೆಗೊಳಿಸಲು ನಿರ್ದೇಶಕರು ಮುಂದಾಗಿದ್ದಾರೆ. ಅಚ್ಚರಿ ಎಂದರೆ ಭರ್ಜರಿ ಟಿಆರ್‌ಪಿ ಇರುವ ಮಧ್ಯೆಯೂ ಧಾರಾವಾಹಿಯನ್ನು ಕೊನೆ ಮಾಡಲಾಗುತ್ತಿದೆ. ಈ ವಿಚಾರ ತಿಳಿದು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ವೀಕ್ಷಕರಿಗೆ ಭಾರೀ ಬೇಸರಗೊಂಡಿದ್ದಾರೆ. ಲಕ್ಷ್ಮೀ ಬಾರಮ್ಮ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರ ಕಾಣುತ್ತಿದೆ. ಶೀಘ್ರವೇ ಈ ಧಾರಾವಾಹಿ ಕೊನೆ ಆಗಲಿದ್ದು, ಈ ಸ್ಥಾನಕ್ಕೆ ಹೊಸ ಧಾರಾವಾಹಿಯ ಆಗಮನ ಆಗಲಿದೆ.
ಈ ಧಾರಾವಾಹಿ ಶುರುವಿನಲ್ಲಿ ಭಾಗ್ಯಲಕ್ಷ್ಮೀಯಾಗಿ ಒಂದು ಗಂಟೆ ಪ್ರಸಾರ ಕಾಣುತ್ತಿತ್ತು. ಆ ಬಳಿಕ ಅಕ್ಕ ಭಾಗ್ಯಾಳ ಕಥೆ ಬೇರೆ ಹಾಗೂ ತಂಗಿ ಲಕ್ಷ್ಮೀ ಕಥೆ ಬೇರೆ ಬೇರೆಯಾಗಿ ಮಾಡಿ ಎರಡು ಧಾರಾವಾಹಿ ಮಾಡಲಾಯಿತು. ಈಗ ಭಾಗ್ಯ ಲಕ್ಷ್ಮೀ ರಾತ್ರಿ 7 ಗಂಟೆಗೆ ಪ್ರಸಾರ ಕಾಣುತ್ತಿದ್ದರೆ, ಲಕ್ಷ್ಮೀ ಬಾರಮ್ಮ 7.30ಕ್ಕೆ ಪ್ರಸಾರ ಕಾಣುತ್ತಿದೆ. ಸದ್ಯ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕೊನೆಯ ದಿನದ ಶೂಟ್ ಫೋಟೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಪೇಜ್ಗಳಲ್ಲಿ ಇದನ್ನು ಹಂಚಿಕೊಳ್ಳಲಾಗುತ್ತಿದೆ.
ಸಾಮಾನ್ಯವಾಗಿ ಒಂದು ಧಾರಾವಾಹಿಗೆ ಟಿಆರ್‌ಪಿ ಬಾರದ ಕಾರಣ ಅದನ್ನು ನಿಲ್ಲಿಸಲಾಗುತ್ತದೆ. ಈ ರೀತಿ ಸೀರಿಯಲ್ಗಳು ಅಂತ್ಯಕಂಡ ಅನೇಕ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಆದರೆ, ಲಕ್ಷ್ಮೀ ಬಾರಮ್ಮ ಸೀರಿಯಲ್‌ಗೆ ಟಿಆರ್‌ಪಿ ಚೆನ್ನಾಗಿದೆ. ಕಾವೇರಿಗೆ ಜನ ಬೈಯ್ಯುತ್ತಿದ್ದರೂ, ಮುಂದೇನಾಗುತ್ತೆ ಎಂಬ ಕುತೂಹಲದಿಂದ ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಮಿಸ್ ಮಾಡದೆ ನೋಡುತ್ತಿದ್ದರು. ಟಿಆರ್‌ಪಿಯಲ್ಲಿ ಪೀಕ್‌ನಲ್ಲಿ ಇರೋವಾಗಲೇ ಈ ಸೀರಿಯಲ್ ಅಂತ್ಯವಾಗುತ್ತಿದೆ. ಕಥೆಯಲ್ಲಿ ಹೆಚ್ಚು ತಿರುಳು ಇಲ್ಲದ ಕಾರಣ, ಸೀರಿಯಲ್ ಎಂಡ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ಸ್ ಬರುತ್ತಿದೆ.
ಈ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಶಮಂತ್ ಬ್ರೋ ಗೌಡ, ಭೂಮಿಕಾ ರಮೇಶ್ ಮೊದಲಾದವರು ನಟಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಬಳಿಕ ಆ ಸ್ಥಾನದಲ್ಲಿ ಬಿಗ್ ಬಾಸ್ ಕನ್ನಡ 11 ರನ್ನರ್-ಅಪ್ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಪ್ರಸಾರ ಕಾಣಬಹುದು. ಆದರೆ, ಈ ಎಲ್ಲ ವಿಚಾರದ ಬಗ್ಗೆ ವಾಹಿನಿ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.
Bigg Boss Ranjith: ನಾನು ಲವರ್ ಬಾಯ್ ಅಲ್ಲ: ಲವ್ ಮ್ಯಾರೇಜ್ ಬಗ್ಗೆ ಮೊದಲ ಬಾರಿ ಮಾತನಾಡಿದ ಬಿಗ್ ಬಾಸ್ ರಂಜಿತ್