Karna Serial: ಕರ್ಣ ಧಾರಾವಾಹಿ ಬಗ್ಗೆ ಹೊರಬಿತ್ತು ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ
ಈ ಧಾರಾವಾಹಿಯಲ್ಲಿ ಕರ್ಣನಿಗೆ ಜೋಡಿಯಾಗಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ ಇದ್ದಾರೆ. ಇದರ ಜೊತೆಗೆ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಈ ಧಾರಾವಾಹಿ ಬಗ್ಗೆ ರಿವೀಲ್ ಆಗಿದೆ. ಈ ಧಾರಾವಾಹಿಯಲ್ಲಿ ಭವ್ಯಾ ನಿಧಿ ಪಾತ್ರ ಮಾಡುತ್ತಿದ್ದಾರೆ. ಇವರ ಜೊತೆಗೆ ನಮ್ರತಾ ಗೌಡ ಕೂಡ ಇದರಲ್ಲಿದ್ದಾರೆ.

Namrtha Gowda Karna Serial

ಝೀ ಕನ್ನಡ ವಾಹಿನಿಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಧಾರಾವಾಹಿಯೊಂದು ಶುರುವಾಗಲಿದೆ. ಈಗಾಗಲೇ ತನ್ನ ಪ್ರೊಮೋ ಮೂಲಕ ದೊಡ್ಡ ಹೈಪ್ ಕ್ರಿಯೆಟ್ ಮಾಡಿರುವ ಕರ್ಣ ಧಾರಾವಾಹಿಯ (Karna Serial) ಜೂನ್ 16ರಿಂದ ಪ್ರಸಾರ ಕಾಣಲಿದೆ. ರಾತ್ರಿ 8 ಗಂಟೆಗೆ ಕರ್ಣನ ದರ್ಶನವಾಗಲಿದೆ. ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿ ಕೇವಲ ಒಂದೇ ಒಂದು ಪ್ರೊಮೋ ಮೂಲಕ ವೀಕ್ಷಕರನ್ನು ಕಾದು ಕುಳಿದುಕೊಳ್ಳುವಂತೆ ಮಾಡಿದೆ. ಡಾಕ್ಟರ್ ಕರ್ಣ ಆಗಿ ಕಿರಣ್ ರಾಜ್ ಟಿವಿ ಪರೆದೆ ಮೇಲೆ ಮಿಂಚೋಕೆ ಮತ್ತೇ ಬರುತ್ತಿದ್ದಾರೆ.
ಈ ಧಾರಾವಾಹಿಯಲ್ಲಿ ಕರ್ಣನಿಗೆ ಜೋಡಿಯಾಗಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ ಇದ್ದಾರೆ. ಇದರ ಜೊತೆಗೆ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಈ ಧಾರಾವಾಹಿ ಬಗ್ಗೆ ರಿವೀಲ್ ಆಗಿದೆ. ಈ ಧಾರಾವಾಹಿಯಲ್ಲಿ ಭವ್ಯಾ ನಿಧಿ ಪಾತ್ರ ಮಾಡುತ್ತಿದ್ದಾರೆ. ಇವರ ಜೊತೆಗೆ ನಮ್ರತಾ ಗೌಡ ಕೂಡ ಇದರಲ್ಲಿದ್ದಾರೆ. ಇವರು ನಿತ್ಯಾ ಅನ್ನೋ ಪಾತ್ರ ಮಾಡ್ತಿದ್ದಾರೆ. ನಿತ್ಯಾ, ನಿಧಿ ಇಬ್ಬರೂ ಅಕ್ಕ-ತಂಗಿ. ಅಜ್ಜಿ ಜೊತೆಗೆ ಜೀವನ ಮಾಡ್ತಾ ಇರುತ್ತಾರೆ. ಅಜ್ಜಿ ಪಾತ್ರದಲ್ಲಿ ಹಿರಿಯ ನಟಿ ಗಾಯತ್ರಿ ಪ್ರಭಾಕರ್ ಅವರು ಕಾಣಿಸಿಕೊಳ್ತಿದ್ದಾರೆ.
ನಿತ್ಯಾ ಪ್ರ್ಯಾಕ್ಟಿಕಲ್ ಹುಡುಗಿ. ನಿಧಿ ಭಾವನಾತ್ಮ ಹುಡುಗಿ. ಎಲ್ಲರ ಮನೆಯಲ್ಲೂ ಇರೋ ಹಾಗೇ ಅಕ್ಕ ತಂಗಿ ನಡುವೆ ಇರೋ ಕೋಳಿ ಜಗಳ, ಹುಸಿ ಮುನಿಸು ಸಹಜವಾಗಿಯೇ ನಿತ್ಯ-ನಿಧಿ ನಡುವೆ ಇರುತ್ತಂತೆ. ನಮ್ರತಾ ಪಾತ್ರದ ಪ್ರೋಮೋ ಹೊರಬರಬೇಕಿದ್ದು, ತುಂಬಾ ಸ್ಪೆಷಲ್ ಆಗಿ ಪ್ರೋಮೋ ರಿಲೀಸ್ ಮಾಡಲಿದೆ ತಂಡ. ಮಲ್ಲೇಶ್ವರಂ ಸುತ್ತಮುತ್ತ ಶೂಟಿಂಗ್ ನಡೆಯುತ್ತಿದೆ.
Vadhu Serial: ಹೋಗಿ ಬರುವೆ..: ವಧು ಧಾರಾವಾಹಿ ಮುಕ್ತಾಯದ ಬಗ್ಗೆ ದುರ್ಗಾಶ್ರೀ ಅಧಿಕೃತ ಪೋಸ್ಟ್
ಭವ್ಯಾ ಗೌಡ ಅವರು ಮೆಡಿಕಲ್ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೈನಕಾಲಜಿಸ್ಟ್ ಆಗಿ ಕಿರಣ್ ರಾಜ್ ನಟಿಸುತ್ತಿದ್ದಾರೆ. ಕರ್ಣನ ಫ್ಯಾಮಿಲಿಯಲ್ಲಿ ಹಿರಿಯ ನಟಿ ಆಶಾ ರಾಣಿ, ನಟ - ನಿರ್ದೇಶಕ ನಾಗಾಭರಣ, ಒಲವಿನ ನಿಲ್ದಾಣ ಸೀರಿಯಲ್ ಖ್ಯಾತಿಯ ವರಲಕ್ಷ್ಮೀ ಶ್ರೀನಿವಾಸ್ ಮತ್ತು ನಟಿ ಶ್ಯಾಮ್ ಸಿಮ್ರನ್ ಇದ್ದಾರೆ. ಶ್ರುತಿ ನಾಯ್ಡು ನಿರ್ಮಾಣದ ಕರ್ಣ ಸೀರಿಯಲ್ ಬರುತ್ತಿದೆ.