Bro Gowda Marriage: ವಿಡಿಯೋ ಮೂಲಕ ಮದುವೆಯಾಗೋ ಹುಡುಗಿಯನ್ನು ಪರಿಚಯಿಸಿದ ಬ್ರೋ ಗೌಡ
ಕಿರುತೆರೆ ನಟ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿ ಬ್ರೋ ಗೌಡ/ಶಮಂತ್ ಅವರು ಪ್ರೇಮಿಗಳ ದಿನದಂದೇ ನಿಶ್ಚಿತಾರ್ಥ ಆಗಿದ್ದಾರೆ. ಮೇಘನಾ ಎನ್ನುವವರ ಜತೆ ಶಮಂತ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರು ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಇಬ್ಬರ ಪ್ರೀತಿ ವಿಚಾರವನ್ನು ಹೇಳುವುದಕ್ಕೆಂದೆ ಒಂದು ಬ್ಯೂಟಿಫುಲ್ ವಿಡಿಯೋ ಮಾಡಿದ್ದಾರೆ.

Bro Gowda and Meghana

ಬ್ರೋ ಗೌಡ (Bro Gowda) ಎಂದೇ ಖ್ಯಾತಿಯಾಗಿರುವ ಕಿರುತೆರೆ ನಟ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿ ಶಮಂತ್ ಈಗ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ. ಮಾತ್ರವಲ್ಲ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿದ್ದಾಗಿದೆ. ಇದರ ಬೆನ್ನಲ್ಲೇ ಪ್ರೇಮಿಗಳ ದಿನದಂದು ಇವರು ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಸಿಂಗರ್ ಆಗಿ, ಲವ್ವರ್ ಬಾಯ್ ಆಗಿ ಈಗ ಪಕ್ಕ ಫ್ಯಾಮಿಲಿ ಮ್ಯಾನ್ ಆಗಿ ಎಲ್ಲರ ಮನಸ್ಸನ್ನು ಗೆದ್ದಿರುವ ಶಮಂತ್ ರಿಯಲ್ ಲೈಫ್ ನಲ್ಲೂ ಹೊಸ ಬಾಳಿನ ಕಡೆಗೆ ಹೆಜ್ಜೆಯಾಕುತ್ತಿದ್ದಾರೆ.
ಬ್ರೋ ಗೌಡ ಅವರು ಪ್ರೇಮಿಗಳ ದಿನದಂದೇ ನಿಶ್ಚಿತಾರ್ಥ ಆಗಿರುವ ಕುರಿತ ವಿಡಿಯೋ ಹಂಚಿಕೊಂಡಿದ್ದಾರೆ. ಮೇಘನಾ ಎನ್ನುವವರ ಜತೆ ಶಮಂತ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರು ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಇಬ್ಬರ ಪ್ರೀತಿ ವಿಚಾರವನ್ನು ಹೇಳುವುದಕ್ಕೆಂದೆ ಒಂದು ಬ್ಯೂಟಿಫುಲ್ ವಿಡಿಯೋ ಮಾಡಿದ್ದಾರೆ. ಆ ವಿಡಿಯೋವನ್ನು ಶಮಂತ್ ಗೌಡ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.
ತಾವು ಹಂಚಿಕೊಂಡಿರುವ ವಿಡಿಯೋದಲ್ಲಿಯೇ ತಮ್ಮ ಹುಡುಗಿಯ ಪ್ರೊಫೈಲ್ ಕೂಡ ಟ್ಯಾಗ್ ಮಾಡಿದ್ದಾರೆ. ಶಮಂತ್ ಗೌಡ, ಬ್ಲಾಕ್ ಅಂಡ್ ವೈಟ್ ಸೂಟ್ ನಲ್ಲಿ ಕಾಣಿಸಿಕೊಂಡಿದ್ರೆ, ಮೇಘನಾ ಕಂಪ್ಲೀಟ್ ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಈ ಬ್ಯೂಟಿಫುಲ್ ವಿಡಿಯೋ ಮೂಲಕ ತಮ್ಮ ಮದುವೆ ವಿಚಾರವನ್ನು ಅಧಿಕೃತವಾಗಿ ಹೇಳಿದ್ದಾರೆ.
ಮೇಘನಾ ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಅವರದ್ದೇ ಆದ ಮೇಕಪ್ ಪ್ರೊಫೈಲ್ ಖಾತೆಯನ್ನು ಹೊಂದಿದ್ದು, ತಮ್ಮ ಮೇಕಪ್ ವಿಡಿಯೋ, ಫೋಟೋಗಳನ್ನು ಅದರಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲೂ ಆಗಾಗ ಒಳ್ಳೊಳ್ಳೆ ಥೀಮ್‌ಗಳ ಮೇಲೆ ವಿಡಿಯೋಗಳನ್ನ ಮಾಡುತ್ತಾ ಇರುತ್ತಾರೆ. ಲಕ್ಷ್ಮೀಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಲವ್ವರ್ ಕೀರ್ತಿಗೆ ಇವರೇ ಮೇಕಪ್ ಆರ್ಟಿಸ್ಟ್. ಆ ವಿಡಿಯೋಗಳನ್ನು ಕೂಡ ತಮ್ಮ ಪ್ರೊಫೈಲ್ ನಲ್ಲಿ ಹಾಕಿಕೊಂಡಿದ್ದಾರೆ.
ಮೇಘನಾ ಮತ್ತು ಬ್ರೋ ಗೌಡ ಹಲವಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರೆ. ಈ ಹಿಂದೆ ಈ ಜೋಡಿ ಜೊತೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಗಳನ್ನು ಸಹ ಮಾಡುತ್ತಿದ್ದರು. ಇದೀಗ ಅದೇ ಹುಡುಗಿಯನ್ನು ಪ್ರೀತಿಸಿ, ಹೊಸ ಜೀವನಕ್ಕೆ ಕಾಲಿಡಲು ತಯಾರಿ ನಡೆಸುತ್ತಿದ್ದಾರೆ. ಈ ಜೋಡಿಗೆ ಸೋಶಿಯಲ್ ಮಿಡಿಯಾದಾದ್ಯಂತ ಅಭಿಮಾನಿಗಳು ಹಾಗೂ ಕಲಾವಿದರು, ಶುಭ ಕೋರಿದ್ದಾರೆ. ಇಬ್ಬರ ಮದುವೆ ಯಾವಾಗ ಅನ್ನೋದನ್ನು ಶಮಂತ್ ಸದ್ಯದಲ್ಲೇ ರಿವೀಲ್ ಮಾಡಲಿದ್ದಾರೆ.